Homeಕರ್ನಾಟಕಮೈಸೂರಿನಲ್ಲಿ ಒಕ್ಕಲಿಗರ ಶಾಸಕರನ್ನು ಟಾರ್ಗೆಟ್ ಮಾಡಿ ನಡೆಯುತ್ತಿದೆ ಆಪರೇಷನ್ ಗಪ್‍ಚುಪ್!

ಮೈಸೂರಿನಲ್ಲಿ ಒಕ್ಕಲಿಗರ ಶಾಸಕರನ್ನು ಟಾರ್ಗೆಟ್ ಮಾಡಿ ನಡೆಯುತ್ತಿದೆ ಆಪರೇಷನ್ ಗಪ್‍ಚುಪ್!

- Advertisement -
- Advertisement -

ಸಿಎಂ ಕುಮಾರಸ್ವಾಮಿ ಅತ್ತ ಅಮೆರಿಕಾ ಕಾಳಭೈರವನ ಸನ್ನಿದಿಯಲ್ಲಿ ಕೂತಿರುವ ಸಂದರ್ಭದಲ್ಲಿ ಇತ್ತ ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟದ್ದು ದೊಡ್ಡ ಕೋಲಾಹಲವನ್ನೇ ಉಂಟುಮಾಡಿದೆ. ಮೋದಿಯವರ ಪ್ರಮಾಣ ವಚನಕ್ಕೆಂದು ಹೋಗಿದ್ದ ಯಡ್ಯೂರಪ್ಪನವರು ವಾಪಾಸು ಬಂದು ಹೇಳಿದ ಮೊದಲ ಸುದ್ದಿಯೇ `ನಾವಿನ್ನು ಆಪರೇಷನ್ ಕಮಲ ಮಾಡೋದಿಲ್ಲ. ವಿರೋಧಪಕ್ಷವಾಗಿ ಮೈತ್ರಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುತ್ತೇವೆ’ ಎಂದು. ಅಲ್ಲಿಗೆ ಆಪರೇಷನ್ ಕಮಲದ ಕಥೆ ಮುಗಿದಹೋಯ್ತು ಅಂತ ಸುಮಾರಷ್ಟು ಜನ ಭಾವಿಸಿದ್ದಿರಬಹುದು. ಆದರೆ ಅದರ ಅಸಲೀ ಹಕೀಕತ್ತು ಈಗ ಈ ಇಬ್ಬರ ರಾಜೀನಾಮೆಯಿಂದ ಬಯಲಾಗಿದೆ.

ಅವತ್ತು ದಿಲ್ಲಿಗೆ ಹೋದ ಯಡ್ಯೂರಪ್ಪನವರಿಗೆ ಅಮಿತ್ ಷಾ ಕೊಟ್ಟ ಸೂಚನೆ ಸ್ಪಷ್ಟವಾಗಿತ್ತು. ಯಾವ ಕಾರಣಕ್ಕೂ ಆಪರೇಷನ್ ಕಮಲ ನಿಲ್ಲಿಸಬೇಡಿ, ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಿ ನೀವೇ ಸಿಎಂ ಆಗಿ, ಆದ್ರೆ ಯಾವ ಕಾರಣಕ್ಕೂ ಬಿಜೆಪಿಯೇ ಸರ್ಕಾರ ಬೀಳಿಸಿತು ಎಂಬ ಅಪಖ್ಯಾತಿ ತಟ್ಟಬಾರದು. ಅದಕ್ಕಾಗಿ ಬಹಿರಂಗವಾಗಿ ಕದನ ವಿರಾಮ ಘೋಷಿಸಿ ಒಳಗೊಳಗೇ ಮಸಲತ್ತು ಮುಂದುವರೆಸಿ ಎಂಬ ಬುದ್ದಿಮಾತು ಹೇಳಿ ಕಳಿಸಿದ್ದರು. ಹಾಗಾಗಿಯೇ ಯಡ್ಯೂರಪ್ಪನವರು ಆಪರೇಷನ್ ಕಮಲ ಮಾಡಲ್ಲ ಅನ್ನೋ ಹೇಳಿಕೆ ಕೊಟ್ಟಿದ್ದು.

ಅಮಿತ್ ಶಾ ಕೂಡಾ ಅಷ್ಟು ಸ್ಪಷ್ಟವಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಕ್ಕೆ ಒಂದು ಕಾರಣವಿತ್ತು. ಮೊನ್ನೆಯಷ್ಟೆ ಮುಗಿದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯೇನು ಪ್ರಚಂಡ ಕಟಾವು ಮಾಡಿಕೊಂಡಿತಲ್ಲ, ಅದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮೈತ್ರಿ ಪಾಳೆಯದ ಮೂವತ್ತು ಶಾಸಕರು ನೆರವಾಗಿದ್ದರು. ಬಿಜೆಪಿಗೆ ಹೋಗಿಬಿಡಬೇಕು ಎಂಬ ಕಾರಣಕ್ಕೇ ಅಲ್ಲದಿದ್ದರು, ತಮ್ಮೊಳಗಿನ ಆಂತರಿಕ ಕಚ್ಚಾಟದ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಅದರಲ್ಲಿ ಕೆಲವರು ಬಿಜೆಪಿಗೆ ಸಾಥ್ ಕೊಟ್ಟದ್ದು ಸುಳ್ಳಲ್ಲ. ಈ ಮೂವತ್ತರಲ್ಲಿ ಕನಿಷ್ಠ ಅರ್ಧದಷ್ಟು ಮಂದೆಯನ್ನಾದರು ತಮ್ಮ ಕಡೆ ತಿರುಗಿಸಿಕೊಳ್ಳೋದು ಕಷ್ಟವಲ್ಲ ಎಂಬುದನ್ನು ಯಡ್ಯೂರಪ್ಪನವರು ಮನವರಿಕೆ ಮಾಡಿಕೊಟ್ಟಿದ್ದರಿಂದ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟದ್ದು, ಜೊತೆಗೆ ಬಿಜೆಪಿಗೆ ಅಪಖ್ಯಾತಿ ಬರಬಾರದೆಂಬ ಎಚ್ಚರಿಕೆಯನ್ನೂ ಇತ್ತದ್ದು.

ಈ ತೆರೆಮರೆ ಆಪರೇಷನ್‍ನ ಫಲವಾಗಿಯೇ ಈ ಇಬ್ಬರು ರಾಜೀನಾಮೆಗೆ ಮುಂದಾಗಿರುವ ಬಗ್ಗೆ ಸಂಶಯಗಳು ಕ್ಷಣದಿಂದ ಕ್ಷಣಕ್ಕೆ ದಟ್ಟವಾಗುತ್ತಿವೆ. ಆ ರಾಜೀನಾಮೆಗಳು ಅಂಗೀಕರವಾಗುವುದೇ ಡೌಟು ಎಂಬ ಅನುಮಾನಗಳೂ ಮೂಡುತ್ತಿವೆ. ಅದೇನೆ ಇರಲಿ, ಈ ಸಲ ಬಿಜೆಪಿ ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡುವುದಷ್ಟೇ ಅಲ್ಲ, ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಬಲವನ್ನು ಏಕಾಏಕಿ ಕುಗ್ಗಿಸಿ ಇಡೀ ಕರ್ನಾಟಕದ ಉದ್ದಗಲಕ್ಕು ಕಮಲದ ಬಾವುಟ ಹಾರಾಡಿಸಬೇಕೆಂಬ ಅಜೆಂಡಾ ಇಟ್ಟುಕೊಂಡೇ ಅಖಾಡಕ್ಕಿಳಿದಿದೆ. ಅದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದಕ್ಕೆ ಕಾಲವೇ ಉತ್ತರ ಕೊಡಬೇಕು.

ಈ ಸಲ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿರುವ ಬಿಜೆಪಿ ಸಿಲಿಕಾನ್ ಸಿಟಿಯ ಬದಲಿಗೆ ಮೈಸೂರು ನಗರಿಯಿಂದ ಆಪರೇಟ್ ಮಾಡುತ್ತಿದೆ ಅನ್ನೋದು ಲೇಟೆಸ್ಟ್ ಸುದ್ದಿ. ಇದಕ್ಕೂ ಕಾರಣವಿದೆ. ಒಕ್ಕಲಿಗ ಮುಖ್ಯಮಂತ್ರಿಯ ಸರ್ಕಾರ ಕೆಡವಿದ ಅಪಖ್ಯಾತಿ ಬರಬಾರದು ಎಂಬ ಕಾರಣಕ್ಕೆ ಎಸ್.ಎಂ.ಕೃಷ್ಣರ ಮನೆಯಿಂದ ದಾಳ ಉರುಳಿಸಿದ್ದ ಬಿಜೆಪಿ ಆ ವಿಚಾರದಲ್ಲಿ ಈಗ ಮತ್ತಷ್ಟೂ ಸೆನ್ಸಿಬಲ್ ಆಗಿದೆ. ಅತ್ತ ಅಧಿಕಾರವೂ ಸಿಗಬೇಕು, ಇತ್ತ ಒಕ್ಕಲಿಗ ಮತಗಳ ಮೇಲೆ ಹಿಡಿತವೂ ಸಾಧ್ಯವಾಗಬೇಕು ಎಂಬ ಯೋಜನೆ ಹಾಕಿಕೊಂಡು, ಈ ಸಲ ಆಪರೇಷನ್ ಕಮಲಕ್ಕೆ ಹೆಚ್ಚೆಚ್ಚು ಒಕ್ಕಲಿಗ ಶಾಸಕರನ್ನೇ, ಅದರಲ್ಲೂ ಜೆಡಿಎಸ್ ಶಾಸಕರನ್ನೇ ಸೆಳೆಯುವ ಸಾಹಸಕ್ಕೆ ಅದು ಕೈಹಾಕಿದೆ. ಒಕ್ಕಲಿಗ ಶಾಸಕರೇ ಕೈಕೊಟ್ಟು ಕುಮಾರಸ್ವಾಮಿಯ ಸರ್ಕಾರ ಬೀಳಿಸಿದರೆ ಒಕ್ಕಲಿಗರು ಜಾತಿಯ ಕಾರಣಕ್ಕೆ ದೇವೇಗೌಡರತ್ತ ದೃವೀಕರಣವಾಗಲಾರರು ಎಂಬುದು ಇದರ ಹಿಂದಿರುವ ಲೆಕ್ಕಾಚಾರ. ಅಲ್ಲದೇ ಹಾಗೆ ಬರುವ ಅಷ್ಟೂ ಒಕ್ಕಲಿಗ ಶಾಸಕರ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಬಾವುಟ ಹಾರಾಡಿಸಿ, ತಳ ಗಟ್ಟಿಮಾಡಿಕೊಳ್ಳುವ ಯೋಜನೆಯೂ ಇದರಲ್ಲಿದೆ. ಈ ಕಾರಣಕ್ಕೇ ಸಿಎಂ ಕುಮಾರಸ್ವಾಮಿ ಅಮೆರಿಕಾಕ್ಕೆ ಹೋಗಿರುವ ಸಂದರ್ಭವನ್ನೇ ಸರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಇದರ ಸಂಪೂರ್ಣ ಹೊಣೆಯನ್ನು ಬಿಜೆಪಿಯ ಒಕ್ಕಲಿಗ ಲೀಡರುಗಳಾದ ಸಿ.ಟಿ.ರವಿ ಮತ್ತು ಆರ್.ಅಶೋಕ್ ಹೆಗಲಿಗೆ ವಹಿಸಲಾಗಿದೆ. ಈ ಇಬ್ಬರೂ ಮೈಸೂರಿನಲ್ಲಿ ಮುಕ್ಕಾಂ ಹೂಡಿ ಗಾಳ ಹಾಕಿ ಕೂತಿದ್ದಾರೆ. ಪತ್ರಿಕೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ ಆಪರೇಷನ್‍ಗೆ ಒಳಗಾಗುವ ಒಕ್ಕಲಿಗ ಶಾಸಕರಿಗೆ ತಲಾ ಮೂವತ್ತು ಕೋಟಿ ಹಣ, ಉಪಚುನಾವಣೆಯಲ್ಲಿ ಟಿಕೆಟ್, ಗೆಲ್ಲಿಸಿಕೊಂಡು ಬರುವ ಭರವಸೆ ಮತ್ತು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಪದವಿಯ ಬಲ್ಕ್ ಪ್ಯಾಕೇಜ್ ನೀಡಲಾಗುತ್ತಿದೆಯಂತೆ. ಅದರಲ್ಲು ಮಂತ್ರಿ ಪದವಿ ಬೇಡವೆಂದವರಿಗೆ ಮೊತ್ತದಲ್ಲಿ ಅಡ್ಜಸ್ಟ್‍ಮೆಂಟ್ ಮಾಡುವ ಖಾತ್ರಿಯನ್ನೂ ನೀಡಲಾಗುತ್ತಿದೆ.

ಇದರ ಬೆನ್ನಿಗೇನೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ಮತ್ತ ಉನ್ನತ ಶಿಕ್ಷಣ ಸಚಿವರೂ ಆದ ಜಿ.ಟಿ ದೇವೆಗೌಡರು ಈಗ ಮತ್ತೆ ಮೋದಿ ಮತ್ತು ಅಮಿತ್ ಶಾರನ್ನು ಹೊಗಳಲು ಶುರು ಮಾಡಿದ್ದಾರೆ. ಇದರ ಮರ್ಮವೇನೆಂದು ತಿಳಿಯಲು ಇನ್ನ ಒಂದೆರಡು ದಿನಗಳು ಸಾಕು.

ಬೇರೆಬೇರೆ ಕಾರಣಗಳಿಂದ ದೇವೇಗೌಡರ ಕುಟುಂಬ ಹಾಗೂ ಈ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿರುವ ಹತ್ತು ಮಂದಿ ಒಕ್ಕಲಿಗ ಶಾಸಕರನ್ನು ವಿಚಲಿತಗೊಳಿಸುವುದಕ್ಕೆಂದೆ `ಸ್ಟಾರ್ಟ್ ಅಪ್ ಡೋಸ್’ ಆಗಿ ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿಯವರಿಂದ ರಾಜೀನಾಮೆ ಕೊಡಿಸಿದ್ದಾರೆ ಎಂಬುದು ಸುದ್ದಿ. ಆದರೆ ಇದಕ್ಕೆ ಜೆಡಿಎಸ್‍ನ ಇತರ ಶಾಸಕರು ಸೊಪ್ಪು ಹಾಕಿದಂತೆ ಕಾಣುತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...