Homeಮುಖಪುಟ'ಕೇಸರಿಮಯ ಪಾಕಿಸ್ತಾನ’: ಭಾರತದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಜೂಲಿಯೊ ರಿಬೇರೊ ಕಳವಳ

‘ಕೇಸರಿಮಯ ಪಾಕಿಸ್ತಾನ’: ಭಾರತದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಜೂಲಿಯೊ ರಿಬೇರೊ ಕಳವಳ

- Advertisement -
- Advertisement -

ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಜೂಲಿಯೊ ರಿಬೇರೊ ಅವರು ಗೋವಾದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಹೇಳಿಕೆಯನ್ನು ನೀಡಿದ್ದರು. ಇದು ಬಿಜೆಪಿಯ ಟೀಕೆಗೆ ಕಾರಣವಾಗಿದೆ.

ಗೋವಾದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾಜಿ ಪೊಲೀಸ್ ಕಮಿಷನರ್ ಜೂಲಿಯೊ ರಿಬೇರೊ, ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು 2ನೇ ದರ್ಜೆಯ ಪ್ರಜೆಗಳಂತೆ ಭಯದಿಂದ ಬದುಕುತ್ತಿದ್ದಾರೆ. ಅದು ಇಲ್ಲಿ (ಭಾರತದಲ್ಲಿ) ಸಂಭವಿಸಬಹುದು. ಇದನ್ನೇ ನಾನು ಹೆದರುತ್ತೇನೆ ಎಂದು ಹೇಳಿದ್ದರು.

ಕ್ರಿಸ್‌ಮಸ್‌ ಹಿನ್ನೆಲೆ ದೆಹಲಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆಸಿದ ಸಂವಾದವನ್ನು ಉಲ್ಲೇಖಿಸಿದ ರಿಬೇರೊ, ಮೋದಿ ಅವರು ಕೇರಳದಲ್ಲಿ ಕ್ರಿಶ್ಚಿಯನ್ ಸಮುದಾಯವನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಬಿಷಪ್‌ಗಳಲ್ಲಿ ಒಬ್ಬರು ಓಲೈಕೆಗೆ ಮಣಿದಿದ್ದಾರೆ. ಇತರರು ಬಹುಶಃ ಅವರನ್ನು ಹಿಂಬಾಲಿಸುತ್ತಾರೆ. ಮೋದಿ ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ನೋಡೋಣ. ನಮ್ಮ ಸ್ನೇಹಿತರಲ್ಲಿ ಹೇಳಿದ ಹೆಚ್ಚಿನ ವಿಚಾರಗಳು ಅವರು ವೋಟಿಗಾಗಿ ಮಾತ್ರ ಹೇಳಿದ್ದು ಎಂದು ಅವರಿಗೆ ಅರ್ಥವಾಗತೊಡಗಿದೆ. ಅವರ ಕ್ರಿಸ್ಮಸ್ ಸಂದೇಶವು ಬಹುಶಃ ಹೃದಯದ ಬದಲಾವಣೆಯಾಗಿದೆ ಎಂದು ಭಾವಿಸಲಾಗಿದೆ. ಅದು ಆಗಿದ್ದರೆ ಒಳ್ಳೆಯದೇ ಆಗುತ್ತದೆ. ಆದರೆ ನನಗೆ ಸಂದೇಹವಿದೆ, ಏಕೆಂದರೆ ಇಡೀ ಉದ್ದೇಶವು ‘ಕೇಸರಿಮಯ ಪಾಕಿಸ್ತಾನ’ ಎಂದು ಹೇಳಿದ್ದಾರೆ.

ಜೂಲಿಯೊ ರಿಬೇರೊ ಹೇಳಿಕೆಗೆ ಬಿಜೆಪಿಯ ರಾಜ್ಯ ಘಟಕವು ಆಕ್ಷೇಪವನ್ನು ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಗೋವಾ ಬಿಜೆಪಿಯ ವಕ್ತಾರ ಗಿರಿರಾಜ್ ಪೈ ವೆರ್ನೆಕರ್ ಅವರು ಜೂಲಿಯೊ ರಿಬೇರೊ ಅವರ ಹೇಳಿಕೆಗೆ ವಿರೋಧಿಸಿದ್ದಾರೆ. ಅವರ ಹೇಳಿಕೆಗಳನ್ನು ಆಧಾರ ರಹಿತ. ರಿಬೇರೊ ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗದ ಸರ್ಕಾರ ಅಧಿಕಾರದಲ್ಲಿ ಇರುವುದಕ್ಕೆ ಆಳವಾದ ದ್ವೇಷ ಮತ್ತು ಹತಾಶೆಯನ್ನು ಹೊಂದಿದ್ದಾರೆ. ಸರ್ಕಾರವನ್ನು ಕೀಳಾಗಿ ಕಾಣುವ ಪ್ರಯತ್ನದಲ್ಲಿ ದೇಶವನ್ನು ಕೀಳಾಗಿ ಕಾಣುವುದು ಮಾಜಿ ಪೋಲೀಸರಿಗೆ ತಕ್ಕುದಲ್ಲ ಎಂದು ಅವರು ಹೇಳಿದ್ದಾರೆ.

ರಿಬೇರೊ ಅವರು 1982ರಿಂದ 1986ರವರೆಗೆ ಮುಂಬೈ ಪೊಲೀಸ್ ಕಮಿಷನರ್ ಆಗಿದ್ದರು ಮತ್ತು ನಂತರ ಕೇಂದ್ರ ಮೀಸಲು ಪೊಲೀಸ್ ಪಡೆಯ ಡೈರೆಕ್ಟರ್ ಜನರಲ್ ಆಗಿದ್ದರು. ನಂತರ ಗುಜರಾತ್‌ನ  ಪೊಲೀಸ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 1989ರಿಂದ 1993ರವರೆಗೆ ರೊಮೇನಿಯಾದಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನು ಓದಿ: ‘ಮುಸ್ಲಿಂ ಲೀಗ್ ಜಮ್ಮು-ಕಾಶ್ಮೀರ’ ಸಂಘಟನೆ ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...