Homeಮುಖಪುಟಒಡಿಶಾ ರೈಲು ದುರಂತ: ವಾರೀಸುದಾರರಿಲ್ಲದ 28 ಮೃತದೇಹಕ್ಕೆ ಅಂತ್ಯಸಂಸ್ಕಾರ

ಒಡಿಶಾ ರೈಲು ದುರಂತ: ವಾರೀಸುದಾರರಿಲ್ಲದ 28 ಮೃತದೇಹಕ್ಕೆ ಅಂತ್ಯಸಂಸ್ಕಾರ

- Advertisement -
- Advertisement -

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ್ದ ರೈಲು ಅಪಘಾತದಲ್ಲಿ ಮೃತ 28 ಮಂದಿ ಅಪರಿಚಿತರ ಮೃತದೇಹವನ್ನು ಕೊನೆಗೂ ವಾರೀಸುದಾರರು ಇಲ್ಲದ ಕಾರಣ ಅಂತ್ಯಸಂಸ್ಕಾರ ಮಾಡಲಾಗಿದೆ.

ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್(BMC) ಮಂಗಳವಾರ ಬಹನಾಗಾ ರೈಲು ದುರಂತದಲ್ಲಿ ಸಾವನ್ನಪ್ಪಿದ ಅಪರಿಚಿತ ಪ್ರಯಾಣಿಕರ ಅಂತ್ಯಸಂಸ್ಕಾರವನ್ನು ಗೌರವದಿಂದ ಮಾಡಿದೆ.

ವಾರಸುದಾರರಿಲ್ಲದ 28 ಮೃತದೇಹವನ್ನು ಕಳೆದ 4 ತಿಂಗಳಿನಿಂದ ಭುವನೇಶ್ವರದ ಏಮ್ಸ್‌ನಲ್ಲಿ ಕಂಟೈನರ್‌ನಲ್ಲಿ ಸಂಗ್ರಹಿಸಿಡಲಾಗಿತ್ತು. ಇದೀಗ ಯಾರೂ ವಾರೀಸುದಾರರು ಬರದ ಕಾರಣ ಮೃತದೇಹಗಳನ್ನು ಭರತ್‌ಪುರ ಸ್ಮಶಾನದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳ ಪ್ರಕಾರ ದಹಿಸಲಾಗಿದೆ.

ಹಿರಿಯ ಬಿಎಂಸಿ ಅಧಿಕಾರಿಯೊಬ್ಬರ ಮೇಲ್ವಿಚಾರಣೆಯಲ್ಲಿ ಶವಸಂಸ್ಕಾರ ನಡೆದಿದೆ. ಪರ್ದೀಪ್ ಸೇವಾ ಟ್ರಸ್ಟ್‌ನ 12 ಸದಸ್ಯರ ತಂಡವು ನಿಯಮಗಳ ಪ್ರಕಾರ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಿದೆ.

ಪ್ರತಿಯೊಂದು ಮೃತದೇಹದ ಅಂತ್ಯಕ್ರಿಯೆಗೆ ಕನಿಷ್ಠ ನಾಲ್ಕು ಗಂಟೆಗಳನ್ನು ತೆಗೆದುಕೊಂಡಿದೆ. ದೇಹಗಳನ್ನು ಮೈನಸ್ ತಾಪಮಾನದಲ್ಲಿ ಸಂಗ್ರಹಿಸಿದ್ದರಿಂದ ಶವಗಳು ಮಂಜುಗಡ್ಡೆಯಿಂದ ಗಟ್ಟಿಯಾಗಿದ್ದವು. ಮೃತದೇಹಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಗುಣಮಟ್ಟದ ಮರ ಮತ್ತು ತುಪ್ಪದ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ತಿಂಗಳಿನಿಂದ ಉಳಿದ 28 ಶವಗಳನ್ನು ಪಡೆಯಲು ಯಾರೂ ಬರದ ಕಾರಣ, ರೈಲು ಅಪಘಾತದ ತನಿಖೆ ನಡೆಸುತ್ತಿರುವ ಸಿಬಿಐ ಅಪರಿಚಿತ ಬಲಿಪಶುಗಳನ್ನು ವಿಲೇವಾರಿ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಇದರಂತೆ  ಕಾನೂನು ತೊಡಕುಗಳನ್ನು ಗಮನದಲ್ಲಿಟ್ಟುಕೊಂಡು ಮೃತರ ಡಿಎನ್‌ಎಯನ್ನು ಸಂರಕ್ಷಿಸಿಟ್ಟು ಅಂತ್ಯಸಂಸ್ಕಾರವನ್ನು ನಡೆಸಲಾಗಿದೆ. ಡಿಎನ್‌ಎ ಸಂಗ್ರಹಿಸಿಟ್ಟಿರುವ ಬಗ್ಗೆ ಸ್ವತಃ ಏಮ್ಸ್‌ನ ಅಂಗರಚನಾಶಾಸ್ತ್ರದ ವಿಭಾಗದ ಮುಖ್ಯಸ್ಥ ಪ್ರೊ.ಪ್ರವಾಸ್ ತ್ರಿಪಾಠಿ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬಹನಗಾ ಬಜಾರ್ ರೈಲು ನಿಲ್ದಾಣದ ಬಳಿ ನಡೆದ ಈ ಭೀಕರ ಅಪಘಾತದಲ್ಲಿ ಒಟ್ಟು 296 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ 162 ಮೃತದೇಹಗಳನ್ನು ಏಮ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಆದರಲ್ಲಿ 81 ಜನರ ಮೃತದೇಹಗಳನ್ನು ಅವರ ಸಂಬಂಧಿಕರು ತೆಗೆದುಕೊಂಡು ಹೋಗಿದ್ದಾರೆ. ಉಳಿದ 81 ಮೃತದೇಹಗಳ ಡಿಎನ್‌ಎ ಪರೀಕ್ಷೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಅದರಲ್ಲಿ 53 ಮೃತದೇಹಗಳ ಗುರುತು ಪತ್ತೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಇನ್ನೂ 28 ಮೃತದೇಹಗಳನ್ನು ಭುವನೇಶ್ವರ ಏಮ್ಸ್‌ನಲ್ಲಿರುವ ಶವಾಗಾರದಲ್ಲಿ ಇರಿಸಲಾಗಿತ್ತು. ಆದರೆ ಈ ಶವಗಳು ವಲಸೆ ಕಾರ್ಮಿಕರದ್ದಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಯಾರೂ ಕೂಡ ಸಂಬಂಧಿಕರು ಮೃತದೇಹವನ್ನು ಪಡೆಯಲು ಬಂದಿಲ್ಲ.

ಆದರೆ ನಿಯಮಗಳ ಪ್ರಕಾರ 30 ದಿನಗಳ ನಂತರ ಅನಾಥ ಶವಗಳಿಗೆ ಅಂತ್ಯಕ್ರಿಯೆ ನಡೆಸಬೇಕು. ಆದ್ದರಿಂದ ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ ನೇತೃತೃತ್ವದಲ್ಲಿ ಅಂತ್ಯಸಂಸ್ಕಾರ ನಡೆದಿದೆ.

ಇದನ್ನು ಓದಿ: ನಿಷೇಧಿತ ಪಿಎಫ್‌ಐ ಪರ ಚಟುವಟಿಕೆ ಶಂಕೆ: ವಿವಿಧ ಸ್ಥಳಗಳಲ್ಲಿ ಎನ್‌ಐಎ ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...