Homeಮುಖಪುಟಪ್ರಧಾನಿ ಮೋದಿ ಟೀಕಿಸುವ ಪೋಸ್ಟರ್ ವಿಚಾರ: ದೆಹಲಿಯಲ್ಲಿ 100 ಎಫ್‌ಐಆರ್‌ ದಾಖಲು, 6 ಜನರ ಬಂಧನ

ಪ್ರಧಾನಿ ಮೋದಿ ಟೀಕಿಸುವ ಪೋಸ್ಟರ್ ವಿಚಾರ: ದೆಹಲಿಯಲ್ಲಿ 100 ಎಫ್‌ಐಆರ್‌ ದಾಖಲು, 6 ಜನರ ಬಂಧನ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಪೋಸ್ಟರ್‌ಗಳನ್ನು ಅಂಟಿಸಿದ ಆರು ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರಲ್ಲಿ ಇಬ್ಬರು ಪ್ರಿಂಟಿಂಗ್ ಪ್ರೆಸ್‌ನವರು ಎಂದು ತಿಳಿದುಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ (ಮಾ.21) 100 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ದೆಹಲಿ ಪೊಲೀಸರು ಮಂಗಳವಾರದ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ನಗರದ ಹಲವು ಸ್ಥಳಗಳಿಂದ ಸುಮಾರು 2,000 ‘ಮೋದಿ ವಿರೋಧಿ’ ಪೋಸ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೋಸ್ಟರ್‌ಗಳಲ್ಲಿ ಹೆಚ್ಚಿನವು ‘ಮೋದಿ ಹಠಾವೋ, ದೇಶ್ ಬಚಾವೋ’ (ಮೋದಿಯನ್ನು ತೆಗೆದುಹಾಕಿ, ದೇಶವನ್ನು ಉಳಿಸಿ) ಎಂಬ ಘೋಷಣೆಗಳನ್ನು ಬರೆಯಲಾಗಿದೆ.

ಈ ಎಲ್ಲ ಪೋಸ್ಟರ್‌ಗಳು ಆಮ್ ಆದ್ಮಿ ಪಕ್ಷದ ಕಚೇರಿಗೆ ತಲುಪಿಸಲಾಗುತ್ತಿತ್ತು ಎಂದು ಹೇಳಲಾಗಿದ್ದು, ಸುಮಾರು 2,000 ಪೋಸ್ಟರ್‌ಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಂಸತ್ತಿನ ಮೊದಲ ಮಹಡಿಯಲ್ಲಿ ‘ಮೋದಾನಿ’ ಬ್ಯಾನರ್ ಪ್ರದರ್ಶನ: ಪ್ರತಿಪಕ್ಷಗಳ ವಿನೂತನ ಪ್ರತಿಭಟನೆ

ಪೊಲೀಸರು ಐಪಿ ಎಸ್ಟೇಟ್ ಪ್ರದೇಶದಲ್ಲಿ ವ್ಯಾನ್‌ವೊಂದನ್ನು ಅಡ್ಡಗಟ್ಟಿದಾಗ ಅದರಲ್ಲಿ ಮೋದಿ ವಿರೋಧಿ ಪೋಸ್ಟರ್‌ಗಳು ಕಂಡು ಬಂದಿವೆ. ಈ ಬಗ್ಗೆ ಚಾಲಕನನ್ನು ಪ್ರಶ್ನಿಸಿದಾಗ ಆತ, ಈ ಪೋಸ್ಟರ್‌ಗಳನ್ನು ಎಎಪಿ ಕೇಂದ್ರ ಕಚೇರಿಗೆ ತಲುಪಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಹಿಂದಿನ ದಿನ ಅಂದರೆ ಸೋಮವಾರವೂ ಇದೇ ರೀತಿಯ ಸರಕನ್ನು ತಲುಪಿಸಿರುವುದಾಗಿ ಚಾಲಕ ಪೊಲೀಸರಿಗೆ ಹೇಳಿದ್ದಾನೆ.

ಪೊಲೀಸರು ಕೇಳಿದ ಪ್ರಶ್ನೆಗೆ ಬಂಧಿತ ಪ್ರಿಂಟಿಂಗ್ ಪ್ರೆಸ್‌ನ ಮಾಲೀಕರು ಉತ್ತರಿಸಿದ್ದು, ”50,000 ‘ಮೋದಿ ಹಟಾವೋ, ದೇಶ್ ಬಚಾವೋ’ ಪೋಸ್ಟರ್‌ಗಳನ್ನು ಮುದ್ರಿಸಲು ತಮಗೆ ಆದೇಶ ಬಂದಿದೆ” ಎಂದು ಅವರು ತಿಳಿಸಿದ್ದಾರೆ.

ಪ್ರಿಂಟಿಂಗ್ ಪ್ರೆಸ್ ಆಕ್ಟ್ ಮತ್ತು ಆಸ್ತಿ ವಿರೂಪಗೊಳಿಸುವ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಈ ಬಗ್ಗೆ ಆಮ್‌ ಆದ್ಮಿ ಪಕ್ಷದಿಂದ ಈ ವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಿಆರ್‌ಎಸ್‌ ಕಾರ್ಯಕರ್ತರು ಮೋದಿ ವಿರುದ್ಧ ಪೋಸ್ಟರ್‌ ಅಂಟಿಸಿ ಪ್ರತಿಭಟನೆ ಮಾಡಿದ್ದರು. ಇಲ್ಲಿನ ಗೋಡೆಗಳ ಮೇಲೆ ‘ನರೇಂದ್ರ ಮೋದಿ ಪ್ರಜಾಪ್ರಭುತ್ವದ ಧ್ವಂಸಕ, ಬೂಟಾಟಿಕೆಯ ಪಿತಾಮಹ’ ಎಂಬ ಪೋಸ್ಟರ್‌ ಅಂಟಿಸಿ ವಿರೋಧಿಸಿದರು. ಇದರೊಂದಿಗೆ ಮೋದಿ ಸರ್ಕಾರ ಅವರ ವಿರೋಧಿಗಳ ವಿರುದ್ಧ ಇಂತಹ ಕೇಂದ್ರದ ತನಿಖಾ ಸಂಸ್ಥೆಗಳನ್ನು ಶಸ್ತ್ರವಾಗಿ ಬಳಸುತ್ತಿದೆ ಎಂದು ಪೋಸ್ಟರ್ ಮೂಲಕ ಆರೋಪ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...