Homeಮುಖಪುಟಅಮೆರಿಕಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ 8,076 ಭಾರತೀಯರ ಬಂಧನ

ಅಮೆರಿಕಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ 8,076 ಭಾರತೀಯರ ಬಂಧನ

- Advertisement -
- Advertisement -

ವಿವಿಧ ಮಾರ್ಗಗಳ ಮೂಲಕ ಅಮೆರಿಕಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುವಾಗ ಸೆಪ್ಟಂಬರ್‌ನಲ್ಲಿ 8,076 ಭಾರತೀಯರನ್ನು ಅಮೆರಿಕದ ಕಾನೂನು ಜಾರಿ ಸಂಸ್ಥೆ ಬಂಧಿಸಿದೆ. ಅದರಲ್ಲಿ ಯುಎಸ್-ಕೆನಡಾ ಗಡಿಯೊಂದರಲ್ಲೆ ಒಟ್ಟು 3,059 ಭಾರತೀಯರನ್ನು ಬಂಧಿಸಲಾಗಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಡೇಟಾ ಬಹಿರಂಗಪಡಿಸಿದೆ.

ಯುಎಸ್-ಕೆನಡಾ ಗಡಿಯಲ್ಲಿ ಬಂಧಿಸಲಾದ ಭಾರತೀಯರ ಸಂಖ್ಯೆಯು ಕಳೆದ ವರ್ಷ 2022ರಿಂದ ಸೆಪ್ಟೆಂಬರ್ 2023ರ ಅಂಕಿ ಅಂಶದಲ್ಲಿ ಸೆಪ್ಟಂಬರ್‌ನಲ್ಲಿ ಅತಿ ಹೆಚ್ಚು ಬಂಧನ ನಡೆದಿದೆ.

ದಿ ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಅನೇಕ ಅಕ್ರಮ ವಲಸಿಗರು ಮುಖ್ಯವಾಗಿ ಗುಜರಾತ್‌ನಿಂದ ತೆರಳಿ ಕೆನಡಾದಲ್ಲಿ ನೆಲೆಸಿದ್ದಾರೆ ಅಥವಾ ಯುಎಸ್‌ಗೆ ಪ್ರವೇಶಿಸುವ ಅವಕಾಶಕ್ಕಾಗಿ ಅವರು ಕಾಯುತ್ತಿದ್ದಾರೆ. ಆ.2,327 ಅಕ್ರಮ ವಲಸಿಗರು ಯುಎಸ್‌ಗೆ ದಾಟಲು ಪ್ರಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಸಂಖ್ಯೆ 3,059 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಬಂಧಿತರಲ್ಲಿ ಮಕ್ಕಳು, ಒಂದೇ ಕುಟುಂಬಸ್ಥರು,  ವಯಸ್ಕರು ಇದ್ದಾರೆ.

ಅಕ್ರಮವಾಗಿ USನ್ನು ಪ್ರವೇಶಿಸಲು ಪ್ರಯತ್ನಿಸುವ ಭಾರತೀಯರು ಸಾಮಾನ್ಯವಾಗಿ US-ಮೆಕ್ಸಿಕೋ ಗಡಿಯ ಮೂಲಕ ಯುಎಸ್‌ ಪ್ರವೇಶಕ್ಕೆ ಬಯಸುತ್ತಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಫೆಬ್ರವರಿ 2019ರಿಂದ ಈ ವರ್ಷದ ಮಾರ್ಚ್ ನಡುವೆ ಯುಎಸ್ ಕಾನೂನು ಜಾರಿ ಸಂಸ್ಥೆಗಳು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಒಟ್ಟು 1.9 ಲಕ್ಷ ಭಾರತೀಯರನ್ನು ಬಂಧಿಸಿದ್ದಾರೆ.

ಈ ಅಪಾಯಕಾರಿ ಪ್ರಯಾಣದ ಸಮಯದಲ್ಲಿ ಹಲವಾರು ಕುಟುಂಬಗಳು ಸಾವನ್ನಪ್ಪಿದ ನಿದರ್ಶನಗಳ ಹೊರತಾಗಿಯೂ ಅಕ್ರಮವಾಗಿ USಗೆ ವಲಸೆ ಹೋಗುವ ಭಾರತೀಯರ ಪ್ರಯತ್ನಗಳು ನಿರಂತರವಾಗಿ ಮುಂದುವರಿದಿದೆ. ಗುಜರಾತ್‌ನ ಗಾಂಧಿನಗರದ ನಾಲ್ಕು ಜನರಿದ್ದ ಕುಟುಂಬವು 2022ರ ಜನವರಿಯಲ್ಲಿ ಯುಎಸ್-ಕೆನಡಾ ಗಡಿಯ ಮೂಲಕ ಅಕ್ರಮವಾಗಿ ಯುಎಸ್‌ಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಮೃತಪಟ್ಟಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಅಮೆರಿಕಗೆ ಅಕ್ರಮವಾಗಿ ವಲಸೆ ಹೋಗಲು ಯತ್ನಿಸುತ್ತಿದ್ದ ಮತ್ತೊಂದು ಗುಜರಾತ್ ಕುಟುಂಬ ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದೆ.

ಇದನ್ನು ಓದಿ: ಮಹಾರಾಷ್ಟ್ರ ಸರ್ಕಾರ ಕೊಟ್ಟ ಗಡುವು ಅಂತ್ಯ: ಮರಾಠ ಮೀಸಲಾತಿ ಹೆಚ್ಚಳಕ್ಕೆ ಮತ್ತೆ ಉಪವಾಸ ಸತ್ಯಾಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...