Homeಚಳವಳಿರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ಒತ್ತಾಯ: ದೆಹಲಿ-ಜೈಪುರ ಹೆದ್ದಾರಿ ತಡೆದ ರೈತರು

ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ಒತ್ತಾಯ: ದೆಹಲಿ-ಜೈಪುರ ಹೆದ್ದಾರಿ ತಡೆದ ರೈತರು

ದೆಹಲಿ ಮತ್ತು ಜೈಪುರ ಹೆದ್ದಾರಿಯನ್ನು ತಡೆಯಲು ಬೆಳಿಗ್ಗೆಯಿಂದಲೇ ಸಿದ್ಧತೆ ಮಾಡಿಕೊಂಡಿರುವ ರೈತರನ್ನು ತಡೆಯಲು ದೆಹಲಿ ಮತ್ತು ಹರಿಯಾಣ ಪೊಲೀಸರು ಸಜ್ಜಾಗಿದ್ದರು.

- Advertisement -
- Advertisement -

ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನಗಳನ್ನು ವಿರೋಧಿಸಿ ಕಳೆದ 18 ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಇಂದು ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ಕೇಂದ್ರದೊಟ್ಟಿಗೆ ಹಲವು ಸುತ್ತಿನ ಸಂಧಾನ ಸಭೆಗಳು ನಡೆದಿದ್ದರೂ ಸಹ ಪಟ್ಟು ಬಿಡದ ರೈತರು ‘ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

ದೆಹಲಿ ಮತ್ತು ಜೈಪುರ ಹೆದ್ದಾರಿಯನ್ನು ತಡೆಯಲು ಬೆಳಿಗ್ಗೆಯಿಂದಲೇ ಸಿದ್ಧತೆ ಮಾಡಿಕೊಂಡಿರುವ ರೈತರನ್ನು ತಡೆಯಲು ದೆಹಲಿ ಮತ್ತು ಹರಿಯಾಣ ಪೊಲೀಸರು ಸಜ್ಜಾಗಿದ್ದರು.

ಇದನ್ನೂ ಓದಿ: 2 ನಿಮಿಷದ ಕಿರುಚಿತ್ರ ದೂಸ್ರಾ: CAA-NRC-NPR ವಿರುದ್ಧ ಸಂದೇಶ ಸಾರಿದ ಇರ್ಫಾನ್-ಪಾ.ರಂಜಿತ್ ಜೋಡಿ

ಪ್ರತಿಭಟನೆಯನ್ನು ಕೊನೆಗೊಳಿಸಬೇಕೆಂದು ಕೇಂದ್ರ ಸರ್ಕಾರವು ರೈತ ಸಂಘಟನೆಗಳೊಂದಿಗೆ ಹಲವು ಸುತ್ತಿನ ಮಾತಕತೆ ಮತ್ತು ಸಂಧಾನ ಸಭೆಗಳನ್ನು ನಡೆಸಿದರೂ ಸಹ ಅವುಗಳೆಲ್ಲಾ ವಿಫಲಾಗಿವೆ.

ಕೃಷಿ ಕಾಯ್ದೆಗಳ ಬಗ್ಗೆ ಅರಿವು ಮೂಡಸಲೆಂದು 700 ಜಿಲ್ಲೆಗಳಲ್ಲಿ 100 ಪ್ರತಿಕಾಗೋಷ್ಠಿಗಳು ಮತ್ತು 700 ರೈತ ಸಭೆಗಳನ್ನು ಆಯೋಜಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿವಾದಾತ್ಮಕ ಕಾನೂನುಗಳ ಕುರಿತು ಜನರಲ್ಲಿನ ಆತಂಕ ಮತ್ತು ಕಳವಳಗಳನ್ನು ದೂರ ಮಾಡುಲು ಇದನ್ನು ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನಕಲಿ ಟಿಆರ್‌ಪಿ ರೇಟಿಂಗ್ ಹಗರಣ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಂಚಂದಾನಿ ಬಂಧನ

ಆದರೆ ರೈತರು ಇದಾವುದಕ್ಕೂ ಸೊಪ್ಪು ಹಾಕದೇ ತಮ್ಮ ಗುರಿಯನ್ನು ಮುಟ್ಟಿಯೇ ತೀರುತ್ತೇವೆ ಎಂದು ಬೀದಿಗಿಳಿದಿದ್ದಾರೆ.

ಇತ್ತೀಚೆಗೆ ಅಮಿತ್ ಶಾ ರೈತ ಮುಖಂಡರನ್ನು ಮಾತುಕತೆಗೆ ಕರೆದು, ಕಾನೂನುಗಳಲ್ಲಿ ಕೆಲವು ತಿದ್ದುಪಡಿಗಳನ್ನು ತರುವುದಾಗಿ ಪ್ರಸ್ತಾವವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದರು. ಆದರೆ ರೈತರು ಇದನ್ನೂ ಒಪ್ಪಿರಲಿಲ್ಲ.

ಇದನ್ನೂ ಓದಿ: ಡಾ. ಕಫೀಲ್ ಖಾನ್ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ UP…

ದೆಹಲಿಯ ಗಡಿಗಳಲ್ಲಿ ದಿಟ್ಟ ಹೋರಾಟಾ ನಡೆಸುತ್ತಿರುವ ರೈತರು ಇದೀಗ ಶಾಂತಿಯುತ ಉಪವಾಸ ಸತ್ಯಾಗ್ರಹದ ಮಾರ್ಗ ತುಳಿದಿದ್ದಾರೆ.

ನಿನ್ನೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಯುಕ್ತ ಕಿಸಾನ್ ಆಂದೋಲನ್‌ನ ಮುಖಂಡ ಕಮಲ್‌ ಪ್ರೀತ್‌ ಸಿಂಗ್ ಪನ್ನು‌, “ಸರ್ಕಾರವು 3 ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ನಾವು ಸರ್ಕಾರ ಸೂಚಿಸುತ್ತಿರುವ ತಿದ್ದುಪಡಿಗಳ ಪರವಿಲ್ಲ. ಕೇಂದ್ರ ಸರ್ಕಾರವು ನಮ್ಮ ಆಂದೋಲನವನ್ನು ಹಿಂಸಾತ್ಮಕವಾಗಿ ತಡೆಯಲು ಬಯಸಿದೆ. ಆದರೆ ನಾವು ಅದನ್ನು ಶಾಂತಿಯುತವಾಗಿ ಮುಂದುವರಿಸುತ್ತೇವೆ” ಎಂದಿದ್ದಾರೆ.


ಇದನ್ನೂ ಓದಿ: ಡಿಸೆಂಬರ್‌ 15 ರಂದು ಮತ್ತೇ ವಿಧಾನ ಪರಿಷತ್‌ ಅಧಿವೇಶನ: ’ಗೋಹತ್ಯೆ’ ಮಸೂದೆ ಅಂಗೀಕಾರಕ್ಕೆ ತಯಾರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...