Homeಚಳವಳಿಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಗಳು

ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಗಳು

ದಕ್ಷಿಣದಲ್ಲಿ ರೈತ ಹೋರಾಟ ನಡೆಯುತ್ತಿಲ್ಲ ಎಂಬ ಸುಳ್ಳು ಪ್ರಚಾರ ನಿಲ್ಲಿಸಿ, ಕಾಯ್ದೆಗಳನ್ನು ಹಿಂತೆಗೆದುಕೊಳ್ಳದಿದ್ದರೆ ದಕ್ಷಿಣದ ಎಲ್ಲಾ ರಾಜ್ಯಗಳಿಂದ ನೂರಾರು ಸಂಖ್ಯೆಗಳಲ್ಲಿ ದೆಹಲಿಗೆ ಟ್ರಾಕ್ಟರ್ ಜಾಥ ಪ್ರಾರಂಭಿಸಲಾಗುವುದು- ಚಾಮರಸ ಮಾಲಿ ಪಾಟೀಲ

- Advertisement -
- Advertisement -

ದೆಹಲಿಯ ರೈತ ಹೋರಾಟದ ಕೇಂದ್ರವಾದ ಶಿಂಘು ಬಾರ್ಡರಿನಲ್ಲಿ ಇಡೀ ಆಂದೋಲನಕ್ಕೆ ಮುಂದಾಳತ್ವ ನೀಡುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಸಮಿತಿಯ ಸಭೆ ನಡೆದಿದ್ದು, ಇದರಲ್ಲಿ ವಿವಿಧ ರಾಜ್ಯಗಳ ಮುಖಂಡರು ಇದರಲ್ಲಿ ಭಾಗವಹಿಸಿದ್ದರು. ಕರ್ನಾಟಕವನ್ನು ಪ್ರತಿನಿಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮತ್ತು ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಪಾಲ್ಗೊಂಡಿದ್ದರು.

ಈ ಸಭೆಯಲ್ಲಿ, ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟವನ್ನು ಗಮನಕ್ಕೆ ತರಲಾಯಿತು ಮತ್ತು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹೋರಾಟವನ್ನು ಬೆಸೆದು ಬಿರುಸುಗೊಳಿಸಲು ಕೆಲವು ಪ್ರಸ್ತಾಪಗಳನ್ನು ಮುಂದಿಡಲಾಯಿತು.

ಸಭೆಯಲ್ಲಿ ಬಂದ ಎಲ್ಲಾ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಸಭೆಯು ಒಕ್ಕೊರಲ ಬಹುಮುಖ್ಯ ತೀರ್ಮಾನಗಳಿಗೆ ತಲುಪಿತು. ರೈತರು ಹೇಳುವ ಅಜೆಂಡಾ ಮತ್ತು ಅನುಕ್ರಮದಂತೆ ಡಿಸೆಂಬರ್ 29ರಂದು ಮುಂದಿನ ಮಾತುಕತೆಯನ್ನು ನಿಗದಿ ಮಾಡುವಂತೆ ಸರ್ಕಾರಕ್ಕೆ ಪತ್ರ ಕಳುಹಿಸಲಾಯಿತು. ಅದರಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ಅಳವಡಿಸಬೇಕಾದ ಪ್ರಕ್ರಿಯೆ ಕಡ್ಡಾಯವಾಗಿ ಮೊದಲ ಅಜೆಂಡವಾಗಿರಬೇಕು ಎಂದು ಆಗ್ರಹಿಸಲಾಗಿದೆ.

ಇದನ್ನೂ ಓದಿ: ಮಾಸ್ಕ್ ಹಾಕಿದ್ದರೂ ದಂಡ ವಸೂಲಿ ಆರೋಪ: ದೂರು ನೀಡಿದ ಬಿಜೆಪಿ ಶಾಸಕ

ಸರ್ಕಾರ ಒಂದು ವೇಳೆ ಡಿಸೆಂಬರ್ 29ಕ್ಕೂ ಬರಿಗೈ ಪ್ರತಿಕ್ರಿಯೆ ನೀಡಿದರೆ ಅಥವ ದೇಶವನ್ನು ವಂಚಿಸುವ ಕೆಲಸ ಮಾಡಿದರೆ, ಹೊಸ ವರ್ಷದ ಜನವರಿ ಒಂದರೊಂದು ಮುಂದಿನ ಹೋರಾಟದ ಕುರಿತ ಬಹುದೊಡ್ಡ ಘೋಷಣೆ ಮಾಡಲಾಗುವುದು ಎಂದು ಎಚ್ಚರಿಸಲಾಯಿತು.

ಸಭೆಯ ನಂತರ ನಡೆದ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಕರ್ನಾಟಕದ ಪ್ರತಿನಿಧಿಯಾದ ಚಾಮರಸ ಮಾಲಿ ಪಾಟೀಲರು ಮಾತನಾಡಿದರು.

“ದಕ್ಷಿಣದಲ್ಲಿ ರೈತ ಹೋರಾಟ ನಡೆಯುತ್ತಿಲ್ಲ ಎಂಬ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ವಾಸ್ತವದಲ್ಲಿ ಕರ್ನಾಟಕದಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ನಿರಂತರ ಹೋರಾಟ ನಡೆದಿದೆ. ಈ ಸುಳ್ಳು ಪ್ರಚಾರ ನಿಲ್ಲಿಸದಿದ್ದರೆ ಮತ್ತು ಕಾಯ್ದೆಗಳನ್ನು ಹಿಂತೆಗೆದುಕೊಳ್ಳದಿದ್ದರೆ ಕರ್ನಾಟಕವನ್ನೂ ಒಳಗೊಂಡಂತೆ ದಕ್ಷಿಣದ ಎಲ್ಲಾ ರಾಜ್ಯಗಳಿಂದ ನೂರಾರು ಸಂಖ್ಯೆಗಳಲ್ಲಿ ದೆಹಲಿಗೆ ಟ್ರಾಕ್ಟರ್ ಜಾಥ ಪ್ರಾರಂಭಿಸಲಾಗುವುದು” ಎಂದು ಎಚ್ಚರಿಸಿದರು.


ಇದನ್ನೂ ಓದಿ: ಬಿಜೆಪಿಯೇತರ ಪಕ್ಷಗಳು UPA ಅಡಿಯಲ್ಲಿ ಒಂದಾಗಬೇಕು – ಶಿವಸೇನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...