Homeಮುಖಪುಟಆಧಾರ್-ಪಾನ್ ಕಾರ್ಡ್ ಜೋಡಣೆಗೆ 1000 ರೂ ದಂಡ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಆಧಾರ್-ಪಾನ್ ಕಾರ್ಡ್ ಜೋಡಣೆಗೆ 1000 ರೂ ದಂಡ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಲಿಂಕ್ ಮಾಡಿಸಲು 2024ರ ಮಾರ್ಚ್‌ವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕೆಲವರು ಪೋಸ್ಟ್ ಹಾಕುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.

- Advertisement -
- Advertisement -

ಆಧಾರ್-ಪಾನ್ ಕಾರ್ಡ್ ಜೋಡಣೆಗೆ 1000 ರೂ ದಂಡ ವಿಧಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಾರ್ಚ್ 31ರ ನಂತರದ ಜೋಡಣೆಗೆ 10,000 ರೂ ದಂಡ ವಿಧಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಲಾಗಿದೆ. ಒಂದು ವೇಲೆ ಜೋಡಣೆ ಮಾಡದಿದ್ದರೆ ಪಾನ್ ನಿಷ್ಕ್ರಿಯಗೊಳಿಸಲಾಗುವುದು ಎನ್ನಲಾಗಿದೆ.

“ನನ್ನ ಹಳ್ಳಿಯಲ್ಲಿ ಕೂಲಿ ಮಾಡುತ್ತಿರುವ ರೈತರು ಸಹ ಮಾರ್ಚ್ 31ರ ಒಳಗೆ ಆಧಾರ್ ಗೆ -ಪಾನ್ ಕಾರ್ಡ್ ಲಿಂಕ್ ಮಾಡಬೇಕಂತೆ. ಅದು ಸಾವಿರ ರೂಪಾಯಿ ದಂಡಶುಲ್ಕದೊಂದಿಗೆ. ಇಲ್ಲವಾದಲ್ಲಿ ಬರುವ ತಿಂಗಳಿಂದ‌ ಹತ್ತು ಸಾವಿರ ದಂಡ ಶುಲ್ಕವಂತೆ! ಅಚ್ಚೇದಿನ್ ಎಂದರೆ ಇದೇ ನೋಡಿ. ಬ್ಯಾಂಕ್ ಸಹವಾಸವೇ ಬೇಡವೆಂದು ದೂರವಿದ್ದ ಜನರಿಗೆ ಜನ್ ಧನ್ ಎಂದು ಹೇಳಿ ಎಲ್ಲರಿಗೂ ಖಾತೆ ತೆರೆಸಿದರು.‌ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದವರಿಗೆ ಹೊಗೆ ರಹಿತ ಗ್ರಾಮ ಎಂದು ಬೊಗಳೆ ಹೊಡೆದು ಗ್ಯಾಸ್ ಬಳಕೆಯ ರುಚಿ ತೋರಿಸೊದವರೇ ಇಂದು ಅದರ ಬೆಲೆ ಏರಿಕೆಯ ರುಚಿಯನ್ನು ತೋರಿಸುತ್ತಿದ್ದರೆ. ಬಡವರನ್ನು ಈ ರೀತಿ ಹಗಲು ದರೋಡೆ ಮಾಡುವ ಸರ್ಕಾರ ನಮಗೆ ಬೇಕಾ? ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರೆ, ಕೋವಿಡ್ ನಿಂದ, ಬೆಲೆ ಏರಿಕೆಯಿಂದ‌ ಭಾರತೀಯರು ಆರ್ಥಿಕವಾಗಿ ಸುಟ್ಟು ಸುಣ್ಣವಾಗಿದ್ದಾರೆ. ನಿಮ್ಮಲ್ಲಿ‌ ಮನುಷ್ಯತ್ವವೇನಾದರೂ ಸ್ವಲ್ಪವಾದರೂ ಇದ್ದಲ್ಲಿ ಈ‌ ದಂಡ ಶುಲ್ಕ, ಬೆಲೆ ಏರಿಕೆಯಿಂದ‌ ದೇಶದ ಸಾಮಾನ್ಯ ಪ್ರಜೆಗಳನ್ನು ರಕ್ಷಿಸಿ” ಎಂದು ಪ್ರದೀಪ್ ಮಂಡ್ಯ ಎಂಬುವವರು ಕಿಡಿಕಾರಿದ್ದಾರೆ.

ಆದಾಯ ತೆರಿಗೆ ಪಾವತಿಸುವರಿಗೆ ಪಾನ್ ಕಾರ್ಡ್ ನ ಮಹತ್ವ, ಆಧಾರ್ ಜೋಡಣೆ ಕುರಿತು ಸರಕಾರದ ಆದೇಶದ ಅರಿವು ಇರುತ್ತದೆ. ಅವರ ಲೆಕ್ಕ ಪರಿಶೋಧಕರು ಆಧಾರ್ ಜೋಡಣೆಯನ್ನು ಸ್ವಯಂ ಆಗಿ ಮಾಡಿಕೊಟ್ಟಿರುತ್ತಾರೆ. ಇಂತಹ ಯಾವುದೇ ಆದಾಯ, ಆದಾಯ ತೆರಿಗೆ ಇಲ್ಲದ ಕುಟುಂಬಗಳು ಯಾವುದೋ ಅಗತ್ಯಕ್ಕೆ ಪಾನ್ ಕಾರ್ಡ್ ಮಾಡಿಸಿ ಅದನ್ನು ಮರತೇ ಬಿಟ್ಟಿರುತ್ತಾರೆ. ಇಂತಹ ಕುಟುಂಬಗಳಿಗೆ ಸೇರಿದವರಿಗೆ ಪಾನ್ ಕಾರ್ಡ್ ನ ಮಹತ್ವವೂ ಗೊತ್ತಿರುವುದಿಲ್ಲ. ಆಧಾರ್ ಜೋಡಣೆ ಕುರಿತು ಮೋದಿ ಸರಕಾರದ ಆದೇಶವೂ ಗೊತ್ತಿರುವುದಿಲ್ಲ. ಅವರಿಗೆ ಮಾಹಿತಿ ನೀಡಬಲ್ಲ ಲೆಕ್ಕಪರಿಶೋಧಕರೂ ಇರುವುದಿಲ್ಲ. ಈಗ ಕೊನೆ ಕ್ಷಣದಲ್ಲಿ ಭಯ ಬಿದ್ದು ಪರದಾಡುತ್ತಿದ್ದಾರೆ. ಕೆಲವು ಕುಟುಂಬಗಳಲ್ಲಿ ಐದರ ವರೆಗು ಪಾನ್ ಕಾರ್ಡ್ ಹೊಂದಿದ ಸದಸ್ಯರಿದ್ದಾರೆ. ಆ ಕುಟುಂಬದ ದಂಡದ ಮೊತ್ತ ಐದು ಸಾವಿರ ರೂಪಾಯಿ. ಬಡ ಕುಟುಂಬ ಅಷ್ಟು ಮೊತ್ತ ಭರಿಸುವುದು ಎಲ್ಲಿಂದ? ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳರವರು ಪ್ರಶ್ನಿಸಿದ್ದಾರೆ.

ಈಗ ಸರಕಾರ ಪಾನ್-ಆಧಾರ್ ಕಡ್ಡಾಯ, 1000, ಹತ್ತು ಸಾವಿರ ಕಟ್ಟಿ ಲಿಂಕ್ ಮಾಡಿಸಿಕೊಳ್ಳಿ ಎಂದಾಗ ಅಗತ್ಯ ಇಲ್ಲದವರೂ ಒತ್ತಡಕ್ಕೊಳಗಾಗುತ್ತಾರೆ. ಮುಂದೊಮ್ಮೆ ಇದೇ ಸರಕಾರ ಕೊರೋನಾ ವ್ಯಾಕ್ಸಿನ್ ಕುರಿತು ರಾಗ ಬದಲಿಸಿದಂತೆ, ಅವರವರ ಆಯ್ಕೆ ಎಂದು ಕೈಕೊಳೆಯದಿದ್ದರಷ್ಟೆ ಸಾಕು! ಎಂದು ಅನ್ಸರ್ ಎಂಬುವವರು ಆತಂಕ ವ್ಯಕ್ತಪಡಿಸಿದ್ದಾರೆ.

ಆಧಾರ್ ಜೋಡಿಸದಿದ್ದರೆ ಪಾನ್ ನಿಷ್ಕ್ರಿಯ ಅಂತೆ. ಹೋಗಲಿ ಬಿಡಿ, ಪಾನ್ ಯಾಕೆ ಬೇಕು? 2.5 ಲಕ್ಷಕ್ಕಿಂತ ಕಡಿಮೆ ಆದಾಯದವರಿಗೆ ಆದಾಯ ಹೇಳಿಕೆ ಸಲ್ಲಿಸಬೇಕಿಲ್ಲ, ಪಾನ್ ಇದ್ದರೂ ಆದಾಯ ಹೇಳಿಕೆ ಸಲ್ಲಿಸುವುದು ಅಗತ್ಯವಿಲ್ಲವಾದ್ದರಿಂದ ಪಾನ್ ಕೂಡ ಅಗತ್ಯ ಇಲ್ಲ. ಪಾನ್ ಇಲ್ಲದೆಯೂ ಬ್ಯಾಂಕ್ ಖಾತೆ ಹೊಂದಲು ಸಾಧ್ಯವಿದೆ. ಹಾಗಾದರೆ ಪಾನ್ ಸಕ್ರಿಯವಾಗಿರಿಸಲು ಆಧಾರ್ ಜೋಡಣೆ ಯಾಕೆ? ಪಾನ್ ಗೆ ಆಧಾರ್ ಜೋಡಿಸದಿದ್ದರೆ ಅಥವಾ ತಡವಾಗಿ ಜೋಡಿಸುವುದಕ್ಕೆ ದಂಡ ವಿಧಿಸಲು ಯಾವ ಕಾನೂನಿನಲ್ಲಿ ಅವಕಾಶ ಇದೆ? ಎಂದು ವೈದ್ಯರಾದ ಶ್ರೀನಿವಾಸ ಕಕ್ಕಿಲ್ಲಾಯರವರು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಪಾನ್-ಆಧಾರ್ ಲಿಂಕ್ ಹೆಸರಿನಲ್ಲಿ ಜನಸಾಮಾನ್ಯರಿಂದ ಲೂಟಿ ಮಾಡುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಕೆಲವರು ಲಿಂಕ್ ಮಾಡಿಸಲು ಮುಂದಿನ ವರ್ಷ ಅಂದರೆ 2024ರ ಮಾರ್ಚ್‌ವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಹಾಗಾಗಿ ಪಾನ್ ಅಗತ್ಯವಿರುವವರು ಲಿಂಕ್ ಮಾಡಿಸಿಕೊಳ್ಳಬೇಕು. ಲಿಂಕ್ ಆಗಿದೆಯೇ ಇಲ್ಲವೇ ಎಂದು ಚೆಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.incometax.gov.in/iec/foportal/

ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಬಂಧನ ಭೀತಿಯಲ್ಲಿ ಲಂಚಾರೋಪಿ ಮಾಡಾಳ್ ವಿರೂಪಾಕ್ಷಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

14 COMMENTS

  1. Curect agi heliddhare.nav badge manel erode.namge jaga ella.mane ella.groopall Sala edhe.pancard edhe.nan kooda link madsilla.nammanthawr dhudd thindhre awrge olledh agalla.a sceam e sceam antha mungyeg Bella hucchodhe ayth.sceam alla dhudd erora jeball etth.

  2. Modi govt has brought tattoo days to people, if more days come, people will see long tattoo days, make people bankrupt and make the government, this is the economic situation, the government is headed for collapse and the country.
    The Modi government has charged the highest fee for PAN card linking because of its success, the policies will know the way the government runs
    The government is looking for any way to rob the people and if people let them continue like this, one day they will make money by selling people too.
    People are still not in good economic condition due to the effect of lock download but Modi govt is imposing more burden on people and common people will realize this and one day they will vote in the right way.

  3. Pan card ge adhara link madisabeku andra 1000 rs fine kattabeku but poor students ,poverty peoples unemploye students ellinda tharabeku asttondu amt na modalu govt Job kodi income tax department bulinding na kasa tegedu swcahha madi bartivi ellaru ondondu divasa nive 1000 salary kodari kelasa madiddkkee ,,badavaru en sayi bek en ri gas bill current bill medicine tax ellaa tax nu hecchagi madakota hodar hege sir /badavaru badakodu ,,badavar dudami one day ge city li 800 1000 rs eddare avra mane badagi makkal school fees medical fees ellinda tarabeku
    Business ellardavru ,govt ,pvt job holders elladravru 1000 rs fine kattabeka sir ,,government modalu gas subsidies na bpl card eddavarige modalu kodari nodona ,,adu mattra tale li ellaa ,,janarinda heng duddu kitakobeku anth currently current agi plan madiddir bidi , income tax department navare obba sammanna kuli karamika ninge annnaya madodu estu sari ,,election bantu andre road road prachar madatiraa ade entha vishayakkee yakee road alli parachar madalillaa ,,tv maddyama agu mane manee ge news talipisoo yoggate. Nu ellava nimage election banadaga mane mane ge bikshe bedoke baratiralla vote haki antha avaga jana uttra kodatree hogari vote keloke Karantak jana e annaya vannu yaru sahisallaa sir /madamri vote keloke banni e sala mane hattira last button kottara namagu ottokke annodanna maribed ri nivu .

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...