Homeಮೀಸಲಾತಿ: ಕಣ್ಣಗಾಯಕ್ಕೊಂದು ಕನ್ನಡಿಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

ಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

- Advertisement -
- Advertisement -

ದಲಿತ ಮತ್ತು ಹಿಂದುಳಿದ ಸಮುದಾಯಗಳಲ್ಲಿ ಈಗಾಗಲೇ ಹಲವರು ಮೀಸಲಾತಿ ಪಡೆದು ಉನ್ನತಮಟ್ಟದ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕೆಲವರು ಘನತೆಯ ಬದುಕಿನ ಕಡೆ ಮುಖ ಮಾಡಿದ್ದಾರೆ. ಮೀಸಲಾತಿಯಿಂದಾಗಿಯೇ ನಾಲ್ಕಾರು ಜನರ ನಡುವೆ ಬೆರೆತು ಜೀವನ ಸಾಗಿಸಲು ಇವರಿಗೆ ಸಾಧ್ಯವಾಗಿದೆ. ತಮಗೆ ಏನೇ ಸೌಲಭ್ಯ ಸಿಕ್ಕಿದರೂ ಅದರ ಹಿಂದೆ ಈ ಮೀಸಲಾತಿ ಇದೆ ಎನ್ನುವುದು ಅವರ ಅಂತರಾಳ ಅರಿಯದ ಸಂಗತಿಯೇನೂ ಅಲ್ಲ. ಆದರೆ ಇವರಲ್ಲೇ ಇತ್ತೀಚೆಗೆ ಒಂದು ವರ್ಗ ಸದ್ದಿಲ್ಲದೆ ಎದ್ದು ಮೀಸಲಾತಿ ವಿರೋಧಿ ನೆಲೆಯಲ್ಲಿ ಕುಳಿತುಕೊಳ್ಳುತ್ತಿದೆ. ಇವರು ತಮ್ಮ ಸವಲತ್ತುಗಳಿಗಾಗಿ ಮೀಸಲಾತಿ ಒದಗಿದ ಮೇಲೆ ಅದನ್ನೇ ಕಾಲಕಸದಂತೆ ಒದೆಯುವುದರ ಕಡೆ ತಮ್ಮ ಚಿತ್ತವನ್ನು ಹರಿಯಬಿಡುತ್ತಿದ್ದಾರೆ. ಇಡೀ ಕುಟುಂಬದಲ್ಲಿ ಮೊದಲ ಬಾರಿಗೆ ಮೀಸಲಾತಿಯ ಫಲಾನುಭವದಿಂದ ಸಾಮಾಜಿಕ ಸ್ಥಾನಮಾನವನ್ನು ಎತ್ತರಕ್ಕೇರಿಸಿಕೊಂಡವರೂ ಸಹ ಇಂದು ಮೀಸಲಾತಿ ವಿರುದ್ಧವಾಗಿ ಮಾತನಾಡುತ್ತಾ ಅದನ್ನು ಇನ್ನಿತರರಿಗೆ ದಕ್ಕದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಇದು ವಿಪರ್ಯಾಸ!

ಇದನ್ನು ವಿಪರ್ಯಾಸ ಎಂದು ಕರೆಯುವ ಬದಲು ವಂಚನೆ ಎಂದು ಕರೆದರೇನೇ ಹೆಚ್ಚು ಸಮಂಜಸ ಎನಿಸುತ್ತದೆ. ಏಕೆಂದರೆ ಈಗಾಗಲೇ ಮೀಸಲಾತಿ ವಿರೋಧಿಗಳ ದೊಡ್ಡ ದಂಡೇ ಅಲ್ಲಲ್ಲಿ ನಿಂತು ವಿರೋಧಿ ದನಿಗೈಯುತ್ತಿದೆ. ಸಾಮಾಜಿಕ ನ್ಯಾಯದ ಪರಿಪಾಲನೆಗಾಗಿ ಬಂದ ಈ ಅವಕಾಶವನ್ನು ‘ಪ್ರತಿಭೆ’ ಎನ್ನುವ ಅಸ್ತ್ರ ಬಳಸಿ ಧೂಳೀಪಟ ಮಾಡಲು ಈ ವರ್ಗ ಮೊದಲಿನಿಂದಲೂ ಸಂಚು ರೂಪಿಸುತ್ತಲೇ ಬರುತ್ತಿದೆ. ‘ಪ್ರತಿಭೆ ಎನ್ನುವುದು ನಮ್ಮ ಸ್ವತ್ತು ಮಾತ್ರ’, ‘ನಮಗಲ್ಲದೆ ಪ್ರತಿಭೆ ಯಾರಿಗಿದೆ…..’ ‘ಈ ಮೀಸಲಾತಿಯಿಂದ ನಮ್ಮ ಸವಲತ್ತುಗಳನ್ನೆಲ್ಲ ಎಸ್ಸಿ, ಎಸ್ಟಿ, ಓಬಿಸಿಗಳು ಕಸಿದುಕೊಳ್ಳುತ್ತಿದ್ದಾರೆ’ ಎಂದು ಹುಯಿಲೆಬ್ಬಿಸುತ್ತಾ ಬಂದವರಿಗೆ ಈ ದೇಶದಲ್ಲಿನ ಜಾತಿವ್ಯವಸ್ಥೆಯಿಂದ ಅಸ್ವಸ್ಥಗೊಂಡ ಸಾಮಾಜಿಕ ನೆಲೆ ಅರ್ಥವಾಗುವುದಾದರೂ ಹೇಗೆ? ಅರ್ಥಮಾಡಿಕೊಳ್ಳಲು ಇವರು ಯಾವ ಅವಮಾನದ ನೋವನ್ನು ಅನುಭವಿಸಿದ್ದಾರೆ? ಅವಮಾನ, ಜಾತಿ ತಾರತಮ್ಯ, ಅಸ್ಪೃಶ್ಯತೆಯ ನೋವು ಇಲ್ಲದವರಿಗೆ ಸಹಜವಾಗೇ ಮೀಸಲಾತಿ ತಮ್ಮ ವಿರುದ್ಧವೆಂಬಂತೆ ಗೋಚರವಾಗುತ್ತದೆ.

ಇದರ ಜೊತೆಗೆ ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಅವರಿಗೆ ಮೀಸಲಾತಿ ಬೇಡವೇ? ಎನ್ನುವ ಅಸ್ತ್ರವನ್ನು ಆಗಾಗ್ಗೆ ಮೀಸಲಾತಿ ವಿರೋಧಿ ವರ್ಗ ಪ್ರಯೋಗಿಸುತ್ತಲೇ ಬರುತ್ತಿತ್ತು. ಇಂತವರಿಗೆ ಸೆಡ್ಡು ಹೊಡೆದು ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ ಹುಟ್ಟಿದ್ದು. ಜಾತಿಯೇ ಪ್ರಧಾನ ಮಾನದಂಡವಾಗಿರುವ ಈ ದೇಶದಲ್ಲಿ ಜಾತಿ ಜನಸಂಖ್ಯಾವಾರು ಪ್ರಾತಿನಿಧ್ಯದ ಪ್ರಶ್ನೆಯನ್ನು ಈ ಮೀಸಲಾತಿಯ ಪ್ರಕ್ರಿಯೆ ಮುನ್ನಲೆಗೆ ಪದೇಪದೇ ತಂದಿದೆ. ಆ ಮೂಲಕ ಇಲ್ಲಿ ಎಲ್ಲರೂ ಸಮಾನವಾಗಿ ಬದುಕುವಂತಹ ವಾತಾವರಣ ಸೃಷ್ಟಿಗೊಳ್ಳುತ್ತದೆ. ಎಂದು ಗಟ್ಟಿಯಾಗಿ ಕೂಗಿ ಹೇಳಿ ಮೀಸಲಾತಿಯ ಪರವಾಗಿ ಮಾತನಾಡಬೇಕಿದ್ದ ಮೀಸಲಾತಿ ಪಡೆದ ಮನಸ್ಸುಗಳು ಅದರ ವಿರುದ್ಧ ನಿಂತಿರುವುದು ಚಾರಿತ್ರಿಕ ವ್ಯಂಗ್ಯದಂತೆ ಕಾಣುತ್ತದೆ. ಇವರ ಈ ಆತ್ಮದ್ರೋಹದ ಕೆಲಸದಿಂದಾಗಿಯೇ ಇಂದಿನ ಯುವ ಪೀಳಿಗೆ ಮೀಸಲಾತಿಯಿಂದ ಮೇಲೆದ್ದು ಬಂದೆ ಎಂದು ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಿದೆ. ಜೊತೆಗೆ ಮೀಸಲಾತಿ ನಮ್ಮ ಹಕ್ಕು ಎಂದು ಹೇಳಿಕೊಳ್ಳುವುದಕ್ಕೂ ಹಿಂದೆಮುಂದೆ ನೋಡುತ್ತಿದೆ.

ಇಂದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೆ ಬಂದ ತಕ್ಷಣವೇ ಇವರಿಗೆ ಮೀಸಲಾತಿ ಅನ್ನುವುದು ಅಪಥ್ಯವಾಗಿದೆ. ‘ಪ್ರತಿಭೆ ಇದ್ದವರು ಪಡೆದುಕೊಳ್ಳಲಿ’ ಎನ್ನುವ ಮಾತನ್ನು ಯಾವ ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಇನ್ನೂ ಮುಂದುವರಿದಂತೆ ‘ತಮ್ಮ ಮಕ್ಕಳು ಜನರಲ್ ಕೆಟಗರಿಯಲ್ಲಿ ಸೀಟನ್ನು ಪಡೆದುಕೊಂಡಿದ್ದಾರೆ ಅದಕ್ಕೆ ಮೀಸಲಾತಿಯೇತರ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಅರೆತಿಳಿವಳಿಕೆಯನ್ನೂ ಬಿತ್ತುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹೂಂಗುಟ್ಟಲು ಕಲಿತ ‘ಮೀಸಲಾತಿಯಿಂದ ಜಾತಿವ್ಯವಸ್ಥೆ ಹಾಗೇ ಉಳಿಯುತ್ತದೆ’, ‘ಇಲ್ಲಿ ಜಾತಿಯ ದೌರ್ಜನ್ಯ ಎಲ್ಲಿದೆ..’ ‘ಇಲ್ಲಿ ಎಲ್ಲರೂ ಸಮಾನವಾಗಿಯೇ ಬದುಕುತ್ತಿದ್ದೇವೆ…’ ‘ಹಿಂಗಿರುವವರಿಗೆ ಮೀಸಲಾತಿ ಏಕೆ ಬೇಕು’? ಎನ್ನುವ ಆಲೋಚನೆಗಳಿಗೆ ಇವರೂ ಕೂಡ ಪುಷ್ಟಿಯನ್ನು ಒದಗಿಸುತ್ತಿದ್ದಾರೆ. ಮೀಸಲಾತಿಯಿಂದ ತಾವು ಆರ್ಥಿಕವಾಗಿ ಮೇಲೆ ಬಂದವರಾದರೂ ತಮ್ಮ ಮಕ್ಕಳು ಮತ್ತು ಸಮುದಾಯದ ಮಕ್ಕಳನ್ನು ಮೀಸಲಾತಿಯನ್ನು ಕೀಳರಿಮೆ ಎಂದು ಕಾಣುವ ಮನಸ್ಥಿತಿಯಿಂದ ಹೊರತರಲು ಆಗಿಲ್ಲ ಮತ್ತು ಆಗುತ್ತಿಲ್ಲ.

ಶತಮಾನಗಳ ಉದ್ದಕ್ಕೂ ಅಘೋಷಿತ ಮೀಸಲಾತಿಯನ್ನು (ಸವಲತ್ತುಗಳನ್ನು) ಪಡೆದು ನಿರಂತರ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾ ಬಂದವರ ಮಾತುಗಳನ್ನು ಬ್ರಿಟಿಷ್ ಮತ್ತು ಸ್ವತಂತ್ರ ಭಾರತದಲ್ಲಿ ಸಂವಿಧಾನಬದ್ಧವಾಗಿ ಪಡೆದ ಈ ಮೀಸಲಾತಿ ಫಲಾನುಭವಿಗಳು ಚಾಚೂತಪ್ಪದೆ ಕೇಳುತ್ತಿದ್ದಾರೆ. ಆದರೆ ತಮ್ಮದೇ ಸಮುದಾಯದವರ ಆರ್ತನಾದಕ್ಕೆ ಕಿವುಡಾಗಿದ್ದಾರೆ. ಅವರು ಹೇಳುವ ಸಂಸ್ಕೃತಿ, ಪರಂಪರೆ ಇತ್ಯಾದಿಗಳನ್ನು ಉರು ಹೊಡೆದು ಅವುಗಳೇ ನಮ್ಮ ಜೀವನದ ಧ್ಯೇಯ ಎನ್ನುವಂತೆ ಬೀಗುತ್ತಿದ್ದಾರೆ. ಇಂತವರಿಗೆ ಇಲ್ಲಿ ಇನ್ನೂ ಜಾತಿವ್ಯವಸ್ಥೆ ಜೀವಂತವಾಗಿದೆ ಮತ್ತು ಕ್ರೂರವಾಗಿದೆ, ಇಲ್ಲಿ ಅಸಮಾನತೆ ಎನ್ನುವುದು ನಿರಂತರ ಪ್ರವಾಹವಾಗಿದೆ, ಉದ್ಯೋಗಗಳ ಸೃಷ್ಟಿ ನಡೆಯುತ್ತಿಲ್ಲ, ಎಲ್ಲ ಸರ್ಕಾರಿ ಉದ್ದಿಮೆಗಳಲ್ಲಿ ಬಹುಪಾಲು ಹುದ್ದೆಗಳನ್ನು ಮೇಲ್ಜಾತಿ ಮತ್ತು ಮೇಲ್ವರ್ಗದವರೇ ಪಡೆದುಕೊಂಡಿದ್ದಾರೆ, ಖಾಸಗಿ ಉದ್ದಿಮೆಗಳಲ್ಲಿ ನಮ್ಮಂತವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟಿದೆ ಎಂಬ ಸತ್ಯಸಂಗತಿ ಅರ್ಥವಾಗಬೇಕಿದೆ. ಇಲ್ಲದಿದ್ದರೆ ಇವರು ಸಾಮಾಜಿಕ ನ್ಯಾಯಕ್ಕೆ ಮಗ್ಗಲುಮುಳ್ಳಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ.

‘ಮೇಲ್ಜಾತಿಯ ಬಡಮಕ್ಕಳು ಪ್ರತಿಭೆ ಇದ್ದರೂ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ’ ಎನ್ನುವವರು ಕೇವಲ ಜಾತಿಯಿಂದಾಗಿ ಇಂದೂ ಕೂಡ ಮಾನಸಿಕ ಯಾತನೆಯನ್ನು ಬಡತನದೊಂದಿಗೆ ಅನುಭವಿಸಿ ನರಳುವವರ ಪಾಡನ್ನೂ ಅರ್ಥಮಾಡಿಕೊಳ್ಳಬೇಕಿದೆ. ‘ಸರ್ವರೂ ಸಮಾನರು’ ಎಂದಾದ ತಕ್ಷಣವೇ ಈ ಮೀಸಲಾತಿ ಎನ್ನುವ ಪದ ಬುಡಸಮೇತ ಕಳಚಿ ಬೀಳಲಿ. ಅಲ್ಲಿಯವರೆಗೆ ಮಹಿಳೆಯರಿಗೆ, ಜಾತಿಯಿಂದ ನೋವುಂಡರಿಗೆ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ, ಪ್ರಾದೇಶಿಕ ಭಾಷೆಯ ಮಡಿಲನ್ನೇ ಆಶ್ರಯಿಸಿರುವವರಿಗೆ, ವಿಶೇಷಚೇತನರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿಯ ಇನ್ನಷ್ಟು ಶೇಕಡತೆ ವಿಸ್ತರಿಸುವಂತಾಗಲಿ. ಸಮತೆಯ ಆಶಯ ಹೊದ್ದು ನಿಂತಿರುವ ಈ ಮೀಸಲಾತಿ ಖಾಸಗಿ ಕ್ಷೇತ್ರದಲ್ಲೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲಿ. ಇದಕ್ಕೆ ಆಳುವ ಸರ್ಕಾರಗಳು ಮುನ್ನುಡಿ ಬರೆಯುವಂತಾಗಲಿ. ಈ ಧ್ಯೇಯವನ್ನು ಎಸ್ಸಿ, ಎಸ್ಟಿ, ಓಬಿಸಿ ಸಮುದಾಯಗಳಲ್ಲಿ ಮೀಸಲಾತಿ ಪಡೆದು ಅದರ ವಿರುದ್ಧವೇ ಮಾತನಾಡುತ್ತಿರುವವರು ಹೊರುವಂತಾಗಲಿ. ಏಕೆಂದರೆ ಜಾತಿಕಾರಣಕ್ಕೆ ಮೀಸಲಾತಿ ನೀಡುವುದು ಸಲ್ಲದು ಎಂದು ಹುಯಿಲೆಬ್ಬಿಸುತ್ತಿದ್ದ ಮನಸುಗಳಿಗೆ ಇಂದು ಕಿಂಚಿತ್ತು ಹೋರಾಟವಿಲ್ಲದೆ ಕೇವಲ ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ಸಿಕ್ಕಿದೆ. ಅದೂ ಸಹ ಬರೋಬ್ಬರಿ 10%.
ಡಾ. ಹೆಚ್.ಡಿ. ಉಮಾಶಂಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. 15% sc ಮೀಸಲಾತಿಯೊಳಗೆ ಈಗ ಹಣಕಾಸು ಮಾನದಂಡ ಇಲ್ಲ. ಹೀಗಾಗಿ,ಇದರಲ್ಲಿ ಶೇ.೨-೩ ರಶ್ಟನ್ನು ಈಗಾಗಲೇ ಮೀಸಲಾತಿಪಡೆದು ಮೇಲೆ ಬಂದಿರುವ ಎರಡನೇ ಪೀಳಿಗೆಯವರು,ಆದಾಯತೆರಿಗೆ ಕಟ್ಟುವವರು ಮುಂತಾದವರು ಇದರೊಳಗೆ ಸ್ಪರ್ದಿಸಬೇಕು.
    ಇನ್ನಳಿದ ಶೇ೧೨-೧೩ ರಶ್ಟನ್ನು ಈವರೆಗೂ ಮೀಸಲಾತಿ ಸವಲತ್ತು ಪಡೆಯದ ಮೊದಲ ಪೀಳಿಗೆಯವರಿಗೆ ಮೀಸಲಿಡಬೇಕು.ಇದು st ಗುಂಪಿಗೂ ಆಗಬೇಕು.
    ಒಂದು ಸಲ ಮೀಸಲಾತಿ ಪಡೆದ obc ಗುಂಪಿನ ಎರಡನೇ ಪೀಳಿಗೆಯವರಿಗೆ ಮೀಸಲಾತಿ ಸವಲತ್ತು ಇಲ್ಲದ್ದರಿಂದ ಹಾಗೆ ಮಾತಾಡುತ್ತಾರೆ.
    ಹಲಪಂಗಡಗಳನ್ನು ಒಂದೇ ಮೀಸಲಾತಿ ಗುಂಪಿಗೆ ಸೇರಿಸಿರುವುದರಿಂದ ಉಂಟಾಗಿರುವ ಗೋಜಲನ್ನು ಒಳಮೀಸಲಾತಿ ಕೊಡುವುದರ ಮೂಲಕ ಸರಿಪಡಿಸಬೇಕು.

  2. ಶೇ ೧೦ ರ ಹೊಸ ಸವರ್ಣೀಯ ಬಡವರ ಮೀಸಲಾತಿಯನ್ನು ಇತ್ತೀಚಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ . ನಮ್ಮ ರಾಜ್ಯದಲ್ಲಿ ಓಬಿಸಿ ಮೀಸಲಾತಿಯಲ್ಲಿ ಭೂ ಒಡೆತನದ ಜಾತಿಗಳಾದ ಲಿಂಗಾಯತ , ಒಕ್ಕಲಿಗ , ರೆಡ್ಡಿ , ಬಂಟ , ಕೊಡವ ಜಾತಿಗಳು ನುಸುಳಿವೆ . ಹೊರ ರಾಜ್ಯಗಳಲ್ಲಿ ಇಂತಹದೆ ಭೂ ಒಡೆತನದ ಜಾತಿಗಳೆನಿಸಿದ ಮರಾಠ , ಜಾಟ್ , ಪಟೇಲ್ ಇತ್ಯಾದಿ ಜಾತಿಗಳವರು ಓಬಿಸಿ ಮೀಸಲಾತಿಗಾಗಿ ನಿರಂತರ ಹೋರಾಡುತ್ತಿವೆ . ಇಂತಹ ಜಾತಿಗಳ ಬಡವರಿಗಾಗಿ ಕೇಂದ್ರ ಸರ್ಕಾರ ತಂದದ್ದು ಶೇ ೧೦ ರ ಮೀಸಲಾತಿ .
    ಈ ೧೦ % ಮೀಸಲಾತಿ ಪಟ್ಟಿಗೆ ಕರ್ನಾಟಕದ ಭೂ ಒಡೆತನದ ಜಾತಿಗಳನ್ನು ವರ್ಗಾಯಿಸಬೇಕು . ಕರ್ನಾಟಕದಲ್ಲಿ ಭೂ ಒಡೆತನದ ಜಾತಿಗಳನ್ನು ಓಬಿಸಿ ಪಟ್ಟಿಗೆ ತಂದಿರುವುದು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹ . ೧೦ % ಮೀಸಲಾತಿ ಯನ್ನು ಟೀಕಿಸುವವರು ಈ ದಿಕ್ಕಿನಲ್ಲಿ ಯೋಚಿಸುತ್ತಿಲ್ಲ. ವಾದಿರಾಜ್ , ಬೆಂಗಳೂರು .

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...