24 ದಲಿತ ಕುಟುಂಬಗಳ ಸಾಮಾಜಿಕ ಬಹಿಷ್ಕಾರವನ್ನು ಉತ್ತೇಜಿಸಿದ ಆರೋಪದ ಮೇಲೆ, ತೆಲಂಗಾಣದ ಸಂಗ್ಯಮ್ ಶ್ರೀರಾಂಪುರ ಗ್ರಾಮದ 18 ಗ್ರಾಮೀಣ ಅಭಿವೃದ್ಧಿ ಸಮಿತಿ (ವಿಡಿಸಿ) ಸದಸ್ಯರ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ದಸರ ಹಬ್ಬದ ಸಂದರ್ಭದಲ್ಲಿ ಗ್ರಾಮದ ಅಂಬೇಡ್ಕರ್ ಪ್ರತಿಮೆಯ ಬಳಿ ಮೇಲ್ಜಾತಿಯವರು ‘ರಾಮ್‌ಲೀಲಾ’ ಕಾರ್ಯಕ್ರಮವನ್ನು ನಡೆಸಲು ಪ್ರಯತ್ನಿಸಿದಾಗ ದಲಿತ ಕುಟುಂಬಗಳು ಮತ್ತು ಕೆಲವು ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿತ್ತು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬಗಳ ಪ್ರಕಾರ, “ತಮ್ಮ ಪ್ರದೇಶದಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿಯಾಗಿಲ್ಲ. ಗ್ರಾಮ ಪಂಚಾಯಿತಿಯಿಂದ ಬಿಡುಗಡೆಯಾಗಿರುವ ಹಣವನ್ನು ದಲಿತರ ಏರಿಯಾಗಳಲ್ಲಿ ಚರಂಡಿಗಳನ್ನು ನಿರ್ಮಿಸಲು ಮತ್ತು ರಸ್ತೆಗಳನ್ನು ಹಾಕಲು ಬಳಸುತ್ತಿಲ್ಲ. ಮೇಲ್ಜಾತಿಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಸದಸ್ಯರು ದಲಿತರನ್ನೂ ಮನುಷ್ಯರಂತೆ ಪರಿಗಣಿಸಿ ಸಮಾಜದೊಟ್ಟಿಗೆ ಬದುಕಲು ಬಿಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್ ಬರಹ
ಪರಿಸ್ಥಿತಿಯ ಕೈಮೀರಿದ ನಂತರ ಎಚ್ಚರಗೊಂಡ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ವಿಡಿಸಿ ಸದಸ್ಯರು ಮತ್ತು ದಲಿತ ಕುಟುಂಬಗಳೊಂದಿಗೆ ಚರ್ಚಿಸಿದರು. ಆದರೆ, ಈ ವಿಷಯವನ್ನು ಪರಿಹರಿಸಲು ಅವರಿಗೆ ಸಲಹೆ ನೀಡಲಾಗಿದ್ದರೂ, ಗ್ರಾಮದ ಪರಿಸ್ಥಿತಿ ಕಠೋರವಾಗಿದೆ ಎಂದು ಹಲವು ಮೂಲಗಳು ತಿಳಿಸಿವೆ.
ಈ ವಿಡಿಸಿ ಸದಸ್ಯರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, 24 ಕುಟುಂಬಗಳನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಸ್‌ಪಿ ಕೇಡರ್ ಅಧಿಕಾರಿಯೊಬ್ಬರು ತನಿಖೆ ನಡೆಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!
ಇದಕ್ಕೆ ಕಾರಣ ದಲಿತರು ಅಧಿಕಾರ ವಂಚಿತರಾಗಿ ನೂರಾರು ವರ್ಷಗಳಿಂದ ಹಿಂದುಳಿದ ಕಾರಣ
ಮತ್ತು ಮೀಸಲಾತಿ ಸೌಲಭ್ಯ ಪಡೆಯಲು. ಇತರೆ ಮೇಲಿನ ಜಾತೀಯ ದಲಿತ ವರ್ಗಗಳ ಪಾಲಾಯನವಾಗುದನ್ನು ತಡೆಯಲು ಸದಾಶಿವ ಆಯೋಗ ಜಾರಿಯಾಗಬೇಕು