Homeಮುಖಪುಟಕಾಂಗ್ರೆಸ್ಸಿನ ಅಧ್ಯಕ್ಷ ಪಟ್ಟದ ಕೈ ಹಿಡಿತಾರ ರಾಹುಲ್ ಗಾಂಧಿ

ಕಾಂಗ್ರೆಸ್ಸಿನ ಅಧ್ಯಕ್ಷ ಪಟ್ಟದ ಕೈ ಹಿಡಿತಾರ ರಾಹುಲ್ ಗಾಂಧಿ

- Advertisement -
- Advertisement -

|| ಸೋಮಶೇಖರ್ ಚಲ್ಯ ||

ಆಧಾರ:: ಎನ್‍ಡಿಟಿವಿ ವರದಿ

ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿ, ಹೀನಾಯ ಸೋಲು ಕಂಡ ನಂತರ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಘೋಷಣೆ ಮಾಡಿದ್ದರು. ಆ ನಿರ್ಧಾರಕ್ಕೆ ಬದ್ದರಾಗಿದ್ದು, ಪಕ್ಷದ ಹೊಸ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ವೈಫಲ್ಯಕ್ಕೆ ಸಂಪೂರ್ಣವಾಗಿ ತಾನೇ ಜವಾಬ್ದಾರನೆಂದು ಮೇ 26ರಂದು ಹೇಳಿದ್ದ ರಾಹುಲ್‍ಗಾಂಧಿ, ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಪಕ್ಷದ ಕಾರ್ಯಕಾರಿ ಸಮಿತಿಯ 52 ಸದಸ್ಯರಿಗೂ ತಿಳಿಸಿದ್ದರು. ಆದರೆ ಅವರೇ ಅಧ್ಯಕ್ಷರಾಗಿರಬೇಕು ಎಂಬ ನಿಲುವಿಗೆ ಅಂಟಿಕೊಂಡಿರುವ ಕಾಂಗ್ರೆಸ್ ರಾಹುಲ್‍ರವರ ನಿರ್ಧಾರವನ್ನು ನಿರಾಕರಿಸಿತ್ತು.

ಇದನ್ನು ಓದಿ:  ರಾಹುಲ್ ಅಲ್ಲದಿದ್ದರೆ ಇನ್ಯಾರು??

ಪಕ್ಷದ ಚುಕ್ಕಾಣಿಯನ್ನು ಗಾಂಧಿ ಕುಟುಂಬದ ಸದಸ್ಯರು ಮಾತ್ರ ಹಿಡಿದಿಟ್ಟುಕೊಳ್ಳಬೇಕು ಎಂದು ಪಕ್ಷದ ಹಿರಿಯರು ಸೂಚಿಸಿದ್ದಾರೆ. ರಾಹುಲ್ ಗಾಂಧಿಯವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಬೇಕೆಂದು ಪಕ್ಷದ ಹಿರಿಯರಿಂದ ಕಿರಿಯರವರೆಗೂ ಒತ್ತಾಯಿಸುತ್ತಿದ್ದಾರೆ. ಆದರೆ ರಾಹುಲ್ ಮಾತ್ರ ತಮ್ಮ ನಿರ್ಧಾರವನ್ನು ಬದಲಿಸಲು ನಿರಾಕರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸೋನಿಯಾ ಗಾಂಧಿ ಅಥವಾ ಪ್ರಿಯಾಂಕ ಗಾಂಧಿಯವರಿಗೂ ಪಕ್ಷದ ಜವಾಬ್ದಾರಿ ನೀಡಬಾರದೆಂದು ಹೇಳಿದ್ದಾರೆ.

ಪಕ್ಷದ ವ್ಯವಸ್ಥೆಯೊಳಗೆ ಪಕ್ಷವನ್ನು ಕಟ್ಟಿಬೆಳೆಸುವ ಹೊಣೆಗಾರಿಕೆ ಇರಬೇಕು. ಒಂದು ವಂಶದ ನಿಯಂತ್ರಣವು ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ದೊಡ್ಡ ಅಸ್ತ್ರವನ್ನು ಒದಗಿಸಿತ್ತು. ಲೋಕಸಭಾ ಚುನಾವಣೆಯ ನಂತರ ಮತ್ತಷ್ಟು ಹೆಚ್ಚಾಗಿದೆ. ಚುನಾವಣೆಯಲ್ಲಿ ಎರಡನೆ ಬಾರಿಯೂ ಪಕ್ಷವು ಕೇವಲ 52 ಸ್ಥಾನಗಳನ್ನು ಪಡೆದುಕೊಂಡಿದೆ, ಇದು 2014ರ ಚುನಾವಣೆಯಲ್ಲಿ ಪಡೆದಿದ್ದ 44 ಸ್ಥಾನಗಳಿಗಿಂತ ಸ್ವಲ್ಪ ಹೆಚ್ಚಾಗಿದೆ ಅಷ್ಟೇ. ಇದರಿಂದ ಪಕ್ಷವನ್ನು ಗಟ್ಟಿಗೊಳಿಸಲಾಗಿಲ್ಲ, ಜವಾಬ್ದಾರಿಯಿಂದ ಪಕ್ಷವನ್ನು ಮುನ್ನಡೆಸಬೇಕು, ಅದರಲ್ಲಿ ತಾವು ವಿಫಲವಾಗಿದ್ದೇನೆ. ಆಯ್ಕೆ ಪ್ರಕ್ರಿಯೆಯಲ್ಲಿ ನನ್ನ ಭಾಗವಹಿಸುವಿಕೆಯು ವಿಷಯಗಳನ್ನು ಸಂಕೀರ್ಣಗೊಳಿಸುತ್ತದೆ. ಹಾಗಾಗಿ ತಾನು ಆಯ್ಕೆ ಪ್ರಕ್ರಿಯೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದಾರೆ.

ಹಾಗೆ ನೋಡಿದರೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ 1991ರಲ್ಲಿ ಹತ್ಯೆಯಾದ ಸಂದರ್ಭವನ್ನು ಹೊರತು ಪಡಿಸಿದರೆ ಎಲ್ಲಾ ಕಾಲದಲ್ಲಿಯೂ ಗಾಂಧಿ ಕುಟುಂಬವೇ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು ಮುನ್ನಡೆಸಿಕೊಂಡು ಬಂದಿದೆ. ಆದರೆ 1991ರಲ್ಲಿ ಪಕ್ಷದ ನೇತೃತ್ವದ ವಹಿಸಿಕೊಂಡ ಪಿ.ವಿ.ನರಸಿಂಹರಾವ್‍ರವರು ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಪ್ರಧಾನಿ ಪಟ್ಟ ಎರಡನ್ನೂ ನಿರ್ವಹಿಸಿದ್ದರು. ಅವರನ್ನು ಕೆಳಗಿಳಿಸಿದ ನಂತರ ಸೀತಾರಾಂ ಕೇಸರಿಯವರು ಪಕ್ಷವನ್ನು ಸಕ್ರಿಯವಾಗಿ ಮುಂದುವರೆಸಲು ವಿಫರಾದರು. ಆ ಅವಧಿಯಲ್ಲಿ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ಹಾಗಾಗಿ ಹಲವು ನಾಯಕರು ಸೋನಿಯಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬರುವಂತೆ ಮನವೊಲಿಸಿದ್ದರು. ಸೋನಿಯಾ ಗಾಂಧಿಯವರ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್ ಮತ್ತಷ್ಟು ಚೇತರಿಸಿಕೊಂಡಿತ್ತು. 2004ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿತ್ತು. 10 ವರ್ಷಗಳ ಯಶಸ್ವಿ ಆಡಳಿತದ ಕೊನೆಯಲ್ಲಿ ಹಗರಣಗಳು ಮತ್ತು ಮೋದಿ ಅಲೆಯಿಂದ ಕಾಂಗ್ರೆಸ್ ಧೂಳೀಪಟವಾಗಿತ್ತು.

ಇದನ್ನು ಓದಿ:  ರಾಹುಲ್ ಗಾಂಧಿ ಹೋರಾಟವನ್ನು ಮಣ್ಣುಗೂಡಿಸಿದ ರಾಜ್ಯ ಸರ್ಕಾರ! ಕಾರಣ ಜೆಡಿಎಸ್ಸೋ? ಕಾಂಗ್ರೆಸ್ಸೋ?

ಆ ನಂತರ ನೇತೃತ್ವ ವಹಿಸಿಕೊಂಡ ರಾಹುಲ್‍ಗಾಂಧಿ ಕೊನೆ ಕೊನೆಗೆ ಒಂದಷ್ಟು ಭರವಸೆ ಮೂಡಿಸಿದ್ದರಾದರೂ, ಅದು ಚುನಾವಣಾ ಫಲಿತಾಂಶದಲ್ಲಿ ವ್ಯಕ್ತವಾಗಿಲ್ಲ. ಪುರಾತನ ಬಂಡಿಯಲ್ಲಿ ಸ್ಥಾಪಿತರಾಗಿರುವ ಹಳೇ ತಲೆಗಳನ್ನು ಕಟ್ಟಿಕೊಂಡು ಪ್ರಯಾಣ ಕಷ್ಟ ಎನ್ನುವ ಅಭಿಪ್ರಾಯ ರಾಹುಲ್‍ರದ್ದಾಗಿರಬಹುದು ಎನಿಸುತ್ತದೆ.

ಅದೇನೇ ಇರಲಿ, ಗಾಂಧಿ ಕುಟುಂಬದವರು ಸಕ್ರಿಯವಾಗಿದ್ದಾಗಲೇ, ಬೇರೆಯವರು ಪಕ್ಷದ ಚುಕ್ಕಾಣಿ ಹಿಡಿಯುವುದು ಸಾಧ್ಯವೇ ಎಂಬುದನ್ನು ಭವಿಷ್ಯದ ದಿನಗಳು ನಿರ್ಧರಿಸಲಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...