Homeಮುಖಪುಟಪಂಜಾಬ್: ರೈತರ ಪ್ರತಿಭಟನೆ ವೇಳೆ ಘರ್ಷಣೆ: ಓರ್ವ ರೈತ ಸಾವು

ಪಂಜಾಬ್: ರೈತರ ಪ್ರತಿಭಟನೆ ವೇಳೆ ಘರ್ಷಣೆ: ಓರ್ವ ರೈತ ಸಾವು

- Advertisement -
- Advertisement -

ಪಂಜಾಬ್‌ನ ಲಾಂಗೋವಾಲ್‌ನಲ್ಲಿ ರೈತರ ಪ್ರತಿಭಟನೆ ವೇಳೆ ಪೊಲೀಸರ ಜೊತೆ ಘರ್ಷಣೆ ನಡೆದಿದ್ದು, ಈ ವೇಳೆ ಟ್ರಾ ಕ್ಟರ್ ಟ್ರಾಲಿಯ ನಡುವೆ ಸಿಲುಕಿ ಓರ್ವ ರೈತ ಮೃತಪಟ್ಟು ಐವರು ಪೊಲೀಸರು ಗಾಯಗೊಂಡಿದ್ದಾರೆ.

ಸಂಗ್ರೂರ್‌ನ ಮಂದರ್ ಕಲಾನ್ ಗ್ರಾಮದ ಪ್ರೀತಮ್ ಸಿಂಗ್ (55) ಮೃತ ರೈತ. ಅವರು ಲಾಂಗೋವಾಲ್ ಪ್ರದೇಶದಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.

ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ, ಭಾರತಿ ಕಿಸಾನ್ ಯೂನಿಯನ್, ಬಿಕೆಯು, ಆಜಾದ್ ಕಿಸಾನ್ ಸಮಿತಿ, ಬಿಕೆಯು ಸೇರಿದಂತೆ 16 ರೈತ ಸಂಘಗಳ ನೇತೃತ್ವದಲ್ಲಿ ಇಂದು  ಚಂಡೀಗಢದಲ್ಲಿ ಪ್ರತಿಭಟನೆ ನಡೆಯಲಿದೆ.

ಪ್ರವಾಹದಿಂದ ಉಂಟಾದ ನಷ್ಟಕ್ಕೆ ಪರಿಹಾರವನ್ನು ಕೋರಿ ಚಂಡೀಗಢದಲ್ಲಿ ನಡೆದ ಪ್ರತಿಭಟನೆಗೆ ಮುನ್ನ ಹರಿಯಾಣ ಮತ್ತು ಪಂಜಾಬ್‌ನ ಹಲವಾರು ರೈತ ಮುಖಂಡರನ್ನು ಆಯಾ ರಾಜ್ಯದ ಪೊಲೀಸರು ಬಂಧಿಸಿದ್ದಾರೆ.

ಚಂಡೀಗಢದಲ್ಲಿ ಆಗಸ್ಟ್ 22 ರಂದು ನಡೆಯಲಿರುವ ಪ್ರತಿಭಟನೆಗೆ ಮುನ್ನ ಹರ್ಯಾಣದ ಕನಿಷ್ಠ 20 ಮತ್ತು ಪಂಜಾಬ್‌ನ 50 ಜನರನ್ನು ವಿವಿಧ ಜಿಲ್ಲೆಗಳಿಂದ ಬಂಧಿಸಲಾಗಿದೆ ಎಂದು ಮೂಲಗಳು ದಿ ವೈರ್‌ಗೆ ತಿಳಿಸಿವೆ.

ಜುಲೈನಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರವಾಹ ಉಂಟಾಗಿತ್ತು. ಇದು ರೈತರಿಗೆ ಭೀಕರ ಆರ್ಥಿಕ ನಷ್ಟವನ್ನು ಉಂಟುಮಾಡಿತು. ಅಂದಿನಿಂದ ರೈತ ಸಂಘಟನೆಗಳು ಪ್ರವಾಹ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಒತ್ತಾಯಿಸುತ್ತಿವೆ. ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ, ಹಾನಿಗೀಡಾದ ಮನೆಗೆ 5 ಲಕ್ಷ, ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಪಂಜಾಬ್ ಮತ್ತು ಹರ್ಯಾಣ ರಾಜ್ಯ ಸರ್ಕಾರಗಳು ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದಿರುವ ಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.ರೈತ ಮುಖಂಡರ ಬಂಧನ, ಹರ್ಯಾಣದ ಬಿಜೆಪಿ ಸರ್ಕಾರ ಮತ್ತು ಪಂಜಾಬ್‌ನ ಎಎಪಿ ಸರ್ಕಾರದ ಜಂಟಿ ಕಾರ್ಯಾಚರಣೆಯಾಗಿದೆ ಎಂದು ರೈತ ಮುಖಂಡರೋರ್ವರು ಆರೋಪಿಸಿದ್ದಾರೆ.

ಅವರು ಎಂದಿಗೂ ಮಾದಕ ದ್ರವ್ಯಗಳ ವಿಚಾರದಲ್ಲಿ ಜಂಟಿ ಕಾರ್ಯಾಚರಣೆಯನ್ನು ನಡೆಸಲಿಲ್ಲ. ಕೋಮು ಹಿಂಸಾಚಾರವನ್ನು ನಿಲ್ಲಿಸಲು ಅವರು ಒಂದಾಗಿ ಕಾರ್ಯಾಚರಣೆ ನಡೆಸಿಲ್ಲ. ಆದರೆ ರೈತರ ಪ್ರತಿಭಟನೆಯನ್ನು ನಿಲ್ಲಿಸಲು ಎರಡೂ ರಾಜ್ಯಗಳು ಒಗ್ಗೂಡಿದವು ಎಂದು ಭಾರತೀಯ ಕಿಸಾನ್ ಯೂನಿಯನ್ ನ ವಕ್ತಾರರು ಹೇಳಿದ್ದಾರೆ.

ಇದನ್ನು ಓದಿ: ಪಾಕಿಸ್ತಾನದ ಮೇಲೆ ಮತ್ತೆ ಸರ್ಜಿಕಲ್ ಸ್ಟ್ರೈಕ್; ಸುಳ್ಳು ಸುದ್ದಿ ಎಂದ ರಕ್ಷಣಾ ಸಚಿವಾಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...