Homeಮುಖಪುಟ'ಮತದಾನದ ಹಕ್ಕಿಗಿಂತ ಬದುಕುವ ಹಕ್ಕು ಮುಖ್ಯವಾಗಿದೆ': ಮಣಿಪುರದ ಶಿಬಿರಗಳಲ್ಲಿ 'ಚುನಾವಣೆ' ಬಗ್ಗೆ ಸಂತ್ರಸ್ತರ ಅಸಮಾಧಾನ

‘ಮತದಾನದ ಹಕ್ಕಿಗಿಂತ ಬದುಕುವ ಹಕ್ಕು ಮುಖ್ಯವಾಗಿದೆ’: ಮಣಿಪುರದ ಶಿಬಿರಗಳಲ್ಲಿ ‘ಚುನಾವಣೆ’ ಬಗ್ಗೆ ಸಂತ್ರಸ್ತರ ಅಸಮಾಧಾನ

- Advertisement -
- Advertisement -

ಮತದಾನದ ಮೊದಲು ಬದುಕುವ ಹಕ್ಕು ಮುಖ್ಯವಾಗಿದೆ, ಮತದಾನದ ಮೊದಲು ಶಾಂತಿ ಮುಖ್ಯವಾಗಿದೆ ಎಂದು ಮಣಿಪುರದ ಪರಿಹಾರ ಶಿಬಿರಗಳಿಂದ ಆಗ್ರಹ ಕೇಳಿ ಬಂದಿದ್ದು, ‘ಮತದಾನ ನಮಗೆ ಏನೂ ಅಲ್ಲ’ ಎಂದು ಮಣಿಪುರ ಜನಾಂಗೀಯ ಹಿಂಸಾಚಾರದ ಸಂತ್ರಸ್ತರು ಹೇಳಿಕೊಂಡಿದ್ದಾರೆ.

‘ನನ್ನದಲ್ಲದ ಸ್ಥಳದ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಾನೇಕೆ ಮತ ಹಾಕಬೇಕು. ಚುನಾವಣೆ ನಮಗೆ ಏನೂ ಅಲ್ಲ’ ಎಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ 11 ತಿಂಗಳ ಹಿಂದೆ ತನ್ನ ಮನೆಯನ್ನು ಕಳೆದುಕೊಂಡು ಶಿಬಿರದಲ್ಲಿ ವಾಸಿಸುತ್ತಿರುವ ಸಂತ್ರಸ್ತೆ ನೋಬಿ ಹೇಳುತ್ತಾರೆ.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಬಳಿಕ ಮತ ಚಲಾಯಿಸುವ ಮೊದಲು ಬದುಕುವ ಹಕ್ಕು ಮತ್ತು ಚುನಾವಣೆಯ ಮೊದಲು ಶಾಂತಿ ಎಂಬ ಬೇಡಿಕೆಯನ್ನು ನೋಬಿ ಮಾತ್ರ ಮುಂದಿಟ್ಟಿರುವುದಲ್ಲ, ಮನೆಗೆ ಮರಳಲು ಸಾಧ್ಯವಾಗದೆ ಪರಿಹಾರ ಶಿಬಿರಗಳಲ್ಲಿ ದಿನದೂಡುತ್ತಿರುವ ಪ್ರತಿಯೊಬ್ಬ ನಿರಾಶ್ರಿತರ ಆಗ್ರಹ ಇದಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಮಣಿಪುರದಲ್ಲಿ ಶೇಕಡಾ 82ಕ್ಕಿಂತ ಹೆಚ್ಚು ಮತದಾನ ದಾಖಲಾಗುವುದರೊಂದಿಗೆ ರಾಜ್ಯವು ಸಾಂಪ್ರದಾಯಿಕವಾಗಿ ಅತಿ ಹೆಚ್ಚು ಮತದಾನವನ್ನು ಮಾಡಿದ ರಾಜ್ಯಗಳಲ್ಲಿ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಜನಾಂಗೀಯ ಹಿಂಸಾಚಾರವು ಈ ಬಾರಿಯ ಮತದಾನದ ಮೇಲೆ ಕರಿನೆರಳು ಬೀರಿದ್ದು, ಹಲವಾರು ನಾಗರಿಕ ಸಮಾಜದ ಗುಂಪುಗಳು ಮತ್ತು ಹಿಂಸಾಚಾರ ಪೀಡಿತ ಜನರು ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣೆಗಳನ್ನು ನಡೆಸುವ ಬಗೆಯ ಪ್ರಸ್ತುತತೆಯನ್ನು ಪ್ರಶ್ನಿಸುತ್ತಿದ್ದಾರೆ.

ಗೌರವದಿಂದ ಬದುಕುವ ನನ್ನ ಹಕ್ಕನ್ನು ಖಚಿತಪಡಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಮತ್ತು ಅವರು ನನ್ನ ಮತದಾನದ ಹಕ್ಕನ್ನು ಖಚಿತಪಡಿಸಲು ಹೊರಟಿದ್ದಾರೆಯೇ? ನನ್ನ ಕಣ್ಣೆದುರೇ ನನ್ನ ಮನೆ ಸುಟ್ಟುಹೋಯಿತು. ನಾನು ಮತ್ತು ನನ್ನ ಕುಟುಂಬ ರಾತ್ರೋರಾತ್ರಿ ಅಲ್ಲಿಂದ ಪಲಾಯನ ಮಾಡಿದೆವು. ಅಲ್ಲಿ ಏನು ಉಳಿದಿದೆ ಎಂದು ನಮಗೆ ತಿಳಿದಿಲ್ಲ. ಇನ್ನು ಮುಂದೆ ನನ್ನದಲ್ಲದ ಸ್ಥಳದ ಪ್ರತಿನಿಧಿಗೆ ನಾನು ಏಕೆ ಮತ ಹಾಕಬೇಕು? ಇದೆಲ್ಲವೂ ಗಿಮಿಕ್, ಚುನಾವಣೆಗಳು ನಮಗೆ ಏನೂ ಅಲ್ಲ ಎಂದು ನೋಬಿ ಹೇಳಿದ್ದಾರೆ.

ಮಣಿಪುರ ರಾಜ್ಯವು ಕಳೆದ ವರ್ಷ ಮೇ 3ರಿಂದ ಬಹುಸಂಖ್ಯಾತ ಮೈತೈ ಸಮುದಾಯ ಮತ್ತು ಕುಕಿಗಳ ನಡುವೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ನಿರಂತರವಾಗಿ ಮುಂದುವರಿದ ಹಿಂಸಾಚಾರದ ಪರಿಣಾಮವಾಗಿ 200ಕ್ಕೂ ಹೆಚ್ಚು ಜೀವಗಳು ಬಲಿಯಾಗಿದೆ. ಮೈತೈ ಸಮುದಾಯದ ಜನರು ಇಂಫಾಲ್‌ ನಗರದಲ್ಲಿ ವಾಸಿಸುತ್ತಿದ್ದರೆ, ಕುಕಿಗಳು ಬೆಟ್ಟ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಮಣಿಪುರದಲ್ಲಿ ಏಪ್ರಿಲ್ 19 ಮತ್ತು 26ರಂದು ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮಣಿಪುರದ ಕೆಲವು ಭಾಗಗಳಲ್ಲಿ ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಮತದಾನವಾದರೆ, ಉಳಿದ ಭಾಗಗಳಲ್ಲಿ ಏಪ್ರಿಲ್ 26ರಂದು 2ನೇ ಹಂತದಲ್ಲಿ ಮತದಾನ ನಡೆಯಲಿವೆ. ಅಧಿಕಾರಿಗಳ ಪ್ರಕಾರ, ಮಣಿಪುರದಲ್ಲಿ ಅಶಾಂತಿಯ ನಂತರ 50,000ಕ್ಕೂ ಹೆಚ್ಚು ಜನರು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಶಿಬಿರಗಳಲ್ಲಿನ ಸಂತ್ರಸ್ತರು, ಲೋಕಸಭೆ ಚುನಾವಣೆಯ ಸಮಯವನ್ನು ಪ್ರಶ್ನಿಸಿದ್ದಾರೆ ಮತ್ತು ಪರಿಹಾರ ಶಿಬಿರಗಳಲ್ಲಿ ಮತದಾನವನ್ನು ಆಯೋಜಿಸುವ ಕಲ್ಪನೆಯು ಒಂದು ಗಿಮಿಕ್ ಹೊರತು ಬೇರೇನೂ ಅಲ್ಲ ಎಂದು  ಹೇಳಿದ್ದಾರೆ. ಇಂಫಾಲ್ ಕಣಿವೆಯ ನಾಲ್ಕು ಪರಿಹಾರ ಶಿಬಿರಗಳಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಮೋದಿ-ಶಾ ಅವರ ಸೈದ್ಧಾಂತಿಕ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರ ವಿರುದ್ಧ ಬ್ರಿಟಿಷರು, ಮುಸ್ಲಿಂ ಲೀಗ್‌ನ್ನು ಬೆಂಬಲಿಸಿದರು: ಪ್ರಣಾಳಿಕೆ ಕುರಿತ ಟೀಕೆಗೆ ಖರ್ಗೆ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...