Homeಮುಖಪುಟಜಿ20 ಶೃಂಗ ಸಭೆ: ಮೋದಿ ಆಸನದ ಮುಂದೆ ‘ಭಾರತ್’ ಫಲಕ ಅಳವಡಿಕೆ

ಜಿ20 ಶೃಂಗ ಸಭೆ: ಮೋದಿ ಆಸನದ ಮುಂದೆ ‘ಭಾರತ್’ ಫಲಕ ಅಳವಡಿಕೆ

- Advertisement -
- Advertisement -

ಜಿ20 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಕುಳಿತ ಆಸನದ ಮುಂಭಾಗದ ಮೇಜಿನ ಮೇಲೆ ಅವರು ಪ್ರತಿನಿಧಿಸುವ ದೇಶದ ಹೆಸರಿನ ಜಾಗದಲ್ಲಿ ‘ಭಾರತ್‌’ ಎಂದು ನಮೂದಿಸಿರುವುದು ಕಂಡು ಬಂದಿದೆ.

ಸರ್ಕಾರವು ಹಲವಾರು ಅಧಿಕೃತ G20 ದಾಖಲೆಗಳಲ್ಲಿ ದೇಶದ ಸಂವಿಧಾನದಲ್ಲಿ ಬಳಸಲಾದ ಇಂಡಿಯಾ ಎಂಬ ಹೆಸರಿನ ಬದಲಿಗೆ ‘ಭಾರತ್’ ಎಂಬ ಹೆಸರನ್ನು ಬಳಸಿದೆ. ಇದು ಪ್ರಜ್ಞಾಪೂರ್ವಕ ನಿರ್ಧಾರ ಎಂದು ಹೇಳಿಕೊಂಡಿದೆ.

ಶೃಂಗಸಭೆ ನಡೆಯುತ್ತಿರುವ ಭಾರತ್ ಮಂಟಪದಲ್ಲಿ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡುವಾಗ ಅವರ ಮುಂದೆ ‘ಭಾರತ್’ ಫಲಕ ಹಾಕಲಾಗಿದೆ.

ಜಿ20 ಕುರಿತ ಕೈಪಿಡಿಯಲ್ಲಿ ‘ಭಾರತ್‌–ಪ್ರಜಾಪ್ರಭುತ್ವದ ತಾಯಿ’ ಎಂದು ಮುದ್ರಿಸಲಾಗಿದೆ. ಜೊತೆಗೆ ಭಾರತ್‌ ಎಂಬುದು ದೇಶದ ಅಧಿಕೃತ ಹೆಸರು. ಸಂವಿಧಾನದಲ್ಲಿ ಇದು ಉಲ್ಲೇಖಗೊಂಡಿದೆ. ಜೊತೆಗೆ 1946–48ರಲ್ಲಿ ಸಂಸತ್ ಕಲಾಪದಲ್ಲೂ ಇದು ಚರ್ಚೆಗೊಂಡಿದೆ ಎಂದು ಈ ಕೈಪಿಡಿಯಲ್ಲಿ ಬರೆಯಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿ ಪಕ್ಷಗಳು ನರೇಂದ್ರ ಮೋದಿ ಸರಕಾರ ದೇಶದ ಇತಿಹಾಸವನ್ನು ತಿರುಚುತ್ತಿದೆ ಮತ್ತು ಭಾರತವನ್ನು ವಿಭಜಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತದ ರಾಷ್ಟ್ರಪತಿಗಳ G20 ಶೃಂಗಸಭೆಯ ಔತಣಕೂಟದ ಆಮಂತ್ರಣ ಪತ್ರದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಟ್‌ ಆಫ್‌ ಭಾರತ್ ಎಂದು ಬರೆಯಲಾಗಿತ್ತು. ಇದು ಮೋದಿ ಸರಕಾರ ದೇಶದ ಹೆಸರನ್ನೇ ಬದಲಿಸುತ್ತಿದೆ ಎಂಬ ವಿವಾದಕ್ಕೆ ಕಾರಣವಾಗಿತ್ತು.

ಆ ಬಳಿಕ ಸೆ. 18ರಿಂದ ನಡೆಯಲಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ ಈ ಕುರಿತು ನಿರ್ಣಯವನ್ನು ತೆಗೆದುಕೊಳ್ಳುವ ಸಾಧ್ಯತೆ ಬಗ್ಗೆ ಕೂಡ ಚರ್ಚೆ ನಡೆದಿತ್ತು.

ಇದನ್ನು ಓದಿ: ಜಿ20 ಶೃಂಗಸಭೆಯ ಔತಣ ಕೂಟಕ್ಕೆ ಖರ್ಗೆಗಿಲ್ಲ ಆಹ್ವಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...