Homeಮುಖಪುಟಗಾಜಾದಲ್ಲಿನ ಜನ ಎರಡು ತುಂಡು ಬ್ರೆಡ್ ತಿಂದು ದಿನ ದೂಡುತ್ತಿದ್ದಾರೆ: ವಿಶ್ವಸಂಸ್ಥೆ

ಗಾಜಾದಲ್ಲಿನ ಜನ ಎರಡು ತುಂಡು ಬ್ರೆಡ್ ತಿಂದು ದಿನ ದೂಡುತ್ತಿದ್ದಾರೆ: ವಿಶ್ವಸಂಸ್ಥೆ

- Advertisement -
- Advertisement -

ಇಸ್ರೇಲ್ ದೇಶ ಗಾಜಾ ಮೇಲೆ ನಡೆಸುತ್ತಿರುವ ಮಾರಣಹೋಮದಿಂದಾಗಿ ಅಲ್ಲಿಯ ಜನರು ಈಗ ಎರಡು ತುಂಡು ಬ್ರೆಡ್ ಮತ್ತು ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ವಿಶ್ವ ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಫೆಲೆಸ್ತೀನಿ ನಿರಾಶ್ರಿತರಿಗಾಗಿರುವ ವಿಶ್ವ ಸಂಸ್ಥೆಯ ಏಜನ್ಸಿಯ ಗಾಝಾ ನಿರ್ದೇಶಕರಾದ ಥಾಮಸ್ ವೈಟ್  ಅವರು, ”ಗಾಜಾದಲ್ಲಿನ ಜನರು ವಿಶ್ವಸಂಸ್ಥೆ ಶೇಖರಿಸಿಟ್ಟಿರುವ ಅರೆಬಿಕ್ ಬ್ರೆಡ್‌ನ ಎರಡು ತುಂಡುಗಳನ್ನು ತಿಂದು ದಿನ ದೂಡುತ್ತಿದ್ದಾರೆ ಹಾಗೂ ಎಲ್ಲೆಡೆ ಈಗ ಅಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಿದೆ ಎಂದು ಹೇಳಿದ್ದಾರೆ.

”ಕಳೆದ ಕೆಲ ವಾರಗಳಲ್ಲಿ ಗಾಝಾದ ಉದ್ದಗಲಕ್ಕೂ ಓಡಾಡಿದ್ದೇನೆ. ಎಲ್ಲೆಡೆ ಸಾವು ಮತ್ತು ವಿನಾಶ ಕಾಣಿಸುತ್ತಿದೆ. ಅಲ್ಲಿ ಸುರಕ್ಷಿತ ಸ್ಥಳವೆಂಬುದಿಲ್ಲ ಜನರು ತಮ್ಮ ಜೀವಗಳಿಗೆ, ಭವಿಷ್ಯದ ಕುರಿತು ಹಾಗೂ ತಮ್ಮ ಕುಟುಂಬಗಳನ್ನು ಸಲಹುವ ಬಗೆ ಹೇಗೆ ಎಂಬ ಕುರಿತು ಚಿಂತಿತರಾಗಿದ್ದಾರೆ” ಎಂದು ಅವರು ಹೇಳಿದರು.

”ವಿಶ್ವ ಸಂಸ್ಥೆಯ ಫೆಲೆಸ್ತೀನಿ ನಿರಾಶ್ರಿತರ ಏಜನ್ಸಿಯು ಗಾಝಾದಾದ್ಯಂತ 89 ಬೇಕರಿಗಳಿಗೆ ಬೆಂಬಲ ನೀಡುತ್ತಿದ್ದು17 ಲಕ್ಷ ಜನರಿಗೆ ಬ್ರೆಡ್ ದೊರೆಯುವಂತೆ ಮಾಡುವ ಉದ್ದೇಶ ಅದಕ್ಕಿದೆ. ಆದರೆ ಈಗ ಜನರು ನೀರಿಗಾಗಿ ಹುಡುಕುವ ಸ್ಥಿತಿ ಬಂದಿದೆ” ಎಂದು ಅವರು ಹೇಳಿದರು.

”ಒಳ್ಳೆಯ ನೀರು ಸಿಗದೇ ಇರುವಾಗ ಜನರು ಉಪ್ಪಿನಂಶವಿರುವ ಅಂತರ್ಜಲವನ್ನು ಅವಲಂಬಿಸುವಂತಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಇಸ್ರೇಲ್ ಹಿಂಸಾಚಾರ: ಶಾಲೆ ಮೇಲೆ ಶೆಲ್ ದಾಳಿ; 20 ಅಮಾಯಕರ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

0
ರಾಜಸ್ಥಾನದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಸ್ಮಾನ್‌ ಘನಿ ಬಂಧನದ ಬಗ್ಗೆ ಮಾತನಾಡಲು ಸ್ವಪಕ್ಷದ ಅಲ್ಪಸಂಖ್ಯಾತ ಘಟಕದ ನಾಯಕರು ಮುಂದೆ ಬರುತ್ತಿಲ್ಲ. 'ಪ್ರಜಾಪ್ರಭುತ್ವ' ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದು ತಿಳಿದಿದ್ದರೂ ಈ...