Homeಮುಖಪುಟನಿತೀಶ್‌ ಕುಮಾರ್‌ರವರ ಮೇಲೆ ಗೌರವವಿದೆ. ಆದರೆ ಅವರಿಂದ ಬಿಹಾರದ ಅಭಿವೃಧ್ದಿ ಸಾಧ್ಯವಿಲ್ಲ - ಪ್ರಶಾಂತ್‌ ಕಿಶೋರ್‌

ನಿತೀಶ್‌ ಕುಮಾರ್‌ರವರ ಮೇಲೆ ಗೌರವವಿದೆ. ಆದರೆ ಅವರಿಂದ ಬಿಹಾರದ ಅಭಿವೃಧ್ದಿ ಸಾಧ್ಯವಿಲ್ಲ – ಪ್ರಶಾಂತ್‌ ಕಿಶೋರ್‌

- Advertisement -
- Advertisement -

’ಬಾತ್‌ ಬಿಹಾರ್‌ ಕಿ’ ಎಂಬ ಚಳವಳಿ ಹಮ್ಮಿಕೊಳ್ಳುವ ಮೂಲಕ ಬಿಹಾರವನ್ನು ಹತ್ತು ವರ್ಷಗಳಲ್ಲಿ ದೇಶದ ಅಭಿವೃದ್ದಿಹೊಂದಿದ ಹತ್ತು ರಾಜ್ಯಗಳಲ್ಲಿ ಒಂದಾಗಿಸುತ್ತೇನೆ ಎಂದು ಚುನಾವಣಾ ತಂತ್ರಜ್ಞ ಮತ್ತು ರಾಜಕಾರಣಿ ಪ್ರಶಾಂತ್‌ ಕಿಶೋರ್‌ ಪಣತೊಟ್ಟಿದ್ದಾರೆ.

ಕಳೆದ ತಿಂಗಳು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರವರು ಪ್ರಶಾಂತ್‌ ಕಿಶೋರ್‌ರವರನ್ನು ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿದ್ದರು. ಹಾಗಾಗಿ ಕಿಶೋರ್‌ ಬೇರೊಂದು ರಾಜಕೀಯ ಪಕ್ಷ / ಮೈತ್ರಿಕೂಟವನ್ನು ಸೇರುತ್ತಾರೆ, ಇಲ್ಲವೇ ಅವರೇ ಹೊಸ ಪಕ್ಷವನ್ನು ಹುಟ್ಟುಹಾಕುತ್ತಾರೆ ಎಂಬ ವದಂತಿಗಳಿದ್ದವು.

ಈಗ ಅವೆಲ್ಲವುಗಳನ್ನು ತಳ್ಳಿ ಹಾಕಿರುವ ಪ್ರಶಾಂತ್‌ ಕಿಶೋರ್‌ ಇಂದು ಪತ್ರಿಕಾಗೋಷ್ಠಿ ನಡೆಸಿ ನನಗೆ ಇನ್ನೊಂದು ರಾಜಕೀಯ ಪಕ್ಷ ಅಥವಾ ಒಕ್ಕೂಟಕ್ಕೆ ಸೇರುವ ಉದ್ದೇಶವಿಲ್ಲ … ನನ್ನ ಏಕೈಕ ಗಮನವೆಂದರೆ ಮುಂದಿನ 100 ದಿನಗಳಲ್ಲಿ ನಾನು ‘ಬಾತ್ ಬಿಹಾರ ಕಿ’ ಪ್ರಾರಂಭಿಸುತ್ತೇನೆ. ಇದರಲ್ಲಿ ಬಿಹಾರದ ಹೊಸ ದೃಷ್ಟಿಕೋನವನ್ನು ನಂಬುವ ಎಲ್ಲ ಜನರಿಗೂ ಅವಕಾಶವಿದೆ. ನಿತೀಶ್‌ ಕುಮಾರ್‌ ನಮ್ಮ ಜೊತೆ ಬಂದರೆ ಅವರಿಗೂ ಸ್ವಾಗತವಿದೆ. ರಾಜ್ಯದ 8800 ಪಂಚಾಯಿತಿಗಳಿಗೂ ಭೇಟಿ ಯುವ ಕಾರ್ಯಕರ್ತರನ್ನು ತಯಾರುಗೊಳಿಸಬೇಕಿದೆ ಎಂದಿದ್ದಾರೆ.


ಇದನ್ನು ಓದಿ: 2014ರಲ್ಲಿ ಮೋದಿ ಗೆಲುವಿಗಾಗಿ ದುಡಿದ ಈಗ ಮೋದಿ ವಿರುದ್ಧವೇ ತೊಡೆ ತಟ್ಟಿರುವ ಈ ಪ್ರಶಾಂತ್ ಕಿಶೋರ್ ಯಾರು?


ದೇಶದ ಹಲವು ರಾಜ್ಯಗಳಲ್ಲಿ ಬಿಹಾರದ ಜನ ಕೆಲಸ ಮಾಡುತ್ತಿದ್ದಾರೆ. ಸೂರತ್‌, ಮುಂಬೈ, ಕರ್ನಾಟಕಕ್ಕೆ ವಲಸೆ ಹೋಗುತ್ತಿದ್ದಾರೆ. ಆದರೆ ಅಲ್ಲಿನ ಜನರೇಕೆ ಬಿಹಾರಕ್ಕೆ ಬಂದು ಕೆಲಸ ಮಾಡುವುದಿಲ್ಲ? ಇದು ನಿತೀಶ್‌ ಕುಮಾರ್‌ರವರ ವಿರುದ್ಧದ ಹೋರಾಟವಲ್ಲ. ಬಿಹಾರವನ್ನು ಅಭಿವೃದ್ದಿಹೊಂದಿದ ರಾಜ್ಯವನ್ನಾಗಿಸುವುದು ನನ್ನ ಗುರಿ ಎಂದಿದ್ದಾರೆ.

“ಬಿಹಾರ ಕಳೆದ 15 ವರ್ಷಗಳಲ್ಲಿ ಪ್ರಗತಿ ಸಾಧಿಸಿದೆ. ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ಬಿಹಾರದ ಅಭಿವೃದ್ಧಿ ತೀರಾ ಕಡಿಮೆಯಾಗಿದೆ. ಅದು ಏಕೆ? ಭಾರತದಲ್ಲಿ ಜಾರ್ಖಂಡ್ ಹೊರತುಪಡಿಸಿದರೆ ಬಿಹಾರ ಇನ್ನೂ ಹೆಚ್ಚು ಹಿಂದುಳಿದ ರಾಜ್ಯವಾಗಿದೆ. 2005 ರಲ್ಲಿ ಬಿಹಾರ ಅತ್ಯಂತ ಬಡ ರಾಜ್ಯವಾಗಿತ್ತು ಮತ್ತು ಹಾಗೆಯೇ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ರವರ ಅಭಿವೃದ್ದಿ ಮತ್ತು ಹೀಗಿನ ನಿತೀಶ್‌ ಕುಮಾರ್‌ರವರ ಅಭಿವೃದ್ದಿ ಕುರಿತು ಮಾತನಾಡಿದ ಅವರು, ಹೌದು, ಲಾಲು ಜಿ ಅವರ ಸಮಯಕ್ಕಿತಂತ ಹೀಗಿನ ನಿತೀಶ್ ಜಿ ಅವರ ಸಮಯದಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಆದರೆ ಗುಜರಾತ್, ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಮತ್ತು ತಮಿಳುನಾಡಿಗೆ ಹೋಲಿಸಿದರೆ ಬಿಹಾರ ಎಲ್ಲಿ ನಿಂತಿದೆ ಎಂಬುದನ್ನು ನೀವು ಜನರಿಗೆ ತಿಳಿಸಬೇಕು ಎಂದು ಅವರು ಹೇಳಿದ್ದಾರೆ.

ನಿತೀಶ್‌ ಕುಮಾರ್‌ರವರ ಮೇಲೆ ನನಗೆ ಗೌರವವಿದೆ ಎನ್ನುತ್ತಲೇ ಚುಚ್ಚಿದ ಅವರು, ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ ಉಳಿಯಲು ನಿತೀಶ್ ಕುಮಾರ್ ಅವರು ಸೈದ್ಧಾಂತಿಕ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಮಹಾತ್ಮ ಗಾಂಧಿ ಮತ್ತು ಅವರ ಕೊಲೆಗಾರ ನಾಥುರಾಮ್ ಗೋಡ್ಸೆಗೆ ಇಬ್ಬರಿಗೂ ಏಕಕಾಲದಲ್ಲಿ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

“ನಿತೀಶ್ ಕುಮಾರ್ ನನ್ನನ್ನು ಮಗನಂತೆ ನೋಡಿದರು ಮತ್ತು ನಾನು ಅವರನ್ನು ಯಾವಾಗಲೂ ತಂದೆಯಂತೆ ನೋಡುತ್ತಿದ್ದೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಅಥವಾ ನನ್ನನ್ನು ಹೊರಹಾಕುವುದಕ್ಕೆ ನಿತೀಶ್ ಕುಮಾರ್‌ರವರಿಗೆ ಅಧಿಕಾರವಿದೆ. ನಾನು ಅವರನ್ನು ಯಾವಾಗಲೂ ಗೌರವಿಸುತ್ತೇನೆ” ಎಂದು ಹೇಳಿದರು.

ಸಿಎಎಯನ್ನು ಸ್ಪಷ್ಟವಾಗಿ ವಿರೋಧಿಸಿದ್ದ ಕಿಶೋರ್‌ ಈ ಕುರಿತು ತಮ್ಮ ಜೆಡಿಯು ಪಕ್ಷದ ನಿಲುವನ್ನು ಬಹಿರಂಗವಾಗಿ ಹಲವು ಬಾರಿ ಟೀಕಿಸಿದ್ದರು. ಹಾಗಾಗಿ ಅವರನ್ನು ಹೊರಹಾಕಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...