Homeಮುಖಪುಟಡ್ರಗ್ಸ್ ಖರೀದಿಸಲು ಇಬ್ಬರು ಮಕ್ಕಳ ಮಾರಾಟ: ದಂಪತಿ ಸೇರಿ ಮೂವರ ಬಂಧನ

ಡ್ರಗ್ಸ್ ಖರೀದಿಸಲು ಇಬ್ಬರು ಮಕ್ಕಳ ಮಾರಾಟ: ದಂಪತಿ ಸೇರಿ ಮೂವರ ಬಂಧನ

- Advertisement -
- Advertisement -

ಡ್ರಗ್ಸ್ ಖರೀದಿಸಲು ಹಣ ಹೊಂದಿಸುವ ಸಲುವಾಗಿ ದಂಪತಿ ತಮ್ಮ ಎರಡು ವರ್ಷದ ಗಂಡು ಮಗು ಮತ್ತು ನವಜಾತ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಆಘಾತಕಾರಿ ಘಟನೆ ಮುಂಬೈನ ಅಂಧೇರಿಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಮಕ್ಕಳ ಪೋಷಕರು ಸೇರಿದಂತೆ ಮೂವರನ್ನು ಡಿ.ಎನ್‌ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ಶಬೀರ್ ಸಂಶೀರ್ ಖಾನ್, ಸಾನಿಯಾ ಶಬೀರ್ ಖಾನ್ ಮತ್ತು ಶಕೀಲ್ ಮಕ್ರಾಣಿ ಎಂದು ಗುರುತಿಸಲಾಗಿದೆ.

ಆರೋಪಿಗಳಾದ ಶಬೀರ್ ಸಂಶೀರ್ ಖಾನ್ ಮತ್ತು ಸಾನಿಯಾ ಖಾನ್ ದಂಪತಿ ಶಬೀರ್‌ನ ಸಹೋದರ ನನಂದ್‌ನ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರು ಮಾದಕ ವ್ಯಸನಿಗಳಾಗಿದ್ದರಿಂದ ನಿತ್ಯ ಜಗಳವಾಡುತ್ತಿದ್ದರು. ಈ ಹಿನ್ನೆಲೆ ನನಂದ್ ದಂಪತಿಯನ್ನು ತನ್ನ ಮನೆಯಿಂದ ಹೊರ ಹಾಕಿದ್ದ. ಬಳಿಕ ಇಬ್ಬರು ಸಾನಿಯಾ ಮನೆಗೆ ಹೋಗಿ ವಾಸವಾಗಿದ್ದರು. ನನಂದ್ ಪ್ರಕಾರ ದಂಪತಿಗೆ ನಾಲ್ಕು ವರ್ಷದ ಸುಬಾನ್, ಎರಡು ವರ್ಷದ ಹುಸೇನ್ ಮತ್ತು ನವಜಾತ ಶಿಶು ಸೇರಿದಂತೆ ಮೂವರು ಮಕ್ಕಳಿದ್ದರು.

ನನಂದ್ ಮನೆಯಿಂದ ಹೊರ ಹೋದ ದಂಪತಿ ಇತ್ತೀಚೆಗೆ ವಾಪಸ್‌ ಬಂದಿದ್ದರು. ಈ ವೇಳೆ ಎರಡು ವರ್ಷದ ಮಗು ಹುಸೇನ್ ಮತ್ತು ನವಜಾತ ಶಿಶು ಅವರ ಜೊತೆಗಿರಲಿಲ್ಲ. ನನಂದ್ ಮಕ್ಕಳ ಕುರಿತು ವಿಚಾರಿಸಿದಾಗ ಡ್ರಗ್ಸ್‌ಗೆ ಹಣ ಹೊಂದಿಸಲು ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಎರಡು ವರ್ಷದ ಮಗ ಹುಸೇನ್‌ನನ್ನು ಅಂಧೇರಿಯ ಉಷಾ ರಾಥೋಡ್ ಎಂಬಾಕೆಯ ಸಹಾಯದಿಂದ ಅಪರಿಚಿತ ವ್ಯಕ್ತಿಗೆ 60 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ನವಜಾತ ಶಿಶುವನ್ನು ಡಿ.ಎನ್‌ ನಗರದ ಡೊಂಗರ್‌ನ ನಿವಾಸಿ ಶಕೀಲ್ ಮಕ್ರಾಣಿ ಎಂಬಾತನಿಗೆ 14 ಸಾವಿರಕ್ಕೆ ಮಾರಾಟ ಮಾಡಿರುವುದು ಗೊತ್ತಾಗಿದೆ.

ಈ ಸಂಬಂಧ ನನಂದ್ ತನ್ನ ಸಹೋದರ ಶಬೀರ್, ಆತನ ಪತ್ನಿ ಸಾನಿಯಾ, ಮಗು ಮಾರಾಟಕ್ಕೆ ಸಹಾಯ ಮಾಡಿದ ಉಷಾ ರಾಥೋಡ್, ಹೆಣ್ಣು ಮಗುವನ್ನು ಖರೀದಿಸಿದ ಶಕೀಲ್ ಮಕ್ರಾಣಿ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಕೊಂಡ ಪೊಲೀಸರು ಉಷಾ ರಾಥೋಡ್ ಬಿಟ್ಟು ಉಳಿದ ಮೂವರನ್ನು ಬಂಧಿಸಿದ್ದಾರೆ. ಉಷಾ ರಾಥೋಡ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ರಾಜ್ ತಿಲಕ್ ರೌಷನ್ ತಿಳಿಸಿದ್ದಾರೆ.

ಇದನ್ನೂ ಓದಿ: ಉದಯನಿಧಿ ಸನಾತನ ಧರ್ಮ ಹೇಳಿಕೆ: ತೀರ್ಪು ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...