HomeದಿಟನಾಗರFact check: ಪಾಲ್ಘರ್ ಗುಂಪು ಹತ್ಯೆಯ ಬಗ್ಗೆ ಸುಳ್ಳು ವರದಿ ಮಾಡಿದ ಪಿಟಿಐ

Fact check: ಪಾಲ್ಘರ್ ಗುಂಪು ಹತ್ಯೆಯ ಬಗ್ಗೆ ಸುಳ್ಳು ವರದಿ ಮಾಡಿದ ಪಿಟಿಐ

ಏಪ್ರಿಲ್ 16, 2020 ರ ರಾತ್ರಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಹಿಂದೂ ಸಾದುಗಳು ಸೇರಿದಂತೆ ಮೂವರನ್ನು ಗುಂಪು ಹತ್ಯೆ ನಡೆಸಲಾಗಿತ್ತು.

- Advertisement -
- Advertisement -

ಸುದ್ದಿ ಜಾಲ ಏಜೆನ್ಸಿಯಾದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಪಾಲ್ಘರ್ ಗುಂಪುಹತ್ಯೆ ಘಟನೆಯ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಿದೆ. ಸಚಿವರು ಪೊಲೀಸರು ಬಂಧಿಸಿರುವ 101 ಆರೋಪಿಗಳ ಪಟ್ಟಿಯಲ್ಲಿ ಮುಸ್ಲಿಮರಿಲ್ಲ ಎಂದು ವೀಡಿಯೊವೊಂದರಲ್ಲಿ ಹೇಳಿದ್ದರು.

ಆದರೆ “ಪಾಲ್ಘರ್ ಹಲ್ಲೆ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಹಿಂದೂಗಳಿಲ್ಲ: ಮಹಾ ಗೃಹ ಸಚಿವ ಅನಿಲ್ ದೇಶ್ಮುಖ್” ಎಂದು ಪಿಟಿಐ ವರದಿ ಮಾಡಿತ್ತು, ಆದರೆ ಈಗ ಟ್ವೀಟ್‌ ಅನ್ನು ಡಿಲೀಟ್ ಮಾಡಿದೆ.

ಟ್ವೀಟಿನ ಆರ್ಕೈವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಪಿಟಿಐ ಅವರ ಟ್ವೀಟ್‌ಗೆ ಹಲವಾರು ಜನರು ಪ್ರತ್ಯುತ್ತರವಾಗಿ ತಪ್ಪುಗಳನ್ನು ಸರಿಪಡಿಸಲು ಹೇಳಿದ್ದರು.

 

ಏಪ್ರಿಲ್ 16, 2020 ರ ರಾತ್ರಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಹಿಂದೂ ಸಾದುಗಳನ್ನು ಸೇರಿದಂತೆ ಮೂವರನ್ನು ಉದ್ರಿಕ್ತ ಜನರು ಸೇರಿ ಗುಂಪು ಹತ್ಯೆ ನಡೆಸಿದ್ದರು. ಈ ಬಗ್ಗೆ ಈವರೆಗೆ ಬಾಲಾಪರಾಧಿಗಳು ಸೇರಿದಂತೆ 101 ಜನರನ್ನು ಬಂಧಿಸಲಾಗಿದೆ.

ಜನರ ಗುಂಪು ಹೊಡೆದು ಸಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮುತ್ತಿದ್ದಂತೆ, ಘಟನೆಯು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದಾಳಿಯೂ ಕೋಮು ಪ್ರೇರಿತವಾಗಿ ನಡೆದಿದೆ ಎಂದು ಕೂಡಾ ಸುದ್ದಿ ಹರಿದಾಡತೊಡಗಿತ್ತು. ಹತ್ಯೆಗೂ ಮೊದಲು ಪಾಲ್ಘರ್‌ನ ವಿವಿಧ ಹಳ್ಳಿಗಳಲ್ಲಿ ಮಕ್ಕಳ ಅಪಹರಣಕಾರರು ಮತ್ತು ಕಳ್ಳರು ಓಡಾಡುತ್ತಿದ್ದಾರೆ ಎಂಬ ವದಂತಿಗಳು ಸ್ಥಳೀಯವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ಹಾಗಾಗಿ ಬುಡಕಟ್ಟು ಜನರು ಮೂರು ಜನರ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದರು.


ಇದನ್ನೂ ಓದಿ: ಪಾಲ್ಘರ್‌ ಘಟನೆಗೆ ಕೋಮು ಆಯಾಮವಿಲ್ಲ: ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸ್ಪಷ್ಟನೆ


ಘಟನೆಯ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಮಾತನಾಡಿದ್ದನ್ನು ಪಿಟಿಐ ತಪ್ಪಾಗಿ ಟ್ವೀಟ್ ಮಾಡಿತ್ತು. ಪಿಟಿಐ ವರದಿಯಂತೆ ಅವರು ಹಿಂದೂ ಎಂಬ ಪದವನ್ನು ಬಳಸಿರಲಿಲ್ಲ. ಅವರು ಪೊಲೀಸರು ಬಂಧಿಸಿರುವ ಆರೋಪಿಗಳ ಪಟ್ಟಿಯನ್ನು ಉಲ್ಲೇಖಿಸಿ “ಬಂಧಿತರಲ್ಲಿ ಒಬ್ಬ ಮುಸ್ಲಿಂ ಕೂಡ ಇಲ್ಲ, ಘಟನೆಯನ್ನು ಕೋಮುವಾದಿಕರಣ ಮಾಡಿ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ” ಎಂದು ಹೇಳಿದ್ದರು.

ಈಗ ಪಿಟಿಐ ತನ್ನ ಟ್ವೀಟ್ ಅನ್ನು ಅಳಿಸಿಹಾಕಿದೆ, ಅದರ ಬದಲಾಗಿ ‘ಪದವನ್ನು ಬದಲಾಯಿಸಿ ಪುನರಾವರ್ತಿಸಲಾಗಿದೆ, ಪಾಲ್ಘರ್ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟವರಲ್ಲಿ ಮುಸ್ಲಿಮರು ಇಲ್ಲ: ಮಹಾ ಗೃಹ ಸಚಿವ ಅನಿಲ್ ದೇಶ್ಮುಖ್’ ಎಂದು ಟ್ವೀಟ್ ಮಾಡಿದೆ. ಆದರೆ ಈ ಹಿಂದೆ ಮಾಡಿದ ತಪ್ಪನ್ನು ಎಲ್ಲೂ ಉಲ್ಲೇಖಿಸಿಲ್ಲ, ತಪ್ಪನ್ನು ಒಪ್ಪಿಕೊಂಡಿಲ್ಲ ಹಾಗೂ ಅದರ ಬಗ್ಗೆ ಸ್ಪಷ್ಟನೆ ಕೂಡಾ ನೀಡಿಲ್ಲ.

ಘಟನೆಯ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಆರೋಪಿಗಳ ಹೆಸರಿನ ಪಟ್ಟಿಯನ್ನು ಟ್ವೀಟ್ ಮಾಡಿ, ಘಟನೆಗೆ ಕೋಮು ಬಣ್ಣ  ನೀಡುವ ಪ್ರಯತ್ನಗಳಾಗುತ್ತಿವೆ ಎಂದು ಹೇಳಿದ್ದರು.


ಇದನ್ನೂ ಓದಿ:  ಅರ್ನಬ್‌ ಗೋಸ್ವಾಮಿ ಮೇಲೆ ಹಲ್ಲೆ ಆರೋಪ; ಇಬ್ಬರ ಬಂಧನ 

ವಿಡಿಯೊ ನೋಡಿ: ಮಾಧ್ಯಮಗಳು ಸೃಷ್ಟಿಸಿರುವ ಸಾವಿನ ಬಾವಿ 


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...