Homeಮುಖಪುಟರಾಜಕೀಯವಾಗಿ ತಟಸ್ಥರಾಗಿದ್ದರೆ ರಷ್ಯಾ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಹುದು: ಐಒಸಿ

ರಾಜಕೀಯವಾಗಿ ತಟಸ್ಥರಾಗಿದ್ದರೆ ರಷ್ಯಾ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಹುದು: ಐಒಸಿ

- Advertisement -
- Advertisement -

ರಷ್ಯಾ ಮತ್ತು ಬೆಲರೂಸಿಯನ್ ಅಥ್ಲೀಟ್‌ಗಳು ರಾಜಕೀಯವಾಗಿ ತಟಸ್ಥರಾಗಿದ್ದರೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬಹುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹೇಳಿದೆ. ಈ ಹಿಂದಿನ ನಿಷೇಧ ಆದೇಶವನ್ನು ಹಿಂಪಡೆದಿದೆ.

ರಷ್ಯಾದ ಅಥ್ಲೀಟ್‌ಗಳಿಗೆ ಭಾಗವಹಿಸಲು ಅವಕಾಶ ನೀಡಿದರೂ, ಅಲ್ಲಿನ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಮಾನತು ಮುಂದುವರಿಯಲಿದೆ ಎಂದು ಐಒಸಿ ಹೇಳಿದೆ. ಉಕ್ರೇನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರಾದೇಶಿಕ ಸಮಗ್ರತೆ ಉಲ್ಲಂಘನೆಗಾಗಿ ರಷ್ಯಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಒಲಿಂಪಿಕ್‌ನಿಂದ ಹೊರಗಿಡಲಾಗಿದೆ.

ರಷ್ಯಾ ಅಥ್ಲೀಟ್‌ಗಳಿಗೆ ಅವಕಾಶ ನೀಡುವುವ ಐಒಸಿಯ ನಿರ್ಧಾರವನ್ನು ಪಾಶ್ಚಿಮಾತ್ಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಐಒಸಿ ಒಲಿಂಪಿಕ್‌ನ್ನು ಶಸ್ತ್ರಾಸ್ತ್ರಗೊಳಿಸಲು ರಷ್ಯಾಗೆ ಹಸಿರು ನಿಶಾನೆ ತೋರಿಸುತ್ತಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಕಿಡಿಕಾರಿದ್ದಾರೆ.

ಸರ್ಕಾರದ ನಿರ್ಧಾರಗಳಿಗೆ ವೈಯಕ್ತಿಕವಾಗಿ ಕ್ರೀಡಾಪಟುಗಳನ್ನು ಹೊಣೆಗಾರರನ್ನಾಗಿ ಮಾಡದಿರುವುದು ಒಳ್ಳೆಯದು ಎಂದು ಐಒಸಿ ಹೇಳಿದೆ. ಸರ್ಕಾರದ ನಿರ್ಧಾರಕ್ಕೆ ಕ್ರೀಡಾಪಟುಗಳಿಗೆ ಶಿಕ್ಷೆ ವಿಧಿಸುವುದು ಸರಿಯಲ್ಲ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಸೇರಿದಂತೆ 30ಕ್ಕೂ ಹೆಚ್ಚು ಪಾಶ್ಚಿಮಾತ್ಯ ರಾಷ್ಟ್ರಗಳು ಕ್ರೀಡಾಕೂಟದಲ್ಲಿ ರಷ್ಯಾದ ಭಾಗವಹಿಸುವಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಈ ಹಿಂದೆ ಕರೆ ನೀಡಿದ್ದವು.

ರಷ್ಯಾ ಕ್ರೀಡಾಪಟುಗಳು ಒಲಿಂಪಿಕ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿದರೂ, ಅವರಿಗೆ ಕೆಲವೊಂದು ಕಠಿಣ ನಿಯಮಗಳನ್ನು ವಿಧಿಸಲಾಗಿದೆ.

“ಕ್ರೀಡಾಪಟುಗಳು ರಷ್ಯಾದ ಆಕ್ರಮಣದ ಮುಕ್ತ ಬೆಂಬಲಿಗರಾಗಿರಬಾರದು. ರಷ್ಯಾ ಅಥವಾ ಬೆಲರೂಸಿಯನ್ ಮಿಲಿಟರಿ ಅಥವಾ ಭದ್ರತಾ ಸೇವೆಗಳೊಂದಿಗೆ ಸಂಯೋಜಿತವಾಗಿರಬಾರದು. ಅವರು ತಮ್ಮ ತಾಯ್ನಾಡಿನ ಧ್ವಜದ ಅಡಿಯಲ್ಲಿ ಅಥವಾ ರಾಷ್ಟ್ರೀಯ ಲಾಂಛನಗಳು ಅಥವಾ ಗೀತೆಗಳೊಂದಿಗೆ ಸ್ಪರ್ಧಿಸುವಂತಿಲ್ಲ. ಎಂದು ಸೂಚಿಲಾಗಿದೆ.

ಈ ನಿಯಮಗಳ ಅಡಿಯಲ್ಲಿ ಕೇವಲ 11 ಕ್ರೀಡಾಪಟುಗಳು, ಆರು ರಷ್ಯನ್ನರು ಮತ್ತು ಐದು ಬೆಲರೂಸಿಯನ್ನರು ಅರ್ಹತೆ ಪಡೆಯಲಿದ್ದಾರೆ ಎಂದು ಸಮಿತಿಯು ಅಂದಾಜಿಸಿದೆ.

ಐಒಸಿಯ ನಿರ್ಧಾರದ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿಡಿ ಕಾರಿದ್ದಾರೆ, ಐಒಸಿ ಹೀಗೆಯೇ ವರ್ತಿಸಿದರೆ ಒಲಿಂಪಿಕ್ ನಾಶವಾಗಲಿದೆ. ಐಒಸಿ ರಾಜಕೀಯ ಪ್ರೇರಿತ ನಿರ್ಧಾರಗಳ ಮೂಲಕ ನಮ್ಮ ತಂಡವನ್ನು ದುರ್ಬಲಗೊಳಿಸು ನೋಡುತ್ತಿದೆ. ನಮ್ಮ ಕ್ರೀಡಾಪಟುಗಳನ್ನು ಪ್ಯಾರಿಸ್‌ಗೆ ಕಳುಹಿಸುವ ಬಗ್ಗೆ ಸೂಕ್ಷವಾಗಿ ಗಮನಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಧ್ಯಕ್ಷೀಯ ಚುನಾವಣೆಯಿಂದ ಟ್ರಂಪ್ ಅನರ್ಹ: ಕೊಲೊರಡೊ ಕೋರ್ಟ್‌ ತೀರ್ಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...