Homeಮುಖಪುಟಭಾರತೀಯ ವಾಯುಪಡೆಯಿಂದ ಹೊಸ ಧ್ವಜ ಅನಾವರಣ

ಭಾರತೀಯ ವಾಯುಪಡೆಯಿಂದ ಹೊಸ ಧ್ವಜ ಅನಾವರಣ

- Advertisement -
- Advertisement -

ಭಾರತೀಯ ವಾಯುಪಡೆಯು (ಐಎಎಫ್‌) ತನ್ನ ಹೊಸ ಧ್ವಜವನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಭಾನುವಾರ ಬಿಡುಗಡೆ ಮಾಡಿದೆ.

ಭಾರತೀಯ ವಾಯುಪಡೆಯ 91ನೇ ದಿನಾಚರಣೆಯ ಹಿನ್ನೆಲೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರು ಹೊಸ ಧ್ವಜವನ್ನು ಅನಾವರಣ ಮಾಡಿದರು.

ಐಎಎಫ್‌ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಐಎಎಫ್‌ ಇತಿಹಾಸದಲ್ಲಿ ಇದು ಅವಿಸ್ಮರಣೀಯ ದಿನ ಎಂದು ಹೇಳಿಕೊಂಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಐಎಎಫ್‌, ಭಾರತೀಯ ವಾಯುಪಡೆಯ ಮೌಲ್ಯಗಳನ್ನು ಪ್ರತಿಫಲಿಸುವಂತೆ ಧ್ವಜವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದೆ. ಪತಾಕೆ ಹಾರಾಡುವ ಜಾಗದಲ್ಲಿ ಐಎಎಫ್‌ನ ಲಾಂಛನವನ್ನು ಚಿತ್ರಿಸಲಾಗಿದೆ ಎಂದಿದೆ. ಐಎಎಫ್‌ನ ಹೊಸ ಪತಾಕೆಯು ನೀಲಿ ಬಣ್ಣದ್ದಾಗಿದ್ದು, ಅದು ತ್ರಿವರ್ಣ ಧ್ವಜ, ಐಎಎಫ್‌ ಲಾಂಛನ, ತ್ರಿವರ್ಣದ ವೃತ್ತಾಕಾರ ವಿನ್ಯಾಸವನ್ನು ಒಳಗೊಂಡಿದೆ.

ಐಎಎಫ್ ಲಾಂಛನವು ಮೇಲ್ಭಾಗದಲ್ಲಿ ಅಶೋಕ ಸಿಂಹವನ್ನು ಹೊಂದಿದ್ದು,ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ‘ಸತ್ಯಮೇವ ಜಯತೆ‘ ಎಂದು ಬರೆಯಲಾಗಿದೆ.

ಅಶೋಕ ಸಿಂಹದ ಕೆಳಗೆ ಐಎಎಪ್‌ನ ಹೋರಾಟದ ಗುಣಗಳನ್ನು ಸೂಚಿಸುವ ರೆಕ್ಕೆ ಬಿಚ್ಚಿರುವ ಹಿಮಾಲಯದ ಹದ್ದು ಇದೆ. ಧ್ವಜದಲ್ಲಿ ಭಾರತೀಯ ವಾಯು ಸೇನಾ ಎಂದು ಬರೆಯಲಾಗದೆ.

ಈವರೆಗೆ ಬಳಕೆಯಲ್ಲಿದ್ದ ಐಎಎಫ್‌ ಧ್ವಜವನ್ನು 1950ರಲ್ಲಿ ಅಂಗೀಕರಿಸಲಾಗಿತ್ತು. ಇದೀಗ 72 ವರ್ಷಗಳ ಬಳಿಕ ಬದಲಾವಣೆ ಮಾಡಲಾಗಿದೆ.

ವಾಯುಪಡೆ ದಿನಾಚರಣೆಯ ಪಥಸಂಚಲನವನ್ನು 2021ರವರೆಗೆ ದೆಹಲಿಯ ಹಿಂಡನ್‌ ವಾಯುನೆಲೆಯಲ್ಲಿ ನಡೆಸಲಾಗುತ್ತಿತ್ತು. 2022ರಲ್ಲಿ ಚಂಡೀಗಢದಲ್ಲಿ ನಡೆಸಲಾಯಿತು. ಈ ಬಾರಿ ಪ್ರಯಾಗರಾಜ್‌ನಲ್ಲಿ ನಡೆಸಲಾಗಿದೆ.

ಇದನ್ನು ಓದಿ: ಅಪಘಾತದಲ್ಲಿ ನಿಧನ ಹೊಂದಿದ ವ್ಯಕ್ತಿಯ ಮೃತದೇಹವನ್ನು ನದಿಗೆ ಎಸೆದ ಪೊಲೀಸರು: ವಿಡಿಯೋ ವೈರಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...