Homeಕರ್ನಾಟಕಪದ್ಮಶ್ರೀ ಪುರಸ್ಕೃತರಾದ ಬನ್ನಂಜೆ ಗೋವಿಂದಾಚಾರ್ಯ ನಿಧನ

ಪದ್ಮಶ್ರೀ ಪುರಸ್ಕೃತರಾದ ಬನ್ನಂಜೆ ಗೋವಿಂದಾಚಾರ್ಯ ನಿಧನ

- Advertisement -
- Advertisement -

ಪದ್ಮಶ್ರೀ ಪುರಸ್ಕೃತರಾದ ಬನ್ನಂಜೆ ಗೋವಿಂದಾಚಾರ್ಯರು (85) ಇಂದು ಉಡುಪಿಯ ಅಂಬಲಪಾಡಿಯ ತನ್ನ ಸ್ವಗೃಹದಲ್ಲಿ ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

“ವೇದ, ಪುರಾಣಗಳ ಕುರಿತ ಇವರ ಪ್ರವಚನಗಳು, ಕೃತಿಗಳು ಹಾಗೂ ಅಸಂಖ್ಯ ಬರಹಗಳು ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತಿದ್ದವು. ಅವರ ನಿಧನದಿಂದ ಸಾರಸ್ವತ ಲೋಕದ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಹಾಗೂ ಅಸಂಖ್ಯ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ” ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದ ಅರ್ಧದಷ್ಟು ಜನ ಹಸಿವಿನಲ್ಲಿರುವಾಗ ಹೊಸ ಸಂಸತ್ತು ಬೇಕೆ? ಮೋದಿಗೆ ಕಮಲ್ ಹಾಸನ್ ಪ್ರಶ್ನೆ

ಇವರು ಪ್ರವಚನಕಾರ, ಮಧ್ವ ಸಿದ್ಧಾಂತದ ಪ್ರತಿಪಾದಕ, ಪತ್ರಕರ್ತರಾಗಿದ್ದರು. ನಟ ಡಾ.ವಿಷ್ಣುವರ್ಧನ್ ಗೆ ಆಧ್ಯಾತ್ಮಿಕ ಗುರು ಆಗಿದ್ದ ಇವರು, ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದರು.

ಬನ್ನಂಜೆ ಗೋವಿಂದಾಚಾರ್ಯ ಅವರು ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ ಚಿತ್ರಗಳ ಸಂಭಾಷಣೆ ಬರೆದಿದ್ದರು. ಹಲವು ಚಾರಿತ್ರಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ಇವರು, ಉಪನಿಷತ್ತಿನ ಅಧ್ಯಾಯಗಳಿಗೆ ಟಿಪ್ಪಣಿ ಬರೆದಿದ್ದರು.


ಇದನ್ನೂ ಓದಿ: ಪ್ರತಿವರ್ಷ ಸಾವಿತ್ರಿ ಬಾಯಿ ಫುಲೆ ಉತ್ಸವ: ಮಹಾರಾಷ್ಟ್ರ ಸರ್ಕಾರ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕನ್ನಡ ಮತ್ತು ಸಂಸ್ಕೃತ ಭಾಷಾ ವಿಶಾರದರು ವೇದೋಪನಿಷತ್ತುಗಳು ಮಹಾಕಾವ್ಯಗಳು ಭಾಗವತ ಪುರಾಣಗಳು ಅಷ್ಟಾದಶ ಪುರಾಣಗಳು ಹತ್ತು ಹಲವು ಬಗೆಯ ಸಾಹಿತ್ಯ ಪ್ರಕಾರಗಳು ವಿಮರ್ಶೆ-ಪರಾಮರ್ಶೆ ಸಂಶೋಧನೆಯ ಸಂವಾದಗಳು ಸಂಭಾಷಣೆಗಳು ಚರ್ಚೆಗಳು ಉಪನ್ಯಾಸಗಳು ಪ್ರವಚನಗಳು ಪರಸ್ಪರ ಮಾತುಗಳು ಕಥನಕವನ ಅವಳಿಗಳು ಎಲ್ಲದರಲ್ಲೂ ಸಿದ್ಧಹಸ್ತರಾಗಿದ್ದರು ನಮ್ಮ ಅಪ್ರತಿಮ ಪ್ರತಿಭಾ ಸಾಮರ್ಥ್ಯವುಳ್ಳ ಪದ್ಮಶ್ರೀ ಪ್ರಶಸ್ತಿ ವಿಜೇತರು ಅಮ್ಮ ಬನ್ನಂಜೆ ಗೋವಿಂದಾಚಾರ್ಯರು ಆಡುಮುಟ್ಟದ ಸೊಪ್ಪಿಲ್ಲ ಆಚಾರ್ಯರಿಗೆ ತಿಳಿಯದ ವಿಚಾರಗಳೆಲ್ಲ ಸಕಲ ಶಾಸ್ತ್ರ ಪರಿಣತರು ಸಕಲ ವಿದ್ಯಾ ಪಾರಂಗತರು ಆಗಿದ್ದು ನಮ್ಮ ಕನ್ನಡದ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯವಾದ ಆಸ್ತಿ ಯಾಗಿದ್ದರು ಇಂತಹ ಸರ್ವಜ್ಞರು ಸರ್ವತೋಮುಖ ಪ್ರಜ್ಞಾವಂತರು ಇಚ್ಛಾಶಕ್ತಿಯು ಉಳ್ಳವರು ದೃಢವಿಶ್ವಾಸ ಉಳ್ಳವರು ಲೋಕಮಾನ್ಯರು ಆಗಿದ್ದರು ಇವರು ನಮ್ಮೆಲ್ಲರನ್ನು ಆಗಲಿ ಕನ್ನಡ ಸಂಸ್ಕೃತ ಭಾಷಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಅವರ ಆತ್ಮಕ್ಕೆ ಭಗವಾನ್ ಭಗವತಿಯರು ಸದ್ಗತಿಯನ್ನು ಸರ್ವ ಶಾಂತಿಯನ್ನು ನೀಡಲೆಂದು ನಮ್ಮ ನಮ್ಮೆಲ್ಲರ ಪ್ರಾರ್ಥನೆ.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...