Homeಮುಖಪುಟಕನಿಷ್ಟ ಮೂಲ ಆದಾಯ ಖಾತರಿ: ಕಾಂಗ್ರೆಸ್ ಭರವಸೆಯ ಕುರಿತು ಚರ್ಚೆ ಭಾಗ-2

ಕನಿಷ್ಟ ಮೂಲ ಆದಾಯ ಖಾತರಿ: ಕಾಂಗ್ರೆಸ್ ಭರವಸೆಯ ಕುರಿತು ಚರ್ಚೆ ಭಾಗ-2

- Advertisement -
- Advertisement -

ಮೂಲ: ಶರತ್ ದವಲ

ಕನ್ನಡಕ್ಕೆ : ಎನ್ ಶಂಕರ ಕೆಂಚನೂರು

ಭಾಗ -1 ಕಾಂಗ್ರೆಸ್ ಪ್ರಣಾಳಿಕೆ ಹಿನ್ನೆಲೆಯಲ್ಲಿ ಬೇಸಿಕ್ ಇನ್ಕಮ್ ಸುತ್ತ ಒಂದು ಚರ್ಚೆ ಇಲ್ಲಿ ಕ್ಲಿಕ್ ಮಾಡಿ

ನೂರಾಮೂವತ್ತು ಕೋಟಿ ಬೃಹತ್ ಜನ ಸಂಖ್ಯೆಯ ಭಾರತದಲ್ಲಿ ಈ ಯೋಜನೆಯ ಸಾರ್ವತ್ರಿಕ ಎನ್ನುವ ವೈಶಿಷ್ಟ್ಯಕ್ಕೆ ನಾವು ಅಂಟಿಕೊಂಡಲ್ಲಿ ಈ ಯೋಜನೆಯನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಭಾರತೀಯಸಂದರ್ಭದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಒಳಗೊಳ್ಳಬೇಕಿರುವುದಿಂದ ಯೋಜನೆಯ ಮೂಲಕ  ಕೊಡುವ ಮೊತ್ತ ಬಹಳ ಸಣ್ಣದಾಗಿರುವ ಸಾಧ್ಯತೆಗಳಿವೆ. ಇದರಿಂದ ಯೋಜನೆಯ ಮೂಲ ಆಶಯ ಈಡೇರದೆ ಜನರಬದುಕಿನಲ್ಲಿ ಯಾವುದೇ ವ್ಯತ್ಯಾಸ ಕಾಣದಿರುವ ಅಪಾಯವಿದೆ. ಹಾಗಿದ್ದರೆ ಈ ಯೋಜನೆಯನ್ನು ಅರ್ಥಪೂರ್ಣವಾಗಿ ಕಾರ್ಯಗತಗೊಳಿಸಲು ಅರ್ಹ ಫಲಾನುಭವಿ ವರ್ಗವನ್ನು ಗುರುತಿಸುವುದು ಅನಿವಾರ್ಯವೆ?. ಹಾಗೆಮಾಡುವುದಾದರೆ ಈ ಯೋಜನೆಯನ್ನು ಸಾಧ್ಯವಿರುವಷ್ಟು ಸರಳಗೊಳಿಸಬೇಕೆ.

ಇತ್ತೀಚೆಗೆ ತೆಲಂಗಾಣದಲ್ಲಿ ‘ರೈತಬಂಧು’ ಎನ್ನುವ ಯೋಜನೆಯಡಿ ರೈತರಿಗೆ ಬಿತ್ತನೆಯ ಸಮಯದಲ್ಲಿ ಹೂಡಿಕೆ ಬಂಡವಾಳವಾಗಿ ನಿರ್ದಿಷ್ಟ ಮೊತ್ತವನ್ನು ಆರು ತಿಂಗಳಿಗೊಮ್ಮೆ ನೀಡಲಾಯಿತು. ಈ ಯೋಜನೆಯು ಎಲ್ಲಾರೈತರನ್ನು ಒಳಗೊಳ್ಳುವಂತೆ ಮಾಡಲು ಮತ್ತು ತಲುಪುವಿಕೆಯ ಎಲ್ಲಾ ಮಿತಿಗನ್ನು ಮೀರಲು ಇದನ್ನು ನಿಬಂಧನೆ ರಹಿತ ಮತ್ತು ಸಾರ್ವತ್ರಿಕಗೊಳಿಸಲಾಗಿತ್ತು. ಇದರಿಂದಾಗಿ ಎಲ್ಲಾ ಎಪ್ಪತ್ತು ಲಕ್ಷ ರೈತರೂ ಈ ಯೋಜನೆಯವ್ಯಾಪ್ತಿಯಲ್ಲಿ ಬರುವ ಹಾಗಾಯಿತು. ಮತ್ತು ಈ ಯೋಜನೆಯಡಿ ಬರಲು ಯಾವುದೇ ಷರತ್ತು ಇರಲಿಲ್ಲ. ಅಲ್ಲದೆ ಹಣ ಪಡೆದ ರೈತ ತನ್ನ ನೆಲದಲ್ಲಿ ಬೇಸಾಯ ಮಾಡಲೇಬೇಕು ಎನ್ನುವ ನಿಯಮವೂ ಇದ್ದಿರಲಿಲ್ಲ. ಇತ್ತೀಚೆಗೆಪ್ರಧಾನ ಮಂತ್ರಿಯವರು ಘೋಷಣೆ ಮಾಡಿದ ಪಿಎಮ್-ಕಿಸಾನ್ ಯೋಜನೆಯು ಸಹ ಸಾಂಪ್ರದಾಯಿಕ ಗುರಿಯ ಸಮಾಜದ ಒಂದು ವಿಭಾಗದ ಎಲ್ಲರನ್ನೂ ಒಳಗೊಳ್ಳುವ ಯೋಜನೆಯಾಗಿದೆ. ಆದರೆ ಈ ಯೋಜನೆಗಳು ಈದೇಶದ ಒಂದು ವಿಭಾಗವನ್ನು ಮಾತ್ರ ಪ್ರತಿನಿಧಿಸುತ್ತದೆ.

ಈಗ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಬಡವರಿಗೆ ಕೊಡುತ್ತೇನೆ ಎಂದು ಹೇಳುತ್ತಿರುವ ಕನಿಷ್ಟ ಮೂಲ ಆದಾಯ ಖಾತರಿಯ ಜಾರಿಯಲ್ಲೂ ಇಂತಹ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಅಷ್ಟೂ ಬಡವರಿಗೆ ಹೇಗೆ ಕೊಡುತ್ತಾರೆ?ಬಡವರನ್ನು ತಲುಪುವ ಯಾವುದಾದರೂ ಸರಳವಾದ ದಾರಿಯಿದೆಯೆ?. ನಾವು ಇನ್ನೂ ಇದಕ್ಕೆ ದಾರಿಯನ್ನು ಹುಡುಕಬೇಕಿದೆ.

ಹಾಗಿದ್ದರೆ ಈ ಒಗಟಿಗೆ ಉತ್ತರ ಹೇಗೆ ಹುಡುಕುವುದು? ಅರ್ಹ ಫಲಾನುಭವಿಗಳ ಸಲುವಾಗಿ ಮಾನದಂಡವನ್ನು ತಯಾರಿಸುವದಕ್ಕಿಂತ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ಕಾರ್ಯಗತಗೊಳಿಸಬಹುದೆ?ಎಂದರೆ ಉದಾಹರಣೆಗೆ- ಆದಾಯ ತೆರಿಗೆ ಪಾವತಿಸುವವರನ್ನು ಈ ಯೋಜನೆಯಿಂದ ಹೊರಗಿಡುವುದು. ಆದರೆ ಹಾಗೆ ಮಾಡಿದರೂ ಈ ಯೋಜನೆಯಿಂದ ಕೇವಲ ಶೇಕಡಾ ಐದರಷ್ಟು ಜನಸಂಖ್ಯೆ ಮಾತ್ರ ಈಯೋಜನೆಯಿಂದ ಹೊರಗುಳಿಯುತ್ತದೆ. ಅರವಿಂದ ಸುಬ್ರಹ್ಮಣ್ಯ ಅವರು ದೇಶದ ಎಲ್ಲಾ ಮಹಿಳೆಯರನ್ನು ಈ ಯೋಜನೆಯ ವ್ಯಾಪ್ತಿಯಲ್ಲಿ ತಂದು ಅವರಿಗೆ ಕನಿಷ್ಟ ಮೂಲ ಆದಾಯವನ್ನು ನೀಡಬೇಕೆಂದು ಸಲಹೆ ನೀಡಿದ್ದರು.ಇದರಿಂದ ಎಲ್ಲಾ ಮನೆಗಳಿಗೂ ಈ ಯೋಜನೆಯ ಪ್ರತಿಫಲ ದೊರೆಯುತ್ತದೆಯಾದರೂ ಇದು ಪುರುಷ ತಾರತಮ್ಯವಾಗುತ್ತದೆ. ಈ ಸನ್ನಿವೇಶವನ್ನು ನಿಭಾಯಿಸುವುದು ಭಾರತದ ಸಂಧರ್ಭದಲ್ಲಿ ಸಾರ್ವತ್ರಿಕ ಮೂಲ ಆದಾಯಪರಿಕಲ್ಪನೆಯ ಮುಖ್ಯ ಸವಾಲಾಗಿದೆ.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಇನ್ನೆರಡು ಮೂಲ ಆಶಯಗಳಾದ ‘ವ್ಯಕ್ತಿ ಕೇಂದ್ರಿತ’ ಮತ್ತು ‘ಮಾಸಿಕ’ ಎನ್ನುವ ಇನ್ನೆರಡು ವಿಷಯಗಳ ಕುರಿತು ಯೋಚಿಸೋಣ. ಭಾರತದಲ್ಲಿ ಗಮನಿಸಿದರೆ ಶೈಕ್ಷಣಿಕಸ್ಕಾಲರ್‍ಶಿಪ್‍ಗಳು, ಹಿರಿಯ ನಾಗರಿಕರ ಪಿಂಚಣಿ, ಸಾಮಾನ್ಯ ಬಡತನ ನಿರ್ಮೂಲನ ಕಾರ್ಯಕ್ರಮಗಳ ವ್ಯಾಕರಣ ಕೌಟುಂಬಿಕ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿವೆ. ಮತ್ತು ಮಹಿಳಾ ಸಬಲೀಕರಣ ಯೋಜನೆಗಳಾದ ಬಡ್ಡಿರಹಿತಸಾಲ, ಸಬ್ಸಿಡಿ ಅಡುಗೆ ಅನಿಲ ಇವುಗಳನ್ನು ನೀಡುವಾಗಲೂ ಕೌಟುಂಬಿಕ ನೆಲೆಯಲ್ಲಿಯೇ ನೀಡಲಾಗಿದೆ. ವ್ಯಕ್ತಿಗತ ನೆಲೆಯಲ್ಲಿ ಭಾರತದ ಬಡತನ ನಿರ್ಮೂಲನೆ ಯೋಜನೆಗಳನ್ನು ಯೋಜಿಸಿದ ಉದಾಹರಣೆಗಳು ಸಿಗುವುದಿಲ್ಲ.ಹೀಗಾಗಿ ನಾವು ಬಡತನವನ್ನು ವೈಯಕ್ತಿಕ ನೆಲೆಯಲ್ಲಿ ಯೋಚಿಸಿ ಯೋಜನೆಗಳನ್ನು ನಿರೂಪಿಸಬೇಕಿದೆ. ಈ ನೆಲೆಯಲ್ಲಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆ ಒಂದು ಉತ್ತಮ ಯೋಚನೆ. ಇದರ ಜೊತೆಗ ಪ್ರತಿ ‘ತಿಂಗಳು’ನಿರಂತರವಾಗಿ ನಿರ್ದಿಷ್ಟ ಆದಾಯದ ಖಾತರಿ ದೊರೆತಾಗ ಆರ್ಥಿಕ ಭದ್ರತೆಯ ಜೊತೆಗೆ ಪ್ರತಿ ವ್ಯಕ್ತಿಯಲ್ಲೂ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ.

ನೇರ ಹಣ ವರ್ಗಾವಣೆಯ ವಿಷಯದಲ್ಲಿ ನಮ್ಮ ದೇಶದ ಬಹುದೊಡ್ಡ ಬುದ್ಧಿಜೀವಿಗಳ ವರ್ಗ ಬಡವರ ಕುರಿತು ಅಪನಂಬಿಕೆಯನ್ನು ಹೊಂದಿವೆ. ಬಡವರಿಗೆ ನೇರ ಹಣವನ್ನು ನೀಡಿದಾಗ ಅವರು ಅದನ್ನು ಮೋಜಿಗಾಗಿ ಬಳಸಿದುರುಪಯೋಗ ಮಾಡಿಕೊಳ್ಳುತ್ತಾರೆ. ಉದ್ದೇಶಿತ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ ಎನ್ನುವುದು ಇವರ ಆರೋಪ. ಈ ಭಯದಿಂದಾಗಿಯೇ ಸರಕಾರಗಳು ನೇರ ನಗದನ್ನು ಕೊಡುವ ಬದಲು ಸೀರೆ, ಆಹಾರ ಪದಾರ್ಥಗಳು,ಸೈಕಲ್, ಯೂನಿಫಾರ್ಮ ಇತ್ಯಾದಿಯನ್ನು ಕೊಡುತ್ತಿವೆ. ಆದರೆ ಜಾಗತಿಕ ಸಂಶೋಧನೆಗಳು ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ವರದಿಗಳನ್ನು ನೀಡುವ ಮೂಲಕ ಇಂತಹ ಮೂಢ ನಂಬಿಕೆಗಳನ್ನು ಸಾರಸಗಟಾಗಿ ತಳ್ಳಿಹಾಕಿವೆ. ಇಂತಹವಿಷಯದಲ್ಲಿ ರಾಜಕಾಣಿಗಳು ಮತ್ತು ನೀತಿನಿರೂಪಕರಲ್ಲಿ ಸಾಕಷ್ಟು ಪೂರ್ವಗ್ರಹಗಳಿವೆ. ಅವುಗಳನ್ನು ತೊಡೆದುಹಾಕಿ ಹೊಸ ರೀತಿಯಲ್ಲಿ ಯೋಚಿಸಬೇಕಿರುವುದು ಇಂದಿನ ತುರ್ತು.

ಈಗ ಸಾರ್ವತ್ರಿಕ ಮೂಲ ಆದಾಯವನ್ನು ಒಂದು ಹಕ್ಕನ್ನಾಗಿ ಏಕೆ ಪರಿಗಣಿಸಬೇಕು ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಬಹುದು ಎನ್ನುವುದನ್ನು ನೋಡೋಣ. ಸಾರ್ವತ್ರಿಕ ಮೂಲ ಆದಾಯವನ್ನು ಕೇವಲ ಯೋಜನೆಯಾಗಿಕಾರ್ಯಗತಗೊಳಿಸಿದಾಗ ಸರಕಾರಗಳು ಬದಲಾದಾಗ ಯೋಜನೆಯನ್ನು ಹಿಂಪಡೆಯುವ ಸಾಧ್ಯತೆಗಳಿರುತ್ತವೆ. ಇದಕ್ಕಾಗಿ ಇದನ್ನು ಒಂದು ಹಕ್ಕನ್ನಾಗಿ ಪರಿಗಣಿಸಿ ಕಾಯ್ದೆಯನ್ನು ಮಾಡಿದಾಗ ಇದನ್ನು ಹಿಂಪಡೆಯಲುಸಾಧ್ಯವಿಲ್ಲ. ಮತ್ತು ಈ ಪರಿಕಲ್ಪನೆಯನ್ನು ಹಣದುಬ್ಬರದ ಸೂಚ್ಯಂಕದೊಂದಿಗೆ ಸಂಯೋಜನೆಯನ್ನು ಹೊಂದಬೇಕು ಆಗ ಬದಲಾಗುವ ಹಣದ ಮೌಲ್ಯದೊಂದಿಗೆ ಯೋಜನೆಯ ಮೂಲಕ ನೀಡುವ ಮೊತ್ತವೂ ಬದಲಾಗುತ್ತದೆ.ಇದನ್ನು ಯೋಜಿಸುವಾಗ ನಾವು ಮುಂದಿನ ಐದು ವರ್ಷಗಳನ್ನು  ಗಮನದಲ್ಲಿ ಇಟ್ಟುಕೊಂಡು ಯೋಜನೆ ತಯಾರಿಸಬೇಕು. ಇಂತಹ ಆರ್ಥಿಕ ಯೋಜನೆಗಳಿಗೆ ಭದ್ರತೆಯು ಮುಖ್ಯವಾಗಿದೆ.

ಕೊನೆಯದಾಗಿ ಈ ಸಾರ್ವತ್ರಿಕ ಮೂಲ ಆದಾಯವು ‘ಬೇಷರತ್’ ಆಗಿರಬೇಕು. ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮೂಲಭೂತ ಆಶಯವೇ ಈ ಯೋಜನೆಯು ಬೇಷರತ್ ಆಗಿರಬೇಕು ಎನ್ನುವುದಾಗಿದೆ. ಆದರೆ ಈವ್ಯಾಖ್ಯಾನವು ಭಾರತೀಯ ಸಮಾಜ ಕಲ್ಯಾಣ ಯೋಜನೆಗಳಿಗೆ ಅಪರಿಚಿತ ಪದವಾಗಿದೆ. ನಮ್ಮ ಪ್ರತಿ ಯೋಜನೆಯೂ ನಿಯಮಗಳಿಂದ ಕೂಡಿವೆ. ಯಾಕೆಂದರೆ ನಾವು ಬಡತನ ನಿರ್ಮೂಲನ ಯೋಜನೆಗಳನ್ನು ದಾನ-ಧರ್ಮದನೆಲೆಯಲ್ಲಿ ನೋಡುತ್ತೇವೆ. ಸ್ಪರ್ಧೆಯಲ್ಲಿ ಹಿಂದೆ ಬಿದ್ದವನಿಗೆ ನೀಡುವ ಸಹಾಯವೆಂಬಂತೆ ನೋಡುತ್ತೇವೆ. ಆದರೆ ಈ ರೀತಿಯ ಯೋಚನೆಗಳು ಬದಲಾಗಬೇಕಿದೆ. ಈ ಸಮಾಜದಲ್ಲಿ ಅಸಮಾನ ಅವಕಾಶಗಳ ಕಾರಣಕ್ಕೆ ಹಿಂದೆಬಿದ್ದವರನ್ನು ನಾವು ಅವಕಾಶವಂಚಿತರನ್ನಾಗಿ ನೋಡಬೇಕಿದೆ. ಅವರಿಗೆ ನಾವು ಧರ್ಮಕ್ಕೆ ನೀಡುತ್ತಿದ್ದೇವೆ ಎನ್ನುವ ಭಾವನೆಯನ್ನು ತೊಡೆದುಹಾಕಿ ಅವರು ಅದನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದುಅರಿತುಕೊಳ್ಳಬೇಕಿದೆ. ಇದನ್ನು ಸಾಮಾಜಿಕ ಜವಬ್ದಾರಿ ಎಂದು ಗ್ರಹಿಸಬೇಕಿದೆಯೇ ಹೊರತು ದಾನದಂತೆ ಅಲ್ಲ. ನಮ್ಮ ಅತಿಯಾದ ಖಾಸಗಿ ಆಸ್ತಿಯ ಮೋಹ ಮತ್ತು ಪಿತ್ರಾರ್ಜಿತ ಹಂಚಿಕೆಯ ಗ್ರಹಿಕೆಯಿಂದಾಗಿ ರಾಷ್ಟ್ರೀಯಸೊತ್ತುಗಳು ಎಲ್ಲರಿಗೂ ಸೇರಿದ್ದು ಎನ್ನುವುದನ್ನು ಮರೆತಿದ್ದೇವೆ. ಮತ್ತು ಸರಕಾರ ಕೇವಲ ವಾರಸುದಾರ ಮಾತ್ರ. ಸಾರ್ವಜನಿಕ ಆಸ್ತಿಗಳು ಎಂದಿಗೂ ಸಾರ್ವಜನಿಕರ ಸೊತ್ತು ಎನ್ನುವುದನ್ನು ಮರೆಯಬಾದು. ಈ ದೇಶದಪ್ರತಿಯೊಬ್ಬ ಪ್ರಜೆಗೂ ಇಲ್ಲಿ ಸಂಪನ್ಮೂಲಗಳ ಮೇಲೆ ಹಕ್ಕಿರುತ್ತದೆ. ಆದರೆ ನಮ್ಮ ಖಾಸಗಿತನದ ಮೇಲಿನ ಅತಿಯಾದ ಮೋಹ ಈ ತಿಳುವಳಿಕೆಯನ್ನು ನಮ್ಮಿಂದ ದೂರಾಗಿಸಿದೆ. ಈ ರೀತಿಯ ದೃಷ್ಟಿಕೋನದ ಅತಿಮುಖ್ಯರೂಪಾಂತರವು ಇಂದಿನ ಅಗತ್ಯವಾಗಿದೆ.

ಷರತ್ತುಗಳು ನಿಯಂತ್ರಕರು ಮತ್ತು ಮೇಲ್ವಿಚಾರಕರ ಸೈನ್ಯಗಳನ್ನು ಹುಟ್ಟುಹಾಕುತ್ತವೆ. ಮತ್ತು ಇವು ಅಗಾಧವಾದ ವಿವೇಚನೆಯ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ. ಇದು ಅಗಾಧ ಭೃಷ್ಟಾಚಾರಕ್ಕೆ ಕಾರಣವಾಗುತ್ತದೆ  ಮತ್ತುಯೋಜನೆಯು ಸೋರಿಕೆ ಮತ್ತು ಹಣದ ಪೋಲಾಗುವಿಕೆಯಲ್ಲಿ ಕೊನೆಯಾಗುತ್ತದೆ.

ಕೊನೆಯದಾಗಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯು ಭಾರತದ ಮಟ್ಟಿಗೆ ಒಂದು ಒಳ್ಳೆಯ ಯೋಜನೆಯಾಗಿದೆ. ಇದೊಂದು ಸಮಾನ ಮತ್ತು ಎಲ್ಲರನ್ನು ಒಳಗೊಂಡ ಸಮಾಜದ ಪರಿಕಲ್ಪನೆಗೆ ಬುನಾದಿಯಾಗಿದೆ. ಇದುಪ್ರತಿಯೊಬ್ಬ ನಾಗರಿಕನಿಗೂ ಕನಿಷ್ಟ ಬದುಕಿನ ಭದ್ರತೆಯನ್ನು ಖಚಿತಗೊಳಿಸುತ್ತದೆ. ಇದನ್ನು ಅರ್ಥಪೂರ್ಣವಾಗಿ ಜಾರಿಗೆ ತರಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದನ್ನೂ ಸಹ ನಾವು ಸಾಧಿಸಬಹುದು.

ಶರತ್ ದವಲ

(ಲೇಖಕರು ಬೇಸಿಕ್ ಇನ್‍ಕಮ್ ಅರ್ತ್ ನೆಟ್‍ವರ್ಕ್ ಇದರ ಉಪ ನಿರ್ದೇಶಕರು ಮತ್ತು ಇಂಡಿಯಾ ನೆಟ್ವರ್ಕ್ ಫಾರ್ ಬೇಸಿಕ್ ಇನ್ಕಮ್ ಇದರ ಕೋ ಆರ್ಡಿನೇಟರ್ ಆಗಿರುತ್ತಾರೆ.)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...