HomeUncategorizedಪೌರತ್ವ ಕಾಯ್ದೆಯ ವಿರುದ್ಧ ನಾಗಾಲ್ಯಾಂಡ್‌ನಲ್ಲಿಯೂ ಭುಗಿಲೆದ್ದ ಆಕ್ರೋಶ.. ಬಂದ್‌ಗೆ ಕರೆ

ಪೌರತ್ವ ಕಾಯ್ದೆಯ ವಿರುದ್ಧ ನಾಗಾಲ್ಯಾಂಡ್‌ನಲ್ಲಿಯೂ ಭುಗಿಲೆದ್ದ ಆಕ್ರೋಶ.. ಬಂದ್‌ಗೆ ಕರೆ

- Advertisement -
- Advertisement -

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ನಾಗಾಲ್ಯಾಂಡ್‌ನಲ್ಲೂ ಪ್ರತಿರೋಧ ವ್ಯಕ್ತವಾಗಿದೆ. ನಾಗ ವಿದ್ಯಾರ್ಥಿ ಫೆಡರೇಷನ್ ಆರು ಗಂಟೆಗಳ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಬಂದ್ ಸಂಪೂರ್ಣ ಯಶಸ್ವಿಯತ್ತ ಸಾಗುತ್ತಿದೆ.

ಬಂದ್ ಹಿನ್ನೆಲೆಯಲ್ಲಿ ವಾಹನಗಳು ರಸ್ತೆಗೆ ಇಳಿದಿಲ್ಲ. ನಾಗಾಲ್ಯಾಂಡ್ ರಾಜಧಾನಿ ಕೋಹಿಮಾದಲ್ಲಿ ರಸ್ತೆಗಳಲ್ಲಿ ವಾಹನಗಳು ಮತ್ತು ಜನರ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ. ಮಾರುಕಟ್ಟೆ ಸಂಪೂರ್ಣ ಸ್ಥಬ್ದಗೊಂಡಿದೆ. ಬಂದ್ ಬಿಸಿಯಿಂದ ಜನರು ಮನೆಯಲ್ಲೇ ಕಾಲದೂಡಬೇಕಾಗಿದೆ.

ಕೋಹಿಮಾದಲ್ಲಿ ವಾಣಿಜ್ಯ ಮಳಿಗೆಗಳು ತೆರೆದಿಲ್ಲ. ನಾಗಾ ಸ್ಟೂಡೆಂಟ್ ಫೆಡರೇಷ್ ಉಪಾಧ್ಯಕ್ಷ ದೇವಿ ಯನೋ ಪೌರತ್ವ ಕಾಯ್ದೆಯನ್ನು ತೀವ್ರ ವಿರೋಧಿಸಿದ್ದಾರೆ. ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಸ್ಥಳೀಯ ಜನರ ಭಾವನೆಗಳನ್ನು ತಲೆಕೆಳಗು ಮಾಡಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಈಶಾನ್ಯ ಜನರಿಗೆ ಅನ್ಯಾಯವೆಸಗುತ್ತಿದೆ. ಪೌರತ್ವ ಕಾಯ್ದೆ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಪೌರತ್ವ ಕಾಯ್ದೆಗೆ ಎಂದಿಗೂ ಬೆಂಬಲ ನೀಡುವುದಿಲ್ಲ. ಪೌರತ್ವ ಕಾಯ್ದೆ ಈಶಾನ್ಯ ರಾಜ್ಯಗಳನ್ನು ವಿಭಜಿಸುವ ಕೇಂದ್ರ ಸರ್ಕಾರದ ದೊಡ್ಡ ಅಸ್ತ್ರವಾಗಿದೆ. ಇದಕ್ಕೆ ಮಣಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಮತ್ತೊಂದು ಕಡೆ ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾಯ್ದೆ ವಿರೋಧಿಸಿ ಪರೀಕ್ಷೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ನಿನ್ನೆ ಪೊಲೀಸರು ಕಾಲೇಜು ಆವರಣಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಆಶ್ರುವಾಯು ಸಿಡಿಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿದ್ದು ಈ ತೀರ್ಮಾನಕ್ಕೆ ಕಾರಣವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...