Homeಮುಖಪುಟದೆಹಲಿ ಚುನಾವಣೆ: ಸಂವಿಧಾನ ವಿರೋಧಿ ಬಿಜೆಪಿ ವಿರುದ್ಧ ಮತ ಹಾಕಲು ಚಂದ್ರಶೇಖರ್‌ ಆಜಾದ್‌ ಕರೆ..

ದೆಹಲಿ ಚುನಾವಣೆ: ಸಂವಿಧಾನ ವಿರೋಧಿ ಬಿಜೆಪಿ ವಿರುದ್ಧ ಮತ ಹಾಕಲು ಚಂದ್ರಶೇಖರ್‌ ಆಜಾದ್‌ ಕರೆ..

ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಲು ಚಿಂತನಶೀಲವಾಗಿ ಮತ ಚಲಾಯಿಸುವಂತೆ ದೆಹಲಿಯ ಬಹುಜನ ಸಮಾಜದ ಜನರಿಗೆ ಮನವಿ ಮಾಡುತ್ತೇನೆ..

- Advertisement -
- Advertisement -

ಫೆಬ್ರವರಿ 8 ರಂದು ನಡೆಯಲಿರುವ ದೆಹಲಿ ಚುನಾಚಣೆಯಲ್ಲಿ ಸಂವಿಧಾನ ವಿರೋಧಿ ಬಿಜೆಪಿ ಸೋಲಬೇಕು, ಹಾಗಾಗಿ ಬಿಜೆಪಿ ವಿರುದ್ಧ ಮತ ಹಾಕಬೇಕೆಂದು ಜನರಿಗೆ ಚಂದ್ರಶೇಖರ್‌ ಆಜಾದ್‌ ಕರೆ ನೀಡಿದ್ದಾರೆ.

ಈ ಕುರಿತು ಭಾರತದ ಸಂವಿಧಾನದ ಪ್ರತಿಯನ್ನು ಹಿಡಿದು ವಿಡಿಯೋ ಒಂದನ್ನು ಟ್ವಟ್ಟರ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು ಸಂವಿಧಾನದ ರಕ್ಷಣೆಯಿಂದಲೇ ದೇಶದ ಭದ್ರತೆ ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಹಾಗಾಗಿ ದೇಶದ ಭದ್ರತೆಯ ಹೆಸರಿನಲ್ಲಿ ಮತ ಕೇಳುತ್ತಿರುವ ಬಿಜೆಪಿಗೆ ಯಾವುದೇ ಕಾರಣಕ್ಕು ಮತ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ಜೈ ಭೀಮ್ ಸ್ನೇಹಿತರೇ, ಭಾರತದ ಸಂವಿಧಾನವು ಇಂದು ಅಪಾಯದಲ್ಲಿದೆ. ಸಂವಿಧಾನ ಉಳಿದುಕೊಂಡಾಗ ಮಾತ್ರ ನಮ್ಮ ಜನರ ಹಕ್ಕುಗಳು ರಕ್ಷಿಸಲ್ಪಡುತ್ತವೆ, ಆದ್ದರಿಂದ ನಾನು ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಲು ಚಿಂತನಶೀಲವಾಗಿ ಮತ ಚಲಾಯಿಸುವಂತೆ ದೆಹಲಿಯ ಬಹುಜನ ಸಮಾಜದ ಜನರಿಗೆ ಮನವಿ ಮಾಡುತ್ತೇನೆ. ಸಂವಿಧಾನ ರಕ್ಷಣೆ ದೇಶದ ಭದ್ರತೆ. ಜೈ ಭೀಮ್ ಎಂದು ಅವರು ಘೋಷಿಸಿದ್ದಾರೆ.

ಈ ಹಿಂದೆ ಚಂದ್ರಶೇಖರ್‌ ಆಜಾದ್‌ ಸ್ವಂತ ಪಕ್ಷವೊಂದನ್ನು ಕಟ್ಟಿ ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಘೋಷಣೆಯನ್ನು ಸಹ ಮಾಡಿದ್ದರು. ಆದರೆ ಸಿಎಎ ವಿರುದ್ಧದ ಹೋರಾಟದ ಕಾರಣಕ್ಕಾಗಿ ಅವರನ್ನು ಪೊಲೀಸರು ಜೈಲಿಗೆ ತಳ್ಳಿದ್ದರು. ಅಲ್ಲದೇ ಜಾಮೀನು ಸಿಕ್ಕರೂ ಸಹ ದೆಹಲಿ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಈ ಎಲ್ಲಾ ಕಾರಣಗಳಿಗಾಗಿ ಅವರು ಪಕ್ಷ ಕಟ್ಟಲು ಸಾಧ್ಯವಾಗಿಲ್ಲ. ಹಾಗಾಗಿ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಅವರು ಕರೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read