ಪಂಜಾಬ್‌ನಲ್ಲಿ ವಿಷಕಾರಿ ಮದ್ಯದ ದುರಂತ: ಸಾವಿನ ಸಂಖ್ಯೆ 62 ಕ್ಕೆ ಏರಿಕೆ

ಬಹುಪಾಲು ಕುಟುಂಬಗಳು ಹೇಳಿಕೆ ನೀಡಲು ಮುಂದೆ ಬರುತ್ತಿಲ್ಲ. ಯಾವುದೇ ಕ್ರಮ ತೆಗೆದುಕೊಳ್ಳಲು ಸಹ ಬಯಸುತ್ತಿಲ್ಲ. ಅವರಲ್ಲಿ ಕೆಲವರು ಮರಣೋತ್ತರ ಪರೀಕ್ಷೆಯನ್ನು ಸಹ ಮಾಡಿಸುತ್ತಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

0
20
ಪಂಜಾಬ್‌ನಲ್ಲಿ ವಿಷಕಾರಿ ಮದ್ಯದ ದುರಂತದ ಸಾವಿನ ಸಂಖ್ಯೆ 62 ಕ್ಕೆ ಏರಿದೆ

ಪಂಜಾಬ್‌ನ ವಿಷಕಾರಿ ಮದ್ಯದ ದುರಂತದಲ್ಲಿ ರಾಜ್ಯದ ತಾರ್ನ್ ತರಣ್ ಜಿಲ್ಲೆಯಿಂದ ಮತ್ತೆ 23 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವನ್ನಪ್ಪಿದವರ ಸಂಖ್ಯೆ 62 ಕ್ಕೆ ಏರಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ರಾತ್ರಿಯವರೆಗೆ ಜಿಲ್ಲೆಯಲ್ಲಿ 19 ಸಾವುಗಳು ವರದಿಯಾಗಿದ್ದವು.

“ಟಾರ್ನ್ ತರಣ್ ನಲ್ಲಿ, ಸಾವಿನ ಸಂಖ್ಯೆ 42 ಕ್ಕೆ ತಲುಪಿದೆ” ಎಂದು ಜಿಲ್ಲಾಧಿಕಾರಿ ಕುಲ್ವಂತ್ ಸಿಂಗ್ ಶನಿವಾರ ಪಿಟಿಐಗೆ ತಿಳಿಸಿದರು.

ಜಿಲ್ಲೆಯ ಸದರ್ ಮತ್ತು ನಗರ ಪ್ರದೇಶಗಳಲ್ಲಿ ಗರಿಷ್ಠ ಸಾವುಗಳು ಸಂಭವಿಸಿವೆ ಎಂದ ಅವರು, ಬುಧವಾರ ರಾತ್ರಿಯಿಂದ ಅಮೃತಸರದಲ್ಲಿ 11 ಮತ್ತು ಗುರುದಾಸ್‌ಪುರದ ಬಟಾಲಾದಲ್ಲಿ 9 ಸಾವುಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.

ಹಲವಾರು ಸಂತ್ರಸ್ತ ಕುಟುಂಬಗಳು ತಮ್ಮ ಹೇಳಿಕೆಗಳನ್ನು ದಾಖಲಿಸಲು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದ್ದು, ಇದರ ಹಿಂದೆ ಯಾರದೋ ಕೈವಾಡವಿದೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

“ಬಹುಪಾಲು ಕುಟುಂಬಗಳು ಹೇಳಿಕೆ ನೀಡಲು ಮುಂದೆ ಬರುತ್ತಿಲ್ಲ. ಯಾವುದೇ ಕ್ರಮ ತೆಗೆದುಕೊಳ್ಳಲು ಸಹ ಬಯಸುತ್ತಿಲ್ಲ. ಅವರಲ್ಲಿ ಕೆಲವರು ಮರಣೋತ್ತರ ಪರೀಕ್ಷೆಯನ್ನು ಸಹ ಮಾಡಿಸುತ್ತಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಸತ್ತವರಲ್ಲಿ ನಕಲಿ ಮದ್ಯದ ಕಾರಣದಿಂದಾಗಿ ಅವರು ಸತ್ತರು ಎಂದು ಕೆಲವರು ಒಪ್ಪಿಕೊಳ್ಳುತ್ತಿಲ್ಲ. ತಮ್ಮ ಕುಟುಂಬ ಸದಸ್ಯ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೆಲವು ಕುಟುಂಬಗಳು ಪೊಲೀಸರಿಗೆ ಮಾಹಿತಿ ನೀಡದೆ ಶವಗಳನ್ನು ದಹನ ಮಾಡಿದ್ದಾರೆ ಎಂದು ತಾರ್ನ್ ತರಣ್ ಡಿಸಿ ಕುಲ್ವಂತ್ ಸಿಂಗ್ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: ವಿಷಕಾರಿ ಮದ್ಯ ಸೇವಿಸಿ ಪಂಜಾಬ್‌ನಲ್ಲಿ 21 ಮಂದಿ ಸಾವು; ತನಿಖೆಗೆ ಆದೇಶ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here