Homeಮುಖಪುಟಜನಪರ ಪತ್ರಕರ್ತ ಪಿ.ಕೆ ಮಲ್ಲನಗೌಡರ್ ಇನ್ನಿಲ್ಲ

ಜನಪರ ಪತ್ರಕರ್ತ ಪಿ.ಕೆ ಮಲ್ಲನಗೌಡರ್ ಇನ್ನಿಲ್ಲ

ಚಿಕ್ಕಂದಿನಿಂದಲೇ ಲಂಕೇಶ್ ಪತ್ರಿಕೆಯ ಓದುಗರಾದ ಅವರು 8-9ನೇ ತರಗತಿಯಲ್ಲಿದ್ದಾಗಲೇ ಓದುಗರ ಪತ್ರಗಳನ್ನು ಬರೆಯುತ್ತಿದ್ದರು.

- Advertisement -
- Advertisement -

ಜನಪರ ಪತ್ರಕರ್ತ ಪಿ.ಕೆ ಮಲ್ಲನಗೌಡರ್‌ರವರು ಶನಿವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಅಪಘಾತದಲ್ಲಿ ಬೆಂಗಳೂರಿನಲ್ಲಿ ಮಹಡಿಯಿಂದ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿ 9.45ರ ಸಮಯದಲ್ಲಿ ಶೇಷಾದ್ರಿಪುರಂನಲ್ಲಿನ ಕಟ್ಟಡವೊಂದರಿಂದ ಬಿದ್ದ ನಂತರ ಅವರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಗದಗದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮೂಲತಃ ಗದಗಿನವರಾದ ಮಲ್ಲನಗೌಡರ್ ಲಂಕೇಶ್ ಪತ್ರಿಕೆ, ವಿಕ್ರಾಂತ ಕರ್ನಾಟಕ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್ ಪತ್ರಿಕೆ, ನಾನುಗೌರಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ಸದ್ಯ ಪ್ರತಿಧ್ವನಿ ವೆಬ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಚಿಕ್ಕಂದಿನಿಂದಲೇ ಲಂಕೇಶ್ ಪತ್ರಿಕೆಯ ಓದುಗರಾದ ಅವರು 8-9ನೇ ತರಗತಿಯಲ್ಲಿದ್ದಾಗಲೇ ಓದುಗರ ಪತ್ರಗಳನ್ನು ಬರೆಯುತ್ತಿದ್ದರು. ಅವರ ಹಲವು ಪತ್ರಗಳು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಬಹಳ ಪ್ರತಿಭಾವಂತನಾಗಿದ್ದ ಎಂದು ಅವರ ಸಹೋದರರು ಮಲ್ಲನಗೌಡರ್ ಅವರನ್ನು ನೆನೆಸಿಕೊಳ್ಳುತ್ತಾರೆ.

ಮಲ್ಲನಗೌಡರ್ ಅವರು ಬಹಳಷ್ಟು ವಿಷಯಗಳಲ್ಲಿ ಪರಿಣಿತಿ ಹೊಂದಿದ್ದರು. ಹತ್ತಾರು ವಿಷಯಗಳ ಕುರಿತು ಬರೆಯುತ್ತಿದ್ದರು. ಆಳುವ ಸರ್ಕಾರದ ವಿರುದ್ಧ ಮತ್ತು ಶೋಷಿತರ ಪರವಾಗಿ ಅವರ ವರದಿಗಳಿರುತ್ತಿದ್ದವು.

ಇಬ್ಬರು ಮಕ್ಕಳು ಮತ್ತು ಪತ್ನಿ ಸೇರಿದಂತೆ ಕರ್ನಾಟಕದ ನೂರಾರು ಹೋರಾಟಗಾರರು, ಪತ್ರಕರ್ತ ಸಹೋದ್ಯೋಗಿಗಳನ್ನು ಅವರು ಅಗಲಿದ್ದಾರೆ.


ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಅನುಷ್ಠಾನ: ಶ್ರೀನಿವಾಸ ಪೂಜಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...