Homeಮುಖಪುಟಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದಲ್ಲಿ ಮೃತರ ಸಂಖ್ಯೆ ಗಣನೀಯ ಹೆಚ್ಚಳ: ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದಲ್ಲಿ ಮೃತರ ಸಂಖ್ಯೆ ಗಣನೀಯ ಹೆಚ್ಚಳ: ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

- Advertisement -
- Advertisement -

ಪ್ಯಾಲೆಸ್ತೀನ್‌ ಗುಂಪು ಹಮಾಸ್‌ ಇಸ್ರೇಲ್‌ ಮೇಲೆ ನಡೆಸಿದ ಭೂ, ನೌಕಾ, ವಾಯು ದಾಳಿಯಲ್ಲಿ ಹಲವಾರು ಅಮೆರಿಕದ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಲ್ಲದೆ ಇಸ್ರೇಲ್‌ಗೆ ಎಲ್ಲಾ ರೀತಿಯ ನೆರವನ್ನು ಅಮೆರಿಕ ಘೋಷಿಸಿದೆ.

ಕೊಲ್ಲಲ್ಪಟ್ಟ ಅಮೇರಿಕನ್ನರ ನಿಖರ ಸಂಖ್ಯೆ ಮತ್ತು ಮೃತರ ಗುರುತಿನ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ಅಧಿಕಾರಿ ಈವರೆಗೆ ಒದಗಿಸಿಲ್ಲ. ಯುಎಸ್ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಿ, ನಾವು ಹಲವಾರು ಯುಎಸ್ ನಾಗರಿಕರ ಸಾವನ್ನು ದೃಢೀಕರಿಸಿದ್ದೇವೆ ಎಂದು ಹೇಳಿದ್ದಾರೆ. ನಾವು ಮೃತರಿಗೆ ಮತ್ತು ಎಲ್ಲಾ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನವನ್ನು ಹೇಳುತ್ತೇವೆ ಎಂದು ಹೇಳಿದ್ದಾರೆ.

ಇಸ್ರೇಲ್‌ಗೆ ಮಿತ್ರರಾಷ್ಟ್ರ ಅಮೆರಿಕ ಬೆಂಬಲಕ್ಕೆ ನಿಂತಿದ್ದು,  US ಅಧ್ಯಕ್ಷ ಜೋ ಬಿಡನ್  ಇಸ್ರೇಲ್‌ಗೆ, ಅಮೆರಿಕಾ ಹಡಗುಗಳು ಮತ್ತು ಯುದ್ಧವಿಮಾನಗಳ ನೆರವು ಕಳುಹಿಸಲು ಆದೇಶಿಸಿದ್ದಾರೆ.

USS ಗೆರಾಲ್ಡ್ R ಫೋರ್ಡ್ ಮತ್ತು ಅದರ ಜೊತೆಗೆ ಯುದ್ಧನೌಕೆಗಳನ್ನು ಪೂರ್ವ ಮೆಡಿಟರೇನಿಯನ್‌ಗೆ ಕಳುಹಿಸುತ್ತಿರುವುದಾಗಿ ಹೇಳಿದೆ. ಗಾಜಾ ಪಟ್ಟಿಯಿಂದ ಇಸ್ರೇಲ್‌ ಮೇಲೆ ಸಾವಿರಾರು ರಾಕೆಟ್‌ಗಳ ಸರಣಿ ದಾಳಿ ಬಳಿಕ ಅಮೆರಿಕ ಇಸ್ರೇಲ್‌ಗೆ ಬೆಂಬಲವನ್ನುಸೂಚಿಸಿದೆ.

ಅಮೆರಿಕಾ ಅಧ್ಯಕ್ಷ ಬಿಡೆನ್ ಭಾನುವಾರ ಇಸ್ರೇಲ್‌ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದು, ಇಸ್ರೇಲ್‌ ರಕ್ಷಣಾ ಪಡೆಗಳಿಗೆ ಹೆಚ್ಚುವರಿ ಸಹಾಯವನ್ನು ಮಾಡುವುದಾಗಿ ಹೇಳಿದ್ದಾರೆ.

ಇದಲ್ಲದೆ ದಾಳಿಯ ನಂತರ ಕಾಣೆಯಾದ ಮತ್ತು ಮೃತ ಅಮೆರಿಕನ್ನರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್  ಹೇಳಿದ್ದಾರೆ. ಇಸ್ರೇಲ್ ವಿರುದ್ಧದ ಭಯೋತ್ಪಾದಕ ದಾಳಿ ಕುರಿತು ಚರ್ಚಿಸಲು ನಾನು ಪ್ಯಾಲೇಸ್ತೀನಿ ಪ್ರಾಧಿಕಾರದ ಅಧ್ಯಕ್ಷ ಅಬ್ಬಾಸ್ ಅವರೊಂದಿಗೆ ಮಾತನಾಡಿದ್ದೇನೆ. ಈ ಪ್ರದೇಶದ ಎಲ್ಲಾ ನಾಯಕರು ಭಯೋತ್ಪಾದನೆಯ ಈ ಭಯಾನಕ ಕೃತ್ಯಗಳನ್ನು ಖಂಡಿಸಬೇಕು ಎಂದು ನಾನು ಒತ್ತಾಯಿಸಿದೆ ಎಂದು ಬ್ಲಿಂಕೆನ್ ಎಕ್ಸ್ ನಲ್ಲಿ ಬರೆದಿದ್ದಾರೆ.

ಇಸ್ರೇಲಿ-ಪ್ಯಾಲೆಸ್ತೀನ್‌ ಸಂಘರ್ಷದ ಉಲ್ಬಣದಿಂದ ಸಾವಿನ ಸಂಖ್ಯೆ 1,100 ದಾಟಿದೆ. ಇಸ್ರೇಲ್‌ನಲ್ಲಿ 700ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು ಮತ್ತು ಗಾಜಾದಲ್ಲಿ ಕನಿಷ್ಠ 400 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನು ಓದಿ: ಇಸ್ರೇಲ್- ಹಮಾಸ್ ನಡುವೆ ಮುಂದುವರಿದ ಕದನ: ಮೃತರ ಸಂಖ್ಯೆ 613ಕ್ಕೆ ಏರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾಮನಿರ್ದೇಶನ ರದ್ದು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿಯಿಂದ ಅರ್ಜಿ; ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

0
ಪಶ್ಚಿಮ ಬಂಗಾಳದ ಬಿರ್ಭೂಮ್ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ದೇಬಾಶಿಶ್ ಧಾರ್ ಅವರು ತಮ್ಮ ನಾಮಪತ್ರಗಳನ್ನು ರದ್ದುಗೊಳಿಸುವುದರ ವಿರುದ್ಧ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ...