Homeಮುಖಪುಟಗಡ್ಡ, ಟೋಪಿ ಇರುವವರು ಹಿಂದೂ ಧಾರ್ಮಿಕ ಸ್ಥಳಗಳ ಬಳಿ ಕಂಡುಬಂದರೆ ಥಳಿಸಬೇಕು: ಜಾರ್ಖಂಡ್ ಬಿಜೆಪಿ ಶಾಸಕ

ಗಡ್ಡ, ಟೋಪಿ ಇರುವವರು ಹಿಂದೂ ಧಾರ್ಮಿಕ ಸ್ಥಳಗಳ ಬಳಿ ಕಂಡುಬಂದರೆ ಥಳಿಸಬೇಕು: ಜಾರ್ಖಂಡ್ ಬಿಜೆಪಿ ಶಾಸಕ

- Advertisement -
- Advertisement -

ಗಡ್ಡ ಬಿಟ್ಟವರು, ಟೋಪಿ ಹಾಕುವವರು ಅಥವಾ ಗೋಮಾಂಸ ತಿನ್ನುವವರು ಹಿಂದೂ ಧಾರ್ಮಿಕ ಸ್ಥಳಗಳ ಬಳಿ ಕಂಡುಬಂದರೆ ಥಳಿಸಲಾಗುವುದು ಎಂದು ಜಾರ್ಖಂಡ್‌ನ ಬಿಜೆಪಿ ಶಾಸಕ ಕುಶ್ವಾಹ ಶಶಿ ಭೂಷಣ್ ಮೆಹ್ತಾ ಹೇಳಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಅವರ ಈ ವಿವಾದಾಸ್ಪದ ಹೇಳಿಕೆಯ ಭಾಷಣದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪತ್ರಿಕೆಯ ಪ್ರಕಾರ, ಮಂಗಳವಾರ ವಿಜಯ ದಶಮಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಮೆಹ್ತಾ ಹಿಂದಿಯಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಪಲಮೌ ಜಿಲ್ಲೆಯ ಪಂಕಿಯಿಂದ ಶಾಸಕರಾಗಿದ್ದಾರೆ.

ಅವರು ಮುಸ್ಲಿಮರನ್ನು ಸ್ಪಷ್ಟವಾಗಿ ಹೆಸರಿಸದಿದ್ದರೂ, “ಈ ಜನರು” ಮೊದಲು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಮತ್ತು ನಂತರ ಅವರಿಗೆ ಅಡ್ಡಿಪಡಿಸುತ್ತಾರೆ ಎಂದು ಶಾಸಕರು ಹೇಳಿದರು.

ತಮ್ಮ ಭಾಷಣದಲ್ಲಿ ಅವರು ಮುಸ್ಲಿಮರನ್ನು ನೇರವಾಗಿ ಉಲ್ಲೇಖಿಸಿಲ್ಲದೇ ಇದ್ದರೂ ‘ಈ ಜನರು’ ಮೊದಲು ಹಿಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಅಡ್ಡಿಪಡಿಸುತ್ತಾರೆ ಎಂದು ಆರೋಪಿಸಿದರು.

ಗುರುವಾರ ಸಂಜೆ ತನಕ ಈ ದ್ವೇಷದ ಭಾಷಣ ಕುರಿತಂತೆ ಮೆಹ್ತಾ ವಿರುದ್ಧ ಎಫ್‌ಐಆರ್‌ ದಾಖಲಾಗಿಲ್ಲ. ವೀಡಿಯೋವನ್ನು ಪರಾಮರ್ಶಿಸಲಾಗುತ್ತಿದೆ ಎಂದು ಪಲಮವು ಪೊಲೀಸ್‌ ವರಿಷ್ಠಾಧಿಕಾರಿ ರೀಷ್ಮಾ ರಮೇಶನ್‌ ಹೇಳಿದರು.

ಈ ವಿಚಾರ ಕುರಿತಂತೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಜಾರ್ಖಂಡ್‌ ಮುಕ್ತಿ ಮೋರ್ಚಾ ಮತ್ತು ವಿಪಕ್ಷ ಕಾಂಗ್ರೆಸ್‌ ಟೀಕಿಸಿದರೂ ಎಫ್‌ಐಆರ್‌ ಏಕೆ ದಾಖಲಾಗಿಲ್ಲ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿಲ್ಲ.

”ಮತದಾರರಿಗೆ ತೋರಿಸಲು ಬೇರೇನೂ ಇಲ್ಲದ ಕಾರಣ ಬಿಜೆಪಿ ನಾಯಕರು ದ್ವೇಷದ ಭಾಷಣದ ಹಿಂದೆ ಬಿದ್ದಿದ್ದಾರೆ” ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ: ಮೂರು ದಿನಗಳು ಚಪ್ಪಲಿ ಸವೆಸಿದರೂ ಸದಾನಂದಗೌಡರಿಗೆ ನಡ್ಡಾ ದರ್ಶನವಾಗಲಿಲ್ಲ: ಕಾಂಗ್ರೆಸ್ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...