Homeಮುಖಪುಟಹಳೆಯ ಸಂಸತ್‌ ಕಟ್ಟಡಕ್ಕೆ 'ಸಂವಿಧಾನ ಸದನ' ಎಂದು ಹೆಸರು ಘೋಷಣೆ

ಹಳೆಯ ಸಂಸತ್‌ ಕಟ್ಟಡಕ್ಕೆ ‘ಸಂವಿಧಾನ ಸದನ’ ಎಂದು ಹೆಸರು ಘೋಷಣೆ

- Advertisement -
- Advertisement -

ಹಳೆಯ ಸಂಸತ್ ಕಟ್ಟಡಕ್ಕೆ ಪ್ರಧಾನಿ ಮೋದಿ ಹೊಸ ಹೆಸರನ್ನು ಘೋಷಿಸಿದ್ದು, ಅದನ್ನು ‘ಸಂವಿಧಾನ ಸದನ’ ಎಂದು ನಾಮಕರಣ ಮಾಡಿದ್ದಾರೆ.

ಪ್ರಧಾನಿ ಮೋದಿ ಹಳೆಯ ಸಂಸತ್ತಿನಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ ಹಳೆಯ ಸಂಸತ್ತಿನ ಕಟ್ಟಡಕ್ಕೆ ಈ ಹೆಸರನ್ನು ಘೊಷಿಸಿದ್ದಾರೆ. ಬಳಿಕ ಸಂಸದರ ಜೊತೆ ಕಾಲ್ನಡಿಗೆಯಲ್ಲೇ ಹೊಸ ಸಂಸತ್ತಿನ ಕಟ್ಟಡಕ್ಕೆ ತೆರಳಿದ್ದಾರೆ. ಈ ಹೊಸ ಕಟ್ಟಡ ಇಂದಿನಿಂದಲೇ ಭಾರತದ ಅಧೀಕೃತ ಸಂಸತ್ತು ಆಗಿರಲಿದೆ.

ಪ್ರಧಾನಿ ಮೋದಿ ಸಂಸತ್ತಿನ ಭಾಷಣದಲ್ಲಿ, ಇಂದು ನಾವು ಇಲ್ಲಿಂದ ಹೊಸ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ. ಇಂದು ಗಣೇಶ ಚತುರ್ಥಿಯಾಗಿರುವುದರಿಂದ ಒಳ್ಳೆಯ ದಿನವಾಗಿದೆ. ನಾನು ನಿಮಗೆ ಮನವಿ ಮಾಡುತ್ತೇನೆ ಮತ್ತು ನೀವು ಈ ಮನವಿಯನ್ನು ಪರಿಗಣಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಈಗ ನಾವು ಸಂಸತ್ತಿನ ಹೊಸ ಕಟ್ಟಡಕ್ಕೆ ಹೋಗುತ್ತಿದ್ದೇವೆ. ಈ ಹಳೆಯ ಸದನದ ವೈಭವವು ಎಂದಿಗೂ ಕುಸಿಯಬಾರದು. ನಾವು ಇದನ್ನು ‘ಹಳೆಯ ಸಂಸತ್ತು’ ಎಂದು ಕರೆಯಬಾರದು. ನೀವೆಲ್ಲರೂ ಅನುಮತಿ ನೀಡಿದರೆ, ಈ ಕಟ್ಟಡವನ್ನು ‘ಸಂವಿಧಾನ ಸದನ’ ಎಂದು ಕರೆಯಬೇಕೆಂದು ನಾನು ವಿನಂತಿಸುತ್ತೇನೆ. ಅದು ನಮಗೆ ಯಾವಾಗಲೂ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ನಾವು ಇದನ್ನು ‘ಸಂವಿಧಾನ ಸದನ’ ಎಂದು ಕರೆಯುವಾಗ, ಇಲ್ಲಿ ಕುಳಿತ ಆ ಮಹಾನ್ ವ್ಯಕ್ತಿಗಳ ನೆನಪುಗಳು ಆಗುತ್ತದೆ ಎಂದು ಹೇಳಿದ್ದಾರೆ.

ಇಂದು ಮಹಿಳಾ ಮೀಸಲಾತಿ ಬಿಲ್‌ನ್ನು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಮಂಡನೆಯನ್ನು ಮಾಡಿದ್ದಾರೆ. ಸಂಸತ್ತಿನ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಮೊದಲ ದಿನದ  ವಿಶೇಷ ಅಧಿವೇಶನದಲ್ಲಿ ಬಿಲ್‌ ಮಂಡನೆ ನಡೆದಿದೆ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಮಂಡನೆ ಮಾಡಲಾಗಿದೆ. ಮಸೂದೆಗೆ ಪ್ರತಿಪಕ್ಷ ಕಾಂಗ್ರೆಸ್ ಸಂಪೂರ್ಣವಾದ ಬೆಂಬಲವನ್ನು ನೀಡಿದೆ.

ಈ ಕುರಿತು ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ನಾರಿ ಶಕ್ತಿ ವಂದನ ಅಧಿನಿಯಮ’ ಮಸೂದೆಯು ಹೆಚ್ಚಿನ ಮಹಿಳೆಯರು ಸಂಸತ್ತು ಮತ್ತು ವಿಧಾನಸಭೆಗಳ ಸದಸ್ಯರಾಗುವುದಕ್ಕೆ ಹೆಚ್ಚಿನ ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಮಸೂದೆಯು ಲೋಕಸಭೆ ಮತ್ತು ಅಸೆಂಬ್ಲಿಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ನೀಡುತ್ತದೆ, ಆದರೆ ರಾಜ್ಯಸಭೆ ಅಥವಾ ವಿಧಾನ ಪರಿಷತ್ತುಗಳಲ್ಲಿ ಈ ಮೀಸಲಾತಿ ಇರುವುದಿಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯದಲ್ಲಿ ಮಹಿಳೆಯರು ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ಸರ್ಕಾರ ಹೇಳಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...