Homeಮುಖಪುಟಪಂಜಾಬ್ ಸರ್ಕಾರ, ಕೇಂದ್ರದ ನಡುವೆ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಕಿತ್ತಾಟ

ಪಂಜಾಬ್ ಸರ್ಕಾರ, ಕೇಂದ್ರದ ನಡುವೆ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಕಿತ್ತಾಟ

- Advertisement -
- Advertisement -

ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನದ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಪಂಜಾಬ್‌ನ ಆಮ್ ಆದ್ಮಿ ಸರ್ಕಾರದ ನಡುವೆ ಕಿತ್ತಾಟ ಶುರುವಾಗಿದೆ.

ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮ ರಾಜ್ಯದ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಮೆರವಣಿಗೆಯಿಂದ ಹೊರಗಿಟ್ಟಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ ಬುಧವಾರ ಆರೋಪಿಸಿದ್ದಾರೆ.

“ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಪಂಜಾಬ್‌ನ ಸ್ತಬ್ಧಚಿತ್ರವನ್ನು ಸಾಂಸ್ಕೃತಿಕ ಮೆರವಣಿಗೆಯಿಂದ ಹೊರಗಿಟ್ಟಿದೆ. ಎರಡನೇ ಬಾರಿ ಈ ರೀತಿ ಆಗ್ತಿದೆ. ಸ್ತಬ್ಧಚಿತ್ರ ಆಯ್ಕೆಗೆ ಬೇಕಾದ ಎಲ್ಲಾ ಮಾನದಂಡಗಳನ್ನು ಮುಂಚಿತವಾಗಿಯೇ ನಾವು ಪೂರೈಸಿದ್ದೇವೆ. ಆದರೂ, ನಮ್ಮ ಸ್ತಬ್ಧಚಿತ್ರ ಆಯ್ಕೆಯಾಗಿಲ್ಲ ಎಂಬ ಪತ್ರವನ್ನು ನಾವು ಸ್ವೀಕರಿಸಿದ್ದೇವೆ” ಎಂದು ಸಿಎಂ ಭಗವಂತ್ ಮಾನ್ ಚಂಡೀಗಢದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ತಬ್ಧಚಿತ್ರ ಆಯ್ಕೆ ವೇಳೆ ಬಿಜೆಪಿ ಆಡಳಿತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಒಟ್ಟು 20 ರಾಜ್ಯಗಳ ಸ್ತಬ್ಧಚಿತ್ರಗಳು ಈ ವರ್ಷದ ಮೆರವಣಿಗೆಗೆ ಆಯ್ಕೆಯಾಗಿವೆ. ಈ ಪೈಕಿ ಹೆಚ್ಚಿನವು ಬಿಜೆಪಿ ಆಡಳಿತದ ರಾಜ್ಯಗಳದ್ದು. ಆಮ್‌ ಆದ್ಮಿ ಆಡಳಿತವಿರುವ ದೆಹಲಿಯ ಸ್ತಬ್ಧಚಿತ್ರವನ್ನು ಕೂಡ ಆಯ್ಕೆ ಮಾಡಿಲ್ಲ ಎಂದು ಭಗವಂತ್ ಮಾನ್ ಆರೋಪಿಸಿದ್ದಾರೆ.

ಕೇಂದ್ರದ ಕೋರಿಕೆಯಂತೆ ಪಂಜಾಬ್ ಸಾರ್ವಜನಿಕ ಸಂಪರ್ಕ ಇಲಾಖೆಯು ಸಿದ್ಧಪಡಿಸಿದ ಮೂರು ಸ್ತಬ್ಧಚಿತ್ರಗಳ ಮಾದರಿ ತೋರಿಸಿದ ಭಗವಂತ್ ಮಾನ್, “ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪಂಜಾಬ್‌ನ್ನು ಸಾಂಸ್ಕೃತಿಕವಾಗಿ ಹೇಗೆ ಮುಗಿಸಲು ಹೊರಟಿದೆ ನೋಡಿ” ಎಂದಿದ್ದಾರೆ.

ಭಗವಂತ್ ಮಾನ್ ರಾಜಕೀಯ ಮಾಡ್ತಿದ್ದಾರೆ: ಬಿಜೆಪಿ

ಸಿಎಂ ಭಗವಂತ್ ಮಾನ್ ಕೇಂದ್ರ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಗೆ ಪಂಜಾಬ್ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಸಿಎಂ ಸ್ತಬ್ಧಚಿತ್ರ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ಹೇಳಿದೆ.

ಪಂಜಾಬ್ ಸರ್ಕಾರ ಭಗವಂತ್ ಮಾನ್ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಫೋಟೋಗಳನ್ನು  ಸ್ತಬ್ಧಚಿತ್ರಗಳಲ್ಲಿ ಹಾಕಲು ಒತ್ತಾಯಿಸಿತ್ತು. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಲ್ಲ. ಈ ಕಾರಣಕ್ಕೆ ಪಂಜಾಬ್‌ನ ಸ್ತಬ್ಧ ಚಿತ್ರ ತಿರಸ್ಕೃತಗೊಂಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸುನೀಲ್ ಜಾಖರ್ ಹೇಳಿದ್ದಾರೆ.

ಕಳೆದ 17 ವರ್ಷಗಳಲ್ಲಿ, 2013, 2014, 2015, ಮತ್ತು 2016 ಸೇರಿದಂತೆ ಒಂಬತ್ತು ಬಾರಿ ಪಂಜಾಬ್‌ನ ಸ್ತಬ್ದಚಿತ್ರಗಳು ತಿರಸ್ಕೃತಗೊಂಡಿದೆ. ಆಗೆಲ್ಲ ಕೇಳಿ ಬರದ ಆರೋಪ ಈಗ ಮಾಡಲಾಗ್ತಿದೆ. ಸಿಎಂ ಭಗವಂತ್ ಮಾನ್ ಈ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ. ಭಗವಂತ್ ಮಾನ್ ಮತ್ತು ಅರವಿಂದ್ ಕೇಜ್ರಿವಾಲ್ ಫೋಟೋಗಳು ಸ್ತಬ್ಧಚಿತ್ರಗಳಲ್ಲಿ ಹಾಕಲು ಅವಕಾಶ ನೀಡುವಂತೆ ಒತ್ತಾಯಿಸಿರುವುದೇ ಅದು ತಿರಸ್ಕೃತಗೊಳ್ಳಲು ಕಾರಣ. ಗಣರಾಜ್ಯೋತ್ಸವ ಮೆರವಣಿಗೆ ಯಾರದ್ದೋ ಜಾಹಿರಾತಿಗಾಗಿ ಮಾಡುತ್ತಿಲ್ಲ ಎಂದು ಸುನೀಲ್ ಜಾಖರ್ ಕಿಡಿಕಾರಿದ್ದಾರೆ.

ಇದನ್ನೂ ಓದಿ : ರಾಮಮಂದಿರ ಉದ್ಘಾಟನೆಗೆ ಆಹ್ವಾನ: ‘ಕೈ’ ನಾಯಕರ ಭಿನ್ನ ಹೇಳಿಕೆ, ಕೇರಳ ಕಾಂಗ್ರೆಸ್‌ನಲ್ಲಿ ಗೊಂದಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...