Homeಮುಖಪುಟರಾಹುಲ್ ಅನರ್ಹತೆ ವಿರುದ್ಧ ಪ್ರತಿಭಟನೆ: ಕಾಗದ ಹರಿದು ಸಭಾಧ್ಯಕ್ಷರತ್ತ ಎಸೆದ ಸಂಸದರು

ರಾಹುಲ್ ಅನರ್ಹತೆ ವಿರುದ್ಧ ಪ್ರತಿಭಟನೆ: ಕಾಗದ ಹರಿದು ಸಭಾಧ್ಯಕ್ಷರತ್ತ ಎಸೆದ ಸಂಸದರು

- Advertisement -
- Advertisement -

ರಾಹುಲ್ ಗಾಂಧಿ ಅವರನ್ನು ಸದನದಿಂದ ಅಕ್ರಮವಾಗಿ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಸೋಮವಾರ ಸಂಸತ್ತಿನಲ್ಲಿ ಕಪ್ಪು ಬಟ್ಟೆ ಧರಿಸಿಕೊಂಡು ಬಂದಿದ್ದರು. ಕಲಾಪ ಆರಂಭವಾದ ಕೂಡಲೇ ಪ್ರತಿಪಕ್ಷಗಳು, ಅದಾನಿ ಹಾಗೂ ರಾಹುಲ್‌ ಗಾಂಧಿ ಅವರ ಅನರ್ಹತೆ ಸಂಬಂಧ ಘೋಷಣೆ ಕೂಗಿದರು ಇದರಿಂದ ಸ್ಪೀಕರ್ ಓಂ ಬಿರ್ಲಾ ಅವರು ಮೊದಲ ಕೆಲವು ಸೆಕೆಂಡುಗಳಲ್ಲಿ ಸದನವನ್ನು ಮುಂದೂಡಿದರು.

ಸದನ ಸಭೆ ಸೇರುತ್ತಿದ್ದಂತೆಯೇ ಕಾಂಗ್ರೆಸ್ ಸಂಸದರಾದ ಟಿಎನ್ ಪ್ರತಾಪನ್ ಹಿಬಿ ಈಡನ್, ಜೋತಿಮಣಿ ಎಸ್ ಮತ್ತು ರಮ್ಯಾ ಹರಿದಾಸ್ ಅವರು ಸದನದ ಬಾವಿಗೆ ಧಾವಿಸಿ ತಮ್ಮ ಕೈಯಲ್ಲಿದ್ದ ಕಾಗದಗಳನ್ನು ಹರಿದು ಸಭಾಧ್ಯಕ್ಷರತ್ತ ಎಸೆದರು.

ಕೆಲ ಸಂಸದರು ಸ್ಪೀಕರ್‌ಗೆ ಕಪ್ಪು ಬಟ್ಟೆ ಬೀಸಿದರು. ಆಗ ಓಂ ಬಿರ್ಲಾ ಅವರು ‘ನಾನು ಘನತೆಯಿಂದ ಸಂಸತ್‌ ಕಲಾಪವನ್ನು ನಡೆಸಬೇಕು‘ ಎಂದು ಹೇಳಿ, ಲೋಸಕಭೆ ಕಲಾಪವನ್ನು ಸಂಜೆ 4 ಗಂಟೆಗೆ ಮುಂದೂಡಿದರು.

ಇದನ್ನೂ ಓದಿ: ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸಭೆಯಲ್ಲಿ ಟಿಎಂಸಿ ನಾಯಕರು ಪ್ರತ್ಯಕ್ಷ; ಕೇಂದ್ರದ ವಿರುದ್ಧ “ಕಪ್ಪು” ಬಟ್ಟೆ ಧರಿಸಿ ಪ್ರತಿಭಟನೆ

ಕಾಂಗ್ರೆಸ್ ಸಂಸದರು ಪ್ರತಿಭಟನೆ ಮುಂದುವರಿಸಿ ಹರಿದ ಕಾಗದಗಳನ್ನು ಸಭಾಧ್ಯಕ್ಷರ ಪೀಠದ ಮೇಲೆ ಎಸೆದರು. ಸ್ಪೀಕರ್ ಕುರ್ಚಿಯ ಮೇಲೆ ಬ್ಯಾನರ್‌ವೊಂದನ್ನು ಎಸೆಯಲಾಯಿತು.

ಕಾಂಗ್ರೆಸ್ ಸದಸ್ಯರೊಂದಿಗೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಎಡಪಕ್ಷಗಳು ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸದಸ್ಯರೂ ಕಪ್ಪು ಬಟ್ಟೆ ಧರಿಸಿದ್ದರು. ತೃಣಮೂಲ ಕಾಂಗ್ರೆಸ್ ಸಂಸದರು ಕಪ್ಪು ಪಟ್ಟಿಯಿಂದ ಬಾಯಿ ಮುಚ್ಚಿಕೊಂಡರು. ಈ ವೇಳೆ ಸಂಸದರು ”ಜಾಗೋ ಇಡಿ” ಮತ್ತು ”ಇಡಿ ಮೋದಾನಿ ಭಾಯಿ ಭಾಯಿ” ಎಂದು ಬಬರೆದಿರುವ ಫಲಕಗಳನ್ನು ಹಿಡಿದುಕೊಂಡಿದ್ದರು.

ಸದನವನ್ನು ಮುಂದೂಡಿದ ನಂತರ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿದ್ದ ಮಹಾತ್ಮಗಾಂಧಿ ಪ್ರತಿಮೆ ಎದುರು ಪ್ರತಿಪಕ್ಷಗಳ ಸದಸ್ಯರು ಕೆಲಕಾಲ ಧರಣಿ ನಡೆಸಿದರು. ನಂತರ ಪ್ರತಿಪಕ್ಷಗಳು ವಿಜಯ್ ಚೌಕ್‌ಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...