ರಾಜ್ಯದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದೆ. ಹೆಂಗ್ ಪುಂಗ್ಲಿ ಖ್ಯಾತಿಯ ಬಾಡಿಗೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯ ಪಠ್ಯ ಬೇಡ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
BJP ಹಾಗೂ ಸಂಘಪರಿವಾರದ ಬೌದ್ಧಿಕ ದಿವಾಳಿತನ ಈ ಮಟ್ಟಕ್ಕೆ ಇಳಿಬಾರದಾಗಿತ್ತು. ಸುಳ್ಳಿನ ಕಂತೆಗಳನ್ನ ಪೋಣಿಸುವ ಹೆಂಗ್ ಪುಂಗ್ಲಿ ಖ್ಯಾತಿಯ ಬಾಡಿಗೆ ಭಾಷಣಕಾರನನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಂಬಲಿಸುವುದು ದುರಂತ ಎಂದಿದ್ದಾರೆ.
ಅಂತಹ ವಾಗ್ಮಿ, ಚಿಂತಕನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನಿಮ್ಮದೇ ಪಕ್ಷದ ಮಾಜಿ ಸಿಎಂ ಡಿ.ವಿ ಸದಾನಂದಗೌಡರ ಬಗ್ಗೆ ಮಾರ್ಗದರ್ಶನ ಪಡೆಯುವುದು ಒಳ್ಳೆಯದು ಎಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
BJP ಹಾಗೂ ಸಂಘಪರಿವಾರದ ಬೌದ್ಧಿಕ ದಿವಾಳಿತನ ಈ ಮಟ್ಟಕ್ಕೆ ಇಳಿಬಾರದಾಗಿತ್ತು. ಸುಳ್ಳಿನ ಕಂತೆಗಳನ್ನ ಪೋಣಿಸುವ ಹೆಂಗ್ ಪುಂಗ್ಲಿ ಖ್ಯಾತಿಯ ಬಾಡಿಗೆ ಭಾಷಣಕಾರನಂತಹ "ವಾಗ್ಮಿ"ಯನ್ನ ನೋಡೇ ಇಲ್ವಂತೆ.!
@JagadishShettar ಅವ್ರೇ ನಿಮ್ಮ "ಚಿಂತಕ"ನ ಬಗ್ಗೆ ಮಾಜಿ ಸಿಎಂ @DVSadanandGowdaರ ಬಳಿ ಮಾರ್ಗದರ್ಶನ ಪಡೆಯುವುದು ಒಳ್ಳೆಯದು. pic.twitter.com/XLdyzXSOdh
— Hariprasad.B.K. (@HariprasadBK2) May 23, 2022
ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ “ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಹಿಂದೂಪರ ಚಿಂತನೆಗಳನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಅಳವಡಿಸಿದರೆ” ತಪ್ಪೇನು ಎಂದು ಪ್ರಶ್ನಿಸಿದ್ದರು. ಅಲ್ಲದೆ ಟಿಪ್ಪು ಒಬ್ಬ ನರಭಕ್ಷಕ ಎಂದು ಸಹ ಹೇಳಿಕೆ ನೀಡಿದ್ದರು.
ಅವರ ಹೇಳಿಕೆಗೆ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದು, “ಜಗದೀಶ್ ಶೆಟ್ಟರ್ ಟಿಪ್ಪುವಿನ ಪೋಷಾಕು ಧರಿಸಿ ಪೋಸು ನೀಡಿದ್ದನ್ನ ಮರೆತಿರಬೇಕು. ಚಿತ್ರಗಳು ಬರೀ ಮಾತಾಡುವುದಿಲ್ಲ ಶೆಟ್ಟರ್ ಅವರೇ, ಸತ್ಯವನ್ನ ಬೆತ್ತಲೆ ಕೂಡ ಮಾಡುತ್ತೆ. ಕೋಮುವಾದದ ಕನ್ನಡಕ ಕಳಚಿಟ್ಟು ಓದುವುದಾದರೇ ತಾವೇ ಸಿಎಂ ಆಗಿದ್ದಾಗ ಪ್ರಕಟಿಸಿರುವ ಪುಸ್ತಕ ಕಳಿಸಿಕೊಡಬೇಕಾ?” ಎಂದು ಶೆಟ್ಟರ್ ಟಿಪ್ಪುವಿನ ವೇಶ ಧರಿಸಿದ್ದ ಫೋಟೋಗಳನ್ನು ಟ್ವಿಟ್ ಮಾಡಿದ್ದಾರೆ.
"ಟಿಪ್ಪು ಒಬ್ಬ ನರಭಕ್ಷಕ"ಎಂದು @JagadishShettar ಹೇಳಿಕೆ ನೀಡಿದ್ದಾರೆ.ಹಾಗಾದ್ರೆ ಟಿಪ್ಪುವಿನ ಪೋಷಾಕು ಧರಿಸಿ ಪೋಸು ನೀಡಿದ್ದನ್ನ ಮರೆತಿರಬೇಕು.ಚಿತ್ರಗಳು ಬರೀ ಮಾತಾಡುವುದಿಲ್ಲ ಶೆಟ್ಟರ್ ಅವರೇ,ಸತ್ಯವನ್ನ ಬೆತ್ತಲೆ ಕೂಡ ಮಾಡುತ್ತೆ.
ಕೋಮುವಾದದ ಕನ್ನಡಕ ಕಳಚಿಟ್ಟು ಓದುವುದಾದರೇ ತಾವೇ ಸಿಎಂ ಆಗಿದ್ದಾಗ ಪ್ರಕಟಿಸಿರುವ ಪುಸ್ತಕ ಕಳಿಸಿಕೊಡಬೇಕಾ? pic.twitter.com/SAgksvbyqX
— Hariprasad.B.K. (@HariprasadBK2) May 23, 2022
ಸ್ವಿಸ್‌ನಲ್ಲಿರುವ ಕಪ್ಪು ಹಣವನ್ನು ಭಾರತದ ಬೊಕ್ಕಸಕ್ಕೆ ತಂದು ಹಾಕಿದರೆ ದೇಶದ ಎಲ್ಲಾ ರಸ್ತೆಗಳಿಗೂ ಟಾರ್ ಹಾಕುವ ಬದಲು ಚಿನ್ನ ಹಾಕಬಹುದು. ಸೌದಿಯ ಪೆಟ್ರೋಲಿಯಂ ಸಚಿವರಿಗೆ ಮೋದಿ ಫೋನ್ ಮಾಡಿ ಪೆಟ್ರೋಲ್ ಬೆಲೆ ಕಡಿಮೆ ಮಾಡಲು ಹೇಳಿದ್ದರು. ಬೆಂಗಳೂರಿನಿಂದ ಮಂಗಳೂರಿಗೆ ಬುಲೆಟ್ ಟ್ರೈನ್ ನಲ್ಲಿ 2 ಗಂಟೆಯಲ್ಲಿ ಹೋಗಬಹುದು. ಮೋದಿ ಇವೆಲ್ಲವನ್ನು ಮಾಡುತ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡಿ ವಿವಾದ ಸೃಷ್ಟಿಸಿದ್ದರು. ಹಾಗಾಗಿ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಹೆಂಗ್ ಪುಂಗ್ಲಿಯೆಂಬ ಅಡ್ಡನಾಮದಿಂದ ಕರೆದು ಟ್ರೋಲ್ ಮಾಡಲಾಗುತ್ತಿದೆ.
ಈ ಹರಿಪ್ರಸಾದ್ ಅನ್ನೋ ಗುಲಾಮನೇ ಒಬ್ಬಾ ಗೂಂಡಾ ಹಾಗಿರುವಾಗ ಇನ್ನೊಬ್ಬರ ಬಗ್ಗೆ ಮಾತಾಡೋ ಯೋಗ್ಯತೆ ಈ ಗೂಂಡಾ ಗುಲಾಮರಿಗೆ ಇಲ್ಲಾ