Homeಅಂತರಾಷ್ಟ್ರೀಯಬ್ರೆಜಿಲ್ ಅಧ್ಯಕ್ಷರ ಬೆಂಬಲಿಗರ ಖಾತೆ ಮೇಲೆ ಕ್ರಮ: ಕೋರ್ಟ್ ಆದೇಶ ಪಾಲಿಸುತ್ತೇವೆ ಎಂದ ಫೇಸ್‌ಬುಕ್

ಬ್ರೆಜಿಲ್ ಅಧ್ಯಕ್ಷರ ಬೆಂಬಲಿಗರ ಖಾತೆ ಮೇಲೆ ಕ್ರಮ: ಕೋರ್ಟ್ ಆದೇಶ ಪಾಲಿಸುತ್ತೇವೆ ಎಂದ ಫೇಸ್‌ಬುಕ್

- Advertisement -
- Advertisement -

ನಕಲಿ ಸುದ್ದಿ ಜಾಲ ನಡೆಸುತ್ತಿದ್ದಾರೆ ಎಂಬ ಆರೋಪದಡಿ ತನಿಖೆ ಎದುರಿಸುತ್ತಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಬೆಂಬಲಿಗರ 12 ಮಂದಿಯ ಖಾತೆಗಳ ಮೇಲೆ ವಿಶ್ವದಾದ್ಯಂತ ನಿರ್ಬಂಧ ಹೇರಬೇಕೆಂಬ ಬ್ರೆಜಿಲ್ ನ್ಯಾಯಾಧೀಶರ ಆದೇಶವನ್ನು ಪಾಲಿಸುವುದಾಗಿ ಫೇಸ್‌ಬುಕ್ ಹೇಳಿದೆ.

ಆ ಖಾತೆಗಳನ್ನು ಮುಚ್ಚುವಂತೆ ಆದೇಶಿಸಿದ್ದ ಹಿಂದಿನ ತೀರ್ಪನ್ನು ಸಂಪೂರ್ಣವಾಗಿ ಪಾಲಿಸುವಲ್ಲಿ ಫೇಸ್‌ಬುಕ್‌ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಲೆಕ್ಸಾಂಡ್ರೆ ಡಿ ಮೊರೇಸ್ ಹೇಳಿದ್ದಾರೆ. ಆ ಖಾತೆಗಳು ಇನ್ನೂ ಸಕ್ರಿಯವಾಗಿದ್ದು ಬ್ರೆಜಿಲ್ ಹೊರಗೆ ತಮ್ಮ ನೋಂದಣಿ ಮತ್ತು ಸ್ಥಳ ಬದಲಿಸುವ ಮೂಲಕ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.

ಕೋರ್ಟ್‌ನ ಹೊಸ ಆದೇಶವನ್ನು ಫೇಸ್‌ಬುಕ್‌  ಅತಿಯಾದುದ್ದು ಎಂದು ಕರೆದಿದೆ. ಇದು ಬ್ರೆಜಿಲ್ ನ್ಯಾಯವ್ಯಾಪ್ತಿಯ ಹೊರಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ವಿಶ್ವದ ಇತರ ಕಾನೂನುಗಳೊಂದಿಗೆ ಸಂಘರ್ಷವೇರ್ಪಡುತ್ತದೆ. ಹಾಗಾಗಿ ತೀರ್ಪಿನ ವಿರುದ್ಧ ಮೆಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.

ಅಧ್ಯಕ್ಷರ ಅನುಯಾಯಿಗಳ ಫೇಸ್‌ಬುಕ್ ಪೇಜ್‌ಗಳು ಮತ್ತು ಪ್ರೊಫೈಲ್‌ಗಳನ್ನು ಬ್ರೆಜಿಲ್‌ನ ಐಪಿ ಸ್ಥಳಗಳಿಂದ ನೋಡುವುದನ್ನು ನಿರ್ಬಂಧಿಸುವ ಮೂಲಕ ಹಿಂದಿನ ಆದೇಶವನ್ನು ಪಾಲಿಸಲಾಗಿದೆ ಎಂದು ಫೇಸ್‌ಬುಕ್ ವಾದಿಸಿದೆ. ಆ ಖಾತೆಗಲು ತಮ್ಮ ನೋಂದಣಿ ಮತ್ತು ಸ್ಥಳ ಬದಲಿಸಿಕೊಂಡರೂ ಸಹ  ಬ್ರೆಜಿಲ್‌ನ ಐಪಿ ಸ್ಥಳಗಳ ಜನರು ಅವುಗಳನ್ನು ನೋಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.

ಕಳೆದ ಎಂಟು ದಿನಗಳಲ್ಲಿ ತನ್ನ ಹಿಂದಿನ ನಿರ್ಧಾರವನ್ನು ಪಾಲಿಸದಿದ್ದಕ್ಕಾಗಿ 3,67,000 ಡಾಲರ್ ದಂಡವನ್ನು ಫೇಸ್‌ಬುಕ್‌ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಧೀಶರಾದ ಮೊರೇಸ್ ಹೇಳಿದ್ದಾರೆ.

ಟ್ವಿಟ್ಟರ್ ಖಾತೆಗಳನ್ನು ಸಹ ನಿರ್ಬಂಧಿಸಬೇಕು ಮೊರೆಸ್‌ ತೀರ್ಪು ನೀಡಿದ್ದರು. ಆದರೆ ಈ ನಿರ್ಧಾರವು “ಬ್ರೆಜಿಲ್‌ನ ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಅಸಮಾನವಾಗಿದೆ ಎಂದ ಟ್ವಿಟ್ಟರ್‌, ಮೇಲ್ಮನವಿ ಸಲ್ಲಿಸಲ್ಲಿದೆ. ಇದೇ ಸಮಯದಲ್ಲಿ ಉದ್ದೇಶಿತ ಪ್ರೊಫೈಲ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧ ಬೆದರಿಕೆಗಳು ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಬೋಲ್ಸೊನಾರೊ ಬೆಂಬಲಿಗರ ನಕಲಿ ಜಾಲತಾಣಗಳ ಕುರಿತು ವಿವಾದಾತ್ಮಕ ಪ್ರಕರಣವನ್ನು ಮೊರೇಸ್ ವಿಚಾರಣೆ ನಡೆಸುತ್ತಿದ್ದಾರೆ. ಅಧ್ಯಕ್ಷ ಬೋಲ್ಸನಾರೊ ಮತ್ತು ಸುಪ್ರೀಂ ಕೋರ್ಟ್‌ ನಡುವಿನ ಮುಖಾಮುಖಿಯೇ ತನಿಖೆಯ ಪ್ರಮುಖ ಅಂಶವಾಗಿದೆ. ತನ್ನ ಬೆಂಬಲಿಗರ ಖಾತೆಗಳ ಮೇಲಿನ ನಿರ್ಬಂಧವನ್ನು ತೆರವುಗೊಳಸಬೇಕೆಂದು ಬೋಲ್ಸನಾರೋ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಬಲಪಂಥೀಯ ಧೋರಣೆಯ ಫೇಸ್‌ಬುಕ್ ಸೆನ್ಸಾರ್‌ಶಿಪ್‌ಗೆ ಮತ್ತೊಂದು ಹೆಸರು ‘ತಾಂತ್ರಿಕ ದೋಷ’ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...