Homeಮುಖಪುಟಹಿಂದೂ ಧಾರ್ಮಿಕ ಯಾತ್ರೆಯಲ್ಲಿ ಶಸ್ತ್ರಾಸ್ತ್ರ ನಿಷೇಧ: ಹಿಂದೂ ಸಂಘಟನೆಗಳಿಗೆ ಪೊಲೀಸರ ಸೂಚನೆ

ಹಿಂದೂ ಧಾರ್ಮಿಕ ಯಾತ್ರೆಯಲ್ಲಿ ಶಸ್ತ್ರಾಸ್ತ್ರ ನಿಷೇಧ: ಹಿಂದೂ ಸಂಘಟನೆಗಳಿಗೆ ಪೊಲೀಸರ ಸೂಚನೆ

- Advertisement -
- Advertisement -

ಜುಲೈ 31 ರಂದು ಕೋಮು ಹಿಂಸಾಚಾರ ನಡೆದ ನುಹ್‌ನಲ್ಲಿ ಧಾರ್ಮಿಕ ಯಾತ್ರೆಯನ್ನು ಪುನರಾರಂಭಿಸುವುದಾಗಿ ಹಲವಾರು  ಹಿಂದುತ್ವವಾದಿ ಗುಂಪುಗಳು ಘೋಷಿಸಿದೆ.ಅಂತಹ ಯಾತ್ರೆ ನಡೆದರೆ ಯಾವುದೇ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಅನುಮತಿಸಲಾಗುವುದಿಲ್ಲ ಎಂದು ಜಿಲ್ಲಾ ಪೊಲೀಸರು ಹೇಳಿದ್ದಾರೆ  ಮತ್ತು “ಸೂಕ್ಷ್ಮ” ಪ್ರದೇಶಗಳಲ್ಲಿ ಸಭೆ ಸೇರುವುದನ್ನು ಅನುಮತಿಸಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನುಹ್ ಎಸ್ಪಿ ನರೇಂದ್ರ ಬಿಜಾರ್ನಿಯಾ ಮಾತನಾಡಿ, ಅಂತಹ ಕಾರ್ಯಕ್ರಮಕ್ಕೆ ಅನುಮತಿಗಾಗಿ ಅವರು ಇನ್ನೂ ನಮ್ಮಲ್ಲಿ ಅನುಮತಿ ಕೇಳಲಿಲ್ಲ.ಯಾತ್ರೆಗೆ ಅನುಮತಿ ನೀಡಿದರೂ ಜಿಲ್ಲೆಯಲ್ಲಿ ಶಾಂತಿ ಕದಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ.ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಲು ಬಿಡವುದಿಲ್ಲ.ಶಸ್ತ್ರಾಸ್ತ್ರಗಳನ್ನು ಸಾಗಿಸಲು ಅನುಮತಿಸುವುದಿಲ್ಲ.ಮೆರವಣಿಗೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಸಹ ನಿರ್ಬಂಧಿಸಲಾಗುತ್ತದೆ. ಕೋಮುವಾದಿ ಅಥವಾ ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಇರುತ್ತಾರೆ ಎಂದು ಬಿಜರ್ನಿಯಾ ಹೇಳಿದರು.

ಕಾರ್ಯಕ್ರಮದಲ್ಲಿ 100 ಜನರಿಗೆ ಮಾತ್ರ ಅವಕಾಶ ಕೊಡುವ ಕುರಿತು ಪೊಲೀಸ್ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಈ ಹಿಂದೆ ಇದ್ದ ನುಹ್ ಎಸ್ಪಿ ವರುಣ್ ಸಿಂಗ್ಲಾ ಅವರನ್ನು ಬದಲಿಸಿದ ಬಳಿಕ ಬಿಜರ್ನಿಯಾ ಇತ್ತೀಚೆಗೆ ಪೊಲೀಸ್ ಮುಖ್ಯಸ್ಥರಾಗಿದ್ದಾರೆ. ಹಿಂಸಾಚಾರ ಭುಗಿಲೆದ್ದಾಗ ಸಿಂಗ್ಲಾ ರಜೆಯಲ್ಲಿದ್ದರು ಮತ್ತು ನಂತರ ಅವರನ್ನು ವರ್ಗಾಯಿಸಲಾಗಿದೆ.

ಈ ವಾರದ ಆರಂಭದಲ್ಲಿ ಹರಿಯಾಣದ ಪಲ್ವಾಲ್‌ನಲ್ಲಿ ನಡೆದ ‘ಮಹಾಪಂಚಾಯತ್’ ನಲ್ಲಿ  ಹಿಂದೂ ಬಲಪಂಥೀಯ ಗುಂಪುಗಳು ಆಗಸ್ಟ್ 28 ರಂದು ಯಾತ್ರೆಯನ್ನು “ಪುನರಾರಂಭಿಸುವುದಾಗಿ” ಹೇಳಿದ್ದವು. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಈ ಸಮಾರಂಭದಲ್ಲಿ ಹಲವಾರು ಭಾಷಣಕಾರರು ಯಾತ್ರೆಯಲ್ಲಿ ಭಾಗವಹಿಸದಂತೆ “ತಮ್ಮನ್ನು ಸಾಧ್ಯವಾದರೆ ತಡೆಯುವಂತೆ” ಸವಾಲು ಹಾಕಿದ್ದಾರೆ ಎಂದು ತಿಳಿಸಿದೆ. ಜೊತೆಗೆ ಆತ್ಮರಕ್ಷಣೆಗಾಗಿ  ಗನ್ ಲೈಸೆನ್ಸ್‌ಗಳ ಬೇಡಿಕೆ ಇಟ್ಟಿದ್ದರು.

ಇದನ್ನು ಓದಿ: ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರು ಬದಲಾವಣೆ: ಕಾಂಗ್ರೆಸ್ ಆಕ್ಷೇಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...