Homeಮುಖಪುಟ'ಭರವಸೆಯ ಕಿರಣ'; ಕೊರೊನಾ ಸೋಂಕಿತ 97 ವರ್ಷದ ಹಿರಿಯ ವ್ಯಕ್ತಿ ಗುಣಮುಖ

‘ಭರವಸೆಯ ಕಿರಣ’; ಕೊರೊನಾ ಸೋಂಕಿತ 97 ವರ್ಷದ ಹಿರಿಯ ವ್ಯಕ್ತಿ ಗುಣಮುಖ

- Advertisement -
- Advertisement -

ಆಗ್ರಾದ 97 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ನಿನ್ನೆ ಹೇಳಿದ್ದು, ಸಾಂಕ್ರಮಿಕದ ಈ ಸಮಯದಲ್ಲಿ ರೋಗಿಗಳಿಗೆ ‘ಭರವಸೆಯ ಕಿರಣ’ ಗೋಚರಿಸಿದಂತಾಗಿದೆ.

1923 ರಲ್ಲಿ ಜನಿಸಿದ್ದ ಈ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಯಿಂದ ಬುಧವಾರ ಬಿಡುಗಡೆ ಮಾಡಲಾದೆ ಎನ್ನಲಾಗಿದ್ದು, ಕೊರೊನಾ ವಿರುದ್ದದ ಸಮರದಲ್ಲಿ ಯಶಸ್ವಿಯಾಗಿ ಚೇತರಿಸಿಕೊಂಡ ದೇಶದ ಅತ್ಯಂತ ಹಿರಿಯ ರೋಗಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ.

ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಎನ್ ಸಿಂಗ್ ಪಿಟಿಐ ಜೊತೆ ಮಾತನಾಡುತ್ತಾ, ಐತಿಹಾಸಿಕ ನಗರಕ್ಕೆ ಇದು “ಹೆಮ್ಮೆಯ ವಿಷಯ” ಎಂದು ಶ್ಲಾಘಿಸಿದರು.

“ನಮ್ಮ ತಂಡವು ಪ್ರತಿದಿನ ಅವರ ಸ್ಥಿತಿಯ ಮೇಲೆ ಕಣ್ಣಿಟ್ಟಿತ್ತು. ಚೇತರಿಸಿಕೊಂಡ ನಂತರ ಅವರ ಕೊರೊನಾ ವೈರಸ್ ಪರೀಕ್ಷೆಯು ನೆಗೆಟಿವ್ ಬಂದ ದಿನ, ನಾವು ತುಂಬಾ ಖುಷಿಪಟ್ಟಿದ್ದೇವೆ. ಅವರ ಚೇತರಿಕೆ ಕೊರೊನಾ ಸೋಂಕಿತ ರೋಗಿಗಳಿಗೆ ಭರವಸೆಯ ಕಿರಣ ಆಗಿದೆ “ಎಂದು ಅವರು ಹೇಳಿದರು.

ಅವರ ಚೇತರಿಕೆಯ ಬಗ್ಗೆ ಗುರುವಾರ ಅವರು ಟ್ವೀಟ್ ಮಾಡಿದ್ದಾರೆ, ಇದು ವಿಶೇಷವಾಗಿ ವಯಸ್ಸಾದ ಜನರಿಗೆ ಭರವಸೆಯನ್ನು ನೀಡುತ್ತದೆ ಮತ್ತು “#ಕೊರೋನಾ ವಾರಿಯರ್ಸ್ ಗೆ ಸೆಲ್ಯೂಟ್” ಎಂದು ಬರೆದಿದ್ದಾರೆ.

ವ್ಯಕ್ತಿಯನ್ನು ಏಪ್ರಿಲ್ 29 ರಂದು ಆಗ್ರಾದಲ್ಲಿನ ನಯತಿ ಆಸ್ಪತ್ರೆಯ ಕೊರೊನಾ ಆರೈಕೆಯ 2 ನೇ ಹಂತದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಅಧಿಕ ರಕ್ತದೊತ್ತಡವಿದ್ದು ಆರಂಭದಲ್ಲಿ ಸ್ವಲ್ಪ ಆಮ್ಲಜನಕದ ಪೂರೈಕೆಯ ಅಗತ್ಯವಿತ್ತು ಆದರೆ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಓದಿ: ಕೊರೊನಾ ಸೋಂಕು ತಗುಲಿದ್ದ ಭಾರತದ ಅತ್ಯಂತ ಹಿರಿಯ ದಂಪತಿಗಳು ಗುಣಮುಖ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ: ಪ್ರಿಯಾಂಕ ಗಾಂಧಿ

0
'ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ' ಮತ್ತು 'ನನ್ನ ಅಜ್ಜಿ ಆಡಳಿತದಲ್ಲಿ ದೇಶದ ಯುದ್ಧಕ್ಕಾಗಿ ತಮ್ಮ ಚಿನ್ನವನ್ನು ದಾನ ಮಾಡಿದ್ದಾರೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದು, ಪ್ರಧಾನಿ...