Homeಕರ್ನಾಟಕರಾಷ್ಟ್ರ ಜಾಗೃತಿ ಎನ್ನುವ ಆರ್‌ಎಸ್‌ಎಸ್‌ನವರು ಭ್ರಷ್ಟರಾಗಿದ್ದಾರೇಕೆ?

ರಾಷ್ಟ್ರ ಜಾಗೃತಿ ಎನ್ನುವ ಆರ್‌ಎಸ್‌ಎಸ್‌ನವರು ಭ್ರಷ್ಟರಾಗಿದ್ದಾರೇಕೆ?

‘ನಾನೇಕೆ ಆರ್‌ಎಸ್‌ಎಸ್‌ ತ್ಯಜಿಸಿದೆ’ ಲೇಖನ ಸರಣಿಯಲ್ಲಿ ಸಂಘಪರಿವಾರವನ್ನು ತೊರೆದ ಹಿರಿಯ ನಾಯಕ ಪ್ರವೀಣ್ ವಾಲ್ಕೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಹತ್ಯೆ ತಡೆ ವಿಚಾರವಾಗಿ ಪ್ರಕರಣ ಮೊಟ್ಟಮೊದಲು ದಾಖಲಾಗಿದ್ದು ನನ್ನ ಮೇಲೆ. ಬಾಲ್ಯದಿಂದಲೂ ಸಂಘ ಪರಿವಾರದಲ್ಲಿದ್ದವನು ನಾನು. ಅಲ್ಲಿ, ಜಳ್ಳನ್ನು ಬಿಟ್ಟು ಒಳ್ಳೆಯದನ್ನು ತೆಗೆದುಕೊಂಡಾಗ, ಹಿಂದೂ ಧರ್ಮ ಪ್ರತಿಪಾದಿಸುವ ಉದಾತ್ತತೆ ಇಲ್ಲ. ಸಾಮಾನ್ಯಮಟ್ಟದಲ್ಲಿ ಧರ್ಮ ಏನು ಹೇಳುತ್ತದೆ? ಮನುಷ್ಯತ್ವವೇ ಪ್ರಧಾನವಲ್ಲವೆ? ಅದು ಅಲ್ಲಿ ಕಾಣುತ್ತಿಲ್ಲ. ಹೀಗಾಗಿ ನಮ್ಮಂತವರೊಂದಿಗೆ ಸಂಘರ್ಷ ಏರ್ಪಟ್ಟು ದೊಡ್ಡ ವರ್ಗವೇ ಸಂಘ ಪರಿವಾರವನ್ನು ತೊರೆದು ಹೊರಬಂತು.

ಅಲ್ಲಿ ಜನರನ್ನು ದಾರಿ ತಪ್ಪಿಸುವುದಲ್ಲದೇ ಮತ್ತೆ ಬೇರೇನೂ ನಡೆಯುವುದಿಲ್ಲ. ಹಿಂದೂ ಧರ್ಮ ದಾರಿ ತಪ್ಪಿ ಎಂದು ಹೇಳಿದೆಯೇ? ಒಂದು ರೀತಿಯಲ್ಲಿ ನೋಡುವುದಾದರೆ ಸಂಘ ಪರಿವಾರದವರಿಗೆ ಹಿಂದೂಗಳೇ ವಿರೋಧಿಗಳು. ಕೆಳಮಟ್ಟದ ಕಾರ್ಯಕರ್ತರಿಗೆ ಮುಸಲ್ಮಾನರನ್ನು ವಿರೋಧಿಸಲು ಹೇಳುತ್ತಾರೆ. ಆದರೆ ಸಾಮಾಜಿಕ
ವಾಸ್ತವದಲ್ಲಿ ಆ ರೀತಿಯ ಯಾವುದೇ ವಿರೋಧ-ವಿವಾದ ಇಲ್ಲ.

ಮೂಲದಲ್ಲಿ ಜನಸಾಮಾನ್ಯರಿಗೆ ಮುಸಲ್ಮಾನರ ವಿರೋಧ ಇಲ್ಲ. ಮೋಹನ್ ಭಾಗವತ್ ಹೇಳಿದಂತೆ ಹಿಂದೂ-ಮುಸ್ಲಿಮರ ಡಿಎನ್‌ಎ ಒಂದೇ. ಆದರೆ ಒಂದು ಸಮುದಾಯವನ್ನು ತುಳಿಯುವ ಇವರ ಉದ್ದೇಶ ಅರಿತು ಹೊರಬಂದೆ. ದಲಿತರು, ಹಿಂದುಳಿದ ವರ್ಗಗಳನ್ನು ತುಳಿಯುವುದಲ್ಲದೇ ಬೇರೆ ಉದ್ದೇಶ ಅವರಿಗಿಲ್ಲ. ನಾನು ಹಿಂದೂ ಅಲ್ಲ ಎನ್ನಲಾರೆ. ಹಲವು ಕೊರತೆಗಳ ಹೊರತಾಗಿಯೂ ಹಿಂದೂ ಎಂಬುದರಲ್ಲಿ ಬಂಧುತ್ವವಿದೆ. ಮೂರ್ತಿಯನ್ನು ನಂಬುವ ಸಮುದಾಯದಲ್ಲಿ ನನ್ನ ಜನನವಾಗಿದೆ. ಈ ಧರ್ಮವನ್ನು ವಿರೋಧಿಸುವುದು ನನಗೆ ಬೇಕಾಗಿಲ್ಲ. ಆದರೆ ಸಂಘ ಪರಿವಾರದವರು ಧರ್ಮವನ್ನು ತೋರಿಸಿ ಜನರಿಗೆ ಮೋಸ ಮಾಡುತ್ತಾರೆ.

ಮಾತೆತ್ತಿದರೆ ಹಿಂದೂ-ಮುಸ್ಲಿಂ ಗಲಭೆ. ಯಾರೋ ಒಬ್ಬ ನಾಯಕನಿಗಾಗಿ, ಒಂದು ಮುಗ್ಧ ಜೀವಕ್ಕೆ ತೊಂದರೆ ಕೊಡುವುದು ಸರಿಯಲ್ಲ ಎಂದು ನನ್ನ ಆತ್ಮಸಾಕ್ಷಿ ಹೇಳಿತು. ನಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ಸ್ವತಂತ್ರವನ್ನು ಕಿತ್ತುಕೊಳ್ಳುತ್ತಿದ್ದೇವೆ ಅನಿಸಿತು. ಇದೆಲ್ಲ ಸರಿಯಲ್ಲ ಎಂದು ಅಲ್ಲಿಂದ ಹೊರಬಂದೆ. ಇವರ ಹಿಂದುತ್ವಕ್ಕೆ ಅರ್ಥ ಇಲ್ಲ. ಹಿಂದೂ ಎಂದ ಮೇಲೆ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಈಗಿರುವ ಕೊರತೆಗಳನ್ನು ನೀಗಿಸಿಕೊಂಡು ಅತ್ತ ಹೆಜ್ಜೆಯಿಡಬೇಕು. ಯಾವ ಧರ್ಮದಲ್ಲೂ ಕಡಿ-ಬಡಿ ಇಲ್ಲ. ಯಾವ ಸಮುದಾಯದ ತಾಯಿಯಾದರೂ ತನ್ನ ಮಗ ರೌಡಿಯಾಗಬೇಕು ಎಂದು ಭಾವಿಸುವುದಿಲ್ಲ. ಆದರೆ ಇಲ್ಲಿ (ದಕ್ಷಿಣ ಕನ್ನಡ) ಸಂಘಟನೆಗೆ ಬರುವ ಮಕ್ಕಳೆಲ್ಲ ಆಗುವುದು ರೌಡಿಗಳೇ ಹೊರತು, ಬೇರೇನೂ ಅಲ್ಲ. ಹಿಂದೂ ಸಂಘಟನೆಯಾಗಲೀ, ಮುಸ್ಲಿಂ ಸಂಘಟನೆಯೇ ಆಗಲಿ- ತಮ್ಮ ಸ್ವಾರ್ಥಕ್ಕಾಗಿ ಈ ಸಂಘಟನೆಗಳ ನಾಯಕರು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ.

ಹಿಂದೂ ಧರ್ಮದ ಉಳಿವಿಗೆ ಸಂಘಟನೆಯ ಅಗತ್ಯವಿಲ್ಲ. ನಮ್ಮ ನಮ್ಮ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದರೆ, ಹಿಂದೂ ಧರ್ಮ ಸುಧಾರಿಸಿ ಉಳಿಯುತ್ತದೆ. ಯಾವುದೇ ರಾಜಕೀಯ ನಾಯಕರ ಮಕ್ಕಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇಲ್ಲ. ಇಲ್ಲಿನ ಕಾರ್ಯಕರ್ತರು, ಕೆಳವರ್ಗದ ಹುಡುಗರು ಮಾತ್ರ ಕೋರ್ಟ್ ಮೆಟ್ಟಿಲೇರುತ್ತಾರೆ. ಮೇಲ್ವರ್ಗದ ಹುಡುಗರಿಗೆ ಸಜೆಯಾಗಿದ್ದನ್ನಾಗಲೀ, ಪ್ರಕರಣ ದಾಖಲಾಗಿದ್ದಾಗಲೀ ನಾವು ನೋಡಲಿಲ್ಲ. ಪೂಜಾರಿಗಳು, ಶೆಟ್ಟಿಗಳು ಈ ಥರದ ಸಮುದಾಯಗಳೇ ಬಲಿಪಶುಗಳಾಗಿರುತ್ತವೆ. ಈ ಜನಾಂಗಗಳ ಜೀವನವನ್ನು ಹಾಳು ಮಾಡುವುದೇ ಇವರ ಉದ್ದೇಶ. ಇವರಿಂದ ದೇಶ ಉದ್ಧಾರವಾಗುವುದಿಲ್ಲ. ದೇಶ ಉದ್ಧಾರದ ಬ್ಯಾನರ್ ಹಾಕಿಕೊಂಡು ದೇಶವನ್ನು ’ಲಗಾಡಿ’ ತೆಗೆಯುತ್ತಿದ್ದಾರೆ.

ಗೋಹತ್ಯೆ ನಿಷೇಧ ಎಂದರು. ಆದರೆ ರಾಷ್ಟ್ರಮಟ್ಟದಲ್ಲಿ ದೊಡ್ಡ ನಮೂನೆಯಲ್ಲಿ ಗೋವು ರಫ್ತಾಗುತ್ತಿದೆ. ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೋ ಮಾಂಸದ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿಯ ಸರ್ಕಾರವಿದೆ. “ಗೋಹತ್ಯೆ ನಿಷೇಧ ಮಾಡಲು ಆಗಲ್ಲ, ಆರ್ಥಿಕತೆ ನಾಶವಾಗುತ್ತದೆ” ಎಂದಾದರೂ ಕಾರ್ಯಕರ್ತರಿಗೆ ಹೇಳಬಹುದಲ್ಲ. ಕರ್ನಾಟಕಕ್ಕೆ ಒಂದು ಕಾನೂನು, ಗೋವಾಕ್ಕೆ ಒಂದು ಕಾನೂನು, ತ್ರಿಪುರಕ್ಕೆ ಒಂದು, ಮೇಘಾಲಯಕ್ಕೆ ಒಂದು, ಅಸ್ಸಾಂಗೊಂದು ಕಾನೂನು- ಇದೆಲ್ಲ ಏಕೆ? ಅಲ್ಲಿಯ ಹುಡುಗರಲ್ಲಿ ಹಿಂದೂಗಳಿಲ್ಲವೆ? ಇಲ್ಲಿಯ ಹುಡುಗರು ಮಾತ್ರವೇ ಹಿಂದೂಗಳಾ?

ಗೋಹತ್ಯೆ ನಿಷೇಧ ಮಾಡಲು ಸಾಧ್ಯವಾದರೆ ಮಾಡಿ. ಆದರೆ ಒತ್ತಾಯವೇನೂ ಇಲ್ಲ. ವಾಸ್ತವ ಅವರಿಗೂ ಗೊತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಗೋಹತ್ಯೆ ನಿಷೇಧ ಪ್ರಚಾರವೂ ಮುಖ್ಯವಾಗಿತ್ತು. ಏಕೆಂದರೆ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಆಗಿಲ್ಲವಲ್ಲ. ಎಲೆಕ್ಷನ್ ಬರುವ ಹೊತ್ತಿಗೆ ಗಲಾಟೆಗಳು ಶುರುವಾಗುತ್ತವೆ. ಈಗ ಮತ್ತೆ ಶುರುವಾಗಿದೆ. ಹಿಂದೂ ಸಮಾಜೋತ್ಸವ, ಮುಸ್ಲಿಂ ಸಮಾಜೋತ್ಸವ ನಡೆಯಲಾರಂಭಿಸಿವೆ. ಕರಾವಳಿಯಲ್ಲಿ ದೊಡ್ಡ ನಮೂನೆಯಲ್ಲಿ, ರಾಷ್ಟ್ರಮಟ್ಟದ ನಾಯಕರೆಲ್ಲ ಬಂದು ಭಾಷಣ ಮಾಡುವುದು ಬಾಕಿ ಇದೆ.

ನಾನು ಭಜರಂಗದಳ ಸಂಸ್ಥಾಪಕ ವಿಭಾಗೀಯ ಸಂಚಾಲಕನಾಗಿದ್ದೆ. ಸಂಘಟನೆಗೆ ಸೇರಿದ್ದೇ ದೊಡ್ಡ ಗಿಲ್ಟ್. ಇವರ ಜೊತೆಗೆ ಸೇರಿದ್ದೇ ನೋವಿನ ಸಂಗತಿ. ಇವರು ಹೇಳುತ್ತಿದ್ದ ಹಾಗೆ, ಕಾರ್ಯಕರ್ತರನ್ನು ನೋಡಿಕೊಳ್ಳಲಿಲ್ಲ. ಇವರ ಸ್ವಾರ್ಥಕ್ಕಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳವನ್ನು ಬಳಕೆ ಮಾಡಿಕೊಂಡರು. ಸಂಘದ ಶಿಕ್ಷಣ ನಮಗೆ ಬೇಡ. ಮನೆಯಲ್ಲಿ ನಮಗೆ ಶಿಕ್ಷಣವನ್ನು ನೀಡಿದ್ದಾರೆ. ಅದರಿಂದ ಸಿಕ್ಕಿರುವ ತಿಳಿವಳಿಕೆಯೇ ಸಾಕು ಎಂದು ಈಗ ಅರಿವಾಗಿದೆ.

ಎಂ.ಪಿ., ಎಂ.ಎಲ್.ಎ.ಗಳೆಲ್ಲ ಸಂಘದ ಶಿಕ್ಷಣ ಪಡೆದವರು, ಆದರೆ ಏಕೆ ಭ್ರಷ್ಟಾಚಾರ ಮಾಡುತ್ತಾರೆ? ರಾಷ್ಟ್ರ ಜಾಗೃತಿ ಇರಬೇಕು ಎನ್ನುವ ಸಂಘದವರು ಭ್ರಷ್ಟರಾಗಿದ್ದಾರೇಕೆ? ರಾಷ್ಟ್ರೀಯತೆ ಮತ್ತು ಧರ್ಮದ ಕುರಿತು ಮಾತನಾಡುವವರು ಭ್ರಷ್ಟರಾಗಿರುವುದು ವಿಪರ್ಯಾಸವಲ್ಲವೇ? ಕೆಲವು ಮಠಾಧೀಶರು ಕೂಡ ಭ್ರಷ್ಟರಾಗಿದ್ದಾರೆ, ರಾಜಕಾರಣಿಗಳ ಗುಲಾಮರಾಗಿದ್ದಾರೆ. ಶೇ. 90ರಷ್ಟು ಸಾಧುಗಳು ಅಂಗಡಿ ತೆರೆದಿದ್ದಾರೆ. ಸರ್ವತ್ಯಾಗಿಯಾದವರಿಗೂ ಇವರಿಂದ ಏನೋ ಸಿಗುತ್ತದೆ ಎಂದಾಗ ಧರ್ಮದ ಬಗ್ಗೆ ಮಾತನಾಡೋದೇನಿದೆ? “ಹಿಂದೂ ಹುಡುಗಿಯರನ್ನು ಮುಸಲ್ಮಾನ್ ಹುಡುಗರು ಪ್ರೀತಿಸಿ ಲವ್ ಜಿಹಾದ್ ಮಾಡುತ್ತಿದ್ದಾರೆ” ಎಂದು ಪ್ರಚೋದಿಸುತ್ತಾರೆ. ಆದರೆ ಸಂಘದವರು ಈ ವಿಚಾರಗಳನ್ನು ತಮ್ಮ ಮಕ್ಕಳಿಗೆ ಹೇಳುವುದಿಲ್ಲ. ಬಡಪಾಯಿಗಳ ಮಕ್ಕಳಿಗೆ ಹೇಳಿ ಪ್ರಚೋದಿಸುತ್ತಾರೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅಂದು ಆರ್‌ಎಸ್‌ಎಸ್‌ ಹುಟ್ಟಿರಲಿಲ್ಲ: ಬಿ.ಎಲ್.ಸಂತೋಷ್

ಸಂಘಪರಿವಾರ ಒಗ್ಗೂಡಿದೆ. ಆದರೆ ಅದರಿಂದ ಹೊರಗೆ ಬಂದವರು ಒಟ್ಟಿಗೆ ಇಲ್ಲದಿರುವುದು ಮತ್ತೊಂದು ಸಮಸ್ಯೆ. ಹೊರಗೆ ಬಂದ ಹತ್ತು ಜನರು ಒಂದಾಗಿ ನಿಂತಿದ್ದರೆ ಇದನ್ನೆಲ್ಲ ಯಾವತ್ತೋ ಮಟ್ಟ ಹಾಕಬಹುದಿತ್ತು. ಹೊರಗೆ ಬಂದವರು ಬೇರೆ ಬೇರೆ ಸಂಘಟನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಸಂಘ ಪರಿವಾರದಲ್ಲಿ ದೇಶಪ್ರೇಮ ಯಾರ ಬಳಿಯೂ ನೋಡಲಿಲ್ಲ. ದೇಶಪ್ರೇಮ, ಹಿಂದುತ್ವ- ಎಲ್ಲ ಬ್ಯಾನರ್‌ಗಳಲ್ಲಿದೆ ಅಷ್ಟೇ. ಎಲ್ಲ ಕಡೆ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಹಿಂದೆಲ್ಲ ಜುಗಾರಿ, ವೇಶ್ಯಾವಾಟಿಕೆ, ಮರಳುದಂಧೆ ಎಂದೆಲ್ಲ ದನಿ ಎತ್ತುತ್ತಿದ್ದವರು ಈಗ ಏಕೆ ಮಾತನಾಡುತ್ತಿಲ್ಲ? ಏಕೆಂದರೆ ಅಂದು ದನಿ ಎತ್ತಿದವರೇ ಇಂದು ಇವುಗಳನ್ನು ನಡೆಸುತ್ತಿದ್ದಾರೆ. ಹೀಗಾದಾಗ ದೇಶ ಜಾಗೃತಿ ಆಗುತ್ತದೆಯೇ?

ಒಬ್ಬ ಹುಡುಗ ಮೊದಲ ಬಾರಿಗೆ ಜೈಲಿಗೆ ಹೋದಾಗ ಸಂಘ ಪರಿವಾರದಲ್ಲಿ ಬಹಳ ಮುರ್ಯಾದೆ ಕೊಡಲಾಗುತ್ತದೆ. ಮತ್ತೆಮತ್ತೆ ಇದೇ ರೀತಿ ಗಲಾಟೆಯಾಯಿತೆಂದರೆ ಅವನನ್ನು ಸಂಘಟನೆಯವರು ಹಿಂದಕ್ಕೆ ಹಾಕುತ್ತಾರೆ. ಹಿಂದೂ ಆಗಲಿ, ಮುಸ್ಲಿಂ ಆಗಲೀ- ದಕ್ಷಿಣ ಕನ್ನಡ ಜಿಲ್ಲೆ ಗ್ಯಾಂಗ್ ಕಟ್ಟಿ ಎದುರುಬದುರಾಗಿಸಲು ಒಂದು ಕಾರ್ಖಾನೆಯಂತಾಗಿದೆ. ಯುವಕರನ್ನು ರೌಡಿಸಂ ಕಾರ್ಖಾನೆಗೆ ಹಿಂದೂ ಮುಸ್ಲಿಂ ಧರ್ಮಗಳ ಕಟ್ಟರ್ ಸಂಘಟನೆಗಳು ದೂಡುತ್ತಿವೆ.

ಒಬ್ಬ ಹುಡುಗ ಸತ್ತನೆಂದರೆ ಆ ಮನೆಯ ಪರಿಸ್ಥಿತಿ ಏನಾಗಬೇಕು? ಯಾವ ಲೀಡರ್ ಮಗ ಸತ್ತಿದ್ದಾನೆ? ಇಲ್ಲಿನ ಹುಡುಗರಿಗೆ ಕೆಲಸಗಳಿಲ್ಲ. ಹೀಗಾಗಿ ಈ ಕಟ್ಟರ್ ಸಂಘಟನೆಗಳಿಗೆ ಹೋಗಿ ಯಡವಟ್ಟುಗಳಾಗುತ್ತಿವೆ. ಕೆಲಸವಿದ್ದರೆ ಯಾರಿಗೆ ಬೇಕು ಈ ಗಲಾಟೆಗಳು? ನಾಳೆ ಸೆಕೆಂಡ್ ಶಿಪ್ಟ್ ಕೆಲಸವಿದೆ ಎಂದಾದರೆ, ಯಾವುದಾದರೂ ಗಲಾಟೆಗೆ ಹೋಗುತ್ತೀರಾ? ಮನೆಯ ಜವಾಬ್ದಾರಿ ಇಲ್ಲದವ ಸಂಘಟನೆಗೆ ಸೇರುತ್ತಾನಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಸಾಧ್ಯವಾಗುವ ಸ್ಥಿತಿ ಇಲ್ಲ. ಪ್ರವಾಹದ ಎದುರು ಎದೆಗೊಡುವುದಕ್ಕೆ ಆಗುವುದಿಲ್ಲ. ಏನೋ ಆಗಲಿಕ್ಕಿದೆ. ರಾಜಕಾರಣಿಗಳು ಸಾಮರಸ್ಯ ಸಾಧ್ಯವಾಗಲು ಬಿಡುವುದಿಲ್ಲ. ಯಾಕೆಂದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ಅವರಿಗೆ ಅನುಕೂಲವಾಗುತ್ತದೆ.

ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದ ಹೊರತು ಮುಂದಿನ ದಿನಗಳು ಇನ್ನೂ ಆತಂಕಕಾರಿಯಾಗಲಿವೆ!

(ನಿರೂಪಣೆ): ಯತಿರಾಜ್ ಬ್ಯಾಲಹಳ್ಳಿ

ಪ್ರವೀಣ್ ವಾಲ್ಕೆ

ಪ್ರವೀಣ್ ವಾಲ್ಕೆ
ದಕ್ಷಿಣ ಕನ್ನಡದಲ್ಲಿ ಭಜರಂಗದಳ ಸಂಘಟನೆಗೆ ಭದ್ರಬುನಾದಿ ಹಾಕಿದ ಪ್ರಮುಖರಲ್ಲಿ ಪ್ರವೀಣ್ ವಾಲ್ಕೆ ಕೂಡ ಒಬ್ಬರು. ಸಂಘಪರಿವಾರದ ಇಬ್ಬಂದಿತನದಿಂದ ಬೇಸತ್ತು ಹೊರಬಂದಿದ್ದಾರೆ. ಈಗ ’ಹಿಂದುತ್ವದಿಂದ ಭಂದುತ್ವದೆಡೆಗೆ’ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ನಾನೇಕೆ ಆರ್ ಎಸ್ ಎಸ್ ತೊರೆದೆ ಸರಣಿ; ದೇಶಕ್ಕಾಗಿ ಸಂಘದ ಸಖ್ಯ ಬಿಟ್ಟೆ!


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...