Homeಮುಖಪುಟಪುಲ್ವಾಮಾ ದಾಳಿಗೆ ಮೋದಿ ಸರ್ಕಾರದ ಲೋಪವೇ ಕಾರಣ: ರಾಹುಲ್ ಸಂದರ್ಶನದಲ್ಲಿ ಮಲಿಕ್ ಹೇಳಿಕೆ

ಪುಲ್ವಾಮಾ ದಾಳಿಗೆ ಮೋದಿ ಸರ್ಕಾರದ ಲೋಪವೇ ಕಾರಣ: ರಾಹುಲ್ ಸಂದರ್ಶನದಲ್ಲಿ ಮಲಿಕ್ ಹೇಳಿಕೆ

- Advertisement -
- Advertisement -

ಪುಲ್ವಾಮಾ ದಾಳಿ, ಜಮ್ಮು ಮತ್ತು ಕಾಶ್ಮೀರ ಪರಿಸ್ಥಿತಿ, ಅದಾನಿ ಮತ್ತು ರಾಜಕೀಯದಲ್ಲಿ ತಮ್ಮ ಆರಂಭಿಕ ದಿನಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತನಾಡಿ ಭಾರಿ ಸದ್ದು ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರನ್ನು ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಈ ವೇಳೆ ಮಾತನಾಡಿರುವ ವೀಡಿಯೊವನ್ನು ಬುಧವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ರಾಹುಲ್ ಹಂಚಿಕೊಂಡಿದ್ದಾರೆ.

2019ರ ಪುಲ್ವಾಮಾ ದಾಳಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಲೋಪವೇ ಕಾರಣ ಎಂದು ಸತ್ಯಪಾಲ್ ಮಲಿಕ್ ಆರೋಪಿಸಿದ್ದಾರೆ. ಈ ಸಂದರ್ಶನದಲ್ಲಿ ಅವರು ಅದನ್ನೇ ಪುನರುಚ್ಚರಿಸಿದ್ದಾರೆ. ”ನಾನು ಎರಡು ಚಾನೆಲ್‌ಗಳಿಗೆ ಇದು ನಮ್ಮ ತಪ್ಪು ಎಂದು ಹೇಳಿದೆ ಆದರೆ ಇದನ್ನು ಎಲ್ಲಿಯೂ ಹೇಳಬೇಡಿ ಎಂದು ಕೇಳಿದೆ.. ಏಕೆಂದರೆ ನನ್ನ ಹೇಳಿಕೆಗಳು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ನಾನು ಭಾವಿಸಿದೆ. ಆದರೆ ಯಾವುದೇ ತನಿಖೆ ನಡೆದಿಲ್ಲ. ಅದನ್ನು ಚುನಾವಣೆ ಉದ್ದೇಶಕ್ಕಾಗಿ ಬಳಸಲಾಯಿತು. ಮೂರನೇ ದಿನಗಳ ನಂತರ, ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು ರಾಜಕೀಯವಾಗಿ ಬಳಸಿಕೊಂಡರು” ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

”ಪುಲ್ವಾಮಾ ಘಟನೆ ಏಕೆ ಸಂಭವಿಸಿತು? ಅವರು 5 ವಿಮಾನಗಳನ್ನು ಕೇಳಿದ್ದರು, ಅವರು ನನ್ನನ್ನು ಕೇಳಿದ್ದರೆ, ನಾನು ಅದನ್ನು ತಕ್ಷಣವೇ ನೀಡುತ್ತಿದ್ದೆ. ಹಿಮದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನಾನು ವಿಮಾನವನ್ನು ಒದಗಿಸಿದೆ. ದೆಹಲಿಯಲ್ಲಿ ವಿಮಾನವನ್ನು ಬಾಡಿಗೆಗೆ ಪಡೆಯುವುದು ಸುಲಭ. ಆದರೆ ಅವರ ಅರ್ಜಿ ಗೃಹ ಸಚಿವಾಲಯದಲ್ಲೇ ಇತ್ತು. ಆನಂತರ ಅದನ್ನು ತಿರಸ್ಕರಿಸಲಾಯಿತು. ನಂತರ CRPF ಸಿಬ್ಬಂದಿ ಅಸುರಕ್ಷಿತವಾದ ರಸ್ತೆಯ ಮೂಲಕ ಹೋದರು” ಎಂದು ಮಲಿಕ್ ಹೇಳಿದರು.

ಸಂದರ್ಶನವನ್ನು ಹಂಚಿಕೊಂಡ ರಾಹುಲ್ ಗಾಂಧಿ, ”ಈ ಸಂಭಾಷಣೆಯು ಇಡಿ-ಸಿಬಿಐ ನಡುವೆ ಕೋಲಾಹಲವನ್ನು ಸೃಷ್ಟಿಸುತ್ತದೆಯೇ?” ಎಂದು ಪ್ರಶ್ನೆ ಮಾಡಿದ್ದಾರೆ.

”ಪುಲ್ವಾಮಾ, ರೈತರ ಚಳವಳಿ ಮತ್ತು ಅಗ್ನಿವೀರ್‌ನಂತಹ ಪ್ರಮುಖ ವಿಷಯಗಳ ಕುರಿತು ಮಾಜಿ ರಾಜ್ಯಪಾಲ ಮತ್ತು ರೈತ ನಾಯಕ, ಸತ್ಯಪಾಲ್ ಮಲಿಕ್ ಜಿ ಅವರೊಂದಿಗೆ ಆಸಕ್ತಿದಾಯಕ ಚರ್ಚೆ! ನನ್ನ YouTube ಚಾನೆಲ್‌ನಲ್ಲಿ ಸಂಪೂರ್ಣ ವೀಡಿಯೊವನ್ನು ವೀಕ್ಷಿಸಿ” ಎಂದು ಎಕ್ಸ್‌ನಲ್ಲಿ ರಾಹುಲ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿದ್ದ PIL ವಜಾಗೊಳಿಸಿದ ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...