Homeಮುಖಪುಟರಾಜಸ್ಥಾನ | ಪ್ರಶ್ನೆ ಪತ್ರಿಕೆ ಲೀಕ್‌‌ ಪ್ರಕರಣದಲ್ಲಿ ಭಾಗಿಯಾದ ಕೋಚಿಂಗ್ ಸೆಂಟರ್ ಧ್ವಂಸ; ಬಿಜೆಪಿ ಹಾದಿಯಲ್ಲಿ...

ರಾಜಸ್ಥಾನ | ಪ್ರಶ್ನೆ ಪತ್ರಿಕೆ ಲೀಕ್‌‌ ಪ್ರಕರಣದಲ್ಲಿ ಭಾಗಿಯಾದ ಕೋಚಿಂಗ್ ಸೆಂಟರ್ ಧ್ವಂಸ; ಬಿಜೆಪಿ ಹಾದಿಯಲ್ಲಿ ಕಾಂಗ್ರೆಸ್‌?

- Advertisement -
- Advertisement -

ರಾಜಸ್ಥಾನದಲ್ಲಿ ಇತ್ತೀಚೆಗೆ ಗ್ರೇಡ್-2 ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರೋಪಿಯಾಗಿ ಅಧಿಗಮ್‌ ಕೋಚಿಂಗ್ ಸೆಂಟರ್‌ನ ಆಪರೇಟರ್‌ನ ಹೆಸರು ಕಾಣಿಸಿಕೊಂಡಿತ್ತು. ಹೀಗಾಗಿ ಐದು ಅಂತಸ್ತಿನ ಕೋಚಿಂಗ್‌ ಸೆಂಟರ್‌ ಕಟ್ಟಡವನ್ನು ಜೈಪುರ ಅಭಿವೃದ್ಧಿ ಪ್ರಾಧಿಕಾರ (ಜೆಡಿಎ) ಸೋಮವಾರ ನೆಲಸಮಗೊಳಿಸಿದೆ. ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಹಲವಾರು ಜನರು ಖಂಡಿಸಿದ್ದು, ಕಾಂಗ್ರೆಸ್ ಪಕ್ಷವೂ ತಾನು ಕೂಡಾ ಬಿಜೆಪಿ ಎಂದು ತೋರಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಗಮ್ ಕೋಚಿಂಗ್ ಸೆಂಟರ್ ಕಟ್ಟಡವನ್ನು ಕಾನೂನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಜೆಡಿಎ ಜಾರಿ ವಿಭಾಗ ಪತ್ತೆ ಮಾಡಿದೆ. ಹೀಗಾಗಿ ಕಟ್ಟಡದ ಮಾಲೀಕ ಅನಿಲ್ ಅಗರ್ವಾಲ್ ಮತ್ತು ಕೋಚಿಂಗ್ ಸೆಂಟರ್ ನಿರ್ವಾಹಕರಾದ ಸುರೇಶ್ ಢಾಕಾ, ಭೂಪೇಂದ್ರ ಸರನ್, ಧರ್ಮೇಂದ್ರ ಚೌಧರಿ ಮತ್ತು ಛಾಜು ಲಾಲ್ ಜಾಟ್ ಅವರಿಗೆ ನೋಟಿಸ್ ನೀಡಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಂಸ್ಥೆಯು ಎರಡು ವಸತಿ ಪ್ಲಾಟ್‌ಗಳಲ್ಲಿ ಇದ್ದು, ರಸ್ತೆಯನ್ನು ಸಹ ಅತಿಕ್ರಮಣ ಮಾಡಲಾಗಿದೆ ಎಂದು ಜೆಡಿಎ ಹೇಳಿದೆ. ಸಂಸ್ಥೆಯಿಂದ ಯಾವುದೇ ತೃಪ್ತಿಕರ ಉತ್ತರ ಸಿಗದ ಕಾರಣ ಕಟ್ಟಡವನ್ನು ಕೆಡವಲಾಗಿದೆ ಎಂದು ಜೆಡಿಎ ಜಾರಿ ವಿಭಾಗದ ಮುಖ್ಯಸ್ಥ ರಘುವೀರ್ ಸೈನಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಡಿಸೆಂಬರ್‌ನಲ್ಲಿ ಗ್ರೇಡ್-2 ಶಿಕ್ಷಕರ ನೇಮಕಾತಿ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ 37 ಅಭ್ಯರ್ಥಿಗಳು ಸೇರಿದಂತೆ ಒಟ್ಟು 55 ಮಂದಿಯನ್ನು ಬಂಧಿಸಲಾಗಿತ್ತು. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಶಾಲೆಯ ಪ್ರಾಂಶುಪಾಲರಾದ ಸುರೇಶ್ ವಿಷ್ಣೋಯ್, ಎಂಬಿಬಿಎಸ್ ವಿದ್ಯಾರ್ಥಿ ಭಜನ್ ಲಾಲ್ ಮತ್ತು ರಾಯಿತ ರಾಮ್ ಚೌಧರಿ ಅವರನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ ಅಧಿಗಮ್ ಕೋಚಿಂಗ್ ಸೆಂಟರ್ ಆಪರೇಟರ್ ಸುರೇಶ್ ಢಾಕಾ ಅವರ ಹೆಸರು ಕೂಡ ಇದ್ದು, ಆದರೆ ಅವರು ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಅಭ್ಯರ್ಥಿಗಳು ಪರೀಕ್ಷೆಗೆ ತೆರಳುತ್ತಿದ್ದ ಬಸ್ಸನ್ನು ಉದಯಪುರ ಪೊಲೀಸರು ತಡೆದಿದ್ದರು. ಈ ವೇಳೆ ಅಭ್ಯರ್ಥಿಗಳಿಂದ ಪ್ರಶ್ನೆ ಪತ್ರಿಕೆ ಪತ್ತೆಯಾಗಿದ್ದು, ಬಳಿಕ ಎಲ್ಲರನ್ನೂ ಬಂಧಿಸಲಾಗಿತ್ತು.

ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಹಲವರು ಖಂಡಿಸಿದ್ದು, ಕಾಂಗ್ರೆಸ್ ಕೂಡಾ ಬಿಜೆಪಿಯಾಗುತ್ತಿದೆ ಎಂದು ಹೇಳಿದ್ದಾರೆ. ಮಾನವಹಕ್ಕುಗಳ ಪರವಾಗಿ ಧ್ವನಿ ಎತ್ತುವ ಆಕಾರ್‌ ಪಟೇಲ್ ಅವರು, ಕಾಂಗ್ರೆಸ್ ತಾನು ಕೂಡಾ ಬಿಜೆಪಿ ಎಂದು ತೋರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...