Homeಮುಖಪುಟಜೈಪುರ: ಹಿಂದೂಯೇತರರಿಗೆ ಮನೆಗಳನ್ನು ಮಾರಾಟ ಮಾಡದಂತೆ ಪೋಸ್ಟರ್ ಹಾಕಿದ ಜನ

ಜೈಪುರ: ಹಿಂದೂಯೇತರರಿಗೆ ಮನೆಗಳನ್ನು ಮಾರಾಟ ಮಾಡದಂತೆ ಪೋಸ್ಟರ್ ಹಾಕಿದ ಜನ

- Advertisement -
- Advertisement -

ಜೈಪುರದ ಭಟ್ಟ ಬಸ್ತಿ ಪ್ರದೇಶದ ಶಿವಾಜಿ ನಗರದಲ್ಲಿ ‘ಹಿಂದೂಯೇತರರಿಗೆ’ ಮನೆಗಳನ್ನು ಮಾರಾಟ ಮಾಡಬಾರದು ಎಂಬ ಪೋಸ್ಟರ್‌ಗಳನ್ನು ಕಿಡಿಗೇಡಿಗಳು ಅಂಟಿಸಿದ್ದು, ಹಿಂದೂಗಳ ವಲಸೆಯನ್ನು ತಡೆಯುವಂತೆ ‘ಸನಾತನಿ’ ಜನರಿಗೆ ಮನವಿ ಮಾಡುತ್ತೇವೆ ಎಂದು ಬರೆಯಲಾಗಿದೆ.

ಹಿಂದೂಯೇತರರಿಗೆ ತಮ್ಮ ಮನೆಗಳನ್ನು ಮಾರಾಟ ಮಾಡದಂತೆ ತಮ್ಮ ಪ್ರದೇಶದ ಜನರಿಗೆ ಮನವಿ ಮಾಡಲು ತಮ್ಮ ಸ್ವಂತ ಮನೆಗಳ ಮೇಲೆ ಸ್ವಇಚ್ಛೆಯಿಂದ ಪೋಸ್ಟರ್‌ಗಳನ್ನು ಅಂಟಿಸಿರುವುದಾಗಿ ಕೆಲವು ಸ್ಥಳೀಯರು ಟಿವಿ ಚಾನೆಲ್‌ಗಳಿಗೆ ತಿಳಿಸಿದ್ದಾರೆ.

ಭಟ್ಟ ಬಸ್ತಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಕೈಲಾಶ್ ಈ ಕುರಿತ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. ಜನರು ತಮ್ಮ ಸ್ವಂತ ಮನೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಮತ್ತು ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.

‘ಸರ್ವ್ ಹಿಂದೂ ಸಮಾಜ’ ಹೆಸರಿನ ಪೋಸ್ಟರ್‌ನ್ನು ಹಿಂದಿಯಲ್ಲಿ ಹಾಕಲಾಗಿದ್ದು, ವಲಸೆ ನಿಲ್ಲಿಸುವಂತೆ ಸನಾತನಿಗಳಿಗೆ ಮನವಿ, ಎಲ್ಲಾ ಸನಾತನ ಸಹೋದರ ಸಹೋದರಿಯರಿಗೆ ತಮ್ಮ ಮನೆಯನ್ನು ಹಿಂದೂಯೇತರರಿಗೆ ಮಾರಾಟ ಮಾಡದಂತೆ ವಿನಂತಿ ಮಾಡುತ್ತಿದ್ದೇವೆ ಎಂದು ಬರೆಯಲಾಗಿದೆ.

ಈ ಪ್ರದೇಶದಲ್ಲಿ ಕೆಲವರು ಮನೆ ಖರೀದಿಸಿ ಇತರರಿಗೆ ತೊಂದರೆ ಕೊಡುತ್ತಿದ್ದಾರೆ.  ಈ ಪರಿಸ್ಥಿತಿಯಿಂದಾಗಿ, ನಾವು ನಮ್ಮ ಮನೆಗಳ ಹೊರಗೆ ಭಿತ್ತಿಪತ್ರಗಳನ್ನು ಅಂಟಿಸಲು ನಿರ್ಧರಿಸಿದ್ದೇವೆ, ಜನರು ತಮ್ಮ ಮನೆಗಳನ್ನು ಹಿಂದೂಯೇತರರಿಗೆ ಮಾರಾಟ ಮಾಡದಂತೆ ಮನವಿ ಮಾಡುತ್ತೇವೆ. ದಲ್ಲಾಳಿಗಳು ಆಗಾಗ್ಗೆ ನಮ್ಮ ಬಳಿಗೆ ಬರುತ್ತಾರೆ, ನಮ್ಮ ಮನೆಯನ್ನು ಮಾರಾಟ ಮಾಡಲು ನಮಗೆ ಆಸಕ್ತಿ ಇದೆಯೇ ಎಂದು ಕೇಳುತ್ತಾರೆ. ಹಲವು ಮನೆಗಳನ್ನು ಹೊರಗಿನವರಿಗೆ ಮಾರಾಟ ಮಾಡಲಾಗಿದೆ ಮತ್ತು ನಮ್ಮ ಪ್ರದೇಶದಲ್ಲಿ ವಾತಾವರಣವು ಸರಿಯಾಗಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ. ಆಸ್ತಿ ಮಾರಾಟ ಮತ್ತು ಖರೀದಿ ವೈಯಕ್ತಿಕ ವಿಷಯವಾಗಿದೆ.  ಈ ಬಗ್ಗೆ ಯಾವುದೇ ವಿವಾದ ಈವರೆಗೆ ಆ ಪ್ರದೇಶದಲ್ಲಿ ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ: ರೈತರ ಹತ್ಯೆ ಹೊಣೆಗಾರರಿಗೆ ಕೃಷಿ ಸಚಿವಾಲಯದ ಹೊಣೆ: ರೈತ ಸಂಘಟನೆಗಳಿಂದ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾಹಿಲ್ ವಕೋಡ್ ಸಾವಿನ ಪ್ರಕರಣ: ಐಐಟಿ ಬಾಂಬೆ ನಿರ್ದೇಶಕರ ರಾಜೀನಾಮೆಗೆ 84 ಸಂಘಟನೆಗಳ ಆಗ್ರಹ

ಜಾತಿ ತಾರತಮ್ಯದ ಆರೋಪ ಎದುರಿಸುತ್ತಿರುವ ಡೀನ್‌ಗೆ ಸಂಸ್ಥೆಯ ಬೆಂಬಲ, ವಿದ್ಯಾರ್ಥಿಯ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಸೋರಿಕೆ ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯದ ಆರೋಪ ಮುಂಬೈ: ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿ ಸಾಹಿಲ್...

ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ 629 ವರದಕ್ಷಿಣೆ ಕಿರುಕುಳದ ಸಾವು; ಶಿಕ್ಷೆಯಾಗಿದ್ದು ಕೇವಲ ಏಳು ಪ್ರಕರಣಗಳಲ್ಲಿ: ವರದಿ 

ವರದಕ್ಷಿಣೆ ಕಿರುಕುಳ ಮತ್ತು ಸಾವುಗಳ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಶಿಕ್ಷೆಯ ಪ್ರಮಾಣ; ತನಿಖೆ, ಸಾಕ್ಷ್ಯ ಸಂಗ್ರಹ ಮತ್ತು ನ್ಯಾಯಾಂಗ ವಿಳಂಬದ ವಿರುದ್ಧ ತಜ್ಞರ ಕಳವಳ ಕರ್ನಾಟಕದಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಸಾವುಗಳಂತಹ ಗಂಭೀರ ಅಪರಾಧಗಳ...

ಅರುಣಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆ ವಿರುದ್ಧ ಭುಗಿಲೆದ್ದ ಜನಾಕ್ರೋಶ; ಕೇಂದ್ರದಿಂದ ಆರ್‌ಎಎಫ್‌ನ ಎರಡು ತುಕಡಿ ರವಾನೆ

ಪ್ರಸ್ತಾವಿತ 11,200 ಮೆಗಾವ್ಯಾಟ್ ಸಾಮರ್ಥ್ಯದ ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪಾಸಿಘಾಟ್‌ನಲ್ಲಿ ಹಿಂಸಾಚಾರ ಸಂಭವಿಸಿದ ಹಿನ್ನೆಲೆ, ಕೇಂದ್ರ ಸರ್ಕಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ರಾಪಿಡ್ ಆಕ್ಷನ್...

ನ್ಯಾಯಾಧೀಶರ ನೇಮಕಾತಿಗೆ ಕೊಲಿಜಿಯಂ ಚರ್ಚಿಸುವ ಮುನ್ನವೇ ಸಿಜೆಐ ಚಂದ್ರಚೂಡ್ ಸರ್ಕಾರದ ಪೂರ್ವಾನುಮತಿ ಪಡೆಯುತ್ತಿದ್ದರು: ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಯ) ಡಿ.ವೈ. ಚಂದ್ರಚೂಡ್ ಅವರು ನ್ಯಾಯಾಧೀಶರ ನೇಮಕಾತಿಗಾಗಿ ಪ್ರಸ್ತಾಪಿಸಲಾದ ಹೆಸರುಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಅಧಿಕೃತವಾಗಿ ಚರ್ಚಿಸುವ ಮುನ್ನವೇ ಸರ್ಕಾರದೊಂದಿಗೆ ಚರ್ಚಿಸುವ ಅಭ್ಯಾಸವನ್ನು ಹೊಂದಿದ್ದರು ಎಂದು...

ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಚ್ಚರಿಕೆ

ಬೆಂಗಳೂರಿನ ಐಟಿ ವಲಯ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ದೇಶಪೂರ್ವಕವಾಗಿ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ...

“ಕೇವಲ ದುಷ್ಟರಿಗಷ್ಟೇ ಧರ್ಮ ಬೇಕು”: ಪ್ರಧಾನಿ ಮೋದಿ-ಚಿನ್ಮಯಾನಂದ ಎಐ ಸಂವಾದದ ನಡುವೆ ಸ್ವಾಮಿ ಚಿನ್ಮಯಾನಂದರ ಹಳೆಯ ಕ್ರಾಂತಿಕಾರಿ ಹೇಳಿಕೆ ಈಗ ಮುನ್ನೆಲೆಗೆ!

ದೆಹಲಿಯ ಭಾರತ್ ಮಂಟಪಂನಲ್ಲಿ ಆಯೋಜಿಸಿದ್ದ ‘ಚಿನ್ಮಯ ಅಮೃತ ಮಹೋತ್ಸವ’ ಜಾಗತಿಕ ಸಮ್ಮೇಳನದ ವೇದಿಕೆ ಇತ್ತೀಚೆಗೆ ವಿಶಿಷ್ಟ ತಾಂತ್ರಿಕ ಪ್ರದರ್ಶನವೊಂದಕ್ಕೆ ಸಾಕ್ಷಿಯಾಯಿತು. 1993ರಲ್ಲೇ ಇಹಲೋಕ ತ್ಯಜಿಸಿದ್ದ ಚಿನ್ಮಯ ಮಿಷನ್ ಸಂಸ್ಥಾಪಕ ಸ್ವಾಮಿ ಚಿನ್ಮಯಾನಂದ ಅವರ...

ಜೀವನ ವೆಚ್ಚ, ಶಾಲಾ ನಿಧಿ ಕಡಿತದ ವಿರುದ್ಧ ಫ್ರಾನ್ಸ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ; ಅಶ್ರುವಾಯು, ಜಲಫಿರಂಗಿ ಪ್ರಯೋಗ

ಫ್ರಾನ್ಸ್‌ನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನು...

‘ಒಂದೇ ಹೆಸರಿನಲ್ಲಿ 13 ವೋಟ್’ : ಉತ್ತರ ಪ್ರದೇಶ ಆಝಂಗಢದಲ್ಲಿ ಮತದಾರರ ಪಟ್ಟಿ ಅಕ್ರಮ; 9 ಅಧಿಕಾರಿಗಳ ವಿರುದ್ಧ ಕ್ರಮ

ಆಝಂಗಢ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ 13 ಪ್ರತ್ಯೇಕ ಸ್ಥಳಗಳಲ್ಲಿ ವಿಕಾಸ್ ಯಾದವ್ ಎಂಬ ಹೆಸರು ತಪ್ಪಾಗಿ ದಾಖಲಾಗಿರುವುದು ಆಂತರಿಕ ತನಿಖೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ)...

ಎಸ್‌ಆರ್‌ಎಫ್‌ಟಿಐ ವಿದ್ಯಾರ್ಥಿಗಳ ಹೋರಾಟಕ್ಕೆ ನಾಸಿರುದ್ದೀನ್ ಶಾ, ಪಾಯಲ್ ಕಪಾಡಿಯಾ ಬೆಂಬಲ; ಬಿಜೆಪಿ ವಿರುದ್ಧ ನಟನ ವಾಗ್ದಾಳಿ

ಕೋಲ್ಕತ್ತಾ: ಕೋಲ್ಕತ್ತಾದ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಸ್‌ಆರ್‌ಎಫ್‌ಟಿಐ)ಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಹಿರಿಯ ನಟ ನಾಸಿರುದ್ದೀನ್ ಶಾ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕಿ ಪಾಯಲ್ ಕಪಾಡಿಯಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ: ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನ: ತನಿಖೆ ಚುರುಕು 

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆಪಾದಿತ ಕುಟುಕು ಕಾರ್ಯಾಚರಣೆಯ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರ ಅಪರಾಧ ವಿಭಾಗದ ವಿಶೇಷ ತಂಡ ದೆಹಲಿ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಪ್ರಕರಣದಲ್ಲಿ ನಡೆದಿರುವ ಮೊದಲ...