Homeಮುಖಪುಟಫೇಸ್‍ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ನಿವೃತ್ತ ಐಎಎಸ್ ಅಧಿಕಾರಿಗಳ ಬಹಿರಂಗ ಪತ್ರ

ಫೇಸ್‍ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ನಿವೃತ್ತ ಐಎಎಸ್ ಅಧಿಕಾರಿಗಳ ಬಹಿರಂಗ ಪತ್ರ

ದ್ವೇಷ ಭಾಷೆಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ನೀತಿಯನ್ನು ಭಾರತದಲ್ಲಿ ಫೇಸ್‍ಬುಕ್ ಜಾರಿಗೊಳಿಸುತ್ತಿರುವ ಕ್ರಮಗಳ ಬಗ್ಗೆ ತನಿಖೆ ನಡೆಸಲು ನಿಜವಾದ ಪ್ರಯತ್ನ ಮಾಡುತ್ತೀರೆಂಬ ಭರವಸೆಯಿಂದ ನಿಮಗೆ ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ.

- Advertisement -
- Advertisement -

ಪ್ರಿಯ ಜುಕರ್‌ಬರ್ಗ್,

ನಾವು (ಕಾನಿಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್, ಭಾರತ ದೇಶದ ಮಾಜಿ ಸರ್ಕಾರಿ ಉದ್ಯೋಗಿಗಳು – ನಾಗರಿಕ ಸೇವೆ). ಅಖಿಲ ಭಾರತ ಕೇಂದ್ರ ಸೇವೆಗಳಿಗೆ ಸೇರಿದವರು ನಮ್ಮ ವೃತ್ತಿ ಜೀವನದುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸರ್ಕಾರಿ ವ್ಯವಸ್ಥೆಗಳಲ್ಲಿ ಕೆಲಸ ಮಾಡಿದ್ದೇವೆ. ಒಂದು ಗುಂಪಾಗಿ ನಮಗೆ ಯಾವ ರಾಜಕೀಯ ಪಕ್ಷದ ಜೊತೆಗೂ ಸಂಬಂಧವಿಲ್ಲ. ತಟಸ್ಥ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ವ್ಯವಹರಿಸುತ್ತಾ ಭಾರತ ಸಂವಿಧಾನಕ್ಕೆ ಬದ್ದರಾಗಿರುವುದು ನಮ್ಮ ಮುಖ್ಯ ಸ್ವಭಾವ ಮತ್ತು ಲಕ್ಷಣವಾಗಿದೆ. ನಾವು ಈ ಹಿಂದೆ, ಭಾರತೀಯ ನಾಗರಿಕರ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎನಿಸಿದಾಗಲೆಲ್ಲ ಸರ್ಕಾರಕ್ಕೆ, ಸರ್ಕಾರಿ ಸಂಸ್ಥೆಗಳಿಗೆ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಬಹಿರಂಗ ಪತ್ರಗಳನ್ನು ಬರೆದಿದ್ದೇವೆ. ಇಲ್ಲಿಯವರೆಗೂ ಯಾವುದೇ ಭಾರತೀಯೇತರ ಸಂಸ್ಥೆ ಅಥವಾ ವ್ಯಕ್ತಿಗೆ ನಾವು ಈ ರೀತಿ ಬಹಿರಂಗ ಪತ್ರ ಬರೆದಿಲ್ಲ. ಈಗ ನಾವು ನಮ್ಮ ಎಂದಿನ ರೂಢಿಯನ್ನು ಬಿಟ್ಟು ನಿಮಗೆ ಈ ಬಹಿರಂಗ ಪತ್ರವನ್ನು ಬರೆಯತ್ತಿದ್ದೇವೆ. ಏಕೆಂದರೆ ಭಾರತ ದೇಶದಲ್ಲಿ ಫೇಸ್‍ಬುಕ್ ತನ್ನ ವ್ಯಾಪಾರ ವ್ಯವಹಾರಗಳಲ್ಲಿ ತೆಗೆದುಕೊಂಡ (ಅಥವಾ ತೆಗೆದುಕೊಳ್ಳದ) ನಿರ್ಣಾಯಕ ಕ್ರಮಗಳಿಂದ ಭಾರತದ ಜನಸಾಮಾನ್ಯರ ಮೂಲಭೂತ ಹಕ್ಕುಗಳನ್ನು ಅಪಾಯಕ್ಕೆ ತಳ್ಳಲ್ಪಟ್ಟವು.

2020ರ ಆಗಸ್ಟ್ 14ರಂದು ‘ವಾಲ್‍ಸ್ಟ್ರೀಟ್ ಜರ್ನಲ್’ನಲ್ಲಿ ಪ್ರಕಟವಾದ ಒಂದು ಲೇಖನ ನಮ್ಮನ್ನು ಆತಂಕಕ್ಕೀಡು ಮಾಡಿ ಹಕ್ಕುಗಳಿಗೆ ಎದುರಾಗುತ್ತಿರುವ ಅಪಾಯವನ್ನು ನಮ್ಮ ಗಮನಕ್ಕೆ ತಂದಿತು. ನೀವು ಒಬ್ಬ ನಾಗರಿಕನಾಗಿರುವ ಅಮೆರಿಕಾ ಮತ್ತು ನಮ್ಮ ಭಾರತದೇಶ ಎರಡು ಸಹ ತಮ್ಮ ತಮ್ಮ ನಾಗರಿಕರಿಗೆ ಅನೇಕ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಖಾತ್ರಿಪಡಿಸಿವೆ. ದ್ವೇಷ ಭಾಷಣಗಳು ಪ್ರಜಾಪ್ರಭುತ್ವ ನೀಡಿದ ಹಕ್ಕುಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಹಾಗಾಗಿಯೇ ದ್ವೇಷ ಭಾಷಣಗಳನ್ನು ಅಥವಾ ದ್ವೇಷಪೂರಿತ ಮಾತುಗಳನ್ನು ಅನುಮತಿಸಬಾರದೆಂಬ ನಿಯಮವನ್ನು ಫೇಸ್‍ಬುಕ್ ತನ್ನ ನೀತಿಯ ಭಾಗವಾಗಿ ಮಾಡಿಕೊಂಡಿದೆ. ‘ಜಾತಿ, ಬುಡಕಟ್ಟು, ರಾಷ್ಟ್ರೀಯ ಮೂಲಗಳು, ಧಾರ್ಮಿಕ ಸಂಬಂಧಗಳು, ಲೈಂಗಿಕ ದೃಷ್ಟಿ, ಸ್ತ್ರೀ ಪುರುಷ ಬೇಧಭಾವ, ಲಿಂಗ ಅಥವಾ ಲಿಂಗ ಅಸ್ತಿತ್ವ, ತೀವ್ರ ಅಂಗವೈಕಲ್ಯಗಳು ಅಥವಾ ಅನಾರೋಗ್ಯ ಮುಂತಾದವುಗಳ ಆಧಾರದಲ್ಲಿ ಜನರ ಮೇಲೆ ಪ್ರತ್ಯಕ್ಷ ದಾಳಿ’ಯನ್ನು ದ್ವೇಷ ಭಾಷಣವೆಂದು ಫೇಸ್‍ಬುಕ್ ವ್ಯಾಖ್ಯಾನಿಸಿದೆ. ನಿಮ್ಮ ಸ್ವಂತ ನೀತಿಯಲ್ಲಿ ಈ ಸ್ಪಷ್ಟವಾದ, ಸೂಕ್ತವಲ್ಲದ ವ್ಯಾಖ್ಯಾನವನ್ನು ಗಮನದಲ್ಲಿಟ್ಟುಕೊಂಡು ಭಾರತ ದೇಶದಲ್ಲಿ ಅಂತಹ ಅಪರಾಧಗಳಲ್ಲಿ ಪದೇ ಪದೇ ಭಾಗಿಯಾಗುತ್ತಿರುವ ಕೆಲವರ – ತೆಲಂಗಾಣ ರಾಜ್ಯದ ಶಾಸಕ ಟಿ.ರಾಜಸಿಂಗ್ ಮತ್ತೂ ಕೆಲವು ಜನರ ಮೇಲೆ – ಫೇಸ್‍ಬುಕ್ ಕ್ರಮ ತೆಗೆದುಕೊಳ್ಳದೇ ಹೋಗದಿರುವುದು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಸದರಿ ವ್ಯಕ್ತಿಗಳು ಒಂದು ಭಿನ್ನವಾದ ಧರ್ಮಕ್ಕೆ ಸೇರಿದವರ ಮೇಲೆ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಕೋವಿಡ್ 19 ಮಹಾಮಾರಿಯನ್ನು ಹರಡುತ್ತಿದ್ದಾರೆಂದು, ‘ಲವ್ ಜಿಹಾದ್’, ಮುಂತಾದ ತಪ್ಪುಗಳಿಗೆ ಭಾಗಿಯಗುತ್ತಿದ್ದಾರೆಂದು ಮುಸ್ಲಿಮರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಕಟು ಪದಗಳಲ್ಲಿ ದೂಷಿಸುತ್ತಿದ್ದಾರೆ.

ಆದರೂ ಫೇಸ್‍ಬುಕ್ ಅಂತಹ ವ್ಯಕ್ತಿಗಳ ಬಗ್ಗೆ, ಅವರೆಲ್ಲರೂ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಸದಸ್ಯರಾದ್ದರಿಂದ ಕಠಿಣವಾಗಿ ವ್ಯವಹರಿಸದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆ ವ್ಯಕ್ತಿಗಳು ಪೋಸ್ಟ್ ಮಾಡಿದ ಹೇಳಿಕೆಗಳು, ಭಾಷಣಗಳು ಕಾನೂನು ಬಾಹಿರವಾಗಿವೆ ಎಂದು ಫೇಸ್‍ಬುಕ್ ಪರಿಗಣಿಸಿದೆ ಎಂಬ ವಿಷಯ, ಆಗಸ್ಟ್ 17ರಂದು ಅವುಗಳನ್ನು ತೆಗೆದು ಹಾಕಿದ್ದನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಫೇಸ್‍ಬುಕ್ ಇಂಡಿಯಾದ ನಾಗರಿಕ/ಸಾರ್ವಜನಿಕ ನೀತಿ (ಪಬ್ಲಿಕ್ ಪಾಲಿಸಿ) ಮುಖ್ಯಸ್ಥರು ಪ್ರಜ್ಞಾಪೂರ್ವಕವಾಗಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸದಸ್ಯರ ವಿಷಯದಲ್ಲಿ ತಮ್ಮ ಸಂಸ್ಥೆ ನಿಗಧಿಪಡಿಸಿದ ದ್ವೇಷ ಭಾಷಣಗಳ ವಿರುದ್ಧದ ನಿಯಮಗಳನ್ನು ಜಾರಿಗೊಳಿಸಲು ಅಂಗೀಕರಿಸಿಲ್ಲವೆಂಬ ವಾಸ್ತವವನ್ನು ವಾಲ್‍ಸ್ಟ್ರೀಟ್ ಜನರಲ್‍ನ ಲೇಖನದಿಂದ ತಿಳಿದುಕೊಂಡ ನಾವು ತುಂಬಾ ಅಘಾತಕ್ಕೊಳಗಾಗಿದ್ದೆವು. ಬಿಜೆಪಿ ಶ್ರೇಣಿಗಳಿಗೆ ಆ ನಿಯಮಗಳನ್ನು ಜಾರಿಗೊಳಿಸುವುದರಿಂದ ಭಾರತದಲ್ಲಿನ ತಮ್ಮ ಕಂಪನಿಯ ವ್ಯಾವಹಾರಿಕ ಹಿತಾಸಕ್ತಿಗಳಿಗೆ ಹಾನಿ ಆಗುತ್ತದೆ ಎಂಬ ಭಾವನೆಯಿಂದ ಹಾಗೆ ವ್ಯವಹರಿಸಿದ್ದಾರೆಂದು ನಮಗೆ ತಿಳಿದು ಬಂದಿದೆ.

ಜುಕರ್‍ಬರ್ಗ್‍ನವರೇ, ಭಾರತದಲ್ಲಿ ಧಾರ್ಮಿಕವಾದ ಅಶಾಂತಿ ಒಂದು ತೀವ್ರವಾದ ಸಮಸ್ಯೆಯಾಗಿ ಪರಿಣಮಿಸಿದೆ ಎಂಬ ವಿಷಯ ನಿಮಗೆ ಖಚಿತವಾಗಿ ತಿಳಿದ ವಿಷಯವಾಗಿದೆ. ಭಾರತದ ಸಂಸತ್ತು ಇತ್ತೀಚಿಗೆ ಅನುಮೋದಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ಜೊತೆಯಾಗಿ ರಾಷ್ಟ್ರೀಯ ನಾಗರಿಕ ಕಾಯ್ದೆ (ಎನ್‍ಆರ್‍ಸಿ) ಲಕ್ಷಾಂತರ ಮುಸ್ಲಿಂರು, ಇತರೆ ಅಲ್ಪಸಂಖ್ಯಾತರ ಪೌರತ್ವಕ್ಕೆ ಮುಪ್ಪಾಗಿ ಪರಿಣಮಿಸಿತು. ಭಾರತೀಯ ಸಮಾಜದ ಮುಖ್ಯವಾಹಿನಿಯಿಂದ ಅವರನ್ನು ದೂರ ಮಾಡಿ ಬಂಧನ ಕೇಂದ್ರಗಳಲ್ಲಿ ಅವರನ್ನು ಇರಿಸಲು ಅವು ಆಧಾರವಾಗಲಿವೆ. 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಧಾರ್ಮಿಕ ಗಲಬೆಗಳ ವಿಷಯ ನಿಮಗೆ ತಿಳಿಯದೇ ಇರುವುದೇನಲ್ಲ. ಆ ಗಲಭೆಗಳಲ್ಲಿ 53 ಮಂದಿ ಸತ್ತುಹೋದರು. ಅಲ್ಲಿ ಸತ್ತವರಲ್ಲಿ ಮೂರನೇ ಎರಡು ಭಾಗದಷ್ಟು ಮಂದಿ ಮುಸ್ಲಿಂರು. ನ್ಯಾಯಾಲಯಗಳ ಪ್ರಮೇಯವಿಲ್ಲದ ಕಾನೂನು ಬಾಹಿರವಾದ ಪಂಚಾಯಿತಿಗಳಿಂದ ಹಲವರನ್ನು ಮುಖ್ಯವಾಗಿ ಮುಸ್ಲಿಂ ಮತ್ತು ದಲಿತರನ್ನು ಚಿತ್ರವಧೆಗೆ ಗುರಿ ಮಾಡಿ ಕೊಲ್ಲುತ್ತಿರುವ ಘಟನೆಗಳು ಇತ್ತೀಚಿಗೆ ಭಾರತದಲ್ಲಿ ಅತಿ ಹೆಚ್ಚಾಗಿವೆ. ಈ ಅಪರಾಧಗಳಲ್ಲಿ ಅತಿ ಹೆಚ್ಚು ಭಾಗ ಫೇಸ್‍ಬುಕ್, ವಾಟ್ಸಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಿಸುತ್ತಿರುವ ದ್ವೇಷ ಭಾಷಣಗಳ ಪರಿಣಾಮವಾಗಿ ನಡೆದಂತಹವುಗಳೇ ಎಂಬುದು ಗಮನಾರ್ಹ. ಈ ವಿಷಯ ತಿಳಿದು ಸಹ ದ್ವೇಷ ಭಾಷಣಗಳನ್ನು ನಿಯಂತ್ರಿಸುವಲ್ಲಿ ಫೇಸ್‍ಬುಕ್ ತನ್ನ ತನ್ನದೇ ಆದ ನೀತಿಯನ್ನು ಭಾರತದಲ್ಲಿ ಜಾರಿಗೊಳಿಸುವುದರಲ್ಲಿ ವಿಫಲವಾಗಿದೆ. ಒಂದು ಅಸ್ಪಷ್ಟವಾದ ಪಕ್ಷಪಾತ ರೀತಿಯನ್ನು ಜಾರಿಗೊಳಿಸಿದೆ. ಫೇಸ್‍ಬುಕ್ ವ್ಯಾಪಾರ ಪ್ರಯೋಜನಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೀಗೆ ಮಾಡುತ್ತಿದೆ ಎನ್ನುವುದು ಖಚಿತವಾಗಿ ಟೀಕೆಗೆ ಅರ್ಹವಾದುದಾಗಿದೆ.

ಫೇಸ್‍ಬುಕ್ ಹಾಗೆ ತನ್ನದೇ ನೀತಿಯ ವಿರುದ್ಧವಾಗಿ ವರ್ತಿಸಿರುವುದು ಬೇರೆ ದೇಶಗಳಲ್ಲಿಯೂ ಸಹ ಚರ್ಚೆಯ ವಿಷಯವಾಗಿರುವುದು ನಾವು ಗಮನಿಸಿದ್ದೇವೆ. ಮಾನವ ಜೀವನ ಮತ್ತು ಮಾನವೀಯ ಮೌಲ್ಯಗಳಿಗೆ ಆಗುವ ಹಾನಿಯನ್ನು ನಿರ್ಲಕ್ಷಿಸಿ ವ್ಯಾಪಾರದ ಲಾಭಗಳನ್ನು ಸಾಧಿಸಬಹುದೇ? ಪರಮ ಮೂರ್ಖತನದಿಂದ ಕೂಡಿದ ಅಂತಹ ಅಲೋಚನೆಗಳಿಂದ ಫೇಸ್‍ಬುಕ್ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದಲೇ ಇಂದು ಜಗತ್ತಿನ ಹಲವು ದೇಶಗಳಲ್ಲಿ ದ್ವೇಷ ಒಂದು ವೈರಸ್ ರೀತಿಯಲ್ಲಿ ವಿಜೃಂಭಿಸಿ, ವ್ಯಾಪಿಸುತ್ತಿರುವುದು ಆಶ್ಚರ್ಯವೇನಲ್ಲ.

ದ್ವೇಷ ಭಾಷೆಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ನೀತಿಯನ್ನು ಭಾರತದಲ್ಲಿ ಫೇಸ್‍ಬುಕ್ ಜಾರಿಗೊಳಿಸುತ್ತಿರುವ ಕ್ರಮಗಳ ಬಗ್ಗೆ ತನಿಖೆ ನಡೆಸಲು ನಿಜವಾದ ಪ್ರಯತ್ನ ಮಾಡುತ್ತೀರೆಂಬ ಭರವಸೆಯಿಂದ ನಿಮಗೆ ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ. ಈ ತನಿಖೆಯ ಸಂದರ್ಭದಲ್ಲಿ ಫೇಸ್‍ಬುಕ್ ಇಂಡಿಯಾದ ಸಾರ್ವಜನಿಕ ನೀತಿಯ ಪ್ರಸ್ತುತ ಪ್ರಮುಖ ಮುಖ್ಯಸ್ಥ ಆ ತನಿಖೆಗಳನ್ನು ಪ್ರಭಾವಿಸುವ ಜವಾಬ್ದಾರಿಗಳಲ್ಲಿ ಇರದಂತೆ ಮಾಡುತ್ತೀರೆಂದು ಆಶಿಸುತ್ತೇವೆ. ದ್ವೇಷದಿಂದ ಕೂಡಿದ ಅಪರಾಧಗಳಿಗೆ ಕಾರಣವಾಗಿರುವ ದ್ವೇಷಪೂರಿತ ಸಂಭಾಷಣೆಗಳನ್ನು, ಪೋಸ್ಟ್‍ಗಳಿಗೆ ವಿರುದ್ಧವಾಗಿ ನಿಮ್ಮದೇ ಆದ ನೀತಿಯೊಂದನ್ನು ಜಾರಿಗೊಳಿಸುವಲ್ಲಿ ನಿಮ್ಮ ಕಂಪನಿಯ ವ್ಯವಹಾರಿಕ ಹಿತಾಸಕ್ತಿಗಳು ಅಡ್ಡಬರದಂತೆ ಎಚ್ಚರ ವಹಿಸುತ್ತಿರೆಂದು ಸಹ ನಾವು ಮನಃಪೂರ್ವಕವಾಗಿ ಆಶಿಸುತ್ತೇವೆ. ದ್ವೇಷಪೂರಿತ ಮಾತುಗಳನ್ನು ನಿಯಂತ್ರಿಸದೇ ಇರುವುದು ಭಾರತ ಸಂವಿಧಾನದ ಪ್ರಜಾಸತ್ತಾತ್ಮಕ ಜಾತ್ಯಾತೀತೆಯ ಅಂಶಗಳನ್ನು ಬಲಹೀನಗೊಳಿಸುತ್ತದೆ.

– ಕಾನಿಸ್ಟಿಟ್ಯೂಷನಲ್ ಕಾಂಡಕ್ಟ್ ಗ್ರೂಪ್

(ಈ ಬಹಿರಂಗ ಪತ್ರದಲ್ಲಿ ವಪ್ಪಾಲ ಬಾಲಚಂದ್ರನ್ – ಐಎಎಸ್, ಗೋಪಾಲನ್ ಬಾಲಕೃಷ್ಣನ್ –ಐಎಎಸ್, ಸುಂದರ್ ಬುರ್ರಾ- ಐಎಎಸ್, ನಿತಿನ್ ದೇಸಾಯಿ– ಐಎಎಸ್, ಸುಶೀಲ್ ದುಬೆ– ಐಎಎಸ್, ಕೆ.ಪಿ.ಫೇಬಿಯಸ್–ಐಎಎಸ್, ಹೆಚೆಸ್ ಗುಜ್ರಾಲ್– ಐಎಎಸ್, ಹರ್ಷಮಂದರ್– ಐಎಎಸ್, ಸತ್ವಂತ್ ರೆಡ್ಡಿ– ಐಎಎಸ್, ಸಲಾಹುದ್ದೀಸ್ ಅಲಂ- ಐಎಎಸ್, ಷಫಿ ಅಲಮ್ –ಐಎಎಸ್, ವಿಜಯಲತಾ ರೆಡ್ಡಿ– ಐಎಎಸ್, ಜೂಲಿಯಾ ರೆಬೋರೋ– ಐಎಎಸ್, ನರೆಂದ್ರ ಸಿಸೋಡಿಯಾ –ಐಎಎಸ್ ರವರನ್ನು ಒಳಗೊಂಡಂತೆ 54 ಜನ ನಿವೃತ್ತ ಸರ್ಕಾರಿ ಹಿರಿಯ ಅಧಿಕಾರಿಗಳು ಸಹಿ ಮಾಡಿದ್ದಾರೆ)

ಅನುವಾದ: ಅನಿಲ್ ಕುಮಾರ್ ಚಿಕ್ಕದಾಳವಟ್ಟ


ಇದನ್ನು ಓದಿ: ಮಂಗಳೂರು: ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...