Homeಮುಖಪುಟಅತ್ಯಾಚಾರದ ಅಪರಾಧಿ ರಾಮ್ ರಹೀಮ್‌ಗೆ ಮತ್ತೆ 30 ದಿನಗಳ ಪೆರೋಲ್; ಶಿಕ್ಷೆ ನಂತರ 7ನೇ ಬಾರಿ...

ಅತ್ಯಾಚಾರದ ಅಪರಾಧಿ ರಾಮ್ ರಹೀಮ್‌ಗೆ ಮತ್ತೆ 30 ದಿನಗಳ ಪೆರೋಲ್; ಶಿಕ್ಷೆ ನಂತರ 7ನೇ ಬಾರಿ ಹೊರಬರಲು ಅವಕಾಶ

- Advertisement -
- Advertisement -

ಅತ್ಯಾಚಾರ ಮತ್ತು ಕೊಲೆ ಅಪರಾಧಿ, ಡೇರಾ ಸಚ್ಚಾ ಸೌಧದ ವಿವಾದಾತ್ಮಕ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಮತ್ತೆ 30 ದಿನಗಳ ಪೆರೋಲ್ ನೀಡಿದೆ. ಇದು ಅವರಿಗೆ ಶಿಕ್ಷೆಯಾದ ನಂತರ 7ನೇ ಬಾರಿಗೆ ಪೆರೋಲ್ ಮೇಲೆ ಹೊರಬರಲು ಸಿಗುತ್ತಿರುವ ಅವಕಾಶವಾಗಿದೆ.

ಸಿರ್ಸಾ ಜಿಲ್ಲೆಯ ಡೇರಾ ಪ್ರಧಾನ ಕಚೇರಿಯಲ್ಲಿ ತನ್ನ ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯನ್ನು ಗುರ್ಮೀತ್‌ಗೆ 2017ರಲ್ಲಿ ಕೋರ್ಟ್ ವಿಧಿ‌ಸಿದೆ. ಒಬ್ಬ ಪತ್ರಕರ್ತ ಮತ್ತು ಡೇರಾದ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನ್ಯಾಯಾಲಯವು ಗುರ್ಮೀತ್‌ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು 2021ರಲ್ಲಿ ವಿಧಿಸಿತ್ತು.

2019ರ ಹರಿಯಾಣ ವಿಧಾನಸಭಾ ಚುನಾವಣೆಗಳ ಮೊದಲು ಪೆರೋಲ್ ಪಡೆದಿದ್ದ ರಾಮ್ ರಹೀಮ್‌ನನ್ನು 2021ರ ಜೂನ್‌ನಲ್ಲಿ ಪಂಜಾಬ್‌ನ ಸಂಗ್ರೂರ್ ಉಪಚುನಾವಣೆಯ ಮೊದಲು ತಿಂಗಳ ಅವಧಿಯ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಯಿತು. 2022ರ ಫೆಬ್ರವರಿಯಲ್ಲಿ ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಗುರ್ಮೀತ್‌ಗೆ 21 ದಿನಗಳ ಫರ್ಲೋ ನೀಡಲಾಯಿತು. 2022ರ ನವೆಂಬರ್‌ನಲ್ಲಿ 5ನೇ ಬಾರಿಗೆ ಮತ್ತೆ ಪೆರೋಲ್ ಪಡೆದಿದ್ದರು. 2023ರ ಜನವರಿಯಲ್ಲಿ 40 ದಿನಗಳ ಕಾಲ ಜೈಲಿನಿಂದ ಹೊರಗಿದ್ದ ಅವರು ಈಗ ಮತ್ತೆ 30 ದಿನಗಳ ಕಾಲ ಪೆರೋಲ್ ಪಡೆದಿದ್ದಾರೆ.

“ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ನೀಡಲಾಗಿರುವ 40 ದಿನಗಳ ಪೆರೋಲ್‌ನಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ” ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಜನವರಿಯಲ್ಲಿ ಹೇಳಿದ್ದರು.

ತುರ್ತು ಬೇಡಿಕೆ ಅಥವಾ ಅಗತ್ಯದ ಆಧಾರದ ಮೇಲೆ ಖೈದಿಗೆ ಪೆರೋಲ್ ನೀಡಲಾಗುತ್ತದೆ, ಜೈಲಿನಲ್ಲಿ ನಿಗದಿತ ಸಮಯವನ್ನು ಪೂರೈಸಿದ ನಂತರ ಯಾವುದೇ ಕಾರಣವಿಲ್ಲದೆ ಫರ್ಲೋ ನೀಡಬಹುದು ಎಂದಿದ್ದರು.

ಇದನ್ನೂ ಓದಿ: ಮಣಿಪುರದಲ್ಲಿ ಶಾಂತಿ-ಭದ್ರತೆ ಸ್ಥಾಪಿಸಲು ಸಾಧ್ಯವಾಗದಿದ್ದರೆ, ಅಧಿಕಾರದಲ್ಲಿರಲು ಹಕ್ಕಿಲ್ಲ: ಮೋದಿ ಹಳೆಯ ಟ್ವೀಟ್ ವೈರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...