Homeರಾಷ್ಟ್ರೀಯ‘ಬಾಡಿ ಸ್ಪ್ರೇ ಜಾಹೀರಾತಿನಲ್ಲಿ ಅತ್ಯಾಚಾರ ಸಂಸ್ಕೃತಿ ಪ್ರಚಾರ’ - ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಆದೇಶ

‘ಬಾಡಿ ಸ್ಪ್ರೇ ಜಾಹೀರಾತಿನಲ್ಲಿ ಅತ್ಯಾಚಾರ ಸಂಸ್ಕೃತಿ ಪ್ರಚಾರ’ – ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಆದೇಶ

- Advertisement -
- Advertisement -

ಅತ್ಯಾಚಾರ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮತ್ತು ಅಶ್ಲೀಲ ಸಂಭಾಷಣೆಯನ್ನು ಒಳಗೊಂಡಿದ್ದ ‘ಲೇಯರ್‌‌ ಶಾಟ್’‌ ಸುಗಂಧ ದ್ರವ್ಯದ ವಿವಾದಾತ್ಮಕ ಜಾಹಿರಾತನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್‌ ಮತ್ತು ಯೂಟ್ಯೂಬ್‌ಗೆ ಕೇಳಲಾಗಿದೆ ಎಂದು ವರದಿಯಾಗಿದೆ. ಪ್ರಕರಣದ ವಿಚಾರವಾಗಿ, ‘ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ’ಯು ಸಂಬಂಧಪಟ್ಟ ನಿಯಂತ್ರಣ ಸಂಸ್ಥೆಯಿಂದ ವಿಚಾರಣೆ ನಡೆಸುತ್ತಿದೆ ಎಂದು ಹಿಂದೂಸ್ಥಾನ್ ಟೈಮ್ಸ್‌ ವರದಿ ಮಾಡಿದೆ.

“ಜಾಹಿರಾತಿನ ವಿಡಿಯೊ ಮಹಿಳೆಯರ ಘನೆತೆಗೆ ಹಾನಿಕಾರಕವಾಗಿದೆ. ಇದು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) 2021 ರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಎರಡೂ ಸಾಮಾಜಿಕ ಮಾಧ್ಯಮಗಳಿಗೆ ವೇದಿಕೆಗಳಿಗೆ ಸರ್ಕಾರದಿಂದ ಪತ್ರಗಳನ್ನು ಕಳುಹಿಸಲಾಗಿದೆ” ಮೂಲಗಳು ತಿಳಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಮಧ್ಯೆ, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿಲ್ವಾಲ್‌, “ಲೇಯರ್‌ ಶಾಟ್‌ ಡಿಯೋಡರೆಂಟ್ ಜಾಹೀರಾತು ಅತ್ಯಾಚಾರ ಸಂಸ್ಕೃತಿಯನ್ನು ಸ್ಪಷ್ಟವಾಗಿ ಉತ್ತೇಜಿಸುತ್ತದೆ. ಇದಕ್ಕೆ ಕಂಪೆನಿಯ ಮಾಲಕರು ಉತ್ತರದಾಯಿಗಲಾಗಿದ್ದಾರೆ. ಅವರ ವಿರುದ್ದ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾವು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದು, ಮಾಹಿತಿ ಮತ್ತು ಪ್ರಸಾರ ಸಚಿವರಿಗೆ ಪತ್ರ ಬರೆದ್ದೇವೆ” ಎಂದು ಹೇಳಿದ್ದಾರೆ.

ಹಲವು ಟ್ವಿಟರ್ ಬಳಕೆದಾರರ ಪ್ರಕಾರ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಲಾಗಿದೆ. ವಿವಾದಾತ್ಮಕ ಎರಡೂ ಜಾಹೀರಾತುಗಳಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಲು ಸೂಚಿಸುವ ಅಶ್ಲೀಲ ಪದಗಳನ್ನು ಬಳಸಲಾಗಿದ್ದು, ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸಲಾಗಿದೆ.

ಇದನ್ನೂ ಓದಿ: ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪಕ್ಷದಿಂದ ಅಮಾನತು

ಮೊದಲ ಜಾಹೀರಾತಿನಲ್ಲಿ, ಪ್ರೇಮಿಗಳಿರುವ ಬೆಡ್‌‌ ರೂಂಗೆ ನಾಲ್ವರು ಯುವಕರು ಪ್ರವೇಶಿಸಿ, ‘ಶಾಟ್ ಮಾರಾ ಲಗ್ತಾ ಹೈ’ (ನೀವು ಶಾಟ್ ತೆಗೆದುಕೊಂಡಿದ್ದೀರಿ ಎಂದು ತೋರುತ್ತಿದೆ?) ಎಂದು ಕೇಳುತ್ತಾರೆ. ಈ ವೇಳೆ ಯುವತಿಯೊಂದಿಗೆ ಇರುವ ಯುವಕ ‘ಹೌದು’ ಎಂದು ಉತ್ತರಿಸುತ್ತಾನೆ. ಅವನ ಮಾತನ್ನು ಕೇಳಿದ ಯುವತಿ ಅಘಾತ ವ್ಯಕ್ತಪಡಿಸುತ್ತಾಳೆ. ಈ ವೇಳೆ ಒಳಗೆ ಪ್ರವೇಶಿಸಿದ ಯುವಕರಲ್ಲಿ ಒಬ್ಬ ವ್ಯಕ್ತಿ ಈಗ ನಮ್ಮ ಸರದಿ ಎಂದು ತೋಳು ಚಾಚುತ್ತಾ, ಹಾಸಿಗೆಯನ್ನು ಸಮೀಪಿಸುತ್ತಾನೆ. ಈ ವೇಳೆ ಯುವತಿ ತನ್ನ ಮೇಲೆ ದಾಳಿಗೆ ಬರುತ್ತಿದ್ದಾರೆ ಎಂದು ಭಾವಿಸಿ ಮತ್ತಷ್ಟು ಭಯಪಡುತ್ತಾಳೆ. ಆದರೆ ತೋಳು ಚಾಚಿದ ಯುವಕ ಅಲ್ಲಿರುವ ‘ಶಾಟ್’ ಸುಗಂಧ ದ್ರವ್ಯವನ್ನು ಎತ್ತಿಕೊಳ್ಳುತ್ತಾನೆ.

ಎರಡನೇ ಜಾಹೀರಾತನ್ನು, ಅಂಗಡಿಯೊಂದರಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲಿ ಯುವಕರ ಗುಂಪೊಂದು ಯುವತಿಯೊಬ್ಬರ ಹಿಂದೆ ನಿಂತು ಸಂಭಾಷಣೆ ನಡೆಸುತ್ತದೆ. ಅವರಲ್ಲಿ ಒಬ್ಬ ಯುವಕ, “ಹಮ್ ಚಾರ್ ಔರ್ ಯೇ ಸಿರ್ಫ್ ಏಕ್ (ನಾವು ನಾಲ್ವರು ಮತ್ತು ಇದು ಕೇವಲ ಒಂದೇ)” ಎಂದು ಹೇಳುತ್ತಾನೆ. ಈ ವೇಳೆ ಮತ್ತೊಬ್ಬ ವ್ಯಕ್ತಿ, “ಕೌನ್ ಲೆಗಾ ಶಾಟ್” (ಯಾರು ಶಾಟ್ ತೆಗೆದುಕೊಳ್ಳುತ್ತೀರಿ)?” ಎಂದು ಹೇಳುತ್ತಾನೆ. ಈ ಸಂಭಾಷಣೆಯನ್ನು ಕೇಳಿದ ಯುವತಿ ಭಯ ಮತ್ತು ಕೋಪದಿಂದ ತಿರುಗಿ ಅವರನ್ನು ನೋಡುತ್ತಾಳೆ. ಈ ವೇಳೆ ಅವರು ಸುಗಂಧ ದ್ರವ್ಯಕ್ಕೆ ಕೈಚಾಚಿ ಅದನ್ನು ಎತ್ತಿಕೊಳ್ಳುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...