Homeಚಳವಳಿಭಾರತ ಜೋಡೋದ ಸಿದ್ಧಾಂತ: ಅವರು ಒಡೆಯುವರು, ನಾವು ಜೋಡಿಸುವೆವು

ಭಾರತ ಜೋಡೋದ ಸಿದ್ಧಾಂತ: ಅವರು ಒಡೆಯುವರು, ನಾವು ಜೋಡಿಸುವೆವು

- Advertisement -
- Advertisement -

“ಇದೇನು ಭಾರತ ಜೋಡೋ ಎಂಬುದನ್ನು ಶುರು ಹಚ್ಕೊಂಡಿದೀರಿ, ಆಂದೋಲನಜೀವಿಗಳೆ? ಯಾವ ಭಾರತವನ್ನು ಜೋಡಿಸುವಿರಿ ನೀವು? ನೋಡುತ್ತಿಲ್ಲವೇ, ದೇಶ ತನ್ನಿಂತಾನೇ ಒಂದುಗೂಡುತ್ತಿದೆ. ಈ ದೇಶ ಜೋಡಿಸುವುದು ನಿಮಗ್ಯಾಕೆ ಬೇಕಿದೆ?”

ಯಾವಾಗಿನಿಂದ ನಾನು ‘ಭಾರತ ಜೋಡೊ ಯಾತ್ರಾ’ದೊಂದಿಗೆ ಸೇರಿಕೊಳ್ಳುವುದಾಗಿ ಸಾರ್ವಜನಿಕ ಘೋಷಿಣೆ ಮಾಡಿದೆನೋ, ಆವಾಗಿನಿಂದ ಇಂತಹ ಪ್ರಶ್ನೆಗಳು ಬರುತ್ತಲೇ ಇವೆ. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಈ ಪ್ರಶ್ನೆಗಳು ಬಹುತೇಕವಾಗಿ ತೀಕ್ಷ್ಣವಾಗಿಯೂ ಹಾಗೂ ತಮಾಷೆಯಾಗಿಯೂ ಇರುತ್ತವೆ. ಈ ಯಾತ್ರೆಯ ಘೋಷಣೆಯನ್ನು ಕಾಂಗ್ರೆಸ್ ಪಕ್ಷ ಮಾಡಿದೆಯಾದರೂ, ಈ ದೇಶದ ಜನಾಂದೋಲನಗಳ ದೊಡ್ಡ ಭಾಗ, ಮುಂಚೂಣಿಯಲ್ಲಿರುವ ಚಿಂತಕರು ಹಾಗೂ ಗಣ್ಯ ವ್ಯಕ್ತಿಗಳೂ ಇದನ್ನು ಸ್ವಾಗತಿಸಿದ್ದಾರೆ ಮತ್ತು ಸಮರ್ಥನೆ ಮಾಡಿದ್ದಾರೆ. ಅತ್ತ ಅನೇಕ ಜನಾಂದೋಲನಗಳು ಹಾಗೂ ಜನರ ಸಂಘಟನೆಗಳು ಈ ಯಾತ್ರೆಯ ಸಮರ್ಥನೆ ಮಾಡುತ್ತ ಇದಕ್ಕೆ ಸಮಾನಾಂತರವಾಗಿ “ದ್ವೇಷ ಬಿಡಿ, ಭಾರತ ಜೋಡೊ” ಅಭಿಯಾನ ಘೋಷಣೆ ಮಾಡಿದ್ದಾರೆ. ವೈಚಾರಿಕವಾಗಿ ಬೇರೆಬೇರೆ ದಿಕ್ಕುಗಳಲ್ಲಿ ನಡೆಯುವ ಈ ಧ್ವನಿಗಳಲ್ಲಿ ‘ಭಾರತ ಜೋಡೊ’ದ ಮನವಿ ಕಾಣಿಸಿಕೊಂಡಿರುವುದು ಕೇವಲ ಸಂಯೋಗವಲ್ಲ. ಆದರೆ ಎಲ್ಲರೂ ಇದರ ಬೇರೆಬೇರೆ ಅರ್ಥಗಳನ್ನು ಹುಡುಕುತ್ತಿದ್ದಾರೆ.

“ಹಿಂದೂ ಮುಸ್ಲಿಂ ಏಕತೆಯ ಯಾತ್ರೆ ಮಾಡುತ್ತಿದ್ದೀರಲ್ಲವಾ ನೀವು? ಇದರ ಬಹಳ ಅವಶ್ಯಕತೆ ಇದೆ” ಈ ಸಂದೇಶವನ್ನು ಒಬ್ಬ ಹಿರಿಯ ಗಾಂಧಿವಾದಿ ನೀಡಿದರು. “ಇಲ್ಲ. ಅದು ಇದೆ, ಆದರೆ ಅದು ಮುಖ್ಯ ವಿಷಯವಲ್ಲ” ನಾನು ಅಳಕುತ್ತಲೇ ಉತ್ತರ ನೀಡಿದೆ. ನಿಸ್ಸಂದೇಹವಾಗಿಯೂ ಹಿಂದೂ ಮುಸ್ಲಿಂ ಏಕತೆಯನ್ನು ಗಟ್ಟಿಗೊಳಿಸುವುದು ಭಾರತಮಾತೆಯ ಕರೆಯಾಗಿದೆ. ಭಾರತದ ವಿಭಜನೆಯ ದುರಂತದ ನಂತರ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಇಷ್ಟೊಂದು ಅಸಮಧಾನ ಮತ್ತು ದ್ವೇಷ ಹರಡುತ್ತಿರುವ ಇಷ್ಟು ದೊಡ್ಡ ಮಟ್ಟದ, ಇಷ್ಟು ವ್ಯವಸ್ಥಿತವಾದ, ಇಷ್ಟು ಯೋಜಿತವಾದ ಹಾಗೂ ಸರಕಾರದ ಪೋಷಣೆಯುಳ್ಳ ಪ್ರಯತ್ನ ಮತ್ತೆಂದೂ ಆಗಿದ್ದಿಲ್ಲ. ನಿಸ್ಸಂದೇಹವಾಗಿಯೂ ಸಮುದಾಯಗಳನ್ನು ಪರಸ್ಪರ ಕಿತ್ತಾಡುವಂತೆ ಪ್ರಚೋದನೆ ನೀಡುವುದು ದೇಶದ್ರೋಹವಾಗಿದೆ ಹಾಗೂ ಅವುಗಳನ್ನು ಜೋಡಿಸುವುದು ದೇಶಭಕ್ತಿಯ ಮೊದಲ ಧರ್ಮವಾಗಿದೆ.

ಆದರೆ, ಇಂದು ಮೊದಲ ಸವಾಲು ಹಿಂದೂ ಹಾಗೂ ಮುಸ್ಲಿಂರನ್ನು ಜೋಡಿಸುವುದು ಆಗಿಲ್ಲ. ಎಲ್ಲಕ್ಕಿಂತ ದೊಡ್ಡ ಸವಾಲು, ಹಿಂದೂಗಳನ್ನು ಹಿಂದೂ ಧರ್ಮದ ಆತ್ಮದ ಜೊತೆಗೆ ಹಾಗೂ ಮುಸಲ್ಮಾನರನ್ನು ನಿಜವಾದ ಇಸ್ಲಾಂನೊಂದಿಗೆ ಜೋಡಿಸುವುದಾಗಿದೆ. ಸ್ವಾಮಿ ವಿವೇಕಾನಂದರ ಪ್ರಕಾರ, ಹಿಂದೂ ಧರ್ಮದ ಶ್ರೇಷ್ಠತೆಯು ಇತರ ಧರ್ಮಗಳಗಿಂತ ತನ್ನ ಮತವನ್ನು ಮೇಲೆ ನಿಲ್ಲಿಸುವುದರಲ್ಲಿ ಇಲ್ಲ, ಅದರ ಬದಲಿಗೆ ಹಿಂದೂ ಧರ್ಮದ ಶ್ರೇಷ್ಠತೆಯು ಜಗತ್ತಿನ ಎಲ್ಲಾ ಧರ್ಮಗಳ ಸತ್ಯವನ್ನು ಸ್ವೀಕರಿಸುವುದರಲ್ಲಿ ಅಡಗಿದೆ. ಕುರ್‌ಆನ್ ಶರೀಫ್‌ದ ಸಂದೇಶವು ಕಾಫಿರನ ರುಂಡವನ್ನು ಮುಂಡದೊಂದಿಗೆ ಬೇರ್ಪಡಿಸುವುದು ಆಗಿಲ್ಲದೇ, ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ಜೋಡಿಸುವುದು ಆಗಿದೆ. ಎಲ್ಲಿಯವರೆಗೆ ಪ್ರತಿಯೊಂದು ಧರ್ಮದ ಅನುಯಾಯಿ ತನ್ನತನ್ನ ಧರ್ಮದ ಸಂಕೀರ್ಣವಾದ ವ್ಯಾಖ್ಯಾನವನ್ನು ಅರಿತು, ಧಾರ್ಮಿಕ ಗುತ್ತಿಗೆದಾರರು ಹಾಗೂ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಬಿತ್ತುವ ವ್ಯಾಪಾರಿಗಳಿಂದ ಮುಕ್ತವಾಗುವುದಿಲ್ಲವೋ, ಅಲ್ಲಿಯವರೆಗೆ ದೇಶ ಒಂದಾಗಲು ಸಾಧ್ಯವಿಲ್ಲ. ಹಾಗಾಗಿಯೇ ಭಾರತ ಜೋಡೊದ ಮೊದಲ ಅರ್ಥ, ಧರ್ಮವನ್ನು ಅದರ ಮರ್ಮದೊಂದಿಗೆ ಜೋಡಿಸುವುದಾಗಿದೆ.

ಯಾವ ಮಾತು ಧರ್ಮಕ್ಕೆ ಅನ್ವಯವಾಗುತ್ತೋ, ಅದೇ ಜಾತಿ, ಕ್ಷೇತ್ರ, ಭಾಷೆ ಹಾಗೂ ಭೂಷಣಗಳ ಭೇದಗಳ ಬಗ್ಗೆಯೂ ನಿಜವಾಗಿರುತ್ತದೆ. ಭಾರತ ಜೋಡೊದ ಅರ್ಥವು, ಪ್ರದೇಶ ಮತ್ತು ಭಾಷೆಯ ಕಂದರವನ್ನು ಕಡಿಮೆ ಮಾಡುವುದು. ಆದರೆ ಇದಕ್ಕಾಗಿ ತನ್ನ ಪ್ರಾದೇಶಿಕ ಅಸ್ಮಿತೆಯನ್ನು ಮರೆತುಬಿಡುವ ಹಾಗೂ ಭಾಷಾ ಸಂಸ್ಕೃತಿಯನ್ನು ಬಿಟ್ಟುಬಿಡುವಂತೆ ಮನವಿ ಮಾಡುವುದು ಅಥವಾ ಒತ್ತಾಯ ಮಾಡುವುದು ಮಾರಕವಾಗಲಿದೆ. ಅದರಲ್ಲೂ ವಿಶೇಷವಾಗಿ ಉತ್ತರಭಾರತದ ಹಿಂದಿ ಭಾಷಿಕರು ಇತರ ದೇಶವಾಸಿಗಳಿಗೆ ಕ್ಷೇತ್ರೀಯತೆ (ಪ್ರಾದೇಶಿಕತೆ)ಯನ್ನು ಬಿಡುವ ಹಾಗೂ ಬಾಷೆಯ ಸಂಕೀರ್ಣತೆಯಿಂದ ಹೊರಬರುವ ಉಪದೇಶ ಮಾಡಿದರೆ ಅದು ಸರಿಯಾದ ಮಾರ್ಗವಲ್ಲ. ಭಾರತವನ್ನು ಜೋಡಿಸಲು ಎಲ್ಲಕ್ಕಿಂತ ಮೊದಲು ಹಿಂದಿ ಭಾಷಿಕರು ‘ತಾವು ದೇಶದ ಮಾಲೀಕರು ಹಾಗೂ ಇತರರೆಲ್ಲ ಬಾಡಿಗೆದಾರರು’ ಎಂಬ ಭಾವನೆಯಿಂದ ಹೊರಬರಬೇಕು. ಈ ನಿಟ್ಟಿನಲ್ಲಿ ನೋಡಿದರೆ, ಹಿಂದಿಗಿಂತ ತುಲನಾತ್ಮಕವಾಗಿ ಪ್ರಾಚೀನವಾದ ಮತ್ತು ಸಮೃದ್ಧವಾದ ತಮಿಳ ಭಾಷೆ ಮತ್ತು ಸಂಸ್ಕೃತಿಗೆ ನಮಿಸುತ್ತ ಕನ್ಯಾಕುಮಾರಿಯಿಂದ ಶುರುವಾಗುತ್ತಿರುವುದು ಒಂದು ಸುಂದರ ಸಂಯೋಗವೇ ಆಗಿದೆ.

ಅದೇ ರೀತಿಯಲ್ಲಿ ಜಾತಿ ಭೇದದ ಕಂದರವನ್ನು ಇಲ್ಲವಾಗಿಸುವ ಅರ್ಥ, ನಾವು ಜಾತಿ ಕಡೆಗೆ ಕಣ್ಣು ಮುಚ್ಚುವುದು ಅಥವಾ ನಮ್ಮ ಹೆಸರಿನಿಂದ ಜಾತಿಸೂಚಕ ಪದಗಳನ್ನು ಸೇರಿಸುವುದು ಯಾ ಬಿಡುವುದು ಅಲ್ಲ. ನಮ್ಮ ದೇಶದಲ್ಲಿ ತನ್ನ ಜಾತಿ ಗೊತ್ತಿಲ್ಲದೇ ಇರುವ ವಿಶೇಷಾಧಿಕಾರ ಮೇಲ್ಜಾತಿಯ ನಗರಗಳಲ್ಲಿರುವ ಜನರಿಗೆ ಮಾತ್ರ ಇರುತ್ತದೆ. ಜಾತಿ ಸೂಚಕ ಹೆಸರನ್ನು ಬಿಡುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಜಾತಿಯ ಕಂದರವನ್ನು ಇಲ್ಲವಾಗಿಸುವ ದಾರಿ, ಸಮಾಜದಲ್ಲಿ ಇಂದಿಗೂ ಜಾತಿಯ ಆಧಾರದ ಮೇಲೆ ನಿಷೇಧ, ವಂಚನೆ ಮತ್ತು ವಿಶೇಷಾಧಿಕಾರ ಮುಂತಾದವುಗಳ ಅವಶೇಷಗಳನ್ನು ಕೊನೆಗೊಳಿಸುವುದರಿಂದ ಮಾತ್ರ ಸಾಧ್ಯವಾಗಬಲ್ಲದು. ಅಂದರೆ ಜಾತಿ ವ್ಯವಸ್ಥೆಯ ಮೇಲುಕೀಳುಗಳನ್ನು ನಾಶಗೊಳಿಸಬೇಕು. ಭಾರತ ಜೋಡೊದ ಅರ್ಥ ಜಾತಿ ಒಡೆಯುವುದು ಆಗುವುದು.

ಭಾರತ ಜೋಡೊ ಎಂಬುದು ಕೇವಲ ಸಾಂಸ್ಕೃತಿಕ ಅಸ್ಮಿತೆಯ ಆಂದೋಲನವಾಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ದೇಶದ ಅಂತಿಮ ವ್ಯಕ್ತಿಯ ಜೀವನವನ್ನು ಸುಖಸಂತೋಷದ ಜೊತೆಗೆ ಜೋಡಿಸುವುದಿಲ್ಲವೋ ಅಲ್ಲಿಯವರೆಗೆ ಭಾರತ ಜೋಡೊ ಎಂಬುದು ಕೇವಲ ಘೋಷಣೆಯಾಗಿ ಉಳಿಯಲಿದೆ. ಭಾರತ ಜೋಡೊವನ್ನು ಸಾಕಾರಗೊಳಿಸಲು ನಾವುಗಳು ಒಂದು ಕಹಿ ಸತ್ಯವನ್ನು ಎದುರಿಸುವುದು ಅತ್ಯಗತ್ಯವಾಗಿದೆ. ಕಳೆದ 2 ವರ್ಷಗಳಲ್ಲಿ ದೇಶದ 97% ಜನರ ಆದಾಯ ಕಡಿಮೆಯಾಗಿದೆ, ಆದರೆ ಅದೇ ಸಮಯದಲ್ಲಿ ಮುಕೇಶ್ ಅಂಬಾನಿಯ ಸಂಪತ್ತು ಮೂರು ಪಟ್ಟು ಹೆಚ್ಚಾಗಿದೆ ಹಾಗೂ ಅದಾನಿಯ ಸಾಮ್ರಾಜ್ಯ 14 ಪಟ್ಟು ದೊಡ್ಡದಾಗಿದೆ. ಇತ್ತೀಚಿಗೆ ಬೆಳಕಿಗೆ ಬಂದಿದ್ದೇನೆಂದರೆ, ದೇಶದ ಶ್ರೀಮಂತ ವರ್ಗದಲ್ಲಿ ಭಾರತ ಛೋಡೋ (ಬಿಡುವ) ಆಂದೋಲನ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಭಾರತೀಯರು ದೇಶದ ನಾಗರಿಕತೆಯನ್ನು ಬಿಟ್ಟುಕೊಟ್ಟಿದ್ದಾರೆ. ಭಾರತದ ಎಲ್ಲಾ ಶ್ರೀಮಂತರು ದೇಶದ ಹೊರಗೆ ಹೂಡಿಕೆ ಮಾಡುತ್ತಿದ್ದಾರೆ. ಈ ಸರಕಾರದ ‘ನಾವಿಬ್ಬರು ನಮ್ಮ ಇಬ್ಬರು’ ಆರ್ಥಿಕ ನೀತಿಯಿಂದ ದೇಶವು ಎರಡು ಹೋಳಾಗುತ್ತಿದೆ. ಇದಕ್ಕೆ ಎದರು ನಿಂತು ಸವಾಲು ಒಡ್ಡದೇ ಭಾರತ ಜೋಡೊದ ಕನಸು ಕಾಣುವುದೂ ವ್ಯರ್ಥ. ಅಭೂತಪೂರ್ವ ನಿರುದ್ಯೋಗ, ಹೆಚ್ಚುತ್ತಿರುವ ಬೆಲೆ ಏರಿಕೆ ಹಾಗೂ ಸಾಮಾನ್ಯ ವ್ಯಕ್ತಿಯ ಅಸಾಹಯಕತೆಯ ಈ ಯುಗದಲ್ಲಿ ಭಾರತ ಜೋಡೊದ ಅರ್ಥ ಲೂಟಿಕೋರರ ಸ್ಥಾನದಲ್ಲಿ ಕಾರ್ಮಿಕರನ್ನು ಆರ್ಥಿಕ ನೀತಿಯ ಕೇಂದ್ರದಲ್ಲಿ ಇರಿಸುವುದು ಹಾಗೂ ಕರ್ಮವನ್ನು ಹೆಮ್ಮೆಯೊಂದಿಗೆ ಜೋಡಿಸುವುದೇ ಆಗಬೇಕಿದೆ.

ಭಾರತ ಜೋಡೊ ಸಂಕಲ್ಪವು ದೇಶದ ರಾಜಕೀಯ ವ್ಯವಸ್ಥೆಯನ್ನು ಮುಟ್ಟದೇ ಇರಲು ಸಾಧ್ಯವಿಲ್ಲ. ಈ ಯಾತ್ರೆಯ ಸಫಲತೆ ರಾಜಕೀಯ ಪಕ್ಷಗಳು ಹಾಗೂ ಜನಾಂದೋಲನಗಳನ್ನು ಜೋಡಿಸುವುದರ ಮೇಲೆ ಅವಲಂಬಿತವಾಗಿದೆ. ಆದರೆ, ಇದಕ್ಕೆ ನಮ್ಮ ಗಣರಾಜ್ಯದಲ್ಲಿ ಕೆಲವು ಮೂಲಭೂತವಾದ ಜೋಡಣೆಯನ್ನೂ ಮಾಡಬೇಕಾಗುತ್ತದೆ. ಭಾರತದ ಸ್ವಾತಂತ್ರದ ನಂತರದಿಂದ ನಮ್ಮ ಲೋಕತಂತ್ರ (ಪ್ರಜಾಪ್ರಭುತ್ವ) ಯಾವಾಗಲೂ ಬಗ್ಗಿ ನಿಂತಿದೆ, ಲೋಕದ (ಪ್ರಜೆಗಳ) ಮೇಲೆ ತಂತ್ರ (ಪ್ರಭುತ್ವ) ಯಾವಾಗಲೂ ಮೇಲುಗೈ ಸಾಧಿಸಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಲೋಕ (ಪ್ರಜೆ) ಎಂಬುದೇ ಕಣ್ಮರೆಯಾಗುತ್ತಿದೆ, ಅಥವಾ ಅದು ಒಂದು ಗುಂಪಾಗಿ ಬದಲಾಗುತ್ತಿದೆ ಎನ್ನಬಹುದು. ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಕೇವಲ ಹಾಳೆಯ ತುಂಡಗಳಾಗಿ ಬದಲಾಗುತ್ತಿವೆ. ಸರಕಾರದ ವಿರುದ್ಧ ಧ್ವನಿ ಎತ್ತುವವರ ಸ್ಥಳ ಜೈಲು ಎಂದಾಗಿದೆ. ರಾಜಕೀಯ ವಿರೋಧಿಗಳನ್ನು ಬೆಂಬತ್ತಿ ಪೊಲೀಸ್ ವ್ಯವಸ್ಥೆಯ ಜೊತೆಗೆ ಈಗ ಸಿಬಿಐ, ಇಡಿ ಹಾಗೂ ಇನ್‌ಕಂ ಟ್ಯಾಕ್ಸ್ ಇಲಾಖೆ ಕೂಡ ಕೈಜೋಡಿಸಿವೆ. ಸಾಮಾನ್ಯ ವ್ಯಕ್ತಿಗಳನ್ನು ಬಿಟ್ಟುಬಿಡಿ, ಈಗ ಮುಖ್ಯಮಂತ್ರಿಗಳದ್ದೂ ಯಾವುದೇ ಸ್ಥಾನಮಾನ ಉಳಿದಿಲ್ಲ. ಯಾವ ರಾಜ್ಯದಲ್ಲಿ ಯಾರ ಸರಕಾರ ರಚಿಸಲಾಗುವುದು, ಯಾವುದು ಉಳಿಯುವುದು, ಯಾವುದು ಇಲ್ಲವಾಗುವುದು ಎಂಬುದರ ನಿರ್ಣಯ ದೆಹಲಿಯ ದರ್ಬಾರಿನಲ್ಲಿ ಆಗುತ್ತಿದೆ. ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಈಗ ನ್ಯಾಯಾಲಯದ ಬಾಗಿಲುಗಳೂ ಬಹುತೇಕ ಮುಚ್ಚಿವೆ. ಇಂತಹ ಪರಿಸ್ಥಿತಿಗಳಲ್ಲಿ ಭಾರತ ಜೋಡೊದ ಅರ್ಥ, ಲೋಕವನ್ನು ತಂತ್ರದೊಂದಿಗೆ ಜೋಡಿಸುವುದು ಹಾಗೂ ಗಣವನ್ನು ರಾಜ್ಯದೊಂದಿಗೆ ಜೋಡಿಸುವುದು ಆಗಲಿದೆ.

ಇಂದು ಭಾರತ ಜೋಡೊ ಯಾತ್ರೆಯ ಸಂಕಲ್ಪ ಒಂದೇ ಒಂದು ಆಗಲು ಸಾಧ್ಯ: ಅವರು ತುಂಡು ತುಂಡಾಗಿ ವಿಭಜಿಸುವರು, ನಾವು ಕಾಮನಬಿಲ್ಲು ಕಟ್ಟುವೆವು. ಈ ಆಂದೋಲನದ ಘೋಷಣೆ ಒಂದೇ ಒಂದು ಆಗಲು ಸಾಧ್ಯ: ಅವರು ಒಡೆಯುವರು, ನಾವು ಜೋಡಿಸುವೆವು. ಭಾರತದೊಂದಿಗೆ ಸುಂದರ ಭವಿಷ್ಯವನ್ನು ಜೋಡಿಸುವುದೇ ಭಾರತ ಜೋಡೊದ ಸಾರ್ಥಕ ಪರಿಣಾಮ ಆಗಬಹುದಾಗಿದೆ.

– ಯೋಗೇಂದ್ರ ಯಾದವ್

ಕನ್ನಡಕ್ಕೆ: ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...