Homeಮುಖಪುಟಮೋದಿ ಸಿಡ್ನಿ ಭೇಟಿ; ಗುಜರಾತ್ ಹತ್ಯಾಕಾಂಡದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ

ಮೋದಿ ಸಿಡ್ನಿ ಭೇಟಿ; ಗುಜರಾತ್ ಹತ್ಯಾಕಾಂಡದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ

- Advertisement -
- Advertisement -

ಮುಂದಿನ ವಾರ ಪ್ರಧಾನಿ ಮೋದಿ ಅವರು ಸಿಡ್ನಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಲಸಿಗರು ವೈವಿಧ್ಯತೆಯ ಅಭಿಪ್ರಾಯವನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ಮಂಗಳವಾರ ಬೃಹತ್ ಸಮುದಾಯ ಸಮಾರಂಭ ನಡೆಯಲಿದೆ. ಮರುದಿನ ಸಂಜೆ ಕ್ಯಾನ್‌ಬೆರಾದಲ್ಲಿ BBC ಡಾಕ್ಯುಮೆಂಟರಿ ಇಂಡಿಯಾ: ದಿ ಮೋದಿ ಕ್ವೆಶ್ಚನ್‌ನ ಪ್ರದರ್ಶನ ನಡೆಯಲಿದೆ.

ಈ ಸಾಕ್ಷ್ಯಚಿತ್ರದ ಸ್ಕ್ರೀನಿಂಗ್‌ಅನ್ನು ಡಯಾಸ್ಪೊರಾ ಸಂಸ್ಥೆಗಳ ಗುಂಪು ಕ್ಯಾನ್‌ಬೆರಾದಲ್ಲಿರುವ ಆಸ್ಟ್ರೇಲಿಯಾದ ಸಂಸತ್ ಭವನದಲ್ಲಿ ನಡೆಸುತ್ತದೆ. ಆಸ್ಟ್ರೇಲಿಯಾದ ಸಂಸತ್ತು ಬಾಡಿಗೆಗೆ ಹಲವಾರು ಸ್ಥಳಗಳನ್ನು ನೀಡುತ್ತದೆ, ಮತ್ತು ಸ್ಕ್ರೀನಿಂಗ್ ಎನ್ನುವುದು ಮಾನವ ಹಕ್ಕುಗಳ ಸಂಸ್ಥೆಯಾದ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಜೊತೆಗೆ ಡಯಾಸ್ಪೊರಾ ಗುಂಪುಗಳಿಂದ ಆಯೋಜಿಸಲ್ಪಟ್ಟ ಸಂಪೂರ್ಣ ಖಾಸಗಿ ಕಾರ್ಯಕ್ರಮ ಇದಾಗಿದೆ. ಮೋದಿ ಸರ್ಕಾರವು ಭಾರತದ ಸಂವಿಧಾನಾತ್ಮಕ ಮೂಲ ತತ್ವಗಳಿಂದ ದೂರ ಸರಿಯುತ್ತಿರುವ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ.

ಈ ಸ್ರಕೀನಿಂಗ್‌ ಕಾರ್ಯಕ್ರಮದಲ್ಲಿ ಅಮ್ನೆಸ್ಟಿ ಜೊತೆಗೆ, ಮಾನವ ಹಕ್ಕುಗಳಿಗಾಗಿ ಆಸ್ಟ್ರೇಲಿಯಾದ ಹಿಂದೂಗಳು ಮತ್ತು ನ್ಯೂಜಿಲೆಂಡ್ ಮತ್ತು ಮುಸ್ಲಿಂ ಕಲೆಕ್ಟಿವ್ ಸೇರಿವೆ.

ಪೆರಿಯಾರ್-ಅಂಬೇಡ್ಕರ್ ಥಾಟ್ ಸರ್ಕಲ್-ಆಸ್ಟ್ರೇಲಿಯಾ, ದಿ ಹ್ಯೂಮಾನಿಸಂ ಪ್ರಾಜೆಕ್ಟ್ ಮತ್ತು ಸೆಂಟರ್ ಫಾರ್ ಕಲ್ಚರ್-ಸೆಂಟ್ರೆಡ್ ಅಪ್ರೋಚ್ ಟು ರಿಸರ್ಚ್ ಅಂಡ್ ಎವಾಲ್ಯುಯೇಷನ್ ಸಂಸ್ಥೆಗಳು ಕೂಡ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿವೆ.

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ್ದ ದೆಹಲಿ ವಿವಿ ಆದೇಶ ರದ್ದುಗೊಳಿಸಿದ ಕೋರ್ಟ್
 

ಮೋದಿ ಅವರ ಆಸ್ಟ್ರೇಲಿಯಾ ಪ್ರವಾಸ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿದ್ದು,ಈ ವೇಳೆ ಸಿಡ್ನಿಗೆ ಮಾತ್ರ ಭೇಟಿ ನೀಡಲಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ಮತ್ತು ವ್ಯಾಪಾರ ವಹಿವಾಟಿನ ಸಭೆಗಳ ಜೊತೆಗೆ, ಅವರು ಮರುದಿನ ಅಲ್ಬನೀಸ್ ಜೊತೆಗೆ ಅಲ್ಲಿಯ ದೊಡ್ಡ ಸಮುದಾಯದೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮರುದಿನ ಸಂಜೆ ಕ್ಯಾನ್‌ಬೆರಾದಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ವೇಳೆಗೆ ಮೋದಿ ಅವರು ಅಲ್ಲಿಂದ ಕಾಲ್ಕಿತ್ತುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಂದರೆ 2002ರ ಸಮಯದಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮೋದಿ ಅವರ ಕ್ರಮಗಳನ್ನು ಈ ಎರಡು ಭಾಗಗಳ BBC ಸಾಕ್ಷ್ಯಚಿತ್ರವು  ಪರಿಶೀಲಿಸುತ್ತದೆ. ಈ ಸಾಕ್ಷ್ಯ ಚಿತ್ರದ ಪ್ರದರ್ಶನದ ನಂತರ ಗುಜರಾತ್ ಗಲಭೆಗಳು ಮತ್ತು 2014 ರಿಂದ ಅವರ ಆಡಳಿತದಲ್ಲಿರುವ ಭಾರತವನ್ನು ಕೇಂದ್ರೀಕರಿಸುವ ಚರ್ಚೆಯನ್ನು ನಡೆಸಲಾಗುವುದು. ಭಾಷಣಕಾರರಲ್ಲಿ ಮೋದಿ ವಿರುದ್ಧ ಮಾತನಾಡಿದ್ದ ಜೈಲಿನಲ್ಲಿರುವ ಗುಜರಾತ್ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರ ಪುತ್ರಿ ಆಕಾಶಿ ಭಟ್ ಮತ್ತು ಭಾರತದಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಾಜಿ ಮುಖ್ಯಸ್ಥ ಆಕರ್ ಪಟೇಲ್ ಇರಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...