Homeಮುಖಪುಟನಿರುದ್ಯೋಗ, ಹಣದುಬ್ಬರಕ್ಕಿಂತ ರಾಮ ಮಂದಿರ ನೈಜ ಸಮಸ್ಯೆಯೇ: ಸ್ಯಾಮ್ ಪಿತ್ರೋಡಾ

ನಿರುದ್ಯೋಗ, ಹಣದುಬ್ಬರಕ್ಕಿಂತ ರಾಮ ಮಂದಿರ ನೈಜ ಸಮಸ್ಯೆಯೇ: ಸ್ಯಾಮ್ ಪಿತ್ರೋಡಾ

- Advertisement -
- Advertisement -

ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆಗೆ ಸಿದ್ಧತೆ ಚುರುಕುಗೊಂಡಿರುವ ಸಂದರ್ಭದಲ್ಲಿ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ರಾಮ ಮಂದಿರದ ಕುರಿತು ಎತ್ತಿರುವ ಪ್ರಶ್ನೆಯು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ‘ರಾಮ ಮಂದಿರ ನಿಜವಾದ ಸಮಸ್ಯೆಯೋ ಅಥವಾ ಅದಕ್ಕಿಂತ ನಿರುದ್ಯೋಗ, ಹಣದುಬ್ಬರವೋ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಧರ್ಮದ ಕುರಿತು ನನಗೆ ಯಾವುದೇ ಸಮಸ್ಯೆ ಇಲ್ಲ, ಒಮ್ಮೆ ದೇವಸ್ಥಾನಕ್ಕೆ ಹೋಗುವುದು ಸರಿ. ಆದರೆ, ನೀವು ಅದನ್ನೇ ಮುಖ್ಯ ವೇದಿಕೆಯನ್ನಾಗಿ ಮಾಡಲು ಸಾಧ್ಯವಿಲ್ಲ. ದೇಶದ ಶೇ.40 ರಷ್ಟು ಜನರು ಮಾತ್ರ ಬಿಜೆಪಿಗೆ ಮತ ಹಾಕಿದ್ದಾರೆ. ಶೇ.60 ರಷ್ಟು ಜನರು ಬಿಜೆಪಿಗೆ ಮತ ಹಾಕಿಲ್ಲ. ಅವರು ಪ್ರತಿಯೊಬ್ಬರ ಪ್ರಧಾನ ಮಂತ್ರಿ; ಬಿಜೆಪಿಯ ಪ್ರಧಾನಿಯಲ್ಲ ಎಂಬುದನ್ನು ಭಾರತದ ಜನರು ಬಯಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ನೀವು ನಿರುದ್ಯೋಗದ ಬಗ್ಗೆ ಮಾತನಾಡಿ, ಹಣದುಬ್ಬರದ ಬಗ್ಗೆ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸವಾಲುಗಳ ಬಗ್ಗೆ ಮಾತನಾಡಿ. ದೇಶದ ನಿಜವಾದ ಸಮಸ್ಯೆಗಳೇನು ಎಂಬುದನ್ನು ಜನರೆ ನಿರ್ಧರಿಸಬೇಕು. ರಾಮಮಂದಿರ ನಿಜವಾದ ಸಮಸ್ಯೆಯೇ ಅಥವಾ ನಿರುದ್ಯೋಗ ನಿಜವಾದ ಸಮಸ್ಯೆ. ರಾಮಮಂದಿರ ನಿಜವಾದ ಸಮಸ್ಯೆಯೇ ಅಥವಾ ಹಣದುಬ್ಬರ ನಿಜವಾದ ಸಮಸ್ಯೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ನಿಮ್ಮ ಧರ್ಮವನ್ನು ಆಚರಿಸಿ. ಆದರೆ, ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕವಾಗಿ ಇರಿಸಿ’ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷರೂ ಆದ ಪಿತ್ರೋಡಾ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಸಚಿವ ಕೈಲಾಶ್ ವಿಜಯವರ್ಗಿಯಾ, ‘ಸ್ಯಾಮ್ ಪಿತ್ರೋಡಾ ಭಾರತೀಯರ ಭಾವನೆಗಳನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ? ಅವರು ಭಾರತದ ಹೊರಗೆ ವಾಸಿಸುತ್ತಿದ್ದು, ಭಾರತೀಯರಿಗಿಂತ ಭಿನ್ನವಾಗಿ ಯೋಚಿಸುತ್ತಾರೆ. ನೀವು ಭಾರತದಲ್ಲಿ ರಾಜಕೀಯ ಮಾಡಲು ಬಯಸಿದರೆ, ಭಾರತ ಮತ್ತು ಭಾರತೀಯರಂತೆ ಯೋಚಿಸಿ’ ಎಂದು ತಿರುಗೇಟು ಕೊಟ್ಟಿದ್ದಾರೆ.

‘ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂಬಂಧ ದೇಶದಾದ್ಯಂತ ನಡೆಯುತ್ತಿರುವ ಆಚರಣೆಗಳ ಬಗ್ಗೆ ನನಗೆ ಬೇಸರವಿದೆ ಎಂಬ ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ನನಗೆ ಆಶ್ಚರ್ಯವಾಗಿದೆ. ಅಂತಹ ಕಾರ್ಯಕ್ರಮಗಳನ್ನು ಇಡೀ ಸಮುದಾಯ ಮಾಡುತ್ತಾರೆ. ನಾವು ಅದಕ್ಕೆ ಸರ್ಕಾರದ ಹಣವನ್ನು ಸ್ವೀಕರಿಸುವುದಿಲ್ಲ. ಸರ್ಕಾರದಿಂದ ಏನನ್ನೂ ತೆಗೆದುಕೊಳ್ಳದ ಭಕ್ತಾದಿಗಳು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ರಾಮನೊಂದಿಗೆ ಅಂತರ ಕಾಯ್ದುಕೊಳ್ಳುತ್ತದೆ ಎಂಬುದು ದೃಢವಾಗಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ; ದೂರು ನೀಡಿದರೂ ಕ್ರಮ ತೆಗೆದುಕೊಳ್ಳದ ಪೊಲೀಸರು; ಎಸ್‌ಪಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡ ದಲಿತ ಯುವಕ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...