Homeಕರ್ನಾಟಕಮೂಲಸೌಕರ್ಯ ಒದಗಿಸಿ, ಇಲ್ಲವೇ ಕರ್ನಾಟಕದೊಂದಿಗೆ ವಿಲೀನ ಮಾಡಿ: ಮಹಾರಾಷ್ಟ್ರದ 11 ಗ್ರಾಮಗಳ ಒತ್ತಾಯ

ಮೂಲಸೌಕರ್ಯ ಒದಗಿಸಿ, ಇಲ್ಲವೇ ಕರ್ನಾಟಕದೊಂದಿಗೆ ವಿಲೀನ ಮಾಡಿ: ಮಹಾರಾಷ್ಟ್ರದ 11 ಗ್ರಾಮಗಳ ಒತ್ತಾಯ

- Advertisement -
- Advertisement -

ಬೆಳಗಾವಿ ಗಡಿ ವಿವಾದದ ಮಧ್ಯೆ ಮಹಾರಾಷ್ಟ್ರದ 11 ಗ್ರಾಮಗಳು ಸೊಲ್ಲಾಪುರ ಜಿಲ್ಲಾಡಳಿತದ ವಿರುದ್ಧ ಸಿಡಿದೆದ್ದಿದ್ದು, ಮೂಲ ಸೌಕರ್ಯ ಒದಗಿಸಿ ಅಥವಾ ಪಕ್ಕದ ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಅನುಮತಿ ನೀಡಿ ಎಂದು ಈ ಗ್ರಾಮಗಳು ಒತ್ತಾಯಿಸಿವೆ.

ಅಕ್ಕಲಕೋಟ ತಾಲೂಕಿನ ಕಲ್ಲಕರ್ಜಾಲ್, ಕೆಗಾಂವ್, ಶೇಗಾಂವ್, ಕೊರ್ಸೆಗಾಂವ್, ಆಳಗೆ, ಧರಸಂಗ್, ಅಂದೇವಾಡಿ (ಖುರ್ದ್), ಹಿಲ್ಲಿ, ದೇವಿಕಾವಠೆ, ಮಂಗ್ರುಲ್, ಶಾವಾಲ್ ಗ್ರಾಮ ಪಂಚಾಯಿತಿಗಳು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸೊಲ್ಲಾಪುರ ಜಿಲ್ಲಾಧಿಕಾರಿಗೆ ಸಲ್ಲಿಸಿವೆ ಎಂದು ‘ಮಿಂಟ್’ ಜಾಲತಾಣ ವರದಿ ಮಾಡಿದೆ. ಮೂಲ ಸೌಕರ್ಯ ಕಲ್ಪಿಸಿ ಇಲ್ಲವೇ ಕರ್ನಾಟಕದೊಂದಿಗೆ ವಿಲೀನಗೊಳಿಸಲು ಅನುಮತಿ ನೀಡುವಂತೆ ಗ್ರಾಮಗಳು ಜಿಲ್ಲಾಡಳಿತವನ್ನು ಕೋರಿವೆ. ಗ್ರಾಮಗಳು ಸಲ್ಲಿಸಿರುವ ಬೇಡಿಕೆಗಳು ಈವರೆಗೂ ಈಡೇರಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

11 ಗ್ರಾಮಗಳಲ್ಲಿ ಒಂದಾದ ಅಳಗಿಯ ಸರಪಂಚ್ ಸಗುಣಾಬಾಯಿ ಹತ್ತೂರೆ ಪ್ರತಿಕ್ರಿಯಿಸಿ, “ಈ ಪ್ರದೇಶಗಳಲ್ಲಿ ಸರಿಯಾದ ರಸ್ತೆ, ವಿದ್ಯುತ್ ಸರಬರಾಜು ಮತ್ತು ನೀರಿನ ಸಂಪರ್ಕ ಇಲ್ಲ” ಎಂದು ‘ಪಿಟಿಐ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

“ನಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಸಿಬ್ಬಂದಿ, ಶಿಕ್ಷಕರು ಗ್ರಾಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸಂಪರ್ಕ ಕೊರತೆಯಿಂದಾಗಿ ಯುವಕರು ಶಿಕ್ಷಣಕ್ಕಾಗಿ ಹಾಗೂ ಇತರೆ ಕೆಲಸಗಳಿಗಾಗಿ ಹೊರಹೋಗಲು ಪರದಾಡುವಂತಾಗಿದೆ” ಎಂದು ಹತ್ತೂರೆ ಆರೋಪಿಸಿದ್ದಾರೆ.

ಈ ಗ್ರಾಮಗಳಿಗೆ ಸರಕಾರ ಮೂಲ ಸೌಕರ್ಯ ಕಲ್ಪಿಸಿ ಇಲ್ಲವೇ ಕರ್ನಾಟಕದೊಂದಿಗೆ ವಿಲೀನಗೊಳಿಸಲು ಅವಕಾಶ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗೆ ಪತ್ರ ಸಲ್ಲಿಸಲು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಿಲ್ಲಿ ಗ್ರಾಮದ ಮತ್ತೋರ್ವ ಸರಪಂಚ್ ಕೂಡ ಗ್ರಾಮಗಳ ಶೋಚನೀಯ ಸ್ಥಿತಿ ಕುರಿತು ಮಾತನಾಡಿದ್ದಾರೆ. ಸರಪಂಚ್‌ ಅಪ್ಪಾಸಾಹೇಬ ಶಟ್ಗರ್‌‌ ಮಾತನಾಡಿ, “ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ರಸ್ತೆ ಸಂಪರ್ಕ ಹದಗೆಟ್ಟಿದೆ” ಎಂದಿದ್ದಾರೆ.

“ಉಜನಿ ಅಣೆಕಟ್ಟಿನಿಂದ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ನೀರು ಬಿಡುಗಡೆಯಾಗುತ್ತಿದ್ದು, ಸಮರ್ಪಕ ನಿರ್ವಹಣೆ ಮಾಡದ ಕಾರಣ ಕಬ್ಬಿನ ಗದ್ದೆಗಳು, ಮನೆಗಳು ಜಲಾವೃತವಾಗುತ್ತವೆ. ಆದರೆ ಬೇಸಿಗೆಯಲ್ಲಿ ನಮ್ಮ ಪ್ರದೇಶಗಳಿಗೆ ನೀರು ಬಿಡುತ್ತಿಲ್ಲ.ನೀರಿಗಾಗಿ ಸಂಬಂಧಪಟ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮೊರೆ ಹೋಗಬೇಕಾಗಿದೆ” ಎಂದು ಶಟ್ಗರ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ: ಚಿತ್ರಗಳಲ್ಲಿ ನೋಡಿರಿ

ಶಾಲೆಯ ಮೂಲಸೌಕರ್ಯಗಳು ಅಸಮರ್ಪಕವಾಗಿದೆ ಮತ್ತು ಆರೋಗ್ಯ ವ್ಯವಸ್ಥೆಯು ಸಹ ಸರಿಯಾಗಿಲ್ಲ ಎಂದು ದೂರಿರುವ ಅವರು, “ಕರ್ನಾಟಕದಲ್ಲಿ ಮೋಟಾರು ರಸ್ತೆಗಳು, ಬೀದಿ ದೀಪಗಳು ಮತ್ತು ಸಮರ್ಪಕ ವಿದ್ಯುತ್ ಪೂರೈಕೆಯಂತಹ ಎಲ್ಲಾ ಮೂಲಭೂತ ಸೌಲಭ್ಯಗಳು ಲಭ್ಯವಿವೆ” ಎಂದು ತಿಳಿಸಿದ್ದಾರೆ.

“ನಮಗೆ ಕರ್ನಾಟಕದ ಬಗ್ಗೆ ಯಾವುದೇ ಪ್ರೀತಿ ಇಲ್ಲ, ಆದರೆ ನಾವು ಎಷ್ಟು ದಿನ ಈ ಅನ್ಯಾಯವನ್ನು ಎದುರಿಸಲಿ? 75 ವರ್ಷಗಳು ಕಳೆದಿವೆ” ಎಂದು ವಿಷಾದಿಸಿದ್ದಾರೆ.

“ಮಹಾರಾಷ್ಟ್ರ ಸರ್ಕಾರವು ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿದರೆ ಪಕ್ಕದ ರಾಜ್ಯವಾದ ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...