Homeಮುಖಪುಟರಾಪರ್‌ ಸ್ಟಾನ್‌ ಸಂಗೀತ ಕಾರ್ಯಕ್ರಮಕ್ಕೆ ಬಜರಂಗದಳದಿಂದ ಅಡ್ಡಿ; ರದ್ದು

ರಾಪರ್‌ ಸ್ಟಾನ್‌ ಸಂಗೀತ ಕಾರ್ಯಕ್ರಮಕ್ಕೆ ಬಜರಂಗದಳದಿಂದ ಅಡ್ಡಿ; ರದ್ದು

- Advertisement -
- Advertisement -

ಜನಪ್ರಿಯ ರಾಪರ್‌, ರಿಯಾಲಿಟಿ ಶೋ ಬಿಗ್ ಬಾಸ್ 16ರ ಸೀಸನ್‌ನಲ್ಲಿ ಗೆಲುವು ಸಾಧಿಸಿರುವ ಎಂ.ಸಿ.ಸ್ಟಾನ್‌ ಅಕಾ ಅಲ್ತಾಫ್‌ ತಡವಿ ಅವರ ಸಂಗೀತ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಕಾರ್ಯಕ್ರಮವನ್ನು ರದ್ದುಮಾಡಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆಸಿದೆ.

ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಪ್ರಿಯಾಂಕಾ ಚಾಹರ್ ಚೌಧರಿ, ಶಿವ ಠಾಕರೆ, ಅರ್ಚನಾ ಗೌತಮ್ ಮತ್ತು ಶಾಲಿನ್ ಭಾನೋಟ್ ಅವರನ್ನು ಸೋಲಿಸಿದ ಬಳಿಕ ಸ್ಟಾನ್‌ ಮನೆಮಾತಾಗಿದ್ದಾರೆ.

ಈ ತಿಂಗಳ ಆರಂಭದಲ್ಲಿ ‘ಎಂಸಿ ಸ್ಟಾನ್ ಹಸ್ತಿ ಕಾ ಬಸ್ತಿ’ ಎಂಬ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಪ್ರವಾಸವನ್ನು ಪ್ರಾರಂಭಿಸಿರುವ ಅವರು, ಪುಣೆ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಆದಾಗ್ಯೂ, ಮಾರ್ಚ್ 17ರ ಶುಕ್ರವಾರ ರಾತ್ರಿ ಇಂದೋರ್‌ನಲ್ಲಿ ಸಂಗೀತ ಕಚೇರಿಯನ್ನು ರದ್ದುಪಡಿಸಬೇಕಾಯಿತು. ವೇದಿಗೆ ನುಗ್ಗಿದ ಬಜರಂಗದಳದ ಕೆಲವು ಕಿಡಿಗೇಡಿಗಳು ಸ್ಥಳದಲ್ಲಿ ಗದ್ದಲ ಉಂಟು ಮಾಡಿದ್ದು ಇದಕ್ಕೆ ಕಾರಣವಾಗಿತ್ತು.

ಮಧ್ಯಪ್ರದೇಶದಲ್ಲಿ ನಡೆದ ಎಂಸಿ ಸ್ಟಾನ್ ಅವರ ಸಂಗೀತ ಕಚೇರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಹಿಂದುತ್ವವಾದಿ ಗುಂಪಿನ ಕೆಲವು ಸದಸ್ಯರು ವೇದಿಕೆಗೆ ನುಗ್ಗಿದರು.

“ಈ ರಾಪರ್ ತನ್ನ ಹಾಡುಗಳಲ್ಲಿ ನಿಂದನೆ ತುಂಬಿದ ಪದಗಳನ್ನು ಬಳಸಿ ದೇಶದ ಯುವ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದಾರೆ” ಎಂದು ಆರೋಪಿಸಿರುವ ಕಿಡಿಗೇಡಿಗಳು, ವೇದಿಕೆಯಲ್ಲಿ ನಿಂತು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ.

ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಜನರು, ಬಜರಂಗದಳದ ವರ್ತನೆಯನ್ನು ಖಂಡಿಸಿದ್ದಾರೆ.

“ಯಾವುದೇ ಕಾರಣವಿಲ್ಲದೆ ಸ್ಟಾನ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂಬ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. “ದೇವರ ಹೆಸರಿನಲ್ಲಿ ಜನರನ್ನು ಭಯಭೀತರನ್ನಾಗಿಸುವ ಇಂತಹ ಗುಂಪುಗಳು ಸರ್ಕಾರದಿಂದ ಅನುಮೋದಿಸಲ್ಪಟ್ಟಿವೆ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ.

“ಹಿಂದೂ ಆಗಿರುವ ನಾನು ಅವರ ಪರವಾಗಿ ಕ್ಷಮೆಯಾಚಿಸುತ್ತೇನೆ, ಈ ಜನರು ನಮ್ಮ ಹೆಸರಿಗೆ ಅವಮಾನ ಮಾಡಿದ್ದಾರೆ ನನ್ನನ್ನು ಕ್ಷಮಿಸಿ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಇದರ ನಡುವೆ ಎಂಸಿ ಸ್ಟಾನ್ ಅವರು ತಮ್ಮ ಮುಂದಿನ ಸಂಗೀತ ಕಚೇರಿಗಳನ್ನು ಇಂದು ನಾಗ್ಪುರದಲ್ಲಿ ನಡೆಸಲಿದ್ದಾರೆ. ನಂತರ ಅವರು ಏಪ್ರಿಲ್‌ನಲ್ಲಿ ತಮ್ಮ ಪ್ರವಾಸವನ್ನು ಪುನರಾರಂಭಿಸುವ ಮೊದಲು ವಿರಾಮ ತೆಗೆದುಕೊಳ್ಳಲಿದ್ದಾರೆ. ಅಹಮದಾಬಾದ್, ಜೈಪುರ, ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ತಮ್ಮ ಹಸ್ತಿ ಕಾ ಬಸ್ತಿ ಪ್ರವಾಸವನ್ನು ಮೇ 7 ರಂದು ಕೊನೆಗೊಳಿಸುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...