Homeಮುಖಪುಟ'ಸೈಕಲ್‌' ಚಿಹ್ನೆಗೆ ಹಾಕಿದ ಮತ 'ಕಮಲ'ಕ್ಕೆ ಬಿದ್ದಿದೆ: ಇವಿಎಂ ವಂಚನೆ ಬಗ್ಗೆ ಗಂಭೀರ ಆರೋಪ ಮಾಡಿದ...

‘ಸೈಕಲ್‌’ ಚಿಹ್ನೆಗೆ ಹಾಕಿದ ಮತ ‘ಕಮಲ’ಕ್ಕೆ ಬಿದ್ದಿದೆ: ಇವಿಎಂ ವಂಚನೆ ಬಗ್ಗೆ ಗಂಭೀರ ಆರೋಪ ಮಾಡಿದ ಮತದಾರರು

- Advertisement -
- Advertisement -

ಉತ್ತರಪ್ರದೇಶದ ಲಕೀಮ್‌ಪುರ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಇವಿಎಂನಲ್ಲಿ ವಂಚನೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಸೈಕಲ್‌ ಚಿಹ್ನೆಗೆ ಮತ ಹಾಕಿದ್ರೆ ವಿವಿಪ್ಯಾಟ್‌ನಲ್ಲಿ ಕಮಲಕ್ಕೆ ಬಿದ್ದಿದೆ ಎಂದು ಮತದಾರರೋರ್ವರು ಆರೋಪಿಸಿದ್ದಾರೆ.

ಈ ಕುರಿತ ಆರೋಪದ ವಿಡಿಯೋ ವೈರಲ್‌ ಆಗಿದ್ದು, ನಾನು ಇವಿಎಂ ಮೆಷಿನ್‌ನಲ್ಲಿ ಸಮಾಜವಾದಿ ಪಕ್ಷದ ಸೈಕಲ್‌ ಚಿಹ್ನೆಗೆ ಮತವನ್ನು ಹಾಕಿದ್ದೇನೆ, ಆದರೆ ವಿವಿ ಪ್ಯಾಟ್‌ನಲ್ಲಿ ಬಿಜೆಪಿಯ ಕಮಲದ ಚಿಹ್ನೆ ತೋರಿಸಿದೆ.  ಯಾವುದೇ ಬಟನ್‌ ಒತ್ತಿದರೂ ವಿವಿಪ್ಯಾಟ್‌ನಲ್ಲಿ ಕಮಲದ ಚಿಹ್ನೆ ತೋರಿಸುತ್ತಿದೆ ಎಂದು ಮತದಾರರೋರ್ವರು ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ‘ಇವಿಎಂ’ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಇವಿಎಂ ಬಗ್ಗೆ ಜನರಲ್ಲಿ ಭುಗಿಲೆದ್ದಿರುವ ಸಂಶಯದ ಮಧ್ಯೆ ನಡೆದಿರುವ ಈ ಬೆಳವಣಿಗೆ ಇವಿಎಂ ಪಾರದರ್ಶಕತೆ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ವೋಟರ್-ವೆರಿಫೈಡ್ ಪೇಪರ್ ಆಡಿಟ್ ಟ್ರೈಲ್(ವಿವಿಪ್ಯಾಟ್ ) ಮತದಾರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ ಅಥವಾ ಪರಿಶೀಲಿಸಬಹುದಾದ ಪೇಪರ್ ರೆಕಾರ್ಡ್(VPR) ಮತದಾನ ವ್ಯವಸ್ಥೆಯನ್ನು ಬಳಸಿಕೊಂಡು (ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್) ಮತದಾರರಿಗೆ ಪ್ರತಿಕ್ರಿಯೆ ನೀಡುವ ಒಂದು ವಿಧಾನವಾಗಿದೆ. ವಿವಿಪ್ಯಾಟ್ ಗಳನ್ನು ಮತಯಂತ್ರಗಳಿಗೆ ಜೋಡಿಸಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್‌ನಲ್ಲಿ ಮತದಾನ ಮಾಡಿದ ತಕ್ಷಣ ಯಾವ ಅಭ್ಯರ್ಥಿಗೆ ಮತ್ತು ಪಕ್ಷಕ್ಕೆ ಮತ ಹಾಕಿದ್ದೇವೆ ಎನ್ನುವುದನ್ನು ತೋರಿಸುವ ಪ್ರಿಂಟ್ ಚೀಟಿಯೊಂದು ವಿವಿಪ್ಯಾಟ್ ಕಿಂಡಿಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಅದರಲ್ಲೇ ಸಂಗ್ರಹವಾಗುತ್ತದೆ.

ಮತ ಎಣಿಕೆ ವೇಳೆ ಮತಯಂತ್ರದಲ್ಲಿ ದೋಷ, ಗೊಂದಲ ಕಂಡು ಬಂದಲ್ಲಿ ವಿವಿಪ್ಯಾಟ್ ಬಾಕ್ಸ್ ನಲ್ಲಿ ದಾಖಲಾದ ಮತಗಳನ್ನು(ಪ್ರಿಂಟ್ )ಎಣಿಕೆ ಮಾಡಬಹುದಾಗಿದೆ. ಚುನಾವಣಾ ವಂಚನೆ ಅಥವಾ ಅಸಮರ್ಪಕ ಕಾರ್ಯಾಚರಣೆಯನ್ನು ಪತ್ತೆಹಚ್ಚಲು ಮತ್ತು ಸಂಗ್ರಹಿಸಿದ ಎಲೆಕ್ಟ್ರಾನಿಕ್ ಫಲಿತಾಂಶಗಳನ್ನು ಆಡಿಟ್ ಮಾಡಲು, ಮತದಾರರು ತಮ್ಮ ಮತವನ್ನು ಸರಿಯಾಗಿ ಚಲಾಯಿಸಿರುವುದನ್ನು ಪರಿಶೀಲಿಸಲು ಮತದಾನ ಮಾಡುವ ಯಂತ್ರಗಳಿಗೆ ಸ್ವತಂತ್ರ ಪರಿಶೀಲನೆ ವ್ಯವಸ್ಥೆಯಾಗಿ ವಿವಿಪ್ಯಾಟ್ ಬಳಸಲಾಗುತ್ತದೆ. ಇದು ಮತಗಳನ್ನು ಬದಲಾಯಿಸುವ ಅಥವಾ ನಾಶಮಾಡುವ ಹೆಚ್ಚುವರಿ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ.

ಇದನ್ನು ಓದಿ: ಮುಸ್ಲಿಂ ಜನಸಂಖ್ಯೆ ತೋರಿಸಲು ಪಾಕಿಸ್ತಾನದ ಧ್ವಜ ಬಳಕೆ: ಅಜಿತ್ ಹನುಮಕ್ಕನವರ್ ವಿರುದ್ಧ ಎಫ್‌ಐಆರ್‌

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...