Homeಚಳವಳಿರೈತರ 'ಬಾಯ್ಕಾಟ್ ರಿಲೆಯನ್ಸ್' ಅಭಿಯಾನಕ್ಕೆ ಭಾರಿ ಬೆಂಬಲ: #BoycottAdaniAmbani, #BoycottJio ಟ್ರೆಂಡಿಂಗ್

ರೈತರ ‘ಬಾಯ್ಕಾಟ್ ರಿಲೆಯನ್ಸ್’ ಅಭಿಯಾನಕ್ಕೆ ಭಾರಿ ಬೆಂಬಲ: #BoycottAdaniAmbani, #BoycottJio ಟ್ರೆಂಡಿಂಗ್

ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ, ಅಂಬಾನಿ ಮತ್ತು ಅದಾನಿಗಾಗಿ ಕೆಲಸ ಮಾಡುವ ಬದಲು ಕೇವಲ 50% ಸಮಯವನ್ನು ದೇಶಕ್ಕಾಗಿ ಕೆಲಸ ಮಾಡಲು ವ್ಯಯಿಸಿದ್ದರೆ, ಭಾರತವು ಈಗ ಸೂಪರ್ ಪವರ್ ಆಗಬಹುದಿತ್ತು

- Advertisement -
- Advertisement -

ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಕಳೆದ 15 ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ನರೇಂದ್ರ ಮೋದಿ ಸರ್ಕಾರ ಉತ್ತೇಜನ ನೀಡುತ್ತಿರುವ ಅಂಬಾನಿಯ ರಿಲೆಯನ್ಸ್ ಉತ್ಪನ್ನಗಳ ವಿರುದ್ಧ ಕರೆ ನೀಡಿದ್ದ ಬಾಯ್ಕಾಟ್ ಅಭಿಯಾನಕ್ಕೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ #BoycottAdaniAmbani, #DafaKaroJioNu, #BoycottJio, #BoycottJioMart ಫುಲ್ ಟ್ರೆಂಡ್ ಆಗಿವೆ. “ಜಿಯೋ ಆರಂಭವಾದಾಗ ದೇಶದ ಪ್ರಧಾನಿ ನರೇಂದ್ರ ಮೋದಿ ದೇಶದ 130 ಕೋಟಿ ಜನರಿಗೆ ಅರ್ಪಣೆ ಎಂದು ನಾಚಿಕೆ ಇಲ್ಲದೆ ಮುಖಪುಟ ಜಾಹೀರಾತು ನೀಡಿದರು. ಇದನ್ನು ವಿರೋಧಿಸಿ ಸಾಮೂಹಿಕವಾಗಿ ಬೇರೆ ಕಂಪನಿಗೆ ಪೋರ್ಟ್ ಆಗೋಣ” ಎಂದು ಪ್ರತಿಭಟನಾ ನಿರತ ರೈತರು ಕರೆ ನೀಡಿದ್ದರು.

ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ನಿಷ್ಠುರ ಮತ್ತು ಸೊಕ್ಕಿನ ಪ್ರಸ್ತಾಪ ಎಂದಿದ್ದ ರೈತ ಸಂಘಟನೆಗಳು, ದೇಶಾದ್ಯಂತ ಮೋದಿ ಸರ್ಕಾರದ ನಿಜವಾದ ಮುಖವನ್ನು ಬಹಿರಂಗ ಪಡಿಸುತ್ತೇವೆ ಎಂದಿದ್ದರು. ಇದಕ್ಕಾಗಿ “ಸರ್ಕಾರ್ ಕಿ ಅಸ್ಲಿ ಮಜ್ಬೂರಿ – ಅದಾನಿ, ಅಂಬಾನಿ, ಜಮಾಖೋರಿ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದವು.

ದೇಶದ ಹಲವೆಡೆ ರೈತರ ಈ ಅಭಿಯಾನಕ್ಕೆ ಸ್ಪಂದನೆ ಸಿಕ್ಕಿದ್ದು, ಜನ ರಿಲಯನ್ಸ್ ಉತ್ಪನ್ನಗಳ ವಿರುದ್ಧ ಬಾಯ್ಕಾಟ್ ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹಲವು ಪೋಸ್ಟರ್‌ಗಳು ಶೇರ್ ಆಗುತ್ತಿವೆ.

ಇದನ್ನೂ ಓದಿ: ಕೇಂದ್ರದ ಪ್ರಸ್ತಾಪ ತಿರಸ್ಕರಿಸಿದ ರೈತರು, ಪ್ರತಿಭಟನೆ ಮುಂದುವರೆಸಲು ನಿರ್ಧಾರ

ಟ್ವಿಟರ್‌ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಮುಖೇಶ್ ಅಂಬಾನಿಯ ಸಂಪತ್ತಿನ ಬಗೆಗಿನ ಸುದ್ದಿಯನ್ನು ಹಂಚಿಕೊಂಡು ಅದಕ್ಕೆ, “ಸರ್, ನಾವು ದೇಶದ ಆರ್ಥಿಕತೆಯ ಬಗ್ಗೆ ಮಾತನಾಡುತ್ತಿದ್ದೇವೆ.
ನಿಮ್ಮ ವೈಯಕ್ತಿಕ ಸಂಪತ್ತಿನ ಬಗ್ಗೆ ಅಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಜೊತೆಗೆ, ಬಿಜೆಪಿ ಸರ್ಕಾರ ನಿಮ್ಮ ಪರವಾಗಿ ರಚಿಸಿರುವ, ರಚಿಸುತ್ತಿರುವ ಬಿಲ್‌ಗಳು, ನಿಮ್ಮನ್ನು 2023ಕ್ಕೆ 5 ಟ್ರಿಲಿಯನ್ ಡಾಲರ್‌ಗಳನ್ನು ವ್ಯಕ್ತಿಯಾಗಿ ಮಾಡಬಹುದು’ ಎಂದು ಬಿಜೆಪಿ ಸರ್ಕಾರ ಮತ್ತು ಅಂಬಾನಿ ಬಗ್ಗೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅಂಬಾನಿಯ ಜಿಯೋ ಸಿಮ್ ಬಳಸುವುದಿಲ್ಲ, ರಿಲೆಯನ್ಸ್ ಪೆಟ್ರೋಲ್ ಹಾಕಿಸುವುದಿಲ್ಲ, ಮಾಲ್‌ಗೆ ಹೋಗುವುದಿಲ್ಲ: ರೈತರ ಪ್ರತಿಜ್ಞೆ

ಮತ್ತೊಬ್ಬರು, ರೈತರು ತಮ್ಮ ಜಿಯೋ ಸಿಮ್ ಸುಡುತ್ತಿರುವ ಫೋಟೋ ಜೊತೆಗೆ, ರೈತರು ಮಾಡುತ್ತಿರುವಾಗ ನಮಗೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

“ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ, ಅಂಬಾನಿ ಮತ್ತು ಅದಾನಿಗಾಗಿ ಕೆಲಸ ಮಾಡುವ ಬದಲು ಕೇವಲ 50% ಸಮಯವನ್ನು ದೇಶಕ್ಕಾಗಿ ಕೆಲಸ ಮಾಡಲು ವ್ಯಯಿಸಿದ್ದರೆ, ಭಾರತವು ಈಗ ಸೂಪರ್ ಪವರ್ ಆಗಬಹುದಿತ್ತು” ಎಂದು ಮಧು ಎಂಬ ಟ್ವಿಟರ್‌ ಬಳಕೆದಾರರು ವ್ಯಂಗ್ಯವಾಡಿದ್ದಾರೆ.

ಧವಿಂದರ್‌ ಮಾವಿ ಎಂಬುವರು, ನಮ್ಮ ಮತ್ತು ಅಂಬಾನಿ ನಡುವಿನ ಮಧ್ಯವರ್ತಿಗಳನ್ನು ಹೊರಗಿಡಬಹುದು ಎಂದಿರುವ ಇವರು ಸ್ಟ್ಯಾಂಡ್ ಆಪ್ ಕಾಮಿಡಿಯನ್ ಕುನಾಲ್ ಕರ್ಮಾ ಅವರನ್ನು ಟ್ಯಾಗ್‌ ಮಾಡಿ ಅವರ ಜನಪ್ರಿಯ ಹೇಳಿಕೆಯಾಗಿರುವ ನಾವು ನೇರವಾಗಿ ಅಂಬಾನಿಗೆ ಏಕೆ ಮತ ಹಾಕಬಾರದು ಎಂಬ ವಾಕ್ಯವನ್ನು ಹೇಳಿದ್ದಾರೆ.

ಇದನ್ನೂ ಓದಿ: ಮದುವೆಯಲ್ಲಿ ಗಿಫ್ಟ್ ಬದಲು ಹೋರಾಟ ನಿರತ ರೈತರಿಗಾಗಿ ದೇಣಿಗೆ ಸಂಗ್ರಹಿಸಿದ ಕುಟುಂಬ!

2014 ರ ಮುಂಚೆ ಅದಾನಿ ಅಂಬಾನಿಯವರ ಸಂಪತ್ತು ಮತ್ತು 2014ರ ನಂತರ ಅದಾನಿ ಅಂಬಾನಿಯವರ ಸಂಪತ್ತು ಹೆಚ್ಚಾದ ಬಗ್ಗೆ ಪೋಟೊ ಶೇರ್‌ ಮಾಡಿರುವ ಹರ್ಜಬ್‌ಸಿಂಗ್ ಎನ್ನುವವರು ’ಇದು ಲೂಟಿಕೋರರಿಗೆ ಪಾಠ ಕಲಿಸುವ ಸಮಯ’ ಎಂದಿದ್ದಾರೆ.

ಇದರ ಜೊತೆ ಜೊತೆಗೆ Airtel Vodafone ಎಂಬುದು ಟ್ರೆಂಡ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳನ್ನು ಹರಿಯಬಿಡಲಾಗುತ್ತಿದೆ.

ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿರುವ ರೈತರು ಅವರ ಎಲ್ಲಾ ರಿಲೆಯನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.

ಇಂದು ಬೆಂಗಳೂರಿನ ರೈಲು ನಿಲ್ದಾಣದ ಬಳಿ ಯುವ ರೈತರು ಜಿಯೋ ಸಿಮ್ ಅನ್ನು ಬೇರೆ ಕಂಪನಿಗೆ ಪೋರ್ಟ್ ಮಾಡುವ ಮೂಲಕ, ರಿಲೆಯನ್ಸ್ ಉತ್ಪನ್ನಗಳನ್ನು ಬಳಸದಿರುವುದಾಗಿ ಪ್ರತಿಜ್ಞೆ ಮಾಡಿದರು.

ಯುವ ಮುಖಂಡ ಸರೋವರ್ ಬೆಂಕೀಕರೆ ಮಾತನಾಡಿ “ಅಂಬಾನಿ ಅದಾನಿ ತರದ ಕಾರ್ಪೊರೇಟ್ ಖದೀಮರು ನಮ್ಮ ಕೃಷಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಅವರಿಗಾಗಿಯೇ ಈ ರೈತ ವಿರೋಧಿ ಕಾನೂನುಗಳು ಜಾರಿಯಾಗಿವೆ. ಹಾಗಾಗಿ ಸಾಮೂಹಿಕವಾಗಿ ತಮ್ಮ ಜಿಯೋ ಸಿಮ್‌ ನಂಬರ್‌ಗಳನ್ನು ಬೇರೆ ಕಂಪನಿಗೆ ಪೋರ್ಟ್ ಆಗಬೇಕೆಂದು ದೆಹಲಿ ರೈತರ ಕರೆ ನೀಡಿದ್ದಾರೆ. ನಾವು ಈಗ ಪೋರ್ಟ್ ಆಗಿದ್ದೇವೆ. ಹಾಗಾಗಿ ಜಿಯೋ ಕಂಪನಿಯ ಕಡೆಯಿಂದ ಯಾಕೆ ಪೋರ್ಟ್ ಆದಿರಿ ಎಂದು ಫೋನ್ ಮಾಡುತ್ತಾರೆ. ಆಗ ನಿಮ್ಮ ಅಂಬಾನಿ ದೇಶಕ್ಕೆ ಅನ್ನ ನೀಡುವ ರೈತರನ್ನು ಮುಳುಗಿಸುತ್ತಿದ್ದಾರೆ. ಹಾಗಾಗಿ ನಾವು ನಿಮ್ಮನ್ನು ಮುಳುಗಿಸಲು ಹೊರಟಿದ್ದೇವೆ ಎಂದು ಹೇಳಿ ಎಂದಿದ್ದಾರೆ.


ಇದನ್ನೂ ಓದಿ: ಯಾವುದೇ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಕೇಂದ್ರ ಘೋಷಿಸಬಹುದು: ಸುಪ್ರೀಂ‌ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಚಲೋ’ ಪ್ರತಿಭಟನೆ: ಮತ್ತೊಬ್ಬ ರೈತ ಮೃತ್ಯು; 15 ದಿನಗಳಲ್ಲಿ ಆರನೇ ಸಾವು

0
ಪಂಜಾಬ್-ಹರಿಯಾಣದ ಖನೌರಿ ಗಡಿಯಲ್ಲಿ ಮತ್ತೋರ್ವ ರೈತ ಸಾವನ್ನಪ್ಪಿದ್ದು, ಈ ಮೂಲಕ ಕಳೆದ 15 ದಿನಗಳಲ್ಲಿ 'ದೆಹಲಿ ಚಲೋ' ಮೆರವಣಿಗೆಯಲ್ಲಿ ಭಾಗವಹಿಸಿದ್ದ ಒಟ್ಟು ಆರು ಮಂದಿ ರೈತರು ಮೃತಪಟ್ಟಂತಾಗಿದೆ. ಮೃತ ರೈತನನ್ನು ಕರ್ನೈಲ್ ಸಿಂಗ್ (62)...