Homeಮುಖಪುಟನಿಯಮಿತ ವೇತನದ ಉದ್ಯೋಗ: ಹಿನ್ನೆಡೆ ಕಂಡ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯ; ವರದಿ

ನಿಯಮಿತ ವೇತನದ ಉದ್ಯೋಗ: ಹಿನ್ನೆಡೆ ಕಂಡ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯ; ವರದಿ

- Advertisement -
- Advertisement -

ಕಳೆದ ಐದು ವರ್ಷಗಳಲ್ಲಿ ಬಹುಸಂಖ್ಯಾತ ಹಿಂದೂ ಜನಸಂಖ್ಯೆಗೆ ಹೋಲಿಸಿದರೆ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಸಿಖ್‌ನಂತಹ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ನಿಯಮಿತ ವೇತನ ಹೊಂದಿರುವ ಉದ್ಯೋಗಿಗಳಾಗಿ ಕೆಲಸ ಮಾಡುವ ಜನರ ಪಾಲಿನಲ್ಲಿ ಹೆಚ್ಚಿನ ಕುಸಿತವನ್ನು ಕಂಡಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಇತ್ತೀಚಿನ ವಿಶ್ಲೇಷಣೆಯಲ್ಲಿ ತಿಳಿಸಿದೆ.

ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ(Periodic Labour Force Survey (PLFS) ದತ್ತಾಂಶ ಈ ಶಾಕಿಂಗ್‌ ಮಾಹಿತಿಯನ್ನು ಹೊರಗಿಟ್ಟಿದೆ. ಈ ಅಲ್ಪಸಂಖ್ಯಾತರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಕಾರ್ಮಿಕರು 2018-19 ಮತ್ತು 2022-23ರ ನಡುವೆ ನಿಯಮಿತ ವೇತನದ ಉದ್ಯೋಗ ಪಡೆಯುವಲ್ಲಿ ಹೆಚ್ಚಿನ ಕುಸಿತವನ್ನು ಕಂಡಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ.

ಏಪ್ರಿಲ್ 2017ರಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯಿಂದ PLFSನ್ನು ಪ್ರಾರಂಭಿಸಲಾಯಿತು. ಇದು ಪ್ರಮುಖ ಉದ್ಯೋಗ ಮತ್ತು ಕಾರ್ಮಿಕರ ಜನಸಂಖ್ಯೆಯ ಅನುಪಾತ, ಕಾರ್ಮಿಕ ಭಾಗವಹಿಸುವಿಕೆ ದರ ಮತ್ತು ನಿರುದ್ಯೋಗ ದರ,  ಸಾಮಾಜಿಕ ಮತ್ತು ಧಾರ್ಮಿಕ ಗುಂಪುಗಳಲ್ಲಿ ಉದ್ಯೋಗದ ಸ್ಥಿತಿಯನ್ನು ಅವಲೋಕಿಸಿ ವರದಿಯನ್ನು ಸಿದ್ದಪಡಿಸುತ್ತದೆ.

ಬಿಸಿನೆಸ್ ಸ್ಟ್ಯಾಂಡರ್ಡ್ ಇತ್ತೀಚಿನ ವಿಶ್ಲೇಷಣೆ ಪ್ರಕಾರ, 2018-19ರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 22.1% ಕಾರ್ಮಿಕರು ನಿಯಮಿತ ವೇತನ ಉದ್ಯೋಗಿಗಳಾಗಿ ಕೆಲಸ ಮಾಡಿದ್ದರೆ, 2022-23ರಲ್ಲಿ ಈ ಪಾಲು 15.3%ಕ್ಕೆ ಇಳಿದಿದೆ, ಇದು 6.8 ಶೇಕಡಾ ಪಾಯಿಂಟ್ ಕುಸಿತವನ್ನು ದಾಖಲಿಸಿದೆ.

ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜನಸಂಖ್ಯೆಯು 3.2 ಶೇಕಡಾ ಪಾಯಿಂಟ್ ಕುಸಿತವನ್ನು ಕಂಡಿದೆ,  2022-23 ರಲ್ಲಿ ಕೇವಲ 28% ಕ್ರಿಶ್ಚಿಯನ್ ಕೆಲಸಗಾರರು ನಿಯಮಿತ ಉದ್ಯೋಗಗಳನ್ನು ಹೊಂದಿದ್ದಾರೆ. 2018-19 ರಲ್ಲಿ ಇದರ ಅಂಕಿ-ಅಂಶಗಳು 31.2% ರಷ್ಟಿತ್ತು.

ಸಿಖ್ ಸಮುದಾಯದಲ್ಲಿ ಈ ಅಂಕಿ-ಅಂಶಗಳು ಶೇಕಡಾ 2.5 ಪಾಯಿಂಟ್ ಕುಸಿತವನ್ನು ಕಂಡಿದೆ. 2022-23ರಲ್ಲಿ ಕೇವಲ 26% ಸಿಖ್ ಕಾರ್ಮಿಕರು ನಿಯಮಿತ ವೇತನದ ಉದ್ಯೋಗವನ್ನು ಹೊಂದಿದ್ದರು, 2018-19ರಲ್ಲಿ ಇದರ ಪಾಲು 28.5% ಇತ್ತು.

ಬಹುಸಂಖ್ಯಾತ ಹಿಂದೂ ಸಮುದಾಯಕ್ಕೆ ಉದ್ಯೋಗದ ಗುಣಮಟ್ಟದಲ್ಲಿ ಕ್ಷೀಣತೆ ಕಡಿಮೆಯಾಗಿದೆ. 21.4% ಕಾರ್ಮಿಕರು 2022-23ರಲ್ಲಿ ನಿಯಮಿತ ಸಂಬಳದ ಉದ್ಯೋಗಗಳನ್ನು ಹೊಂದಿದ್ದರು, 2018-19 ರಲ್ಲಿ ಇದು 23.7% ಇತ್ತು. ಅಂದರೆ 2.3 ಶೇಕಡಾ ಮಾತ್ರ ಕಡಿಮೆಯಾಗಿದೆ ಎಂದು ವರದಿ ಬಹಿರಂಗಪಡಿಸಿದೆ.

ಎಲ್ಲಾ ಧಾರ್ಮಿಕ ಗುಂಪುಗಳಲ್ಲಿ ಸ್ವಯಂ ಉದ್ಯೋಗ ಹೊಂದಿರುವವರ ಸಂಖ್ಯೆಯಲ್ಲಿ ಹೆಚ್ಚುತ್ತಿರುವಾಗ, ಅರೆಕಾಲಿಕ ಕೆಲಸಗಾರರ ಪಾಲು ಮುಸ್ಲಿಂ ಸಮುದಾಯದಲ್ಲಿ ಮಾತ್ರ ಹೆಚ್ಚಾಗಿದೆ ಎಂದು ದಿನಪತ್ರಿಕೆ ವರದಿ ಮಾಡಿದೆ. ಸುಮಾರು 26.3% ಮುಸ್ಲಿಂ ಕಾರ್ಮಿಕರು 2022-23 ರಲ್ಲಿ ಅರೆಕಾಲಿಕ ಕಾರ್ಮಿಕರಾಗಿ ಕೆಲಸ ಮಾಡಿದರು, 2018-19 ರಲ್ಲಿ ಇದರ ಅಂಕಿ-ಅಂಶಗಳು 25.7% ರಷ್ಟಿತ್ತು. ಇದು ಹಿಂದೂಗಳು, ಸಿಖ್ಖರು ಮತ್ತು ಕ್ರಿಶ್ಚಿಯನ್ನರಂತಹ ಇತರ ಧಾರ್ಮಿಕ ಗುಂಪುಗಳಿಗೆ ಹೋಲಿಸಿದರೆ ವ್ಯತಿರಿಕ್ತವಾಗಿದೆ, ಈ ಸಮುದಾಯಗಳಲ್ಲಿ ಅರೆಕಾಲಿಕ ಕಾರ್ಮಿಕರಾಗಿ ಕೆಲಸ ಮಾಡುವ ಜನಸಂಖ್ಯೆಯ ಪಾಲು ಇಳಿಮುಖವಾಗಿದೆ ಎಂದು ವರದಿ ಹೇಳಿದೆ.

ಅಕ್ಟೋಬರ್ 2023ರಲ್ಲಿ ಮುಸ್ಲಿಂ ಧಾರ್ಮಿಕ ಗುಂಪುಗಳಲ್ಲಿ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (LFPR) ಮತ್ತು ಕಾರ್ಮಿಕರ ಜನಸಂಖ್ಯೆಯ ಅನುಪಾತ (WPR) ಕುಸಿದಿದೆ ಎಂದು ವರದಿ ಮಾಡಿದೆ. ಕಾರ್ಮಿಕ ಬಲದ ಭಾಗವಹಿಸುವಿಕೆಯ ಪ್ರಮಾಣವು ಕೆಲಸವನ್ನು ಹುಡುಕುತ್ತಿರುವ ಜನಸಂಖ್ಯೆಯ ಪಾಲು ಮತ್ತು ಕಾರ್ಮಿಕರ ಜನಸಂಖ್ಯೆಯ ಅನುಪಾತವು ಕೆಲಸ ಮಾಡುವ ದುಡಿಯುವ ವಯಸ್ಸಿನ ಜನಸಂಖ್ಯೆಯ ಪಾಲು ಆಗಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕ ಸಂತೋಷ್ ಮೆಹ್ರೋತ್ರಾ ಅವರು ಈ ದತ್ತಾಂಶವನ್ನು ವಿವರಿಸುತ್ತಾ, ಮುಸ್ಲಿಮರು ಗ್ರಾಮೀಣ ಜನಸಂಖ್ಯೆಗಿಂತ ನಗರ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ಹೊಂದಿದ್ದಾರೆ. ಏಕೆಂದರೆ ಹೆಚ್ಚಿನ ಮುಸ್ಲಿಮರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ, ಮೊದಲ ಕೋವಿಡ್ ನಂತರದ ವರ್ಷದಲ್ಲಿ ಕಾರ್ಮಿಕ ಮಾರುಕಟ್ಟೆ ಪುನಶ್ಚೇತನಗೊಂಡಾಗ ಮುಸ್ಲಿಮರ ವರ್ಕಿಂಗ್‌ ಪಾಪ್ಯುಲೇಷನ್‌ ಅನುಪಾತದಲ್ಲಿ 2 ಶೇಕಡಾವಾರು ಕುಸಿತ ಕಂಡು ಬಂದಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ನೀಡಿರುವುದು ಶೇ.1ಕ್ಕಿಂತ ಕಡಿಮೆ ಅನುದಾನ: ಸಚಿವ ಝಮೀರ್ ಅಹ್ಮದ್ ಖಾನ್

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...